ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?

Published : May 19, 2024, 05:21 PM ISTUpdated : May 19, 2024, 05:25 PM IST
ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?

ಸಾರಾಂಶ

ಪ್ರಿಯಾಂಕಾ ಚೋಪ್ರಾ ಹಾಲಿವಡ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ಅಮೆರಿಕಾದಲ್ಲಿ ಸೆಟ್ಲ್ ಆಗಿರುವ ಪ್ರಿಯಾಂಕಾ, ಸದ್ಯ ಅಲ್ಲಿನ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. 

ಬಾಲಿವುಡ್‌ನಲ್ಲಿ ಸಖತ್ ಮಿಂಚಿ ಹಾಲಿವುಡ್ ಸಿಂಗರ್ ಮದುವೆಯಾಗಿ ಸದ್ಯ ಅಮೆರಿಕಾದಲ್ಲಿ ಸೆಟ್ಲ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra ) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 'ನಾನು ಮತ್ತು ನಿಕ್ ಜೊನಾಸ್ (Nick Jonas) ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿಸಿ ಮದುವೆ ಆಗಿದ್ದೇವೆ. ನಾವಿಬ್ಬರೂ ಇಷ್ಟಪಟ್ಟು ಮಗುವೊಂದನ್ನು ದತ್ತು ಪಡೆದು ಸಾಕುತ್ತಿದ್ದೇವೆ. ನಮ್ಮಿಬ್ಬರಲ್ಲಿ ಸಾಕಷ್ಟು ಅಭಿಪ್ರಾಯ ಬೇಧಗಳಿದ್ದರೂ ಪರಸ್ಪರ ಅರ್ಥ ಮಾಡಿಕೊಂಡು ಲೈಫ್ ಲೀಡ್ ಮಾಡುತ್ತಿದ್ದೇವೆ. ಆದರೂ ಕೂಡ, ಗಮನಿಸಬೇಕಾದ ಸಂಗತಿ ಎಂದರೆ, ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ' ಎಂದಿದ್ದಾರೆ. 

ಪ್ರಿಯಾಂಕಾ ಚೋಪ್ರಾ ವೇದಿಕೆಯೊಂದರಲ್ಲಿ ಮಾತನಾಡುತ್ತ, 'ನಾನು ಮತ್ತು ನಿಕ್ ಜೋನಾಸ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ಆದರೆ ನಮ್ಮಿಬ್ಬರ ವಯಸ್ಸಿನಲ್ಲಿ ಹತ್ತು ವರ್ಷಗಳ ಅಂತರವಿದೆ, ನಾವಿಬ್ಬರೂ ಅದಕ್ಕೆ ಹೊಂದಿಕೊಳ್ಳಬೇಕಿದೆ. ನಮ್ಮನ್ನು ಇತರರೂ ಕೂಡ ಅರ್ಥ ಮಾಡಿಕೊಳ್ಳಬೇಕಿದೆ' ಎಂದಿದ್ದಾರೆ. ನಟಿ ಈ ಮಾತು ಹೇಳುತ್ತಿದ್ದಂತೆ, ಏನೋ ಸ್ಫೋಟಕ ಹೇಳಿಕೆ ನೀಡಿದಂತೆ, ಅಲ್ಲಿ ಗುಸುಗುಸು, ಪಿಸುಪಿಸು ಮಾತುಗಳು ಶುರುವಾಗಿವೆ. ಪ್ರಿಯಾಂಕಾ ಹೇಳಬಾರದ್ದನ್ನು ಹೇಳಿದ್ದಾರೆ ಎಂಬಂತೆ ಚರ್ಚೆ ಶುರುವಾಗಿದೆ. +

ಪವಿತ್ರಾ ಜಯರಾಂಗೆ ನೀನು ಆರನೆಯವನು, ಹೀಗಂತ ಚಂದುಗೆ ಸತ್ಯ ಹೇಳಿದ್ದೆ; ಶಿಲ್ಪಾ ಪ್ರೇಮಾ

ಹೌದು, ನಟಿ ಪ್ರಿಯಾಂಕಾ ಚೋಪ್ರಾ ಮೂಲತಃ ಭಾರತೀಯ ನಟಿ. ಮಿಸ್ ಇಂಡಿಯಾ, ಮಿಸ್ ವರ್ಲ್ಡ್ ಪಟ್ಟ ಗಿಟ್ಟಿಸಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾ ಪ್ರತಿಭೆ ಜಗತ್ತಿಗೇ ಅನಾವರಣಗೊಂಡಿತ್ತು. ಬಳಿಕ ಪ್ರಿಯಾಂಕಾ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾಲಿವುಡ್‌ ಜಗತ್ತಿನಲ್ಲಿ ಸಾಕಷ್ಟು ಮಿಂಚಿದರು. ಇಂಟರ್‌ನ್ಯಾಷನಲ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಹಳಷ್ಟು ಬಾರಿ ಭಾರತವನ್ನು ಪ್ರತಿನಿಧಿಸುವ ಮೂಲಕ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದ್ದರು. ಜತೆಗೆ, ಭಾರತದ ರಾಯಭಾರಿಯಾಗಿಯೂ ಅವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 

ನಟಿ ತನಿಷಾ ಕುಪ್ಪಂಡ ಭರ್ಜರಿ ಪ್ರೊಜೆಕ್ಟ್‌ಗೆ ಸದ್ಯದಲ್ಲೇ ಚಾಲನೆ; ಏನದು ಹೊಸ ಬಿಸಿನೆಸ್?

ಪ್ರಿಯಾಂಕಾ ಚೋಪ್ರಾ ಹಾಲಿವಡ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ಅಮೆರಿಕಾದಲ್ಲಿ ಸೆಟ್ಲ್ ಆಗಿರುವ ಪ್ರಿಯಾಂಕಾ, ಸದ್ಯ ಅಲ್ಲಿನ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ನಟಿ ಪ್ರಿಯಾಂಕಾ ಭಾರತದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಸಿನಿಮಾ ಖ್ಯಾತಿಯ ನಟ ಜೂನಿಯರ್‌ ಎನ್‌ಟಿಆರ್‌ ನಟನೆಯ ಮುಂಬರುವ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಅದಿನ್ನೂ ಕನ್ಫರ್ಮ್ ಆಗಿಲ್ಲ. 

ಮುಂಬರುವ ಮೋದಿ ಬಯೋಪಿಕ್‌ನಲ್ಲಿ 'ಕಟ್ಟಪ್ಪ' ಸತ್ಯರಾಜ್ ನಟನೆ, ಅಧಿಕೃತ ಘೋಷಣೆಯಷ್ಟೇ ಬಾಕಿ!

ಒಟ್ಟಿನಲ್ಲಿ, ತಮ್ಮ ಹಾಗೂ ನಿಕ್ ಜೊನಾಸ್ ಮಧ್ಯೆ ಹತ್ತಯ ವರ್ಷಗಳ ವಯಸ್ಸಿನ ಅಂತರವಿದೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿರುವುದು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದೇನೇ ಇರಲಿ, ಮುಂದೆ ಈ ಚರ್ಚೆಯ ಹಾದಿ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