ಈ ರಾಶಿಗೆ ಆರಂಭದಲ್ಲಿಯೇ ಕಾದಿದೆ ಒಳ್ಳೆಯ ಲಾಭ

ಮೇಷ : ನಿಮ್ಮ ಪ್ರಗತಿ ಕಂಡು ಹಿಂದಿನಿಂದ ನಿಂದಿಸುವವರ ಮಾತಿಗೆ ಸೊಪ್ಪು ಹಾಕದಿರಿ. ಬಂಡೆಯಂತೆ ಗಟ್ಟಿಯಾಗುವಿರಿ

ವೃಷಭ : ಸರಿಯಾದ ಸಮಯ ನೋಡಿಕೊಂಡು ಶುಭ ಕಾರ್ಯಕ್ಕೆ ಮುಂದಾಗಿ. ಹೊಸ ಮನೆ  ನಿರ್ಮಾಣಕ್ಕೆ ಮಾತುಕತೆ ಶುರು

ಮಿಥುನ : ನಿಮ್ಮ ಪಾಲಿಗೆ ಬಂದದಷ್ಟೇ ನಿಮ್ಮದು, ಹೆಚ್ಚು ಆಸೆ ಬೇಡ, ಎಲ್ಲರನ್ನೂ ಮೆಚ್ಚಿಸಿ ಬದುಕುವುದಕ್ಕೆ ಆಗುವುದಿಲ್ಲ. ಚಿಂತೆ ಬಿಡಿ

ಕಟಕ : ಸಂಗೀತ ಕ್ಷೇತ್ರದಲ್ಲಿ ಇರುವುವವರಿಗೆ ಹೆಚ್ಚಿನ  ಅವಕಾಶಗಳು ಬಂದೊದಗಲಿವೆ.  ಮಾಡಿದ ಕಾರ್ಯಕ್ಕೆ ತಕ್ಕ ಪ್ರತಿಫಲ  ಇದೆ. 

ಸಿಂಹ : ದಾನ ಧರ್ಮಗಳಲ್ಲಿ ಆಸಕ್ತಿ ಹೆಚ್ಚಗಲಿದೆ. , ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವುದು ಬೇಡ. ಹೆಚ್ಚು ಕ್ರಿಯಾಶೀಲವಾಗುವಿರಿ

ಕನ್ಯಾ : ನಿರ್ಧಿಷ್ಟವಾದ ಸಂಗತಿಯ ಬಗ್ಗೆ ಹೆಚ್ಚು ಚಿಂತನೆ ನಡೆಸುವಿರಿ. ಹೊಸ ವ್ಯವಹಾರದಲ್ಲಿ  ಆರಂಭದಲ್ಲಿಯೇ ಒಳ್ಳೆಯ ಲಾಭ ಸಿಗಲಿದೆ. 

ತುಲಾ : ನಿಮ್ಮ ಹಿತೈಷಿಗಳು ಯಾರು, ವಿರೋಧಿಗಳು ಯಾರು ಎನ್ನುವುದನ್ನು ಸಿಯಾಗಿ ಅರ್ಥ ಮಾಡಿಕೊಳ್ಳಿ. ಆತುರದಿಂದ ಆಪತ್ತು

ವೃಶ್ಚಿಕ : ಹಿಂದಿನ ಅನುಭವದಿಂದ ಪಾಠಕಲಿತು ವ್ಯವಹಾರದ ನಡೆಸಿ.  ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ. 

ಧನಸ್ಸು : ಪ್ರೀತಿ ಪ್ರೇಮದಲ್ಲಿ ಹೆಚ್ಚಾಗಿ ಮುಳುಗಿ  ಕಾಯಕವನ್ನು ಕಡೆಗಣಿಸದಿರಿ. ಮನೆಯಲ್ಲಿ ದವಸ ಧಾನ್ಯಗಳ ಸಂಗ್ರಹ ಹೆಚ್ಚಾಗಲಿದೆ. 

ಮಕರ : ನಾಳೆಗಳ ಬಗ್ಗೆ ಕನಸು ಕಾಣುವುದು ಬೇಡ. ನಿಮ್ಮ ಶ್ರಮ ವ್ಯರ್ಥವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ, ಶುಭ ಫಲ

ಕುಂಭ : ಊಟಕ್ಕೆ ಹಾಕುವಾಗ ತಲೆ ಎಣಿಸದಿರಿ. ಸ್ವಾಇ ಕಾರ್ಯ ಸ್ವಕಾರ್ಯ, ಸಂತೋಷದ ಕ್ಷಣಗಳು ಹೆಚ್ಚಲಿವೆ. ಮತ್ತೊಬ್ಬರ  ಹಿತಾಸಕ್ತಿಗೆ ನೀವು ಬಲಿಯಾಗುವುದು ಬೇಡ, ತಾಳ್ಮೆಯಿಂದ ಮುಂದೆ ಸಾಗಿ.