ರೇಷನ್​ನಲ್ಲಿ ಕ್ಯೂ ನಿಲ್ಲೋ ಮಹಿಳೆಯರಿಗಿಂತ ನನಗೆ ವೇಶ್ಯೆಯರ ಮೇಲೆ ಹೆಚ್ಚು ವ್ಯಾಮೋಹ, ಏಕೆಂದ್ರೆ...

By Suchethana D  |  First Published May 19, 2024, 12:39 PM IST

ರೇಷನ್​ನಲ್ಲಿ ಕ್ಯೂ ನಿಲ್ಲೋ ಮಹಿಳೆಯರಿಗಿಂತ ವೇಶ್ಯೆಯರ ಮೇಲೆ ಹೆಚ್ಚು ವ್ಯಾಮೋಹ ಎಂದ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಕೊಟ್ಟ ಕಾರಣ ಹೀಗಿದೆ...   
 


 'ಗಂಗೂಬಾಯಿ ಕಥಿಯಾವಾಡಿ,' 'ಪದ್ಮಾವತ್,' ಮತ್ತು 'ಬಾಜಿರಾವ್ ಮಸ್ತಾನಿಯಂಥ ಹತ್ತು ಹಲವು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali)  ಇದೀಗ ಹೀರಾಮಂಡಿ ವೆಬ್ ಸೀರೀಸ್ ಮೂಲಕ ನೆಟ್‌ಫ್ಲಿಕ್ಸ್‌ಗೆ ಪದಾರ್ಪಣೆ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ವೆಬ್ ಸರಣಿ 'ಹೀರಾಮಂಡಿ' ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಬನ್ಸಾಲಿ ಅವರ ವಿಶೇಷತೆ ಎಂದರೆ ಇದಾಗಲೇ ಅವರ ಚಲನಚಿತ್ರಗಳಲ್ಲಿ  ವೇಶ್ಯೆ ಅಥವಾ ಲೈಂಗಿಕ ಕಾರ್ಯಕರ್ತರು ಪ್ರಧಾನವಾಗಿದ್ದಾರೆ.  ‘ದೇವದಾಸ್’ನಲ್ಲಿ ಮಾಧುರಿ ದೀಕ್ಷಿತ್ ಆಗಿರಲಿ ಅಥವಾ ‘ಗಂಗೂಬಾಯಿ ಕಥಿಯಾವಾಡಿ’ಯಲ್ಲಿ ಆಲಿಯಾ ಭಟ್ ಆಗಿರಲಿ ಅಥವಾ ಈಗ ಹೀರಮಂಡಿ’ಯಲ್ಲಿನ ಮಲ್ಲಿಕಾ ಜಾನ್, ಫರೀದನ್.. ಹೀಗೆ ಬನ್ಸಾಲಿ ಅವರಿಗೆ ವೇಶ್ಯೆಯರ ಪಾತ್ರವೆಂದರೆ ಬಹಳ ಅಚ್ಚುಮೆಚ್ಚು. ಅವರ ಇಂಥ ಚಿತ್ರಗಳು ಬ್ಲಾಕ್​ಬಸ್ಟರ್​ ಎಂದೂ ಸಾಬೀತಾಗಿರುವುದು ಸುಳ್ಳಲ್ಲ. 

