Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ತುತ್ತಾಗುವ ಸಾಧ್ಯತೆ

14 ಮೇ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 14 May 2021 in Kannada grg
Author
Bengaluru, First Published May 14, 2021, 7:06 AM IST

ಮೇಷ - ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಅನುಕೂಲ, ಕೊಂಚ ಅಸಮಧಾನವೂ ಇರಲಿದೆ, ಶಂಖದಾನ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಶುಭಫಲಗಳಿದ್ದಾವೆ, ಮಾತಿನ ನೈಪುಣ್ಯದಿಂದ ಕಾರ್ಯ ಸಾಧನೆ, ಸ್ವಲ್ಪ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನ ಶಕ್ತಿಯಿಂದ ಕಾರ್ಯ ಸಾಧನೆ, ವೈದ್ಯರಿಗೆ ಅನುಕೂಲ, ಸ್ತ್ರೀಯರಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಗೆ ಅನುಕೂಲದ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಸಿಂಹ - ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ- ಉತ್ತಮ ಫಲಗಳಿದ್ದಾವೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರಯಾಣ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ- ಸಂಗಾತಿಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಸಾಲ ಮಾಡಬೇಡಿ, ಧೈರ್ಯವಿರಲಿ, ಆಂಜನೇಯ ಪ್ರಾರ್ಥನೆ ಮಾಡಿ

ಹಾಸಿಗೆ ಕೆಳಗೆ ವಸ್ತುಗಳನ್ನು ಇಟ್ಟರೆ ಕುಟುಂಬದ ಶಾಂತಿ, ಸಂತೋಷ ಕಳೆದುಹೋಗಬಹುದು!

ವೃಶ್ಚಿಕ- ವಿದ್ಯಾರ್ಥಿಗಳಿಗೆ ಉತ್ತಮ ಫಲ, ಮಕ್ಕಳಿಂದ ಅನುಕೂಲ, ಧನ ಸಮೃದ್ಧಿ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಕೃಷ್ಣ ಪ್ರಾರ್ಥನೆ ಮಾಡಿ

ಧನುಸ್ಸು- ಆರೋಗ್ಯದಲ್ಲಿ ವ್ಯತ್ಯಾಸ, ಶುಭಫಲಗಳಿದ್ದಾವೆ, ಇಷ್ಟ ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಕರ- ವ್ಯಾಪಾರಿಗಳು ಮೋಸಹೋಗುವ ದಿನ, ಶುಭಫಲಗಳಿದ್ದಾವೆ, ಸಾಹಸಿಗರಿಗೆ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ- ಹಣ ಸಮೃದ್ಧಿ, ಸ್ತ್ರೀಯರಿಂದ ಸಹಕಾರ, ಮನೆಯಲ್ಲಿ ನೆಮ್ಮದಿಯ ದಿನ, ಮನ್ಯುಸೂಕ್ತ ಪಾರಾಯಣ ಮಾಡಿ

ಮೀನ- ಸ್ತ್ರೀಯರಿಗೆ ವಿಶೇಷತೆ, ಮಕ್ಕಳಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಸಂಜೀವಿನಿ ರುದ್ರ ಪ್ರಾರ್ಥನೆ ಮಾಡಿ

Follow Us:
Download App:
  • android
  • ios