ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ

ಮೇಷ
ಸಂಜೆ ವೇಳೆಗೆ ಶುಭ ಸುದ್ದಿಯನ್ನು
ಕೇಳಲಿದ್ದೀರಿ. ದೂರದ ಪ್ರಯಾಣವನ್ನು
ಸದ್ಯಕ್ಕೆ ಮೊಟಕುಗೊಳಿಸುವುದು ಒಳ್ಳೆಯದ್ದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ
ಹಿರಿಯರು ಹೇಳಿದ ಬುದ್ಧಿ ಮಾತುಗಳನ್ನು
ಕೇಳಿ, ಅದರಂತೆ ನಡೆಯಿರಿ. ಕೆಲಸದ ಸ್ಥಳದಲ್ಲಿ
ಸ್ವಲ್ಪ ಕಿರಿಕಿರಿ ಇದ್ದದ್ದೇ. ಗೆಲುವು ನಿಮ್ಮದೇ.

ಮಿಥುನ
ಸಹೋದರರ ನಡುವೆ ಸಣ್ಣ ಮನಸ್ತಾಪ
ಉಂಟಾಗಲಿದೆ. ತಂದೆಯ ಆರೋಗ್ಯದಲ್ಲಿ
ಚೇತರಿಕೆ. ಅಂದುಕೊಂಡದ್ದು ಆಗಲಿದೆ.

ಕಟಕ
ಹೆಚ್ಚು ಲಾಭದ ಆಸೆಗೆ ಬಿದ್ದು ಕೈ ಸುಟ್ಟು
ಕೊಳ್ಳುವ ಸಾಧ್ಯತೆ ಇದೆ. ಇರುವುದರಲ್ಲಿಯೇ
ತೃಪ್ತಿ ಕಾಣಿ. ಶ್ರಮಕ್ಕೆ ತಕ್ಕ ಪ್ರತಿಫಲವಿದೆ.

ಸಿಂಹ
ಮನಸ್ಸು ಏಕತಾನತೆಯಿಂದ ಹೊರಬರಲಿದೆ.
ಹೊಸ ಜಾಗ, ಹೊಸ ಜನರ ಪರಿಚಯ
ವಾಗಲಿದೆ. ಇಡೀ ದಿನ ಖುಷಿಯಿಂದಿರುವಿರಿ

ಕನ್ಯಾ
ನಿಗದಿಪಡಿಸಿಕೊಂಡ ಗುರಿಯನ್ನು ಇಂದು
ತಲುಪಲಿದ್ದೀರಿ. ಆತ್ಮೀಯರ ಅಗಲಿಕೆಯಿಂದ
ನೋವು ಸಹಜ. ಧರ್ಮ ಮಾರ್ಗದಲ್ಲಿ ಸಾಗಿ.

ತುಲಾ 
ಹೇಳುವುದಕ್ಕಿಂತ ಮಾಡುವುದು ಉತ್ತಮ.
ಸ್ವಂತ ಬಲದ ಮೇಲೆ ಉತ್ತುಂಗಕ್ಕೆ ಏರಲಿದ್ದೀರಿ.
ಸಮಾಧಾನದಿಂದ ಕೆಲಸ ಮಾಡಿ ಮುಗಿಸಿ.

ವೃಶ್ಚಿಕ
ಬಾಳ ಸಂಗಾತಿಯ ಆಯ್ಕೆಯಲ್ಲಿ ಎಚ್ಚರ
ವಹಿಸಿ. ಯಾರದ್ದೋ ಬಲವಂತಕ್ಕೆ ನಿಮ್ಮ
ಜೀವನ ಬಲಿಯಾಗದಿರಲಿ. ಶುಭ ಫಲ. 

ಧನುಸ್ಸು
ಹಿಂದೆ ನಿಮ್ಮನ್ನು ಅಣಕ ಮಾಡಿದ್ದವರೇ ಇಂದು
ನಿಮ್ಮ ಸಾಧನೆಗೆ ಚಪ್ಪಾಳೆ ಹೊಡೆಯಲಿದ್ದಾರೆ.
ಮನೆಯಲ್ಲಿ ಸಂತೋಷದ ವಾತಾವರಣ.

ಮಕರ
ಕಾಡುವ ಕಹಿ ನೆನಪುಗಳನ್ನು ಸುಟ್ಟು ಹಾಕಿ
ಹೊಸ ದಾರಿಯತ್ತ ನಡೆಯಲಿದ್ದೀರಿ.
ಎಲ್ಲರಿಂದಲೂ ಮೆಚ್ಚುಗೆ ದೊರೆಯಲಿದೆ.

ಕುಂಭ
ಕಷ್ಟ ಎಂದು ಹಿಡಿದ ಕೆಲಸವನ್ನು ಬಿಟ್ಟು ಹೊರ
ನಡೆಯುವ ಸ್ವಭಾವ ನಿಮ್ಮದ್ದಲ್ಲ.
ಸಾಧ್ಯವಾದರೆ ಒಳ್ಳೆಯದ್ದನ್ನು ಹಂಚುತ್ತಿರಿ.

ಮೀನ 
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಅಧಿಕಾರಸ್ಥರಿಗೆ ಶುಭವಾಗಲಿದೆ. ಬೀಸುವ
ದೊಣ್ಣೆಯಿಂದ ತಪ್ಪಿಸಿಳ್ಳುವ ಪ್ರಯತ್ನ ಮಾಡಿ.