Chanakya Niti: ಹೆಂಡತಿ ತನ್ನ ಗಂಡನಿಂದ ಈ 6 ಪ್ರಮುಖ ಸಂಗತಿ ಮರೆಮಾಚುತ್ತಾಳಂತೆ!

By Bhavani Bhat  |  First Published May 19, 2024, 2:35 PM IST

ಸಂಬಂಧವು ಎಷ್ಟೇ ಪಾರದರ್ಶಕವಾಗಿರಲಿ, ದಂಪತಿಗಳ ನಡುವೆ ಕೆಲವು ರಹಸ್ಯಗಳಿರುತ್ತವೆ. ಪ್ರತಿಯೊಬ್ಬ ಹೆಂಡತಿಯೂ ಕೆಲವು ಸಾಮಾನ್ಯ ವಿಷಯಗಳನ್ನು ತನ್ನ ಗಂಡನಿಂದ ಮುಚ್ಚಿಡುತ್ತಾಳೆ. ಅವು ಯಾವುವು ಗೊತ್ತೆ?


ಕಾಲದ ಪರಿಸ್ಥಿತಿಗಳಿಗೆ ಅನುಗುಣವಾಗಿ ಚಾಣಕ್ಯನ ಮಾತುಗಳು ಮತ್ತು ಬೋಧನೆಗಳು ಶಾಶ್ವತವಾಗಿ ಅನ್ವಯವಾಗುತ್ತವೆ. ಅದರಲ್ಲೂ ಜನರ ನಡವಳಿಕೆಗೆ ಸಂಬಂಧಿಸಿದವುಗಳು ಪ್ರತಿಯೊಬ್ಬರ ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ. ಹೇಗೆ ವರ್ತಿಸಬೇಕು ಮತ್ತು ಹೇಗೆ ವರ್ತಿಸಬಾರದು ಎಂಬ ಬಗ್ಗೆ ಚಾಣಕ್ಯ ಸ್ಪಷ್ಟತೆಯನ್ನು ನೀಡುತ್ತಾರೆ. ಚಾಣಕ್ಯ ವಿಶೇಷವಾಗಿ ಸಂಬಂಧದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಆರೋಗ್ಯಕರ ಸಂಬಂಧವು ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಆಧರಿಸಿದೆ. ಪಾರದರ್ಶಕತೆ ಆ ಬಂಧವನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಆದರೆ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲವು ವಿಷಯಗಳನ್ನು ಪರಸ್ಪರ ಗೌಪ್ಯವಾಗಿಟ್ಟಿರುತ್ತಾರೆ. ಅದರಲ್ಲೂ ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಂದ ಈ 6 ವಿಷಯಗಳನ್ನು ಮರೆಮಾಚುತ್ತಾಳೆ. ಈ ವಿಷಯಗಳನ್ನು ಮರೆಮಾಚಿದರೆ ಮಾತ್ರ ಇಬ್ಬರ ನಡುವೆ ಘರ್ಷಣೆಗಳು ಬರುವುದಿಲ್ಲ, ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ಚಾಣಕ್ಯನ ಅಭಿಪ್ರಾಯ.

ಸೀಕ್ರೆಟ್ ಕ್ರಷ್:  ಚಾಣಕ್ಯ ಹೇಳುವಂತೆ ಪ್ರತಿಯೊಬ್ಬ ಮಹಿಳೆಗೂ ರಹಸ್ಯವಾದ ಮೋಹ ಇರುತ್ತದೆ. ಅದು ಯಾವುದೇ ಹಂತದಲ್ಲಿರಬಹುದು. ಆದರೆ ಅವಳ ಜೀವನದಲ್ಲಿ ಬೇರೆಯವರನ್ನು ಪ್ರೀತಿಸುವ ಸಂದರ್ಭವಿರುತ್ತದೆ ಅಥವಾ ಆಗಿಹೋಗಿರುತ್ತದೆ. ಇದನ್ನು ಯಾವ ಹೆಂಡತಿಯೂ ತನ್ನ ಗಂಡನಿಗೆ ಹೇಳುವುದಿಲ್ಲ, ಹೇಳಬಾರದು. ತನ್ನ ಆಪ್ತ ಸ್ನೇಹಿತನಿಗೆ ಸಂಬಂಧಿಸಿದ ಯಾವುದನ್ನಾದರೂ ತನ್ನ ಸಂಗಾತಿಯೊಂದಿಗೆ ಪ್ರಸ್ತಾಪಿಸಲು ಅವಕಾಶವಿದ್ದರೂ, ಆಕೆ ಅದನ್ನು ಹಂಚಿಕೊಳ್ಳುವುದಿಲ್ಲ.

