ಆದರೆ ಕೇವಲ ಹುಡುಗಿಯರಿಗೆ ಮಾತ್ರ ಪ್ರವೇಶ ಇರುವ ಪಬ್ ಬಗ್ಗೆ ನಿಮಗೆ ಗೊತ್ತಾ? ಹೌದು ಬೆಂಗಳೂರಿನ ಇದೊಂದು ಪಬ್‌ನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದು, ಇಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಇದೆ. ಇಲ್ಲಿ ಪುರುಷರಿಗೆ ನೋ ಎಂಟ್ರಿ.
ಸಾಮಾನ್ಯವಾಗಿ ಪಬ್ ಎಂದ ಮೇಲೆ ಅಲ್ಲಿ ಹುಡಗ ಹುಡುಗಿಯರು ಸ್ನೇಹಿತರು, ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್‌ಗಳೇ ತುಂಬಿರುತ್ತಾರೆ. ಕೆಲವೊಂದು ಪಬ್‌ಗಳಲ್ಲಿ ಹುಡುಗಿ ಜೊತೆ ಬಂದ್ರೆ ಹುಡುಗರಿಗೆ ಫ್ರಿ ಎಂಟ್ರಿ ನೀಡುತ್ತವೆ. ಆದರೆ ಕೇವಲ ಹುಡುಗಿಯರಿಗೆ ಮಾತ್ರ ಪ್ರವೇಶ ಇರುವ ಪಬ್ ಬಗ್ಗೆ ನಿಮಗೆ ಗೊತ್ತಾ? ಹೌದು ಬೆಂಗಳೂರಿನ ಇದೊಂದು ಪಬ್‌ನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದು, ಇಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಇದೆ. ಇಲ್ಲಿ ಪುರುಷರಿಗೆ ನೋ ಎಂಟ್ರಿ. ಇಲ್ಲಿ ಮಹಿಳೆಯರೇ ಪಬ್ ನಡೆಸುತ್ತಿದ್ದು, ಒಳಗಿರು ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದಾರೆ. ಕೇವಲ ಮಹಿಳೆಯರಿಗೆ ಮಾತ್ರ ಎಂಟ್ರಿ ಕೊಡುವ ಇಂತಹ ಪರಿಕಲ್ಪನೆಯ ಪಬ್ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶದಲ್ಲೇ ಇದೇ ಮೊದಲಂತೆ.
ಅಂದಹಾಗೆ ಈ ಪಬ್ ಇರುವುದು ನಮ್ಮ ಬೆಂಗಳೂರಿನ ಬನ್ನೆರುಘಟ್ಟದಲ್ಲಿ 'ಮಿಸ್ & ಮಿಸೆಸ್' ಹೆಸರಿನ ಈ ಪಬ್‌ಗೆ ಕೇವಲ ಮಹಿಳೆಯರು ಹಾಗೂ ನವ ತರುಣಿಯರಿಗೆ ಮಾತ್ರ ಅವಕಾಶವಿದೆ. ಎಲ್ಲಾ ಮಾಮೂಲಿ ಪಬ್‌ಗಳಂತೆ ಇಲ್ಲಿಯೂ ಮಹಿಳೆಯರು ತಮ್ಮಗಿಷ್ಟ ಬಂದ ಆಹಾರ ಸೇವಿಸಬಹುದು, ಮದ್ಯ/ಪಾನ ಪ್ರಿಯರಾಗಿದ್ದಲ್ಲಿ ನಿಮಗಿಷ್ಟದ ಡ್ರಿಂಕ್ಸನ್ನು ಆರ್ಡರ್ ಮಾಡಿ ಎಂಜಾಯ್ ಮಾಡಬಹುದಾಗಿದೆ. ಆದರೆ ಇಲ್ಲಿ ಪುರುಷರಿಗೆ ಮಾತ್ರ ಪ್ರವೇಶವಿಲ್ಲ, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.
