51 ವರ್ಷವಾದ್ರೂ ಸಿತಾರಾ ಸಿಂಗಲ್​ ಯಾಕೆ? ನಟಿಯ ಬದುಕಿನ ಆ ಕರಾಳ ಅಧ್ಯಾಯ ಬಹಿರಂಗ...

By Suchethana D  |  First Published May 18, 2024, 6:21 PM IST

51 ವರ್ಷವಾದ್ರೂ ನಟಿ ಸಿತಾರಾ ಇನ್ನೂ ಏಕೆ ಮದುವೆಯಾಗಲಿಲ್ಲ ಎನ್ನುವ ಕಾರಣ ಬಹಿರಂಗಗೊಂಡಿದೆ. ಅವರ  ಬದುಕಿನ ಆ ಕರಾಳ ಏನು? 
 


ಕನ್ನಡದಲ್ಲಿ ಹೆಚ್ಚಾಗಿ ಅಳುಮುಂಜಿ ಪಾತ್ರಗಳಿಗೆ ಹೆಸರಾಗಿದ್ದ ನಟಿ ಸಿತಾರಾ ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಮೆಚ್ಚುಗೆ ಗಳಿಸಿದವರು.  ಕನ್ನಡ ಮಾತ್ರವಲ್ಲದೇ  ಮಲಯಾಳ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರೋ ಇವರ ಪೂರ್ತಿ ಹೆಸರು  ಸಿತಾರಾ ನಾಯರ್. ಕನ್ನಡದ ಹಾಲುಂಡ ತವರು ಅಭಿನಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಇವರು ಅವರ ಕನ್ನಡದ ಚೊಚ್ಚಲ ಚಿತ್ರ ಈ ಚಿತ್ರದಲ್ಲಿನ ಜ್ಯೋತಿ ಪಾತ್ರದ ಮೂಲಕ ಮನೆಮಾತಾದರು. ಬಳಿಕ ಕರುಳಿನ ಕುಡಿ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಅನುರಾಗ ದೇವತೆ, ಹೆತ್ತವಳ ಕೂಗು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ ಅಳುಮುಂಜಿ ಪಾತ್ರವನ್ನೇ ಮಾಡುತ್ತಾ ಬಂದಿರುವ ಸಿತಾರಾ ಅವರ ಬಾಳು ಕೂಡ ಒಂದು ರೀತಿಯ ನೋವೇ. ಇದೇ ಕಾರಣಕ್ಕೆ ಅವರು ಮದುವೆಯನ್ನೇ ಆಗಿಲ್ಲ.

ಅಂದಹಾಗೆ ನಟಿಗೆ ಈಗ 51 ವರ್ಷ ವಯಸ್ಸು. ಆದರೆ ಇದುವರೆಗೆ ನಟಿ ಮದುವೆಯಾಗದೇ ಉಳಿದಿದ್ದಾರೆ. ಇವರು ಗುಟ್ಟಾಗಿ ಮದುವೆ ಆಗಿರಬಹುದು ಎಂಬ ಗುಮಾನಿಯೂ ಇತ್ತು. ಆದರೆ ಅವರು ಒಮ್ಮೆ ಸಂದರ್ಶನದಲ್ಲಿ, 'ನನಗೆ ಮದುವೆ ಆಗಿಲ್ಲ, ಇದು ಬಹಳ ಜನರಿಗೆ ಗೊತ್ತಿಲ್ಲ. ಆದರೆ ನಾನೊಂದು ಮದುವೆ ಆದರೆ ಖಂಡಿತ ಅದನ್ನು ಗುಟ್ಟಾಗಿ ಇಡುವುದಿಲ್ಲ, ಎಲ್ಲರಿಗೂ ತಿಳಿಸುತ್ತೇನೆ' ಎಂದಿದ್ದರು. ಆದರೆ ಈಗ ವಯಸ್ಸು ಮೀರಿದೆ. ಆದರೆ ಕುತೂಹಲದ ಸಂಗತಿ ಏನೆಂದರೆ ಇವರು ಮದುವೆಯಾಗದೇ ಇರಲು ಕಾರಣ, ಇವರ ತಂದೆಯ ಅಕಾಲಿಕ ನಿಧನ!

Latest Videos

undefined

ಕುರುಡನ ಮಾಡಯ್ಯಾ ತಂದೆ... ಈ ಫೋಟೋ ನೋಡಲಾಗ್ತಿಲ್ಲಾ ಅಂತಿದ್ದಾರೆ ಐಶ್​ ಫ್ಯಾನ್ಸ್​!

