ಈ ರಾಶಿಗೆ ಕನಸುಗಳು ಸಾಕಾರಾವಾಗಿ ಶುಭವಾಗಲಿದೆ

ಮೇಷ
ನಿಮ್ಮ ತಾಳ್ಮೆಗೆ ಸವಾಲು ಒಡ್ಡುವಂತಹ
ಸಂದರ್ಭಗಳು ಬರಲಿವೆ. ಹಿಂದಿನ
ಕನಸುಗಳಿಗೆ ಜೀವ ಬರಲಿದೆ. ಶುಭ ದಿನ.

ವೃಷಭ
ಹೆಚ್ಚು ಕ್ರಿಯಾಶೀಲವಾಗಿ ಕೆಲಸ
ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ
ನಿರ್ಧಾರದಿಂದ ಮನೆ ಮಂದಿಗೆ ತೊಂದರೆ.

ಮಿಥುನ
ಬೇಡದ ವಿಚಾರಗಳ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಕೋಪದಿಂದ ಏನೂ
ಸಾಧ್ಯವಾಗುವುದಿಲ್ಲ. ನಗು ಹೆಚ್ಚಲಿದೆ.

ಕಟಕ
ನಿಮ್ಮಿಂದ ಸಾಧ್ಯವಾದಷ್ಟು ಒಳಿತು ಮಾಡಿ.
ಕೆಡುಕು ಮಾಡುವುದು ತರವಲ್ಲ. ಅತಿಯಾದ
ಸೋಮಾರಿತನದಿಂದ ಹೊರಗೆ ಬನ್ನಿ.

ಸಿಂಹ
ಹಿರಿಯ ವ್ಯಕ್ತಿಗಳ ಪರಿಚಯವಾಗಲಿದೆ.
ಮತ್ತೊಬ್ಬರ ಬಗ್ಗೆ ವಿನಾಕಾರಣ ಆರೋಪ
ಮಾಡುವುದು ಬೇಡ. ನಿಮ್ಮ ಕೆಲಸ ನೀವು ಮಾಡಿ

ಕನ್ಯಾ
ಹಣಕಾಸಿನ ವಿಚಾರದಲ್ಲಿ ಹೆಚ್ಚು ಉದಾರಿ
ಯಾಗುವುದು ಸರಿಯಲ್ಲ. ದೂರದ ಪ್ರಯಾ
ಣ ಮಾಡುವ ಅನಿವಾರ್ಯತೆ ಬರಲಿದೆ.

ತುಲಾ 
ಹಳೆಯ ಸಾಲಗಳು ಇಂದು ವಾಪಸ್ ಆಗುವ
ಸಾಧ್ಯತೆ ಇದೆ. ಮಾತನಾಡುವಾಗ ಎಚ್ಚರಿಕೆ
ಇರಲಿ. ಯಾರೊಂದಿಗೂ ಜಗಳ ಬೇಡ.

ವೃಶ್ಚಿಕ
ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.
ತಂದೆ ತಾಯಿಗಳ ಆರೋಗ್ಯದ ಕುರಿತು ಹೆಚ್ಚು
ಗಮನ ನೀಡಿ. ಎಲ್ಲವೂ ಒಳ್ಳೆಯದ್ದಾಗಲಿದೆ. 

ಧನುಸ್ಸು
ನಿಮ್ಮ ತಲೆಯ ಮೇಲೆ ಇರುವ
ಜವಾಬ್ದಾರಿಗಳನ್ನು ಸಾಧ್ಯವಾದಷ್ಟು ಬೇಗ
ಮುಗಿಸಿಕೊಳ್ಳಿ. ಸಂತಸದ ಕ್ಷಣಗಳು ಹೆಚ್ಚಲಿವೆ.

ಮಕರ
ತಪ್ಪು ತಿಳಿದುಕೊಂಡು ಮತ್ತೊಬ್ಬರ ಬಗ್ಗೆ
ಆರೋಪ ಮಾಡುವುದು ಬೇಡ. ತಾಳ್ಮೆಯಿಂದ
ಹಿಡಿದ ಕೆಲಸ ಮಾಡಿ ಮುಗಿಸಿಕೊಳ್ಳಿ.

ಕುಂಭ
ಪ್ರಾಮಾಣಿಕತೆ ಬೆಲೆ ಇದ್ದೇ ಇದೆ. ನಿಮ್ಮ
ಕಾರ್ಯಕ್ಕೆ ಅದಕ್ಕೆ ಹಾಕಿದ ಪ್ರಾಮಾಣಿಕ
ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ.

ಮೀನ 
ಮನೆಯಲ್ಲಿ ಇದ್ದ ಸಣ್ಣ ಪುಟ್ಟ ಗೊಂದಲಗಳು
ಬಗೆಹರಿಯಲಿವೆ. ಜಾಣತನದಿಂದ ಗೆಲುವು
ಸಾಧಿಸಲಿದ್ದೀರಿ. ಏಕಾಗ್ರತೆ ಹೆಚ್ಚಾಗಲಿದೆ.