ಮೇಷ: ನೀವು ಏನು ಕೆಲಸ ಮಾಡಿದ್ದೀರಿ ಎನ್ನುವುದರ ಜೊತೆಗೆ ಹೇಗೆ ಮಾಡಿದ್ದೀರಿ ಎನ್ನುವುದೂ ಮುಖ್ಯ. ವಾಮಮಾರ್ಗದಲ್ಲಿ ಸಾಗದಿರಿ.

ವೃಷಭ: ಮನಸ್ಸಿಗೆ ಹೆಚ್ಚು ನೆಮ್ಮದಿ ಸಿಗುವ ಸಮಯವಿದು. ಹೊಸ ಬಗೆಯ ವ್ಯವಹಾರಕ್ಕೆ ಕೈ ಹಾಕಲಿದ್ದೀರಿ. ಸ್ವಾಭಿಮಾನ ಬಿಡದಿರಿ.

ಮಿಥುನ: ಯಾರೋ ಹೇಳಿದ ಮಾತಿಗೆ ತಲೆ ಕೆಡಿಸಿ ಕೊಳ್ಳುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ. ಗೆಲುವು ದಕ್ಕಲಿದೆ.

ಕಟಕ: ಮಾಡುವ ಕೆಲಸವನ್ನೇ ಉತ್ತಮವಾಗಿ, ಭಿನ್ನವಾಗಿ ಮಾಡಿ ಮುಗಿಸಿ. ಹಣದ ಹಿಂದೆ ಹೋಗುವುದು ಬೇಡ. ತಾಳ್ಮೆ ಇರಲಿ.

ವಾರ ಭವಿಷ್ಯ: ಈ ಒಂದು ರಾಶಿಯವರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ಸಿಂಹ: ಆಸೆ ಸಹಜ. ಅದನ್ನು ನಿಯಂತ್ರಿಸಿಕೊಂಡರೆ ಸಂತೋಷ ಸಿಕ್ಕುತ್ತದೆ. ಅಧಿಕಾರಿಗಳ ಹಿಂದೆ ಬೀಳಬೇಕಾದ ಸಂದರ್ಭ ಬರಲಿದೆ. ಶುಭಫಲ.

ಕನ್ಯಾ: ಒಂದು ವಿಚಾರಕ್ಕೆ ಬದ್ಧವಾಗಿ ನಡೆದುಕೊಳ್ಳಿ. ಹಿತ್ತಾಳೆ ಕಿವಿ ಒಳ್ಳೆಯದಲ್ಲ. ಬಾಯಿ ರುಚಿಗೆ ಕಡಿವಾಣ ಹಾಕಿಕೊಳ್ಳಿ. ಆರೋಗ್ಯದಲ್ಲಿ ಸ್ಥಿರತೆ.

ತುಲಾ: ಯಾವುದೇ ಕೆಲಸವಾದರೂ ಪೂರ್ಣ ಮನಸ್ಸಿಟ್ಟು ಮಾಡಿ. ಗೊಂದಲದಲ್ಲಿಯೇ ದಿನ ಕಳೆಯಲಿದೆ. ಹಣದ ಬಿಕ್ಕಟ್ಟು ಉಂಟಾಗಲಿದೆ.

ವೃಶ್ಚಿಕ: ಒಳ್ಳೆತನದ ಸೋಗು ಹಾಕಿಕೊಂಡು ಮೋಸ ಮಾಡುವವರ ಬಗ್ಗೆ ಎಚ್ಚರ ಇರಲಿ. ಸಮಯಕ್ಕೆ ಹೆಚ್ಚು ಗೌರವ ನೀಡಿ. ಧೈರ್ಯ ಇರಲಿ.

ಧನಸ್ಸು: ಬಂಗಾರಕ್ಕೂ ಕಾಗೆ ಬಂಗಾರಕ್ಕೂ ವ್ಯತ್ಯಾಸ ತಿಳಿದುಕೊಂಡು ವ್ಯವಹಾರ ಮಾಡಿ. ಸ್ವಂತದ ಹಿತಾಸಕ್ತಿಗೆ ಮನೆಯ ನೆಮ್ಮದಿ ಕೆಡಿಸದಿರಿ.

ಮಕರ: ಸುತ್ತಾಟಗಳು ಹೆಚ್ಚಾಗಲಿವೆ. ಆಹಾರದಲ್ಲಿ ಮಿತಿ ಮತ್ತು ಕಟ್ಟುನಿಟ್ಟು ಇರಲಿ. ಧಾರ್ಮಿಕ ಕಾರ್ಯಗಳು ಹೆಚ್ಚಾಗಲಿವೆ. ಶ್ರಮ ಹೆಚ್ಚಲಿದೆ.

ಕುಂಭ: ಹಳೆಯ ನೋವುಗಳನ್ನು ಮರೆಸುವಂತೆ ಹೊಸ ಸಂತೋಷಗಳು ಬರಲಿವೆ. ಮಕ್ಕಳೊಂದಿಗೆ ಇಡೀ ದಿನ ಕಳೆಯಲಿದ್ದೀರಿ. ಶುಭಫಲ.

ಮೀನ: ಸಣ್ಣ ಕೆಲಸವಾದರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಆತ್ಮೀಯರೊಂದಿಗೆ ದಿನ ಕಳೆಯುವಿರಿ.