ಗರ್ಭಿಣಿಯರಲ್ಲಿ ಆಗಾಗ ಕಾಣಿಸಿಕೊಳ್ಳುವ ಬ್ಲೀಡಿಂಗ್ ಹಿಂದಿನ ಕಾರಣವೇನು? ಬ್ಲೀಡಿಂಗ್‌ನಿಂದ ನೋವು ಬರಲು ಕಾರಣವೇನು ಎಂದು ಡಾಕ್ಟರ್ ತಿಳಿಸಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಬ್ಲೀಡಿಂಗ್ ಅಂದ್ರೆ ರಕ್ತ ಕಾಣಿಸಿಕೊಳ್ಳಬಾರದು ಅಂತ ಮನೆಯಲ್ಲಿ ಇರುವ ದೊಡ್ಡವರು ಮತ್ತು ವೈದ್ಯರು ಹೇಳುತ್ತಾರೆ. ಆದರೆ ಕೆಲವೊಮ್ಮೆ ಸಿಕ್ಕಾಪಟ್ಟೆ ಆರೋಗ್ಯವಾಗಿದ್ದರೂ ಕೆಲವು ಹೆಣ್ಣು ಮಕ್ಕಳಲ್ಲಿ ಬ್ಲೀಡಿಂಗ್ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಹಲವು ಕಾರಣಗಳು ಇರುತ್ತದೆ, ಪ್ರತಿ ಟ್ರೈಮಿಸ್ಟರ್‌ನಲ್ಲೂ ಒಂದೊಂದು ಕಾರಣ ಇರುತ್ತದೆ. ಇದನ್ನು ಡಾ ಚಂದ್ರಿಕಾ ಆನಂದ್ ವಿವರಿಸಿದ್ದಾರೆ.
'2 ರಿಂದ 5 % ಹೆಣ್ಣು ಮಕ್ಕಳಿಗೆ ರೆಗ್ಯೂಲರ್ ಆಗಿ ಪೀರಿಯಡ್ಸ್ ಆಗುತ್ತಿರುತ್ತದೆ ಇಲ್ಲ ಮಧ್ಯ ಮಧ್ಯ ಆಗುವುದನ್ನು ಅವರು ಸೈಕಲ್ ಅಂದುಕೊಳ್ಳಬಹುದು ಈ ಕೇಸ್‌ಗಳಲ್ಲಿ ಅವರಿಗೆ ಪ್ರೆಗ್ನೆಂಟ್ ಆಗಿದ್ದೀವಿ ಅನ್ನೋದು ಗೊತ್ತಾಗುವುದಿಲ್ಲ. ಆಗ ಐದು ಆರು ತಿಂಗಳು ಆದ್ಮೇಲೆ ಗರ್ಭಿಣಿ ಅಂತ ಗೊತ್ತಾಗುತ್ತದೆ' ಎಂದು ಡಾಕ್ಟರ್ ಚಂದ್ರಿಕಾ ಆನಂದ್ ಮಾತನಾಡಿದ್ದಾರೆ.
ಮುಟ್ಟಿನ ಸಮಯದಲ್ಲಿ ಕಪ್ಪು ಡಿಸ್ಚಾರ್ಜ್: ಇದು ನಾರ್ಮಲ್ ಅಲ್ಲ… ಹುಷಾರಾಗಿರಿ!
'ಗರ್ಭಿಣಿ ಆಗಿದ್ದಾಗ ಮೊದಲು ಮೂರು ತಿಂಗಳಲ್ಲಿ ಬ್ಲೀಡಿಂಗ್/ ರಕ್ತ ಕಾಣಿಸಿಕೊಂಡರೆ ಗರ್ಭಪಾತದ ಸಾಧ್ಯತೆ ಹೆಚ್ಚಿರುತ್ತದೆ. ಅದನ್ನು ಹೊರತು ಪಡಿಸಿದರೆ Ectopic ಪ್ರೆಗ್ನೆನ್ಸಿ ಅಂತ ಹೇಳುತ್ತೀವಿ ಅದು ಟ್ಯೂಬ್‌ನಲ್ಲಿ ಆಗುವುದು ಇದರಿಂದ ತುಂಬಾ ಬ್ಲೀಡಿಂಗ್ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಪೋಸ್ಟ್ ಇಂಟರ್‌ಕೋರ್ಸ್ ಬ್ಲೀಡಿಂಗ್ ಕೂಡ ಇರಬಹುದು. ಇನ್ನೂ ಕೆಲವೊಮ್ಮೆ ಮೋಲಾರ್ ಪ್ರೆಗ್ನೆನ್ಸಿ ಅಂತ ಕರೆಯುತ್ತೀವಿ ಅದು ಕೂಡ ಆಗಿರುತ್ತದೆ. ಇದ್ಯಾವುದು ಇಲ್ಲವಾದರೆ ಟ್ರಾಮಾ ಅಂದ್ರೆ ಒತ್ತಡ ಅಥವಾ ಇದ್ದಕ್ಕಿದ್ದಂತೆ ಬಿದ್ದು ಹೋಗುವ ಪರಿಸ್ಥಿತಿ ಎದುರಾದಾಗ ಬ್ಲೀಡಿಂಗ್ ಕಾಣಿಸಿಕೊಳ್ಳಬಹುದು' ಎಂದ ಡಾ. ಚಂದ್ರಿಕಾ ಆನಂದ್ ಹೇಲಿದ್ದಾರೆ.
