ಇಂದು ಯಾವ ರಾಶಿಗೆ ಯಾವ ಫಲ

ಇಂದು ಈ ರಾಶಿಯವರ ಕನಸು ನನಸಾಗಿ ಶುಭ ಫಲ ಸಿಗುವುದು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಷ
ನಿಮ್ಮ ಕನಸುಗಳು ಇಂದು ಕಾರ್ಯರೂಪಕ್ಕೆ
ಬರಲಿವೆ. ಹೆಚ್ಚು ಮಾತನಾಡುವುದಕ್ಕೆ
ಬದಲಾಗಿ ಕೆಲಸ ಮಾಡಿ ತೋರಿಸಲಿದ್ದೀರಿ.

ವೃಷಭ
ನಿಮ್ಮನ್ನು ಹೊಗಳಿ ಮಾತನಾಡುವವರು
ಹಿಂದಿನಿಂದ ತೊಂದರೆ ಉಂಟುಮಾಡುವ
ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದಿರಿ.

ಮಿಥುನ
ಆತ್ಮೀಯರೊಂದಿಗೆ ವಿರಸ ಏರ್ಪಡಲಿದೆ.
ಅತಿಯಾದ ಉತ್ಸಾಹದಿಂದ ಮುಂದೆ
ಸಾಗುವುದು ಇಂದು ಒಳಿತಲ್ಲ. ಶುಭ ಫಲ.

ಕಟಕ
ಮತ್ತೊಬ್ಬರಿಗಾಗಿ ಕಾಯುವುದು ಬೇಡ.
ಇನ್ನೊಬ್ಬರನ್ನು ನೀವು ಕಾಯಿಸಬೇಡಿ. ನಿಮ್ಮ
ಪಾಲಿಗೆ ಬಂದದ್ದನ್ನು ನೀವೇ ಅನುಭವಿಸಬೇಕು.

ಸಿಂಹ
ಸೇವಾ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿ
ಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ನಿಂದನೆಗೆ ಒಳಗಾಗಲಿದ್ದೀರಿ.

ಕನ್ಯಾ
ಹಿಂದೆ ಮಾಡಿದ ತಪ್ಪು ಕೆಲಸಕ್ಕೆ ಇಂದು ಬೆಲೆ
ತೆರಬೇಕಾಗಿ ಬರುತ್ತದೆ. ಅಂದುಕೊಂಡ
ಕಾರ್ಯಗಳು ನೆರವೇರಲಿವೆ. ನೆಮ್ಮದಿ ಇದೆ.

ತುಲಾ
ಬಂಧುಗಳ ಆಗಮನವಾಗಲಿದೆ. ಹಣಕಾಸಿನ
ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿಕೊಳ್ಳ
ತುಲಾ ಬೇಕು. ವಾಹನ ಚಾಲನೆ ವೇಳೆ ಎಚ್ಚರವಿರಲಿ.

ವೃಶ್ಚಿಕ
ದಿನವಿಡೀ ಸಂತೋಷದಿಂದ ಇರಲಿದ್ದೀರಿ.
ಆತ್ಮೀಯರ ಸಂಖ್ಯೆ ಹೆಚ್ಚಾಗಲಿದೆ. ಮತ್ತೊಬ್ಬರ
ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. 

ಧನುಸ್ಸು
ಮತ್ತೊಬ್ಬರನ್ನು ನಿಂದಿಸಿ ಫಲವಿಲ್ಲ. ನೀವು
ಮಾಡುವ ಕೆಲಸದಲ್ಲಿ ನಿಯತ್ತು ಇರಲಿ. ಬೆಲೆ
ಬಾಳುವ ವಸ್ತು ಕೊಳ್ಳಲಿದ್ದೀರಿ. ಶುಭ ಫಲ.

ಮಕರ
ಹಳೆಯ ಸಾಲಗಳು ವಾಪಸ್ ಬರಲಿವೆ. ನೆಮ್ಮ
ದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ನಡೆಸಲಿದ್ದೀರಿ. ಕಣ್ಣಿನ ಆರೋಗ್ಯ ವೃದ್ಧಿ.

ಕುಂಭ
ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ
ಮಾಡುವುದು ಬೇಡ. ಬಂಧುಗಳ ಏಳಿಗೆ
ಯಿಂದ ನಿಮಗೆ ಸಂತೋಷ. ಶುಭಫಲ.

ಮೀನ 
ಬೆಳಿಗ್ಗೆಯೇ ಶುಭ ಸುದ್ದಿ ಕೇಳಲಿದ್ದೀರಿ.
ಅಂದುಕೊಂಡ ಕಾರ್ಯಕ್ಕೆ ಸಣ್ಣ ವಿಘ್ನ
ಬರಲಿದೆ. ತಂದೆಯ ಮಾತಿಗೆ ಮನ್ನಣೆ ನೀಡಿ