ಬಿಗ್ ಬಾಸ್ ಶೋ ಮುಗಿಸಿ ವಾಪಸ್ ಬಂದ ತನಿಷಾ ಸಹಜವಾಗಿ ಮೊದಲೇ ನಡೆಸುತ್ತಿದ್ದ ತಮ್ಮ ಹೊಟೆಲ್ ವ್ಯವಹಾರಗಳಲ್ಲಿ ಬ್ಯುಸಿಯಾದರು. ಇತ್ತೀಚೆಗೆ ಸ್ವಂತ ಜ್ಯುವೆಲ್ಲರಿ ಶಾಪ್ ತೆರೆದು ಸುದ್ದಿಯಾದರು. ತೀರಾ ಇತ್ತೀಚೆಗೆ ತಮ್ಮದೇ ಆದ..
ಬಿಗ್ ಬಾಸ್ ಕನ್ನಡ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ಯಾವತ್ತೂ ಸುದ್ದಿಯಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿಯೇ ಇರುತ್ತಾರೆ ಎಂದರೆ ತಪ್ಪೇನು? ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಲ್ಲಿ ಅತ್ಯಂತ ಹೆಚ್ಚು ಗಮನಸೆಳೆದವರಲ್ಲಿ ನಟಿ ತನಿಷಾ (Tanisha Kuppanda) ಕೂಡ ಒಬ್ಬರು. ತನಿಷಾ ಬಿಗ್ ಬಾಸ್ ಮನೆಯಿಂದ ವಿನ್ನರ್ ಅನೌನ್ಸ್‌ಮೆಂಟ್‌ಗೂ ಮೊದಲೇ ಹೊರಬೀಳುವವರೆಗೂ ಅವರೇ ವಿನ್ನರ್ ಆಗಬಹುದು ಎಂಬ ಮಾತುಗಳೇ ಚಾಲ್ತಿಯಲ್ಲಿದ್ದವು. ಆದರೆ, ನಟಿ ತನಿಷಾರ ಲೆಕ್ಕಾಚಾರ ಹಾಗೂ ಅವರ ಅಭಿಮಾನಿಗಳ ಲೆಕ್ಕಾಚಾರವೆಲ್ಲವೂ ಅನಿರೀಕ್ಷಿತ ಎಂಬಂತೆ ತಲೆಕೆಳಗಾಗಿ, ನಟಿ ತನಿಷಾ ಗ್ರಾಂಡ್ ಫಿನಾಲೆ ತಲುಪುವ ಮೊದಲೇ ಬಿಗ್ ಬಾಸ್ ಮನೆಯಿಂದ ಔಟ್ ಆಗಿಬಿಟ್ಟರು.
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹಾಗು ರನ್ನರ್ ಅಪ್ ಆಗಿ ಡ್ರೋಣ್ ಪ್ರತಾಪ್ ಹೊರಹೊಮ್ಮಿದರು. ಆದರೆ, ಅಲ್ಲಿದ್ದಷ್ಟೂ ದಿನಗಳೂ ಸಖತ್ ಸುದ್ದಿ ಮಾಡಿದವರ ಕೆಲವರ ಹೆಸರುಗಳಲ್ಲಿ ನಟಿ ತನಿಷಾ ಕೂಡ ಒಬ್ಬರು. ಹಾಟ್ ಲೇಡಿ, ಬೆಂಕಿ ಚೆಂಡು ಮುಂತಾದ ಹೆಸರುಗಳಿಂದ ಅಭಿಮಾನಿಗಳು ಹಾಗೂ ಬಿಗ್ ಬಾಸ್ ಪ್ರೇಕ್ಷಕರು ತನಿಷಾರನ್ನುಕರೆಯುತ್ತಿದ್ದರು ಎಂಬ ಸಂಗತಿ ಯಾರಿಗೂ ಹೊಸದೇನಲ್ಲ. ಅದರಲ್ಲೂ 'ಬೆಂಕಿ ತನಿಷಾ' ಎಂಬುದು ಇಂದಿಗೂ ಟ್ರೆಂಡಿಂಗ್ ಸೃಷ್ಟಿಸಿರುವ ಪದ ಎಂಬುದು ಸತ್ಯ.