ಎರಡನೇ ಟ್ರೈಮಿಸ್ಟರ್‌ನಲ್ಲಿ ಅಂದ್ರೆ ನಾಲ್ಕು, ಐದು ಮತ್ತು ಆರನೇ ತಿಂಗಳಿನಲ್ಲಿ ಕೆಲವೊಮ್ಮೆ ಗರ್ಭಪಾತ ಆಗುವ ಸಾಧ್ಯತೆಗಳು ಇರುತ್ತದೆ. ಗರ್ಭಕೋಶದಲ್ಲಿ ಏನೋ ಸಮಸ್ಯೆ ಇದ್ದರೆ ಅಥವಾ ಸರ್ವಿಕ್ಸ್ (Cervix)ನಲ್ಲಿ ಓಪನ್ ಇದ್ದರೆ ರಕ್ತ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಡಾ. ಚಂದ್ರಿಕಾ.
ಮೊದಲ ಪಿರಿಯಡ್ಸ್ ಆದ ಹುಡುಗಿಗೆ ಧೈರ್ಯ ತುಂಬಿದ ಯುವಕ, ಆತನ ಬೆಳೆಸಿದ ಅಮ್ಮನಿಗೆ ಸಲಾಂ ಎಂದ ನೆಟ್ಟಿಗರು!
ಮೂರನೇ ಟ್ರೈಮಿಸ್ಟರ್ ಅಂದ್ರೆ ಏಳು, ಎಂಟು ಮತ್ತು 9ನೇ ತಿಂಗಳಿನಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಹೈ ಬೀಪಿ ಅಂದ್ರೆ ರಕ್ತದೊತ್ತಡ ಇರುತ್ತದೆ ಆ ಸಮಯದಲ್ಲಿ Placenta ಅನ್ನೋದು ದೊಡ್ಡದಾಗಿರುತ್ತದೆ. ಒಂದೊಂದು ಕೇಸ್‌ನಲ್ಲಿ ಪ್ಲಸೆಂಟಾ ಮಗು ಹುಟ್ಟುವ ಮೊದಲೇ ಸಪರೇಟ್ ಆಗಿಬಿಡುತ್ತದೆ ಆ ಸಮದಯಲ್ಲಿ ಇದ್ದಕ್ಕಿದ್ದಂತೆ ರಕ್ತ ಕಾಣಿಸಿಕೊಳ್ಳುತ್ತದೆ. ತಡೆಯಲಾಗದಷ್ಟು ನೋವು ಇರುತ್ತದೆ ಈ ಸಮಯಲ್ಲಿ ತಾಯಿ ಪ್ರಾಣಕ್ಕೆ ಅಪಾಯ ಇರುತ್ತದೆ. ಸಾಮಾನ್ಯವಾಗಿ ಪ್ಲೆಸಂಟಾ ಮೇಲು ಭಾಗದಲ್ಲಿ ಇರುತ್ತದೆ ಕೆಲವರಿಗೆ ಕೆಳಗೆ ಬಂದು ಬಿಟ್ಟರೆ ಅವರಿಗೆ ಕಷ್ಟ ಆಗುತ್ತದೆ ಅವರಿಗೆ ಪ್ರೆಗ್ನೆನ್ಸಿ ಸೀರಿಯಸ್ ಆಗಿರುತ್ತದೆ ಎಂದಿದ್ದಾರೆ ಡಾ.ಚಂದ್ರಿಕಾ ಆನಂದ್.