Tap to resize

Latest Videos

ಅಯ್ಯೋ, ಚಂದ್ರಕಾಂತ್ ಜೀವ ಉಳಿಸಲು ಪತ್ನಿ ಶಿಲ್ಪಾಗೆ ಸಾಧ್ಯವಿತ್ತು; ಹೀಗಂತಾರೆ ಘಟನೆ ಬಲ್ಲವರು!

ಹೆಚ್ಚಿನ ವಿಷಯಗಳಲ್ಲಿ ಒಪ್ಪುತ್ತಾರೆ:  ಅವಳು ಅನೇಕ ವಿಷಯಗಳಲ್ಲಿ ಗಂಡನಿಗೆ ಒಪ್ಪಿಗೆ ತೋರುತ್ತಾಳೆ. ಅವಳು ಕೆಲವನ್ನು ಇಷ್ಟಪಡದಿದ್ದರೂ ಇಲ್ಲ ಎಂದು ನೇರವಾಗಿ ಹೇಳುವುದಿಲ್ಲ. ಕೆಲವೊಮ್ಮೆ ಗಂಡ ತೆಗೆದುಕೊಳ್ಳುವ ನಿರ್ಧಾರಗಳು ಅವಳಿಗೆ ಇಷ್ಟವಾಗದಿದ್ದರೂ ಹೇಳದೆ ಸುಮ್ಮನಿರುತ್ತಾಳೆ.

ಲೈಂಗಿಕತೆಯ ನಂತರ ತೃಪ್ತಿಯ ಭಾವನೆ: ಲೈಂಗಿಕತೆಯ ನಂತರ ಪ್ರತಿಯೊಬ್ಬ ಹೆಂಡತಿ ತನ್ನ ಗಂಡನಿಗೆ ಸುಳ್ಳು ಹೇಳುತ್ತಾಳೆ ಎಂದು ಚಾಣಕ್ಯ ನಂಬಿದ್ದರು. ಸಾಮಾನ್ಯವಾಗಿ ಹೆಂಗಸರಿಗೆ ಪುರುಷರಿಗಿಂತ ಹೆಚ್ಚು ಲೈಂಗಿಕ ಆಸಕ್ತಿ, ಆಸೆ ಹಾಗೂ ಶಕ್ತಿ ಇರುತ್ತದೆ ಎಂದ ಚಾಣಕ್ಯ. ಸೆಕ್ಸ್ ನಂತರ ಸಂಪೂರ್ಣ ತೃಪ್ತಿಯಾಗದಿದ್ದರೂ ಸಂಗಾತಿ ಕೇಳಿದರೆ ಆಕೆ ಸತ್ಯ ಹೇಳುವುದಿಲ್ಲ. ಸುಖವೆನಿಸಿತು ಎಂದೇ ಹೇಳುತ್ತಾಳೆ. ಯಾಕೆಂದರೆ ಗಂಡನಿಗೆ ನಿರಾಸೆ ಮಾಡುವುದು ಆಕೆಗಿಷ್ಟವಿರುವುದಿಲ್ಲ.

ಹಿಂದೆ ಸಾಯೋವರೆಗೂ ಶಾಶ್ವತವಾಗಿದ್ದ ಸಂಬಂಧ, ಈಗ ಮದ್ವೆಯಾಗಿ ವರ್ಷದೊಳಗೆ ಮುರಿದು ಬೀಳೋದ್ಯಾಕೆ?

