Asianet Suvarna News Asianet Suvarna News

ಈ ರಾಶಿಗೆ ಭಾರಿ ಶುಭ ಸುದ್ದಿಯೊಂದು ಒಲಿಯಲಿದೆ

ಅಕ್ಟೋಬರ್ 02 2019 ಬುಧವಾರ, ಹೇಗಿದೆ ಇಂದಿನ ನಿಮ್ಮ ರಾಶಿಗಳ ಫಲಾ ಫಲ

Daily Bhavishya 2 October 2019
Author
Bengaluru, First Published Oct 2, 2019, 7:15 AM IST

ಮೇಷ: ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಮ್ಮ ಅನುಕೂಲಕ್ಕಾಗಿ ಮತ್ತೊಬ್ಬರ ಜೀವನದಲ್ಲಿ ಆಟ ಆಡುವುದು ಬೇಡ.  

ವೃಷಬ: ಪಕ್ಕಾ ಲೆಕ್ಕಾಚಾರ ಇಟ್ಟುಕೊಂಡು ಹೊಸ ಉದ್ಯಮವನ್ನು ಶುರು ಮಾಡಿ. ಸಮಯಕ್ಕೆ ಬೆಲೆ ನೀಡಿದರೆ ಬದುಕು ಸುಂದರವಾಗುತ್ತದೆ...

ಮಿಥುನ: ಎಲ್ಲರೂ ತಪ್ಪು ಮಾಡುತ್ತಾರೆ. ಹಾಗಾಗಿ ನೀವು ತಪ್ಪುಗಳನ್ನು ಖಂಡಿಸಿ, ತಪ್ಪು ಮಾಡಿದ ವ್ಯಕ್ತಿಯನ್ನಲ್ಲ. ಮುಂದಾಲೋಚನೆ ಮುಖ್ಯ...

ಕಟಕ: ಭವಿಷ್ಯದ ಬಗ್ಗೆ ಸೂಕ್ತ ಆಲೋಚನೆ ಮಾಡಿ ಅದಕ್ಕೆ ತಕ್ಕಂತೆ ಇಂದಿನಿಂದ ಕಾರ್ಯ ಆರಂಭಿಸಿ. ಸಂಬಂಧಿಗಳು ನೆರವಾಗಲಿದ್ದಾರೆ...

ಸಿಂಹ: ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳ ಬೇಡಿ. ನಿಧಾನಕ್ಕೆ, ಆಲೋಚನೆ ಮಾಡಿ ಯಾವುದೇ ಕಾರ್ಯವನ್ನಾದರೂ ಕೈಗೊಳ್ಳಿ....

ಕನ್ಯಾ: ಗಾಯ ವಾಸಿಯಾದರೂ ಕಲೆ ಹಾಗೆಯೇ ಉಳಿಯುವಂತೆ ಹಳೆಯ ನೆನಪುಗಳು ಇಂದು ನಿಮ್ಮನ್ನು ಕಾಡಲಿವೆ. ಶುಭ ಸುದ್ದಿಯೂ ಇದೆ....

ನಿಮ್ಮ ಹೆಸರಿನ ಮೊದಲಕ್ಷರ ನಿಮ್ಮ ವ್ಯಕ್ತಿತ್ವದ ಕುರಿತು ಏನು ಹೇಳುತ್ತೆ ಚೆಕ್ ಮಾಡಿ...

ತುಲಾ: ನಿಮ್ಮ ಏಳಿಗೆಗಾಗಿ ಶ್ರಮಿಸುವ ಜೀವಗಳಿಗೆ ಸೂಕ್ತ ಗೌರವ ನೀಡಿ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ನಿಗಾ ಇಟ್ಟುಕೊಂಡರಿ...

ವೃಶ್ಚಿಕ: ಬದುಕು ನಿಮ್ಮ ಇಷ್ಟದಂತೆಯೇ ಇರುವುದಿಲ್ಲ. ಅಪರಿಚಿತರಿಂದ ಬದುಕಿಗೆ ಹೊಸ ತಿರುವು ದೊರೆಯಲಿದೆ. ಆತ್ಮವಿಶ್ವಾಸ ಇರಲಿ...

ಧನುಸ್ಸು: ಮುಂದೆ ಸಾಗುವಾಗ ಹಿಂದೆ ನಡೆದು ಬಂದ ದಾರಿಯನ್ನು ಮರೆಯಬೇಡಿ. ನಿಮ್ಮ ಮೇಲೆ ಆರೋಪ ಬಂದಾಗ ಮೌನವಾಗಿ ಎದುರಿಸಿ....

ಮಕರ: ಒಳಗೆ ನೋವು ಇಟ್ಟುಕೊಂಡು ಹೊರಗೆ ನಗು ನಗುತ್ತಾ ಇಡೀ ದಿನ ಕಳೆಯಲಿದ್ದೀರಿ. ನಿಮ್ಮ ಬೆನ್ನಿಗೆ ನಿಂತವರ ಋಣವನ್ನು ಮರೆಯದಿರಿ...

ಕುಂಭ: ಎಲ್ಲರ ಭಾವನೆಗಳಿಗೂ ನೀವು ಬೆಲೆ ನೀಡಲು ಸಾಧ್ಯವಾಗದೇ ಇದ್ದರೂ ಮತ್ತೊಬ್ಬರ ಭಾವನೆಗಳಿಗೆ ನಿಮ್ಮಿಂದ ಘಾಸಿಯಾಗದಿರಲಿ...

ಮೀನ: ಹಳೆಯ ಗೆಳೆಯರು ಇಂದು ತುಂಬಾ ಹತ್ತಿರವಾಗಲಿದ್ದಾರೆ. ಆರೋಗ್ಯದ ಕಡೆಗೆ ಗಮನ ನೀಡಿ. ನೆಮ್ಮದಿ ಹೆಚ್ಚಾಗಲಿದೆ....

Follow Us:
Download App:
  • android
  • ios