ಮೇಷ: ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಅವುಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.

ವೃಷಭ: ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ ಅಂಜುವುದು ಬೇಡ. ದಿಟ್ಟವಾಗಿ ಬಂದ ಸವಾಲುಗಳನ್ನು ಎದುರಿಸಲಿದ್ದೀರಿ.

ಮಿಥುನ: ಸಮಯಕ್ಕೆ ಹೊಂದಿಕೊಂಡು ನಡೆಯುವು ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ.

ಕಟಕ: ಯಾರದೋ ಮಾತುಗಳನ್ನು ಕಟ್ಟಿಕೊಂಡು ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕದಿರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.

ಸಿಂಹ: ಶ್ರಮಪಟ್ಟು ಕೆಲಸ ಮಾಡುವುದಕ್ಕೆ ಬದಲಾಗಿ ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಅಂದುಕೊಂಡದ್ದು ನೆರವೇರಲಿದೆ.

ಕನ್ಯಾ: ಗೆಲುವು ಬೇಕು ಎಂದು ಕನಸು ಕಂಡರೆ ಅದು ಸಿಕ್ಕುವುದಿಲ್ಲ. ಅದಕ್ಕೆ ತಕ್ಕುದಾದ ಶ್ರಮವನ್ನು ಹಾಕಿದರೆ ಮಾತ್ರ ಜಯಶಾಲಿಯಾಗುವಿರಿ.

ತುಲಾ: ನಿಮ್ಮ ಕೈಲಿ ಆಗದ ಕೆಲಸಗಳನ್ನು ಒಪ್ಪಿಕೊಂಡು ನರಳುವುದು ಬೇಡ. ಅತಿಯಾದ ಉತ್ಸಾಹವೂ ಒಮ್ಮೊಮ್ಮೆ ಕೈ ಕೊಡುವ ಸಾಧ್ಯತೆ ಇರುತ್ತದೆ.

ವೃಶ್ಚಿಕ: ಕಾರಣವಿಲ್ಲದೇ ಕೋಪ ಮಾಡಿಕೊಳ್ಳುವುದು, ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಳ್ಳುವುದು ಬೇಡ. ನೆಮ್ಮದಿಯಿಂದ ಮುಂದೆ ಸಾಗಿ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ

ಧನಸ್ಸು: ತಾಯಿಯ ಆರೋಗ್ಯದಲ್ಲಿ ಪ್ರಗತಿ ಕಾಣಲಿದೆ. ಎಲ್ಲವೂ ನಿಮ್ಮ ಕೈಗೆ ಸುಲಭಕ್ಕೆ ಸಿಗಬೇಕು ಎನ್ನುವ ಅಪೇಕ್ಷೆಯನ್ನು ಇಟ್ಟುಕೊಳ್ಳಬೇಡಿ.

ಮಕರ: ನಿಮ್ಮ ಪಾಲಿಗೆ ಬಂದ ಕರ್ಮವನ್ನು ನೀವೇ ಮಾಡಿ ಮುಗಿಸಿ. ಅದನ್ನು ಮತ್ತೊಬ್ಬರ ಮೇಲೆ ಹಾಕಿ ಸುಮ್ಮನೆ ಕೂರುವುದು ಸರಿಯಲ್ಲ.

ಕುಂಭ: ಯಾವುದೇ ವಿಚಾರದ ಬಗ್ಗೆ ಮಾತನಾಡುವ ಮೊದಲಿಗೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮುಂದೆ ಸಾಗಿ. ಎಚ್ಚರವಿರಲಿ.

ಮೀನ: ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ. ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಎಲ್ಲವೂ ಒಳ್ಳೆಯದಾಗಲಿದೆ.