ರಹಸ್ಯ ಉಳಿತಾಯ: ಸಂಪಾದಿಸುವ ಹೆಂಡತಿಯಾಗಲಿ ಅಥವಾ ಗೃಹಿಣಿಯಾಗಲಿ, ನೂರಕ್ಕೆ ನೂರು ಮಹಿಳೆಯರು ತಮ್ಮ ಗಂಡನಿಗೆ ತಿಳಿಯದಂತೆ ಉಳಿತಾಯ ಮಾಡುತ್ತಾರೆ. ಅದಕ್ಕಾಗಿಯೇ ಆಕೆನ್ನು ಗೃಹಹಕ್ಷ್ಮಿ ಎಂದು ಕರೆಯುತ್ತಾರೆ. ಇದು ಬಿಕ್ಕಟ್ಟಿನ ಸಮಯದಲ್ಲಿ ಬೆಂಬಲಿಸುವ ಬ್ಯಾಂಕ್ ಆಗಿದೆ. ಕುಟುಂಬಕ್ಕೆ ತುರ್ತು ಪರಿಸ್ಥಿತಿ ಬಂದಾಗ ಈ ಹಣವೇ ಉಪಯೋಗಕ್ಕೆ ಬರುತ್ತದೆ.

ತಮ್ಮ ಅನಾರೋಗ್ಯವನ್ನು ಹೇಳುವುದಿಲ್ಲ: ಆಕೆ ತುಂಬಾ ದಣಿದಿದ್ದರೂ ಅಥವಾ ಅನಾರೋಗ್ಯಕ್ಕೆ ಒಳಗಾದರೂ ಸಹ, ಅದನ್ನು ಸಂಗಾತಿಗೆ ಹೇಳಲು ಬಯಸುವುದಿಲ್ಲ. ಹೊಂದಾಣಿಕೆ ಮಾಡಿಕೊಂಡು ಕುಟುಂಬ ಸದಸ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತ ಇರುತ್ತಾಳೆ. ಇದು ಆಕೆಗೇ ಮುಂದೆ ಹಾನಿ. ಆದರೂ ಆಕೆ ಹೇಳುವುದಿಲ್ಲ.

ಮೂರನೆಯವರಿಗೆ ಹೇಳುವುದು:  ಅನೇಕ ಹೆಂಡತಿಯರು ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ತಮ್ಮ ಭಾವನೆಗಳನ್ನು ಗಂಡನಿಂದ ಮರೆಮಾಡುತ್ತಾರೆ.

ಈ ರಹಸ್ಯಗಳಲ್ಲಿ ಯಾವುದೂ ಅಪಾಯಕಾರಿ ಅಲ್ಲ. ಅದಕ್ಕೇ ಚಾಣಕ್ಯನ ಉದ್ದೇಶ ಏನೆಂದರೆ ಸಂಬಂಧ ಎಷ್ಟೇ ಪಾರದರ್ಶಕವಾಗಿದ್ದರೂ ಒಂದಿಷ್ಟು ರಹಸ್ಯಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಚಾಣಾಕ್ಯನ ಪ್ರಕಾರ ಇಂಥಾ ಸೀಕ್ರೆಟ್‌ಗಳೇ ಸಂಸಾರವನ್ನು ಕಾಯುತ್ತವೆ. ತನ್ನ ಕ್ರಶ್ ಬಗ್ಗೆ ಒಂದುವೇಳೆ ಹೆಂಡತಿ ಹೇಳಿಕೊಂಡರೆ ಗಂಡ ಅದನ್ನು ಮುಕ್ತವಾಗಿ ಸ್ವೀಕರಿಸುತ್ತಾನೆ ಎನ್ನುವ ಹಾಗಿಲ್ಲ. ಆದರೆ ಅನಾರೋಗ್ಯದ ವಿಚಾರ ಎಲ್ಲ ಮುಚ್ಚಿಟ್ಟರೆ ಅದು ಗಂಭೀರ ಸಮಸ್ಯೆಯಾಗಿ ತಿರುಗಿದರೆ ಕಷ್ಟ. ಈ ಬಗ್ಗೆ ಎಚ್ಚರ ಇರಲಿ. 

click me!