'ಕರ್ಲಿ ಟೇಲ್ಸ್' ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಆ ಪಬ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿವರಿಸಿದ್ದಾರೆ. 300 ರೂಪಾಯಿಗಳಿಗೆ ನಿಮಗೆ ಇಲ್ಲಿ ನಿಮಗೆ 2 ಗಂಟೆಯವರೆಗೆ ಅನ್‌ಲಿಮಿಟೆಡ್ ಆಹಾರ ಹಾಗೂ ಕುಡಿಯಲು ವೈನ್ ಸಿಗಲಿದೆ. ಅಲ್ಲದೇ ನೀವು ನಿಮ್ಮ ಉಗುರಿಗೆ ನೇಲ್ ಆರ್ಟ್ ಕೂಡ ಮಾಡಬಹುದು. ಈ ನೇಲ್ ಆರ್ಟ್‌ಗೆ ಮಾತ್ರ ಚಾರ್ಜ್ ಮಾಡಲಾಗುತ್ತದೆ. ಇದು ನಿಮಗೆ ಅಗತ್ಯವಿದ್ದಲ್ಲಿ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು ಇಲ್ಲಿ ವೈನ್ ಕುಡಿಯುತ್ತಾ ಫಿಸ್ ಪ್ರೈಸ್ ಅಥವಾ ಇನ್ಯಾವುದೇ ವೆಜ್ ಅಥವಾ ನಾನ್‌ವೆಜ್ ಸ್ನ್ಯಾಕ್ಸ್ ತಿನ್ನುತ್ತಾ ನಿಮ್ಮ ಉಗುರುಗಳ ಬ್ಯೂಟಿ ಕೇರ್ ಮಾಡಬಹುದಾಗಿದೆ.
ಈ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಇದು ಮಹಿಳೆಯರಿಗೆ ಸರಿಯಾದ ಸ್ಥಳ, ಒಳ್ಳೆಯ ಆಹಾರ, ಡ್ರಿಂಕ್ಸ್, ನೇಲ್ ಸಲೂನ್ ಹಾಗೂ ಹುಡುಗರಿಗೆ ಎಂಟ್ರಿ ಇಲ್ಲದಿರುವುದು ಈ ಕ್ಲಬ್‌ನ ವಿಶೇಷ ಎಂದು ವಿವರ ನೀಡಲಾಗಿದೆ. ಅನೇಕರು ಈ ಪಬ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಕಾಮೆಂಟ್ ಮಾಡಿದ್ದಾರೆ. ನಾನು ಈ ಪಬ್‌ಗೆ ಹೋಗ್ಬೇಕು ಕನಿಷ್ಟ ಗುರಾಯಿಸುವವರಿಂದ ಮುಕ್ತಿ ಸಿಗುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು ಬಿಲ್ ಯಾರು ಪೇ ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಆತನಿಗೆ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದು, ನೀವಿನ್ನೂ 90ರ ದಶಕದಲ್ಲಿ ಜೀವನ ಮಾಡ್ತಿದ್ದಂಗೆ ಕಾಣ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ತಾವು ಅಲ್ಲಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದು, ಹೆಣ್ಣು ಮಕ್ಕಳಿಗೆ ಒಳ್ಳೆಯ ಸ್ಥಳ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯುವಕ ಹುಡುಗರನ್ನು ಸೇವ್ ಮಾಡಿದ್ದಕ್ಕಾಗಿ ಧನ್ಯವಾದಗಳು ಶಾಂತಿ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಇನ್ನಾದರೂ ಪುರುಷರು ತಮಗಿಷ್ಟ ಬಂದಂತೆ ಆರಾಮವಾಗಿ ಕುಡಿದು ನೆಮ್ಮದಿಯಾಗಿ ಇರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಮಿಸ್ & ಮಿಸೆಸ್ ಕ್ಲಬ್ ಬಗ್ಗೆ ತರಹೇವಾರಿ ಪ್ರತಿಕ್ರಿಯೆಗಳು ಬರುತ್ತಿದ್ದು, ವೀಡಿಯೋ ಮತ್ತಷ್ಟು ವೈರಲ್ ಆಗುತ್ತಿದೆ. ಅಂದಹಾಗೆ ಈ ಪಬ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ವೀಡಿಯೋ ಇಲ್ಲಿದೆ ನೋಡಿ