Asianet Suvarna News Asianet Suvarna News

ಈ ರಾಶಿಗೆ ಅಂದುಕೊಂಡಿದ್ದು ಆಗಲಿದೆ ಸಂತೋಷ ಇರಲಿದೆ

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ , ಶುಕ್ರವಾರ ಅಕ್ಟೋಬರ್ 25

Daily Bhavishya 25 October 2019
Author
Bengaluru, First Published Oct 25, 2019, 7:15 AM IST

ಈ ರಾಶಿಗೆ ಅಂದುಕೊಂಡಿದ್ದು ಆಗಲಿದೆ ಸಂತೋಷ ಇರಲಿದೆ


ಮೇಷ: ಹಂಚುವುದಿದ್ದರೆ ಸಂತೋಷವನ್ನು ಹಂಚಿ. ಮತ್ತೊಬ್ಬರಿಗೆ ನೋವು ಕೊಟ್ಟು ಸಂತೋಷ ಪಡುವುದು ಸರಿಯಲ್ಲ. ಮತಿ ಶುದ್ಧವಿರಲಿ. ...

ವೃಷಭ: ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದ ಮೇಲೆಯೂ ಅದನ್ನು ಮಾಡುವುದಕ್ಕೆ ಹೋಗಬಾರದು. ಸನ್ಮಾರ್ಗದಲ್ಲಿ ಸಾಗಿ....

ಮಿಥುನ: ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಮಗೆ ಗೊತ್ತಿಲ್ಲದೇ ಇರುವ ವಿಚಾರವನ್ನು ತಿಳಿದವರ ಬಳಿ ಕೇಳಿ ತಿಳಿಯುವುದು...

ಕಟಕ: ನಿಮಗೆ ಸರಿ ಕಾಣದೇ ಇರುವುದನ್ನು ನೇರವಾಗಿ ಖಂಡಿಸಿ. ಎಲ್ಲರಿಗೂ ಇಷ್ಟವಾಗುವ ಹಾಗೆ ಬದುಕುವುದಕ್ಕೆ ಖಂಡಿತ ಸಾಧ್ಯವಿಲ್ಲ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ.

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ.

ಒಂದು ರಾಶಿಗೆ ಒಳ್ಳೆಯ ಫಲವೊಂದು ಒಲಿಯಲಿದೆ : ವಾರ ಭವಿಷ್ಯ...

ವೃಶ್ಚಿಕ: ನಿಮ್ಮ ಉತ್ಸಾಹವೇ ಇಂದು ನಿಮ್ಮನ್ನು ಹೊಸ ಅವಕಾಶದ ಬಳಿ ಕರೆದೊಯ್ಯಲಿದೆ. ಮತ್ತೊಬ್ಬರಿಗೆ ಕಿರಿಕಿರಿ ಮಾಡದಿರಿ.

ಧನುಸ್ಸು: ಅನಿರೀಕ್ಷಿತವಾಗಿ ಗೆಳೆಯರೊಂದಿಗೆ ಪ್ರವಾಸ ಹೊರಡಿಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ

ಮಕರ: ಕರ್ತವ್ಯದಲ್ಲಿ ಲೋಪ ಬರದಂತೆ ಎಚ್ಚರ ವಹಿಸಿ. ಪ್ರಶಂಸೆ ಬೇಕು ಎಂದರೆ ಕಠಿಣವಾದ ಪರಿಶ್ರಮ ಹಾಕಲೇಬೇಕು. ಧೈರ್ಯ ಇರಲಿ

ಕುಂಭ: ಖರ್ಚಿನ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ. ನಿಮ್ಮದಲ್ಲದ ವಿಚಾರಗಳಿಗೆ ನೀವು ಚಿಂತೆ ಮಾಡದಿರಿ

ಮೀನ: ಆರ್ಥಿಕ ಪ್ರಗತಿ. ಸಂಸಾರದಲ್ಲಿ ಸಂತೋಷ ಇರಲಿದೆ. ಇಡೀ ದಿನ ಸಂಭ್ರಮದಿಂದ ಕೂಡಿರಲಿದೆ. ಅಂದುಕೊಂಡಿದ್ದು ಆಗಲಿದೆ

Follow Us:
Download App:
  • android
  • ios