ಹೀಗೂ ಮಾಡ್ತಾರಾ ? You Are Not Hot ಎಂದು ಜಿಮ್‌ನಿಂದ ಮಹಿಳೆ ಕಿಕ್‌ಔಟ್‌

By Suvarna NewsFirst Published Oct 12, 2022, 1:18 PM IST
Highlights

ಜಿಮ್‌ ಅನ್ನೋದು ಆಕ್ಚುವಲಿ ವರ್ಕೌಟ್ ಮಾಡೋ ಜಾಗವಾಗಿದ್ರೂ ಅಲ್ಲೂ ಡ್ರೆಸ್ಸಿಂಗ್ಸ್‌, ಸ್ಟೈಲಿಂಗ್‌ ಎಲ್ಲವೂ ಮ್ಯಾಟರ್‌ ಆಗುತ್ತೆ. ಅದರಲ್ಲೂ ಜಿಮ್‌ಗೆ ಹುಡುಗರು-ಹುಡುಗಿಯರು ಸ್ಟೈಲಿಶ್‌ ಆಗಿ ಶಾರ್ಟ್ಸ್, ಕಾಂಫೀ ಡ್ರೆಸ್‌ಗಳನ್ನು ಹಾಕಿಕೊಂಡು ಹಾಟ್ ಆಗಿ ಬರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬಾಕೆ ಜಿಮ್‌ಗ ಬರೋ ಹುಡುಗಿ ಹಾಟ್ ಆಗಿಲ್ಲ ಅನ್ನೋ ಕಾರಣಕ್ಕೆ ಜಿಮ್‌ನಿಂದ ಹೊರ ಹಾಕಿದ್ದಾರೆ. 

ಅಮೇರಿಕಾದ ಮಹಿಳೆಯೊಬ್ಬರು ಅತ್ಯಂತ ವಿಲಕ್ಷಣ ಕಾರಣಕ್ಕಾಗಿ 6 ​​ವರ್ಷಗಳಿಂದ ಮೆಂಬರ್‌ಶಿಪ್‌ ಪಡೆದುಕೊಂಡಿದ್ದ ಜಿಮ್‌ನಿಂದ ಹೊರಹಾಕಲ್ಪಟ್ಟರು. ವರದಿಯ ಪ್ರಕಾರ, ಅವರು ತಮ್ಮ ಗ್ರಾಮದಲ್ಲಿ ಜಿಮ್‌ಗೆ ಸಾಮಾನ್ಯ ದಿರಿಸು ಧರಿಸು ಹೋಗುತ್ತಿದ್ದರು. ಹೀಗಾಗಿಯೇ ಜಿಮ್‌ ವಾತಾವರಣಕ್ಕೆ ಅವರು ಹಾಟ್‌ ಆಗಿಲ್ಲ. ಮತ್ತೊಬ್ಬರಿಗೆ ಇನ್‌ಸ್ಪೈಯರ್ ಆಗಲ್ಲ ಅನ್ನೋ ಕಾರಣಕ್ಕೆ ಅವರನ್ನು ಜಿಮ್‌ನಿಂದ ಹೊರ ಹಾಕಲಾಯಿತು. ನೀವು ತುಂಬಾ ಹಾಟ್ ಆಗಿಲ್ಲ ಎಂಬ ಕಾರಣವನ್ನೊಡ್ಡಿ ಮಹಿಳೆಯನ್ನು ಜಿಮ್‌ನಿಂದ ಹೊರ ಹಾಕಲಾಯಿತು. ಶಿರ್ಲ್ಸ್ ಲಾರ್ಸನ್ ತನ್ನ ಅನುಯಾಯಿಗಳೊಂದಿಗೆ ಒಂದು ರೀತಿಯ ಅನುಭವವನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು. 'ತಾನು ಹಾಕಿರುವ ಟೇಸ್ಟ್‌ಲೆಸ್‌  Instagram ಫೋಟೋಗಳ ಕಾರಣಕ್ಕಾಗಿ ನನಗೆ ಸ್ಥಳೀಯ ಜಿಮ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

I was kicked out of my small hometown gym of which I've been a member for 6 years for taking tasteless Instagram pictures

Here's me at my new gym turning a new leaf

S/O modesty
S/O being tasteful from now on
S/O elegant grizzley bears pic.twitter.com/OwdE6aYgRr

— shirlsss (@shortyshirls)

