ಈ ರಾಶಿಗೆ ಸಂಜೆ ವೇಳೆ ಭರ್ಜರಿ ಲಾಭ ಕೈ ಸೇರಲಿದೆ

ಮೇಷ : ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ಇಡೀ ದಿನ ಕಳೆಯಬೇಕು. ಎಲ್ಲದಕ್ಕೂ ಉತ್ತರ ನಿರೀಕ್ಷೆ ಮಾಡಬೇಡಿ

ವೃಷಭ : ಟೀಕೆಗಳಿಗೆ ಮಾತಿನಿಂದ ಉತ್ತರ ಕೊಡುವುದರ ಬದಲಿಗೆ ನಿಮ್ಮ ಕಾರ್ಯದಿಂದ  ಉತ್ತರ ಕೊಡಲಿದ್ದೀರಿ. ಶುಭ ಸಮಾಚಾರ ತಿಳಿಯಲಿದೆ. 

ಮಿಥುನ : ಕಾರ್ಯವಾಸಿ ಕತ್ತೆ ಕಾಲು ಎನ್ನುವ ಹಾಗೆ  ಇಂದು ನಿಮ್ಮ ಕೆಲಸ ಆಗಬೇಕು ಎಂದರೆ ಕಂಬ ಸುತ್ತಲೇಬೇಕು

ಕಟಕ : ದಿನ ಪೂರ್ತಿ ಕಾಯಕದಲ್ಲಿಯೇ ನಿರತರಾಗುವಿರಿ. ಸುಖ ಸಮೃದ್ಧಿಗೆ ಕೊರತೆ ಇರದು. ಸಂಜೆ ವೇಳೆಗೆ ಲಾಭ ಕೈ ಸೇರಲಿದೆ

ಸಿಂಹ : ಹಳೆಯ ಸಾಲಗಳು ಇಂದು ವಾಪಸ್ಸಾಗಲಿವೆ. ಭೂ ವ್ಯವಹಾರದಲ್ಲಿ ತುಸು ಎಚ್ಚರಿಕೆ ಇರಲಿ. ಆಮಿಷಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ

ಕನ್ಯಾ : ಅನಾವಶ್ಯಕ ವಿಚಾರಗಳ ಕುರಿತು ದಿನ ಪೂರ್ತಿ ಚರ್ಚೆ ಮಾಡಲಿದ್ದೀರಿ. ಖಾಲಿ ಹರಟೆಗೆ ಅವಕಾಶ ನೀಡದಿರಿ. ಆರೋಗ್ಯದಲ್ಲಿ ಚೇತರಿಕೆ. 

ತುಲಾ : ಕೋಣನ ಮುಂದೆ ಕಿನ್ನರಿ ಬಾರಿಸುವ ಪ್ರಯತ್ನ ಬೇಡ. ತಂದೆ ತಾಯಿಯತ ಮಾತಿಗೆ ಹೆಚ್ಚು ಬೆಲೆ ನೀಡಿ. ವಾಹನ ಕೊಳ್ಳುವ ಅವಕಾಶವಿದೆ. 

ವೃಶ್ಚಿಕ : ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಿ. ಹಳೆಯ ನೋವುಗಳಲ್ಲೇ ನಿಲ್ಲಬೇಡಿ. ಹೊಸ ಸಂಪರ್ಕ ಏರ್ಪಡಲಿದೆ. 

ಧನಸ್ಸು : ಗೆಳೆಯನ ಕಷ್ಟಕ್ಕೆ ಆರ್ಥಿಕವಾಗಿ ನೆರವು ನೀಡಲಿದ್ದೀರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಆಹಾರದ ವಿಚಾರದಲ್ಲಿ ಶಿಸ್ತು ಇರಲಿ

ಮಕರ : ಮುಂಗಡವಾಗಿ ಯಾವುದೇ ಕಾರ್ಯಕ್ಕೂ ಒಪ್ಪಿಗೆ ನೀಡುವುದು ಬೇಡ. ಹಿರಿಯರ ಸಲಹೆಯಂತೆ ನಡೆಯಿರಿ. ಶುಭ ಫಲವಿದೆ

ಕುಂಭ : ಕಿರಿಯ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ನಡೆಯಲಿದ್ದೀರಿ. ಆತ್ಮೀಯರ ಮಾತಿನಿಂದ ಮನಸ್ಸಿಗೆ ನೋವು.

ಮೀನ : ಇಡೀ ದಿನ ಮತ್ತೊಬ್ಬರಿಗಾಗಿ ಕಾಯುವುದರಲ್ಲೇ ವ್ಯರ್ಥವಾಗಲಿದೆ.