ಮೇಷ : ಈ ದಿನ ನಿಮ್ಮದಾಗಿರಲಿದೆ.  ಕೆಲಸಕ್ಕೆ ಹೋಗುವಾಗ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸು ಮೂಡಲಿದೆ. ಅಕ್ಕಪಕ್ಕದವರಲ್ಲಿ ನಿಮ್ಮ ಬಗ್ಗೆ ಗೌರವ ಮೂಡಲಿದೆ. ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಶುಭ ದಿನವಾಗಿರಲಿ. 

ದೋಷಪರಿಹಾರ : ಇಷ್ಟ ದೇವರ ದರ್ಶನ ಮಾಡಿ

ವೃಷಭ : ನಿಮ್ಮ ಮಕ್ಕಳಲ್ಲಿ ಹೊಸ ಉತ್ಸಾಹ ಕಾಣುತ್ತೀರಿ, ನಿಮ್ಮ ಎಡ ಕಿವಿಯಲ್ಲಿ ಸ್ವಲ್ಪ ನೋವು ಕಾಣಬಹುದು, ನಿಮ್ಮ ಅದೃಷ್ಟ ಖುಲಾಸೆಯಾಗುವ ಸಾಧ್ಯತೆ ಹಾಗಾಗಿ ಗಣಪತಿ ಪ್ರಾರ್ಥನೆ ಮಾಡಿ, ಸಾಮಾನ್ಯ ದಿನವಾಗಿರಲಿದೆ.

ದೋಷ ಪರಿಹಾರ : ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ

ಮಿಥುನ : ನಿಮ್ಮ ಪ್ರೀತಿ ಪಾತ್ರರೊಂದಿಗೆ ವ್ಯಾಪಾರದ ಮಾತು ಕತೆ, ಜೊತೆಗೂಡಿ ವ್ಯಾಪಾರ ಮಾಡುವ ಮನಸ್ಸಾಗಲಿದೆ. ರಾಜಕೀಯದಲ್ಲಿರುವವರಿಗೆ ಮಿತ್ರರ ಸಹಾಯ. ನಿಮ್ಮ ಮಾತಿನಿಂದ ಸ್ತ್ರೀಯರು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆಯಿಂದ ಮಾತಾಡಿ

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತುಳಸಿ ಹಾರ ಕೊಡಿ.

ಕಟಕ : ಇಂದು ಅನ್ನಪೂರ್ಣೇಶ್ವರಿಗೆ ಹಾಗೂ ನಾಗ ದೇವರಿಗೆ ಎರಡೂ ದೇವಸ್ಥಾನಕ್ಕೆ ಹಾಲನ್ನು ಕೊಟ್ಟುಬನ್ನಿ. ಸಹೋದರಿಯರು ನಿಮ್ಮ ಸಹಾಯಕ್ಕೆ ಬರುವ ಬದಲು ನಿಮ್ಮ ಸಮಸ್ಯೆ ಹೆಚ್ಚುಮಾಡಲಿದ್ದಾರೆ. ಇಂದು ನಿಮಗೆ ಕಾರ್ಯ ಸ್ಥಳದಲ್ಲಿ ಹಿರಿಯರಿಂದ ವಿಶೇಷ ಮಾಹಿತಿ ಸಿಗಲಿದೆ. ಚಿಂತೆಯಿಲ್ಲದ ದಿನ.

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ : ಈ ದಿನ ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ. ಶಾಲೆಗಳಲ್ಲಿ ಉಪಾಧ್ಯಾಯರಿಂದ ನಿಮ್ಮ ಮಕ್ಕಳಮೇಲೆ ಕಂಪ್ಲೆಂಟ್ ಬರಬಹುದು.  ಮಕ್ಕಳ ಮೇಲೆ ಸಿಟ್ಟಾಗಬೇಡಿ, ಸಮಾಧಾನವಾಗಿ ಎಚ್ಚರಿಸಿ. 

ದೋಷ ಪರಿಹಾರ : ನಿಮ್ಮ ತೂಕದ ಗೋಧಿಯನ್ನು ದಾನ  ಮಾಡಿ. 

ಕನ್ಯಾ : ಸ್ತ್ರೀಯರೇ ನಿಮ್ಮ ಪಾಲಿಗೆ ಈ ದಿನ ಶುಭದಾಯಕ ದಿನ. ನೀವು ಅರಿಯದ ಮೂಲದಿಂದ ಲಾಭ. ನೀವು ಯಾವುದೋ ಒಂದು ಯೋಚನೆಯಲ್ಲಿದ್ದೀರಿ ಆ ಯೋಚನೆ ನಿಮ್ಮದಾಗುತ್ತದೆ ಯೋಚಿಸಬೇಡಿ. ಆದರೆ ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತದೆ. ಎಚ್ಚರವಾಗಿರಿ.
  
ದೋಷ ಪರಿಹಾರ :  ಶನಿ ದೇವರಿಗೆ ದೀಪ ಹಚ್ಚಿ. 