ಬಿಗ್ ಬಾಸ್ ಶೋ ಮುಗಿಸಿ ವಾಪಸ್ ಬಂದ ತನಿಷಾ ಸಹಜವಾಗಿ ಮೊದಲೇ ನಡೆಸುತ್ತಿದ್ದ ತಮ್ಮ ಹೊಟೆಲ್ ವ್ಯವಹಾರಗಳಲ್ಲಿ ಬ್ಯುಸಿಯಾದರು. ಇತ್ತೀಚೆಗೆ ಸ್ವಂತ ಜ್ಯುವೆಲ್ಲರಿ ಶಾಪ್ ತೆರೆದು ಸುದ್ದಿಯಾದರು. ತೀರಾ ಇತ್ತೀಚೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ (Kuppanda's Production House) ಸಹ ತೆರೆಯಲು ಪ್ಲಾನ್ ಮಾಡಿ, ರಿಜಿಸ್ಟ್ರೇಷನ್ ಕೂಡ ಮಾಡಿಸಿದ್ದಾರೆ ತನಿಷಾ ಕುಪ್ಪಂಡ. ಹೀಗೆ ಬಿಗ್ ಬಾಸ್ ಶೋ ಬಳಿಕ ತಮ್ಮನ್ನು ಕ್ರಿಯಾಶೀಲತೆಯಲ್ಲಿ ತೊಡಗಿಸಿಕೊಂಡು ಸಖತ್ ಸುದ್ದಿಯಾಗುತ್ತಿದ್ದಾರೆ ನಟಿ ತನಿಷಾ. ಆಗಾಗ ಹಲವು ರೀಲ್ಸ್, ಫೋಟೋ ಶೂಟ್ ಗಳನ್ನು ಮಾಡುತ್ತ, ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳಿಗೆ ರೀಚ್ ಮಾಡಿಸುತ್ತ ಲೈಫ್ ಎಂಜಾಯ್ ಮಾಡುತ್ತಿದ್ದಾರೆ ತನಿಷಾ ಕುಪ್ಪಂಡ.
ರಾಜರಾಜೇಶ್ವರಿ ನಗರದಲ್ಲಿ ಹಲವು ವರ್ಷಗಳಿಂದ ಹೊಟೆಲ್ ನಡೆಸುತ್ತಿರುವ ತನಿಷಾ, ಕಳೆದ ತಿಂಗಳು ವಿಜಯನಗರದಲ್ಲಿ ಜ್ಯುವೆಲ್ಲರಿ ಶಾಪ್ ಓಪನ್ ಮಾಡಿದ್ದಾರೆ. ಅಲ್ಲೇ 'ಕುಪ್ಪಂಡಾಸ್' ಪ್ರೊಡಕ್ಷನ್ ಹೌಸ್ ತೆರೆಯುವ ಯೋಚನೆ ಬಂದಿದ್ದು ಅದರ ರಿಜಿಸ್ಟ್ರೇಷನ್ ಫಾರ್ಮಾಲಿಟಿಸ್ ಎಲ್ಲ ಮುಗಿದಿದ್ದು, ಅನೌನ್ಸ್‌ಮೆಂಟ್ ಮಾತ್ರ ಬಾಕಿಯಿದೆ ಎಂದಿದ್ದಾರೆ ತನಿಷಾ. ಎಲ್ಲವೂ ಅಂದುಕೊಂಡಂತೆ ನಡೆದರೆ ನಾನು ಆದಷ್ಟು ಬೇಗ ನನ್ನ 'ಕುಪ್ಪಂಡಾ'ಸ್' ಪ್ರೊಡಕ್ಷನ್ ಲಾಂಚ್ ಮಾಡುವ ಉತ್ಸಾಹದಲ್ಲಿದ್ದೇನೆ' ಎಂದಿದ್ದಾರೆ 'ಬೆಂಕಿ' ಖ್ಯಾತಿಯ ನಟಿ ತನಿಷಾ.