ಮೇಷ: ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಣ್ಣ ವಿಚಾರಕ್ಕೆ ಆಪ್ತರೊಂದಿಗೆ ಮನಸ್ತಾಪ ಉಂಟಾಗಲಿದೆ. ಕುಗ್ಗದೇ ಮುಂದೆ ಸಾಗಿ.

ವೃಷಭ: ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಚರ್ಚೆ ಏರ್ಪಡಲಿದೆ. ಎಲ್ಲರ ಪಾಲಿಗೂ ನೀವು ಒಳ್ಳೆಯವರಾಗಲು ಸಾಧ್ಯವಿಲ್ಲ. 

ಮಿಥುನ: ಪರಮಾಪ್ತರ ಸಂಕಷ್ಟಕ್ಕೆ ನೀವು ನೆರವಾಗಿ ನಿಲ್ಲಲಿದ್ದೀರಿ. ವ್ಯಾಪಾರದಲ್ಲಿ ಲಾಭ. ದೂರದ ಪ್ರವಾಸ ಮಾಡುವ ಅನಿವಾರ್ಯ ಬರಲಿದೆ.

ಕಟಕ: ಮೈ ತುಂಬಾ ಕೆಲಸವಿದೆ ಎಂದು ಚಿಂತೆ ಮಾಡದೇ, ಸ್ವಲ್ಪ ಸ್ವಲ್ಪವಾಗಿ ಮಾಡಿ ಮುಗಿಸಿ. ಎಲ್ಲವೂ ಒಳ್ಳೆಯದೇ ಆಗಲಿದೆ. ಶುಭ ಫಲ.

ಸಿಂಹ: ಬೇಡದ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವುದು ಬೇಡ. ಮತ್ತೊಬ್ಬರನ್ನು ಮೆಚ್ಚಿಸಲು ಹೋಗಬೇಡಿ.

ಕನ್ಯಾ: ಅತಿಯಾದ ನಿದ್ದೆ, ಅತಿಯಾದ ಊಟ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತವೆ. ಆಸೆಗೆ ಬಿದ್ದು ಮೋಸ ಹೋಗದಿರಿ.

ತುಲಾ: ಒಂದು ವಿಚಾರದ ಆಳ ಅಂತರಗಳನ್ನು ಸರಿ ಯಾಗಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ಕೆಲಸದಲ್ಲಿ ಪ್ರಗತಿ ಕಾಣುವಿರಿ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!

ವೃಶ್ಚಿಕ: ಧೈರ್ಯ ಒಳ್ಳೆಯದ್ದು. ಆದರೆ ಅತಿಯಾದ ಧೈರ್ಯ ಒಳ್ಳೆಯದ್ದಲ್ಲ. ಭಯ ಭಕ್ತಿಯಿಂದ ನಡೆದುಕೊಳ್ಳಿ. ಕಲಾವಿದರಿಗೆ ಶುಭ ಸುದ್ದಿ.

ಧನಸ್ಸು: ಚಿನ್ನ ಗಳಿಸುತ್ತೇನೆ ಎಂದು ಹೋಗಿ ಬೆಳ್ಳಿಗೆ ತೃಪ್ತಿಪಡುವ ಸಂದರ್ಭ ಬರುತ್ತದೆ. ಆರೋಗ್ಯದಲ್ಲಿ ತುಸು ಏರುಪೇರು ಆಗಲಿದೆ.

ಮಕರ: ಬರುವ ಕಷ್ಟ ನಿಮ್ಮನ್ನು ಗಟ್ಟಿ ಮಾಡುವುದಕ್ಕೆ ಬರುತ್ತದೆ. ಕುಗ್ಗುವುದು ಬೇಡ. ಕೆಲಸದ ಒತ್ತಡ ಹೆಚ್ಚಾದರೂ ಲಾಭವೂ ಹೆಚ್ಚಾಗಲಿದೆ.

ಕುಂಭ: ಹೊಸ ಬಗೆಯ ವೃತ್ತಿಯತ್ತ ಮನಸ್ಸು ಹರಿಯಲಿದೆ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಿ. ದುಡುಕಿನಿಂದ ಹಾನಿ.

ಮೀನ: ಚಿಕ್ಕ ಕೆಲಸ ಎಂದು ಸುಮ್ಮನೆ ಕೂರುವುದು ಬೇಡ. ಚಿಕ್ಕ ಚಿಕ್ಕ ಕಲ್ಲುಗಳಿಂದಲೇ ಸೌಧ ಕಟ್ಟಲು ಸಾಧ್ಯವಾಗುವುದು. ಧೈರ್ಯ ಇರಲಿ.