ತುಲಾ :  ಇಂದು ನಿಮ್ಮ ಮಗಳು ನಿಮಗೆ ಸಹಾಯ ಮಾಡುತ್ತಾಳೆ. ನೀವು ಅಂದುಕೊಂಡ ಕಾರ್ಯ ನೆರವೇರುವ ಮುನ್ನ ಗುರುವರ್ಯರಿಗೆ ಪಾದ ಪೂಜೆ ಮಾಡಿದಲ್ಲಿ ಕಾರ್ಯ ಯಶಸ್ವಿಯಾಗಲಿದೆ. ನೀವು ಕಚೇರಿಗೆ ಹೊರಡುವ ಮುನ್ನ ತಾಯಿಗೆ ನಮಸ್ಕಾರ ಮಾಡಿ ಹೊರಡಿ. 

ದೋಷ ಪರಿಹಾರ : ಕಡಲೆಬೇಳೆ ದಾನ ಮಾಡಿ. 

ವೃಶ್ಚಿಕ : ಉತ್ತಮರ ಸಹವಾಸ, ಹೊಸ ಯೋಜನೆಗೆ ಚಾಲನೆ ಸಿಗಲಿದೆ, ನಿಮ್ಮ ಮಾತು ಇತರರಲ್ಲಿ ಬೇಸರ ತರಿಸಬಹುದು, ಸಾಹಸ ಕಾರ್ಯಗಳಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ, ಜಮೀನಿನ ವಿಷಯದಲ್ಲಿ ತಕರಾರು.  

ದೋಷ ಪರಿಹಾರ : ಭೂ ವರಾಹ ಸ್ವಾಮಿಯನ್ನು ಪೂಜಿಸಿ

ಧನಸ್ಸು :  ಮನೆಯಲ್ಲಿ ಇರುವವರು ಹಲವು ಚಿಂತೆಗೆ ಗುರಿಯಾಗುತ್ತೀರಿ, ಇನ್ನು ಕಚೇರಿಗೆ ಹೋಗುವವರು ಶತ್ರುಗಳಿಂದ ಉಪದ್ರವಕ್ಕೆ ಗುರಿಯಾಗುತ್ತೀರಿ. ಅಷ್ಟೇ ಅಲ್ಲ ಮಾನಸಿಕವಾಗಿ ನೋವು ಉಂಟಾಗಬಹುದು. 

ದೋಷ ಪರಿಹಾರ : ಇಷ್ಟ ದೇವರನ್ನು ಸ್ಮರಿಸಿ. 

ಮಕರ :  ಇಂದು ನಿಮ್ಮ ಪಾಲಿಗೆ ಲಾಭದ ದಿನ, ನಿಮ್ಮ ಮಾತೇ ನಿಮಗೆ ಎಲ್ಲವನ್ನೂ ತಂದುಕೊಡುತ್ತದೆ. ಸ್ತ್ರೀಯರೊಂದಿಗೆ ಕಾಲಹರಣ ಮಾಡುವ ದಿನ, ಮಾತು ಜೋರಾಗಿರುತ್ತದೆ. ಆದರೆ ಮಾತಾಡುವಾಗ ಎಚ್ಚರವಿರಲಿ. 

ದೋಷ ಪರಿಹಾರ : ಸುಬ್ರಹ್ಮಣ್ಯನಿಗೆ 6 ನಮಸ್ಕಾರ ಮಾಡಿ

ಕುಂಭ : ಆತುರಾತುರವಾಗಿ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮಿತ್ರರು ನಿಮ್ಮನ್ನು  ಸಂತೈಸುತ್ತಾರೆ. ಮನೆಯಲ್ಲಿ ನಿಮ್ಮ ಬಗ್ಗೆ ಕನಿಕರ ಮೂಡಿ ಸಹಾಯಕ್ಕೆ ಮಾಡುತ್ತಾರೆ,  ಉತ್ತಮ ದಿನ.

ದೋಷ ಪರಿಹಾರ : ಓಂ ವಾಮದೇವಾಯ ನಮ: ಎಂಬ ಮಂತ್ರವನ್ನ 5 ಬಾರಿ ಪಠಿಸಿ.
  
ಮೀನ :  ಕಚೇರಿಗೆ ಹೊರಡುವ ಮುನ್ನ ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿಕೊಳ್ಳಿ. ವಸ್ತುಗಳನ್ನು ಮರೆತುಹೋಗುವ ಸಾಧ್ಯತೆ ಇದೆ. ನಿಮ್ಮ ಮಕ್ಕಳು ಶಾಲೆಯಲ್ಲಿ ಎಡವಟ್ಟು ಮಾಡಿಕೊಂಡುಬರುವ ಸಾಧ್ಯತೆ ಇದೆ. ಎಚ್ಚರವಹಿಸಿ, ತಂದೆಯಿಂದ ವಾಹನ ಸಹಾಯ. ಸಾಮಾನ್ಯ ದಿನ 

ದೋಷ ಪರಿಹಾರ : ಓಂ ಗಂ ಗಣಪತಯೇ ನಮ: ಮಂತ್ರವನ್ನು 21 ಬಾರಿ ಪಠಿಸಿ