ಒಂದು ರಾಶಿಗೆ ಒಳಿತಿನ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಸುಮ್ಮನೆ ಕೂರುವುದಕ್ಕಿಂತ ಏನಾದರೂ ಕೆಲಸ
ಮಾಡುವುದು ಉತ್ತಮ. ದೈಹಿಕ ಆರೋಗ್ಯದ
ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಿ.

ವೃಷಭ
ಪರಾವಲಂಬನೆ ಕಡಿಮೆಯಾಗಲಿದೆ. ಹೆಚ್ಚು
ಹೆಚ್ಚು ಆಸೆಗೆ ತುತ್ತಾದಷ್ಟೂ ನಿರಾಶೆ ಆವರಿಸಿ
ಕೊಳ್ಳುತ್ತದೆ. ಪ್ರಾಮಾಣಿಕತೆ ಇರಲಿ.

ಮಿಥುನ
ಕಷ್ಟಗಳು ಬರುತ್ತವೆ, ಹೋಗುತ್ತವೆ. ಆದರೆ
ಯಾವುದಕ್ಕೂ ಹೆದರಿ ಬೆನ್ನು ತೋರಿಸ
ಬಾರದು. ನಿಧಾನವೇ ಪ್ರಧಾನ. ಶುಭಫಲ.

ನಿಮ್ಮ ಜನ್ಮರಾಶಿಗೆ ಹೊಂದುವ ಡ್ರೆಸ್ ಧರಿಸಿದ್ರೆ ಲಕಲಕ!.

ಕಟಕ
ದಾರಿ ಕಾಣದೇ ನಿಂತಿದ್ದಾಗ ಅಪರಿಚಿತರು
ನಿಮಗೆ ನೆರವಾಗಲಿದ್ದಾರೆ. ಗೊತ್ತಿಲ್ಲದ ವಿಚಾರ
ದಲ್ಲಿ ತಲೆ ಹಾಕದಿರುವುದು ಒಳ್ಳೆಯದು.

ಸಿಂಹ
ಮತ್ತೊಬ್ಬರಿಗೆ ನೀವು ಸಹಾಯ ಮಾಡಿದರೆ
ನಿಮಗೆ ಸಹಾಯ ಮಾಡುವವರು ಇದ್ದೇ
ಇರುತ್ತಾರೆ. ಸತ್ ಚಿಂತನೆ ನಿಮ್ಮದಾಗಲಿ

ಕನ್ಯಾ
ಗೆಲುವು ದಕ್ಕಬೇಕು ಎಂದು ಹೋರಾಟ
ಮಾಡಿ. ಆದರೆ ಅನ್ಯಾಯದ ಮಾರ್ಗ ತುಳಿ
ಯದಂತೆ ಎಚ್ಚರ ಇರಲಿ. ನೆಮ್ಮದಿ ಇರಲಿದೆ.

ತುಲಾ
ಶುಭ ಕಾರ್ಯ ಮಾಡುವ ಮುನ್ನ ಶುಭ
ಮಹೂರ್ತ ಗುರುತು ಮಾಡಿಕೊಳ್ಳಿ. ಗಣೇಶನ
ಆರಾಧನೆ ಮಾಡಿದರೆ ಒಳಿತಾಗಲಿದೆ.

ವೃಶ್ಚಿಕ
ಕೆಲಸದಲ್ಲಿ ಪ್ರಗತಿಯ ಜೊತೆಗೆ ವೇಗವೂ
ಹೆಚ್ಚಾಗಲಿದೆ. ಬ್ಯಾಂಕ್ ವ್ಯವಹಾರಗಳು
ಸಲೀಸಾಗಲಿವೆ. ಗುರಿಯ ಕಡೆ ಗಮನವಿರಲಿ. 

ಧನುಸ್ಸು
ಎಲ್ಲಾ ಭಾರಗಳನ್ನೂ ದೇವರ ಮೇಲೆ ಹಾಕಿ
ಮುಂದೆ ಸಾಗಿ. ಸ್ವಂತವಾಗಿ ಆಲೋಚನೆ
ಮಾಡಿದರೆ ಒಳ್ಳೆಯ ಪ್ರತಿಫಲ ಸಿಗಲಿದೆ.

ಮಕರ
ಬೇಡದ ಚರ್ಚೆಗಳಲ್ಲಿ ದಿನ ಪೂರ್ತಿ ಕಳೆದು
ಹೋಗಲಿದ್ದೀರಿ. ಆರೋಗ್ಯದ ಕಡೆಗೆ ಗಮನ
ನೀಡಿ. ಮಿಂಚಿಹೋದ ಕಾಲಕ್ಕೆ ಚಿಂತಿಸದಿರಿ.

ಕುಂಭ
ಅಂದುಕೊಂಡಿದ್ದ ಬದಲಾವಣೆ ನಿಮ್ಮಂದಲೇ
ಆಗಲಿದೆ. ಸ್ನೇಹಿತರ ಕಷ್ಟಕ್ಕೆ ನೆರವಾಗಲಿದ್ದೀರಿ.
ಮನೆಯಲ್ಲಿ ನಿಮ್ಮ ಮಾತು ನಡೆಯಲಿದೆ.

ಮೀನ 
ಪರರ ಬಗ್ಗೆ ಚಿಂತೆ ಮಾಡುತ್ತಾ ಕೂರುವುದಕ್ಕೆ
ಬದಲಾಗಿ ನಿಮ್ಮ ಸ್ವಂತಕ್ಕಾಗಿ ಆಲೋಚನೆ
ಮಾಡಿ. ಸಂಗಾತಿಯೊಂದಿಗೆ ಪ್ರವಾಸ ಸಾಧ್ಯತೆ.