ಸೆಪ್ಟೆಂಬರ್ 24 ಮಂಗಳವಾರ: ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ?

ಮೇಷ
ಹುಡುಕಿಕೊಂಡು ಬಂದ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಂಡು ಮುಂದೆ
ಸಾಗಿ. ವ್ಯಸನಗಳ ದಾಸ್ಯದಿಂದ ಮುಕ್ತಿ ಸಿಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ
ಹಳೆಯ ನೆನಪುಗಳನ್ನೇ ಹೊತ್ತುಕೊಂಡು
ಹೆಚ್ಚು ಚಿಂತೆ ಮಾಡುವುದು ಬೇಡ.
ಅತಿಯಾದ ಭಾವೋದ್ವೇಗ ಒಳ್ಳೆಯದಲ್ಲ.

ಮಿಥುನ
ಜಾಣತನದಿಂದ ನಡೆದುಕೊಳ್ಳಲಿದ್ದೀರಿ. ಸಾವಿರ
ಮಂದಿಯ ನಡುವಲ್ಲೂ ನಿಮ್ಮ ಒಳ್ಳೆಯತನಕ್ಕೆ
ತಕ್ಕ ಸ್ಥಾನ ದೊರೆಯಲಿದೆ. ಶುಭ ದಿನ.

ಕಟಕ
ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ
ತುಂಬಾ ಎಚ್ಚರಿಕೆ ಇರಲಿ. ಹೊಸ ವಾಹನ
ಕೊಳ್ಳುವ ಅವಕಾಶವಿದೆ. ಗೆಲುವು ನಿಮ್ಮದೇ.

ಸಿಂಹ
ಆಗಿ ಹೋಗಿದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು
ಬೇಡ. ಮುಂದೆ ಆಗುವುದರ ಬಗ್ಗೆ ಸರಿಯಾಗಿ
ತಿಳಿದುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಿ.

ಕನ್ಯಾ
ದುಷ್ಟರ ಸಂಗದಿಂದ ದೂರ ಇರಿ. ನಿಮಗೆ
ಸಂಬಂಧಪಡದ ವಿಚಾರಗಳ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ನೆಮ್ಮದಿ ಹೆಚ್ಚಲಿದೆ.

ತುಲಾ 
ಬೆಲೆ ಬಾಳುವ ವಸ್ತುಗಳನ್ನು ಕೊಳ್ಳುವಾಗ
ಎರಡು ಮೂರು ಬಾರಿಯಾದರೂ ಪರೀಕ್ಷೆ
ಮಾಡಿಕೊಳ್ಳಿ. ಆಪ್ತರ ಭೇಟಿ ಸಾಧ್ಯವಾಗಲಿದೆ.

ವೃಶ್ಚಿಕ
ಎಲ್ಲವೂ ಗೊತ್ತು ಎನ್ನುವ ಅಹಂಕಾರ ಬೇಡ.
ಗೊತ್ತಿಲ್ಲದೇ ಇರುವುದನ್ನು ತಿಳಿದುಕೊಳ್ಳಲು
ಪ್ರಯತ್ನ ಮಾಡಿ. ಗೆಲುವು ಸಿಗಲಿದೆ. 

ಧನುಸ್ಸು
ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ.
ಸ್ನೇಹಿತರಿಗೆ ಹಣಕಾಸಿನ ನೆರವು ನೀಡಲಾಗದೇ
ಇದ್ದರೂ ನಾಲ್ಕು ಪ್ರೋತ್ಸಾಹದ ಮಾತನಾಡಿ.

ಮಕರ
ಹಣಕಾಸಿನ ತೊಂದರೆಯಿಂದ ನಿಮ್ಮ ಆಸೆಗಳು
ಕಮರಿಹೋಗಲಿವೆ. ದೊಡ್ಡ ಕೆಲಸ
ಕೈಗೆತ್ತಿಕೊಂಡಾಗ ಕಷ್ಟ, ಸವಾಲುಗಳು ಸಹಜ.

ಕುಂಭ
ಹಳೆಯ ಕನಸುಗಳು ನನಸಾಗುವ ದಿನ ಇದು.
ಮನೆಯವರ ಸಹಕಾರದಿಂದ ಲಾಭದ
ಮಾರ್ಗದಲ್ಲಿ ಸಾಗಲಿದ್ದೀರಿ. ಶುಭ ದಿನ.

ಮೀನ
ಆರೋಗ್ಯದಲ್ಲಿ ಕೊಂಚ ಏರುಪೇರು
ಕಂಡುಬಂದರೂ ಎರಡು ದಿನದಲ್ಲಿ ಎಲ್ಲವೂ
 ಸರಿಯಾಗಲಿದೆ. ತಂದೆಯಿಂದ ಸಹಕಾರ.