ಹೌದು.  ನಟಿ ಸಿತಾರಾ ಕೇರಳದ ಕಿಲಿಮನೂರ್ ಎಂಬಲ್ಲಿ ಜನಿಸಿದರು. ಪೋಷಕರ ಹೆಸರು ರಾಮೇಶ್ವರನ್ ನಾಯರ್ ಮತ್ತು ವಲ್ಸಲಾ ನಾಯರ್. ಕಾಲೇಜು ಓದುವಾಗಲೇ ಸಿನಿಮಾಕ್ಕೆ ಪ್ರವೇಶಿಸಿದರು ಸಿತಾರಾ. ಕೆಲವೇ ದಿನಗಳಲ್ಲಿ ಖ್ಯಾತರಾಗಿಬಿಟ್ಟರು. ಆ ಸಮಯದಲ್ಲೆಲ್ಲಾ ತಂದೆಯೊಂದಿಗೆ ಚಿತ್ರೀಕರಣಕ್ಕೆ ಹೋಗುವುದು ಬರುವುದು ಮಾಡುತ್ತಿದ್ದರು. ತಂದೆ ರಾಮೇಶ್ವರನ್ ನಾಯರ್ ಅವರನ್ನು ಬಹುವಾಗಿ ಹಚ್ಚಿಕೊಂಡಿದ್ದರು ಸಿತಾರಾ. ಅವರ ನೆರಳಲ್ಲೇ ಸಿತಾರಾ ಇದ್ದರು. ನಾಲ್ಕೂ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದರು. ಆದರೆ ಅಪ್ಪ ತೀರಿಕೊಂಡಾಗ ತೀವ್ರ ಆಘಾತಕ್ಕೆ ಒಳಗಾದ ಸಿತಾರಾ ಸಿನಿಮಾಗಳಿಂದಲೂ ದೂರ ಉಳಿದುಬಿಟ್ಟರು. ಅಷ್ಟೆ ಅಲ್ಲ ಮದುವೆ ಬಗ್ಗೆ ಯೋಚನೆ ಸಹ ಅವರು ಮಾಡಲಿಲ್ಲ. ತನ್ನ ಜೀವನದ ಗುರು, ಸರ್ವಸ್ವವಾಗಿದ್ದ ಅಪ್ಪ ನಿಧನದ ಬಳಿಕ ತನ್ನ ಬದುಕಿಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿಲ್ಲ ಎನ್ನಿಸಿತು. ಹಾಗಾಗಿ ಮದುವೆ ನಿರ್ಧಾರ ಕೈಬಿಟ್ಟೆ ಎನ್ನುತ್ತಾರೆ ಸಿತಾರಾ. ಈಗಲೂ ತನಗೆ ಮದುವೆಯಾಗುವ ಆಸಕ್ತಿ ಇಲ್ಲ ಎಂದುಬಿಟ್ಟರು. 

ಇನ್ನೊಂದು ಮೂಲದ ಪ್ರಕಾರ ನಟ, ನಿರ್ಮಾಪಕರ ಮುರಳಿ ಜೊತೆಗೆ ಸಿತಾರಾ ಆತ್ಮೀಯರಾಗಿದ್ದರಂತೆ. ಇವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳೂ ಹರಿದಾಡಿದ್ದವು. ಆದರೆ 2010ರಲ್ಲಿ ಮುರಳಿ ಹೃದಯಾಘಾತದಿಂದ ನಿಧನರಾದರು.  2000ನೇ ಇಸವಿಯ ನಂತರ ಸಿತಾರಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ತೆಲುಗು ಬಿಟ್ಟರೆ ಯಾವ ಭಾಷೆಯಲ್ಲೂ ಕಾಣಿಸಿಕೊಳ್ಳಲಿಲ್ಲ.  ಕನ್ನಡದಲ್ಲಿ 2001ರಲ್ಲಿ ತೆರೆಕಂಡ  ಜೇನು ಗೂಡು ಸಿನಿಮಾ ಬಳಿಕ, 10 ವರ್ಷಗಳ ನಂತರ  ಪ್ರಕಾಶ್‌ ರಾಜ್‌ ಅವರ ಜೊತೆ ನಾಯಕಿಯಾಗಿ  ನಾನು ನನ್ನ ಕನಸು ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರೋ ನಟಿ ಮಾತ್ರ ಅಪ್ಪನ ನೆನಪಿನಲ್ಲಿ ಇಂದಿಗೂ ಸಿಂಗಲ್​ ಆಗಿದ್ದಾರೆ. 

ರಾಖಿ ಆಪರೇಷನ್​ ಸಕ್ಸಸ್​: 10 ಸೆಂ.ಮೀ. ಉದ್ದದ ಗಡ್ಡೆ ತೋರಿಸಿ ಟ್ರೋಲಿಗರ ಬಾಯಿ ಮುಚ್ಚಿಸಿದ ಮಾಜಿ ಪತಿ

click me!