Asianet Suvarna News Asianet Suvarna News

ದಿನ ಭವಿಷ್ಯ: ಇಂದು ಅವಿವಾಹಿತರು ಒಳ್ಳೆಯ ಸುದ್ದಿ ಕೇಳಲಿದ್ದೀರಿ

ಜನವರಿ 25 ಶನಿವಾರ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ
 

Daily Astrology in Kannada 25 Jan 2020 Horoscope
Author
Bengaluru, First Published Jan 25, 2020, 7:14 AM IST
  • Facebook
  • Twitter
  • Whatsapp

ಮೇಷ: ಪಾಲಿಗೆ ಬಂದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ. ನಿಂದನೆಗಳು ಬರುವ ಸಾಧ್ಯತೆ ಇದೆ. ಮನೆಯಲ್ಲಿ ಸಂಭ್ರಮವಿರಲಿ.

ವೃಷಭ: ಯಾವುದೇ ಆಮಿಷಕ್ಕೆ ಒಳಗಾಗದೇ ನಿಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿ ತುಲಾ ಮುಗಿಸಿ. ಸಂಜೆಗೆ ಶುಭ ಸುದ್ದಿ ಇದೆ.

ಮಿಥುನ: ಕಳೆದ ವಾರದಲ್ಲಿ ನಡೆದ ವ್ಯವಹಾರಕ್ಕೆ ಇಂದು ಪ್ರತಿಫಲ ದೊರೆಯಲಿದೆ. ನಕಾರಾತ್ಮಕ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡದಿರಿ.

ಕಟಕ: ಅನಿರೀಕ್ಷಿತ ಸುದ್ದಿಯಿಂದ ಮನೆಯಲ್ಲಿ ಸಂತಸ ಹೆಚ್ಚಾಗಲಿದೆ. ನಿಮ್ಮ ಕಾರ್ಯಕ್ಕೆ ತಕ್ಕ ಪ್ರತಿ ಫಲವೂ ಈ ದಿನ ದೊರೆಯಲಿದೆ. ಶುಭಫಲ.

ಸಿಂಹ: ಈ ದಿನ ಸಾಕಷ್ಟು ಬಿಡುವು ದೊರೆಯಲಿದೆ. ಮತ್ತೊಬ್ಬರ ಮೇಲೆ ಹೆಚ್ಚು ಅವಲಂಭಿಯಾಗುವುದು ಬೇಡ. ತಾಳ್ಮೆ ಮತ್ತಷ್ಟು ಹೆಚ್ಚಲಿದೆ.

ವಾರ ಭವಿಷ್ಯ: ಈ ರಾಶಿಯವರ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದೆ

ಕನ್ಯಾ: ದುಷ್ಟರಿಂದ ಅಂತರ ಕಾಯ್ದುಕೊಳ್ಳಿ. ಸ್ನೇಹಿತರ ವಿಚಾರದಲ್ಲಿ ದುಡುಕುವುದು ಬೇಡ. ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ತುಲಾ: ನೀವು ಇಂದು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಮನೆಯವರ ಮೇಲೆ ಪರಿಣಾಮ ಬೀರುವುದರಿಂದ ಎಚ್ಚರಿಕೆ ಇರಲಿ.

ವೃಶ್ಚಿಕ: ಮಾಡಿದ್ದುಣ್ಣೋ ಮಹರಾಯ ಎನ್ನುವ ಹಾಗೆ ನಿಮ್ಮ ಹಿಂದಿನ ಪುಣ್ಯಕಾರ್ಯಗಳಿಗೆ ಇಂದು ನಿರೀಕ್ಷಿತ ಫಲವನ್ನು ಪಡೆಯಲಿದ್ದೀರಿ.

ಧನಸ್ಸು: ಗೊಂದಲಗಳು ಸಹಜ. ಅದರಿಂದ ಹೊರಗೆ ಬಂದು ಸಂತಸ ಹುಡುಕಿ. ಸಂಜೆ ವೇಳೆಗೆ ಮನಸ್ಸು ನಿರಾಳವಾಗಲಿದೆ. ಶಾಂತಿ ಇರಲಿದೆ. 

ಮಕರ: ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಇಡೀ ದಿನ ತೊಡಗಿಸಿಕೊಳ್ಳಲಿದ್ದೀರಿ. ಅವಿವೇಕಿಗಳ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ.

ಕುಂಭ: ಅಧಿಕಾರ ಕ್ಷಣಿಕ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇರಲಿ. ಮತ್ತೊಬ್ಬರ ಬಗ್ಗೆ ಸಹಾನುಭೂತಿ ಇರಲಿ. ಸಂಗೀತ ಕೇಳಿ ಮನಸ್ಸು ನಿರಾಳ.

ಮೀನ: ಮುಂದಿನ ವಾರದ ಕಾರ್ಯಕ್ರಮಗಳ ತಯಾರಿಯಲ್ಲಿಯೇ ಈ ದಿನ ಕಳೆಯಲಿದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ತಿಳಿಯಲಿದೆ.

Follow Us:
Download App:
  • android
  • ios