ವೇಶ್ಯೆಯರು ಎಂದರೆ  ನಿಗೂಢ ಮಹಿಳೆಯರು ಎಂದೇ ಅಂದುಕೊಂಡಿರುವ ಸಂಜಯ್ ಲೀಲಾ ಬನ್ಸಾಲಿ ತಮಗೆ ರೇಷನ್​ನಲ್ಲಿ ಕ್ಯೂ ನಿಲ್ಲುವ ಮಧ್ಯಮ ವರ್ಗದ ಮಹಿಳೆಯರಿಗಿಂತಲೂ ವೇಶ್ಯೆಯರೇ ಹೆಚ್ಚು ಆಕರ್ಷಿಸುತ್ತಾರೆ ಎಂದು ಬಹಿರಂಗ ಹೇಳಿಕೆ  ನೀಡಿದ್ದಾರೆ. ಗಲಟ್ಟಾ ಪ್ಲಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಬನ್ಸಾಲಿ ತಮ್ಮ ಚಲನಚಿತ್ರಗಳಲ್ಲಿ ವೇಶ್ಯೆಯರನ್ನು ಚಿತ್ರಿಸುವ ಹಿಂದಿನ ಔಚಿತ್ಯವನ್ನು ತಿಳಿಸಿದರು.  ವೇಶ್ಯೆಯರ ಜೀವನ ನಿಗೂಢವಾಗಿರುತ್ತದೆ.  ಬಹಳಷ್ಟು ನಿಗೂಢತೆಯನ್ನು ಹೊಂದಿರುವ ಮಹಿಳೆಯರು ಅವರು. ಅವರು ಉಳಿದ ಸಾಮಾನ್ಯ ಮಹಿಳೆಯರಿಗಿಂತ ಭಿನ್ನರು.  ಅವರು ಯಾವಾಗಲೂ ಒಂದು ನಿರ್ದಿಷ್ಟ ರೀತಿಯ ಶಕ್ತಿಯನ್ನು ಹೊರಹಾಕುತ್ತಾರೆ, ಅದು ನನಗೆ ನೋಡಲು ತುಂಬಾ ಆಸಕ್ತಿದಾಯಕವೆನಿಸುತ್ತದೆ. ಅವರಲ್ಲಿ ನಾನು  ತುಂಬಾ ಆಕರ್ಷಕ ಗುಣಗಳನ್ನು  ಕಂಡುಕೊಂಡಿದ್ದೇನೆ, ಈ ಮಹಿಳೆಯರು ತುಂಬಾ ಆಸಕ್ತಿದಾಯಕರಾಗಿದ್ದಾರೆ. ಅವರು ಎಲ್ಲಿ ಹಾಡುತ್ತಾರೆ, ಅವರು ಹೇಗೆ ನೃತ್ಯ ಮಾಡುತ್ತಾರೆ, ತಮ್ಮನ್ನು ತಾವು ಅವರು ಹೇಗೆ ವ್ಯಕ್ತಪಡಿಸಿಕೊಳ್ಳುತ್ತಾರೆ ಎನ್ನುವುದು ಕುತೂಹಲಕಾರಿಯಾದದ್ದು.  ಸಂಗೀತ ಮತ್ತು ನೃತ್ಯದಲ್ಲಿ ಅವರು ತಮ್ಮ ಸಂತೋಷ ಮತ್ತು  ದುಃಖವನ್ನು ಹೊರಹಾಕುತ್ತಾರೆ. ಅವರು ವಾಸಿಸುವ ಕಲೆ, ವಾಸ್ತುಶಿಲ್ಪದ ಪ್ರಾಮುಖ್ಯತೆ, ಬಟ್ಟೆಯ ಬಳಕೆ ಮತ್ತು ಅವರು ಧರಿಸುವ ಆಭರಣಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಕಲೆಯ ರಸಿಕರು ಎಂದಿದ್ದಾರೆ. 

Tap to resize

Latest Videos

ಸಮಾಜದ ಒಳಿತಿಗೆ ಲೈಂಗಿಕ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದ ನಟ ಶೇಖರ್​ ಸುಮನ್​
 
