ಆದಿಶೇಷನ ಕೃಪೆಗೆ ಅವಕಾಶ: ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 10:23 PM IST
bengaluru-nagara-panchami-religious-events-on-august-16-2018
Highlights

ಹಬ್ಬಗಳ ಮಾಸ ಎದುರಾಗಿದ್ದು ನಾಗರ ಪಂಚಮಿಯಂದು ನಗರದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚರ್ಮ ರೋಗ, ಸಂತಾನ ಸಮಸ್ಯೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಸೇರಿದಂತೆ ಹಲವು ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಲು ನಾಗ ದೇವತೆಯ ಕೃಪೆಗೆ ಪಾತ್ರರಾಗಬಹುದು.

ಬೆಂಗಳೂರು (ಆ.6) ಹಬ್ಬಗಳ ಮಾಸ ಆರಂಭವಾಗುತ್ತಿದೆ. ನಾಡಿಗೆ ದೊಡ್ಡದು ಎಂದು ಕರೆಸಿಕೊಳ್ಳುವ ನಾಗರ ಪಂಚಮಿ ಆಗಸ್ಟ್ 16 ಗುರುವಾರ ಎದುರಾಗಿದೆ.  ಆಚಾರ್ಯ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ, ನಾಗ ತನು ತರ್ಪಣ, ನಾಗ ಸುಬ್ರಹ್ಮಣ್ಯಾರಾಧನೆ ನಡೆಯಲಿದೆ.

ದೃಷ್ಟಿ ದೋಷ, ಚರ್ಮ ರೋಗ, ಸಂತಾನ ಹೀನತೆ, ಕುಟುಂಬದ ಸಾಮರಸ್ಯ, ಸಂಪತ್ತು ವೃದ್ಧಿ ಮುಂತಾದ ಕಾರಣಗಳ ಪರಿಹಾರಕ್ಕೋಸ್ಕರ ಭಕ್ತರು ಆದಿಶೇಷನ ಕೃಪೆಗೆ ಪಾತ್ರರಾಗಬಹುದು. ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ದತ್ತಾತ್ರೇಯ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಭಕ್ತರು ನಾಗ ದೇವತೆಯ ಕೃಪೆಗೆ ಪಾತ್ರರಾಗಲು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪ್ರಧಾನ ಆಚಾರ್ಯ ರಾಘವೇಂದ್ರ ಹೆಗಡೆ 9986201603 ಮತ್ತು 8618640463 ಸಂಪರ್ಕಿಸಬಹುದು. 

ನಾಗರಪಂಚಮಿ ಅಥವಾ ಪಂಚಮಿ ಹಬ್ಬ ವಿಶೇಷವಾಗಿ ಹಾವಿನ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯ. ಆ ಹಾಲನ್ನು ನಾಗರ ಹಾವು ಸೇವಿಸುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ಹಬ್ಬವನ್ನು ಶ್ರಾವಣಮಾಸ ಆರಂಭವಾದ 5ನೇ ದಿನಕ್ಕೆ ಆಚರಿಸುತ್ತಾರೆ. ನಾಗರ ಪಂಚಮಿ ದಿನದಂದು ಮಹಿಳೆಯರು ನಾಗರ ಪ್ರತಿಮೆಗೆ ವಿವಿಧ ರೀತಿಯಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ.

loader