ಮೇಷ: ಮೊದಲು ನಿಮ್ಮ ಮಿತಿಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಭವಿಷ್ಯದ ಯೋಜನೆಗಳನ್ನು ರೂಪಿಸಿ. ಒಳಿತಾಗಲಿದೆ.

ವೃಷಭ: ಪ್ರಾರಂಭದಲ್ಲಿಯೇ ಅನಾಹುತವಾಗದ ರೀತಿ ಎಚ್ಚರಿಕೆ ವಹಿಸಿದರೆ ಎಲ್ಲವೂ ಅಂದುಕೊಂಡಂತೆ ನೆರವೇರಲಿದೆ. ಅಧಿಕ ಲಾಭ.

ಮಿಥುನ: ಸಾಧ್ಯವಾದಷ್ಟು ಬೇಗ ಕೊಡಬೇಕಾದ ಸಾಲಗಳ ಮರು ಪಾವತಿ ಮಾಡಿ. ದೊಡ್ಡ ಆಲೋಚನೆಗಳಿಗೆ ಇದು ಸಕಾಲ."

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ

ಕಟಕ: ನಿಮ್ಮ ಪ್ರತಿಭೆಗೆ ತಕ್ಕಂತೆ ಪ್ರತಿಫಲ ದೊರೆಯಲಿದೆ. ಎಲ್ಲರ ಮುಂದೆಯೂ ನಿಮ್ಮ ಕಾರ್ಯಕ್ಕೆ ಪ್ರಶಂಸೆಗಳು ಹರಿದುಬರಲಿವೆ.

ಸಿಂಹ: ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಸರಿ ಎನ್ನಿಸಿದ್ದನ್ನು ಮಾಡಿ. ನೀವು ಮಾಡಿದ ಕೆಲಸಕ್ಕೆ ಗೌರವ ದೊರೆಯಲಿದೆ.

ಕನ್ಯಾ: ಯಾರನ್ನೋ ನಂಬಿಕೊಂಡು ಇಡೀ ದಿನವನ್ನು ವ್ಯರ್ಥವಾಗಿ ಕಳೆಯಲಿದ್ದೀರಿ. ಸ್ವಾರ್ಥಿಗಳಿಂದ ಅಂತರ ಕಾಯ್ದುಕೊಳ್ಳುವುದು ಒಳಿತು.

ತುಲಾ: ನಿಮಗೆ ಯಾರು ಹಿತವರು ಎಂಬುದನ್ನು ತಿಳಿದುಕೊಂಡು ವ್ಯವಹಾರ ಮಾಡಿ. ತುಲಾ ಆರ್ಥಿಕವಾಗಿ ಒಳ್ಳೆಯ ಲಾಭ ಬರಲಿದೆ.

ವೃಶ್ಚಿಕ: ಎಲ್ಲಾ ಜವಾಬ್ದಾರಿಗಳನ್ನೂ ನಿಮ್ಮ ಮೇಲೆಯೇ ಹೊತ್ತುಕೊಂಡು ನರಳುವುದು ಬೇಡ. ಕಚೇರಿಯ ಕೆಲಸದಲ್ಲಿ ಪ್ರಗತಿ ಕಾಣಲಿದೆ.

ಧನಸ್ಸು: ಹೊಸ ಸ್ನೇಹಿತರೊಂದಿಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರ ಇಟ್ಟುಕೊಳ್ಳುವುದು ಬೇಡ. ತಂದೆ ಹೇಳಿದ ಮಾತಿನಂತೆ ನಡೆಯಿರಿ. 

ಮಕರ: ನಿಮ್ಮ ಸ್ವಂತ ಹಿತಾಶಕ್ತಿಗಳನ್ನು ಮತ್ತೊಬ್ಬರ ಮೇಲೆ ಹೇರುವುದು ಬೇಡ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ದುಷ್ಟರಿಂದ ದೂರವಿರಿ.

ಕುಂಭ: ಮೇಲಧಿಕಾರಿಯ ಕಿರಿಕಿರಿ ತಪ್ಪಲಿದೆ. ಗೊತ್ತಿಲ್ಲದ ಎಷ್ಟೋ ಸಂಗತಿಗಳು ಇಂದು ನಿಮಗೆ ಗೊತ್ತಾಗಲಿವೆ. ಆರೋಗ್ಯದಲ್ಲಿ ಚೇತರಿಕೆ.

ಮೀನ: ಭವಿಷ್ಯಕ್ಕೆ ಹೆದರಿ ವರ್ತಮಾನವನ್ನು ಹಾಳು ಮಾಡಿಕೊಳ್ಳುವುದು ಬೇಡ. ನಿಮ್ಮ ಪಾಲಿಗೆ ಬಂದದ್ದರಲ್ಲಿ ಸಂತೋಷ ಹುಡುಕಿ. ಶುಭಫಲ.