ಹೊಸ ಜಿಮ್‌ಗೆ ಜಾಯಿನ್ ಆಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಮಹಿಳೆ 'S/O modesty S/O being tasteful from now on S/O elegant grizzly bears' ಎಂದು ಮಹಿಳೆ (Woman) ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಹಳ್ಳಿಯ ದಿರಿಸಿನಲ್ಲಿದ್ದ ತಾನು ಹಾಟ್‌ ಆಗಿ ಹೇಗೆ ಬದಲಾದೆ ಎಂಬುದನ್ನು ತೋರಿಸುವ ಹಳೆಯ ಮತ್ತು ಹೊಸ ಎರಡು ಫೋಟೋವನ್ನು ಶೇರ್ ಮಾಡಿದ್ದಾರೆ. ಹಳೆಯ ಫೋಟೋದಲ್ಲಿ ಆಕೆ ದೊಗಲೆ ಪ್ಯಾಂಟ್ ಮತ್ತು ಟೀಶರ್ಟ್‌ನಲ್ಲಿದ್ದರೆ, ಹೊಸ ಫೋಟೋದಲ್ಲಿ ಲೈಲಾಕ್ ಕಲರ್‌ನ ಬ್ರಾ ಸ್ಕರ್ಟ್‌ ಧರಿಸಿದ್ದಾರೆ.

ಜಿಮ್‌ಗೆ ಹೋಗುವ ಮುನ್ನ ಎಚ್ಚರ, ಹೆಚ್ಚು ಕಡಿಮೆಯಾದರೆ ಹಾರ್ಟ್ ಅಟ್ಯಾಕ್ ಆಗೋದು ಗ್ಯಾರಂಟಿ!

ಜಿಮ್ ಅಧಿಕಾರಿಗಳ ಕ್ರಮಕ್ಕೆ ನೆಟ್ಟಿಗರ ಆಕ್ರೋಶ
ಟ್ವಿಟ್ಟರ್ ಬಳಕೆದಾರರು ಪೋಸ್ಟ್‌ಗೆ ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಣ್ಣ ಪಟ್ಟಣವು ಎಷ್ಟು ಸಣ್ಣ ಮನಸ್ಥಿತಿಯನ್ನು ಹೊಂದಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವ್ಯಕ್ತಿಯೊಬ್ಬರು ಕಮೆಂಟಿಸಿದ್ದಾರೆ. ಇಂಥಾ ತಾರತಮ್ಯ ಯಾವ ರೀತಿಯಿಂದಲೂ ಒಪ್ಪಲಾಗುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಜಿಮ್ ಅಧಿಕಾರಿಗಳ ಸಂಕುಚಿತ ಮನೋಭಾವ ಆಘಾತಕಾರಿ' ಎಂದು ತಿಳಿಸಿದ್ದಾರೆ.

ವರ್ಕ್‌ಔಟ್ ಮಾಡಿಯಾದ ಮೇಲೆ ಅಪ್ಪಿತಪ್ಪಿಯೂ ಇಂಥಾ ತಪ್ಪು ಮಾಡ್ಲೇಬೇಡಿ

ನಂತರ, ಮಹಿಳೆ ಲಾರ್ಸನ್ ಇನ್ಸ್ಟಾಗ್ರಾಮ್‌ನಲ್ಲಿ ಘಟನೆಯನ್ನು ವಿವರಿಸಿದರು. ಸಾಮಾಜಿಕ ಮಾಧ್ಯಮದಲ್ಲಿ (Social media) ಟೇಸ್ಟ್‌ಲೆಸ್‌ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜಿಮ್‌ಗೆ ಬರುವುದನ್ನು ನಿಷೇಧಿಸಲಾಯಿತು. ಪರಿಣಾಮವಾಗಿ, ಜಿಮ್‌ಗೆ ಹೋಗಲು ಬೇರೆ ಹೊಸ ಸ್ಥಳವನ್ನು ಹುಡುಕಿ ಈ ರೀತಿ ಬದಲಾಗಿದ್ದೇನೆ ಎಂದು ತಿಳಿಸಿದ್ದಾರೆ. 'ನಾನು ಸ್ವತಂತ್ರ ಮನೋಭಾವದವಳಾಗಿದ್ದೇನೆ, ನಾನು ಸ್ನೇಹಪರಳಾಗಿದ್ದೇನೆ, ನಾನು ಏನು ಧರಿಸಲು ಇಷ್ಟಪಡುತ್ತೇನೆ ಎಂಬುದು ನನ್ನ ಆಯ್ಕೆ. ನನ್ನ ಬಟ್ಟೆಯ ಆಧಾರದಲ್ಲಿ ನನ್ನನ್ನು ಅಳೆಯುವುದು ಎಷ್ಟು ಸರಿ' ಎಂಬುದಾಗಿ ಮಹಿಳೆ ಪ್ರಶ್ನಿಸಿದ್ದಾರೆ. ಇದು ವ್ಯಕ್ತಿತ್ವವನ್ನು ಹಣ, ಆಸ್ತಿ, ಅಂತಸ್ತು, ಜಾತಿಯ ಮೇಲೆ ನಿರ್ಧರಿಸುವ ಜನರಿಗೂ ಒಂದು ಕಿವಿ ಮಾತಿನಂತಿದೆ.

click me!