 ಅಷ್ಟಕ್ಕೂ ಬನ್ಸಾಲಿಯವರು ಹೇಳುತ್ತಿರುವುದು ತವಾಯಫ್​ಗಳ ಕುರಿತು. ಅಂದರೆ ರಾಜ-ಮಹಾರಾಜದ ಕಾಲದಲ್ಲಿ ಅಲ್ಲಿಯೇ ವೇಶ್ಯಾವೃತ್ತಿ ಕೈಗೊಳ್ಳುತ್ತಿರುವವರ ಬಗ್ಗೆ. ಅವರು ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಅವರ ಮುಂಬರುವ ಚಿತ್ರ ಹೀರಾಮಂಡಿ. ತವಾಯಫ್‌ಗಳ ವೈಭವೋಪೇತ ಜೀವನಶೈಲಿಯನ್ನು ಬನ್ಸಾಲಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಲಾಹೋರ್‌ನ ಹಿನ್ನಲೆಯಲ್ಲಿ 1940 ರ ದಶಕದ ತವಾಯಫ್‌ಗಳ ಜೀವನದ ಸತ್ಯಘಟನೆಗಳನ್ನಾಧರಿಸಿದ ಹೀರಾಮಂಡಿ ಚಿತ್ರವು ಸಾಹಿತ್ಯ, ಸಂಗೀತ ಹಾಗೂ ರಾಜಮನೆತನದ ವೈಭವಗಳನ್ನು ಸುಂದರವಾಗಿ ಚಿತ್ರಿಸಿದೆ. ಹೀರಾಮಂಡಿಯಲ್ಲಿ ತವಾಯಫ್‌ಗಳ  ಪಾತ್ರದಲ್ಲಿ ಮಿಂಚಿರುವ ನಟೀಮಣಿಯರು ವಸಾಹತುಶಾಹಿ ಭಾರತದ ಸಾಂಸ್ಕೃತಿಕ ಪರಿಸರದಲ್ಲಿ ಹೇಗೆ ಜೀವನ ನಡೆಸುತ್ತಿದ್ದರು, ಅವರ ಜೀವನದಲ್ಲಾದ ಅಡೆತಡೆಗಳು ಹಾಗೂ ಸಮಸ್ಯೆಗಳೇನು ಎಂಬುದನ್ನು ಬನ್ಸಾಲಿ ವಿವರಿಸಿದ್ದಾರೆ.
 
ಹೀರಾಮಂಡಿಯ ಪ್ರಮುಖ ಸನ್ನಿವೇಶ ಅನಾವರಣವಾಗುತ್ತಿದ್ದಂತೆ ಅಲ್ಲಿ ವೈಶ್ಯೇಯರು ಹಾಗೂ ಶ್ರೀಮಂತರ ನಡುವಿನ ಜಟಿಲವಾದ ಸಂಘರ್ಷಗಳನ್ನು ಬಿಚ್ಚಿಡುತ್ತದೆ. ಈ ಚಿತ್ರದಲ್ಲಿ  ಪ್ರೇಮ, ರಾಜಕೀಯ, ಸಂಘರ್ಷ, ಸ್ವಾತಂತ್ರ್ಯಪೂರ್ವ ಭಾರತದ ಐತಿಹಾಸಿಕ ಅಂಶಗಳು ಎಲ್ಲವೂ ಇದೆ. ಹೀರಾಮಂಡಿಯ ಪ್ರಮುಖ ಪಾತ್ರಗಳಲ್ಲಿ ಫರ್ದೀನ್ ಖಾನ್, ತಾಹಾ ಶಾ ಬಾದುಶಾ, ಶೇಖರ್ ಸುಮನ್ ಮಿಂಚಿದ್ದು ಅವರ ಅಪ್ರತಿಮ ಪ್ರತಿಭೆಯನ್ನು ಅನಾವರಣಗೊಳಿಸಲಾಗಿದೆ.  ಬನ್ಸಾಲಿ ಹೀರಾಮಂಡಿ ಸೀರೀಸ್ ಮೂಲಕ ಒಟಿಟಿಗೆ ಪದಾರ್ಪಣೆ ಮಾಡಿದ್ದಾರೆ. ಸೀರೀಸ್ ಆಗಿದ್ದರೂ ಬನ್ಸಾಲಿ ತಮ್ಮ ವೈಭವವನ್ನು ಪ್ರದರ್ಶಿಸಲು ಮರೆಯಲಿಲ್ಲ ಎನ್ನುವುದೇ ಕುತೂಹಲ.

51 ವರ್ಷವಾದ್ರೂ ಸಿತಾರಾ ಸಿಂಗಲ್​ ಯಾಕೆ? ನಟಿಯ ಬದುಕಿನ ಆ ಕರಾಳ ಅಧ್ಯಾಯ ಬಹಿರಂಗ...
 

click me!