ಮೇಷ: ಹಳೆಯ ಕನಸುಗಳು ನನಸಾಗುವ ದಿನ ಇದು. ಮನೆಯವರ ಸಹಕಾರದಿಂದ ಲಾಭದ ಮಾರ್ಗದಲ್ಲಿ ಸಾಗಲಿದ್ದೀರಿ. ಶುಭ ದಿನ

ವೃಷಭ: ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ತುಂಬಾ ಎಚ್ಚರಿಕೆ ಇರಲಿ. ಹೊಸ ವಾಹನ ಕೊಳ್ಳುವ ಅವಕಾಶವಿದೆ. ಗೆಲುವು ನಿಮ್ಮದೇ.

ಮಿಥುನ:ಹುಡುಕಿಕೊಂಡು ಬಂದ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಮುಂದೆ ಸಾಗಿ. ವ್ಯಸನಗಳ ದಾಸ್ಯದಿಂದ ಮುಕ್ತಿ ಸಿಗಲಿದೆ.

ಕಟಕ: ದುಷ್ಟರ ಸಂಗದಿಂದ ದೂರ ಇರಿ. ನಿಮಗೆ ಸಂಬಂಧಪಡದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ನೆಮ್ಮದಿ ಹೆಚ್ಚಲಿದೆ

ಸಿಂಹ: ಹಣಕಾಸಿನ ತೊಂದರೆಯಿಂದ ನಿಮ್ಮ ಆಸೆಗಳು ಕಮರಿಹೋಗಲಿವೆ. ದೊಡ್ಡ ಕೆಲಸ ಕೈಗೆತ್ತಿಕೊಂಡಾಗ ಕಷ್ಟ, ಸವಾಲುಗಳು ಸಹಜ.

ಕನ್ಯಾ: ಆಗಿ ಹೋಗಿದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮುಂದೆ ಆಗುವುದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಿ.

ತುಲಾ: ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ. ಸ್ನೇಹಿತರಿಗೆ ಹಣಕಾಸಿನ ನೆರವು ನೀಡಲಾಗದೇ ಇದ್ದರೂ ನಾಲ್ಕು ಪ್ರೋತ್ಸಾಹದ ಮಾತನಾಡಿ.

ವೃಶ್ಚಿಕ: ಬೆಲೆ ಬಾಳುವ ವಸ್ತುಗಳನ್ನು ಕೊಳ್ಳುವಾಗ ಎರಡು ಮೂರು ಬಾರಿಯಾದರೂ ಪರೀಕ್ಷೆ ಮಾಡಿಕೊಳ್ಳಿ. ಆಪ್ತರ ಭೇಟಿ ಸಾಧ್ಯವಾಗಲಿದೆ.

ಧನುಸ್ಸು: ಜಾಣತನದಿಂದ ನಡೆದುಕೊಳ್ಳಲಿದ್ದೀರಿ. ಸಾವಿರ ಮಂದಿಯ ನಡುವಲ್ಲೂ ನಿಮ್ಮ ಒಳ್ಳೆಯತನಕ್ಕೆ ತಕ್ಕ ಸ್ಥಾನ ದೊರೆಯಲಿದೆ. ಶುಭ ದಿನ.

ಮಕರ: ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದರೂ ಎರಡು ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ತಂದೆಯಿಂದ ಸಹಕಾರ.

ಕುಂಭ: ಹಳೆಯ ನೆನಪುಗಳನ್ನೇ ಹೊತ್ತುಕೊಂಡು ಹೆಚ್ಚು ಚಿಂತೆ ಮಾಡುವುದು ಬೇಡ. ಅತಿಯಾದ ಭಾವೋದ್ವೇಗ ಒಳ್ಳೆಯದ್ದಲ್ಲ.

ಮೀನ: ಎಲ್ಲವೂ ಗೊತ್ತು ಎನ್ನುವ ಅಹಂಕಾರ ಬೇಡ. ಗೊತ್ತಿಲ್ಲದೇ ಇರುವುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿ. ಗೆಲುವು ಸಿಗಲಿದೆ.