ಮೇಷ: ಸಾಲ ವಾಪಸ್ಸಾತಿಯ ವೇಳೆಯಲ್ಲಿ ಸ್ನೇಹಕ್ಕೆ ಧಕ್ಕೆ ಬರಲಿದೆ. ವ್ಯವಹಾರದಲ್ಲಿ ಹಿನ್ನಡೆ. ಮನೆಯವರ ಮಾತಿಗೆ ಅನುಗುಣವಾಗಿ ನಡೆಯಲಿದ್ದೀರಿ.

ವೃಷಭ: ವಿನಾಕಾರಣ ನಿಮ್ಮ ಮೇಲೆ ಆರೋಪಗಳು ಬರಲಿವೆ. ಸಂಬಂಧಿಕರ ನೆರವಿನಿಂದ ಹೊಸ ವ್ಯವಹಾರಗಳು ಸಾಧ್ಯವಾಗಲಿವೆ. ಶುಭದಿನ

ಮಿಥುನ: ಬೇರೆಯವರ ಕಲಹದಲ್ಲಿ ನೀವು ಮೂಗು ತೂರಿಸಿಕೊಂಡು ಹೋಗುವುದು ಬೇಡ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಕಟಕ: ದೊಡ್ಡ ಗುರಿಯನ್ನು ನಿಗದಿ ಮಾಡಿಕೊಂಡು ಅದರತ್ತ ಸಾಗುವಿರಿ. ನಿರಂತರವಾದ ಪ್ರಯತ್ನದಿಂದ ಮಾತ್ರವೇ ಯಶಸ್ಸು ಸಾಧ್ಯ.

ಸಿಂಹ:ನಿಮ್ಮ ಹಿಂದಿನ ತಪ್ಪುಗಳ ಅರಿವು ಇಂದು ನಿಮ್ಮ ಗಮನಕ್ಕೆ ಬರಲಿದೆ. ಸಣ್ಣ ಪುಟ್ಟ ಆಸೆಗೆ ಇಡೀ ದಿನ ಬಲಿಯಾಗುವ ಸಾಧ್ಯತೆ ಇದೆ.

ಕನ್ಯಾ: ಬೇರೆಯವರಿಂದ ಹೆಚ್ಚಿನ ಸಹಕಾರವನ್ನು ನಿರೀಕ್ಷೆ ಮಾಡದಿರಿ. ನಿಮ್ಮಂದ ಸ್ನೇಹಿತರಿಗೆ ಹಣಕಾಸಿನ ನೆರವು ದೊರೆಯಲಿದೆ.

ತುಲಾ: ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆಗಳು ಆರಂಭವಾಗಲಿವೆ. ನೀವು ಮಾಡುವ ಒಳ್ಳೆಯ ಕಾರ್ಯ ಇತರರಿಗೆ ಮಾದರಿ.

ವೃಶ್ಚಿಕ: ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಗಳಿಗೆ ನೆರವು ನೀಡಲಿದ್ದೀರಿ. ಪ್ರಾಣಿ ಪಕ್ಷಿಗಳ ಮೇಲೆ ಕಾಳಜಿ ಹೆಚ್ಚಾಗಲಿದೆ. ಆರೋಗ್ಯ ವೃದ್ಧಿ.

ಧನುಸ್ಸು: ನಿಮ್ಮ ಚಿಂತನಾ ಕ್ರಮವೇ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲಿದೆ. ಬೇರೆಯವರಿಗೆ ಒಳ್ಳೆಯದ್ದು ಬಯಸಿದರೆ ನಿಮಗೂ ಒಳಿತು.

ಮಕರ: ಮಾಡದ ಕೆಲಸಕ್ಕೆ ಎಂದೂ ಮೆಚ್ಚುಗೆ ಪಡೆದುಕೊಳ್ಳಲು ಮುಂದಾಗಬೇಡಿ. ನಿಮ್ಮ ಸೇವೆಯೇ ನಿಮಗೆ ಶ್ರೀರಕ್ಷೆಯಾಗಿ ನಿಲ್ಲಲಿದೆ.

ಕುಂಭ: ಬೆಳಿಗ್ಗೆಯೇ ವೇಳಾಪಟ್ಟಿ ತಯಾರು ಮಾಡಿ ಕೊಂಡು ಕಾರ್ಯರಂಗಕ್ಕೆ ಇಳಿಯಲಿದ್ದೀರಿ. ಸಂಜೆ ವೇಳೆಗೆ ಎಲ್ಲಾ ಕೆಲಸಗಳು ಆಗಲಿವೆ.

ಮೀನ: ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಿ. ಮನಸ್ಸಿಗೆ ಬೇಡ ಎನ್ನಿಸಿದ ಕೆಲಸವನ್ನು ಮಾಡುವುದು ಬೇಡ. ವೃತ್ತಿ ಬದ್ಧತೆ ಹೆಚ್ಚಾಗಲಿದೆ. ಶುಭ ದಿನ.