ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!

By Suchethana D  |  First Published Nov 25, 2024, 12:09 PM IST

ಭಾಗ್ಯಲಕ್ಷ್ಮಿ ಸೀರಿಯಲ್‌ ತಾಂಡವ್‌ ಕ್ರೂರತನಕ್ಕೆ ಕಾರಣವೇನು ಎನ್ನುತ್ತಲೇ ಪ್ರತಿಯೊಬ್ಬ ಅಪ್ಪ-ಅಮ್ಮನಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್ ರಂಗಪ್ರಸಾದ್‌
 


ತಾಂಡವ್‌ ಒಬ್ಬ ಕ್ರೂರಿ, ಇಬ್ಬರು ಮುದ್ದಾದ ಮಕ್ಕಳಿದ್ದರೂ ಬೇರೊಬ್ಬಳ ಸಂಗ ಮಾಡಿರುವ ಕೆಟ್ಟ ಮನುಷ್ಯ. ಇತ್ತ ಭಾಗ್ಯಳಂಥ ಮುಗ್ಧ ಹೆಣ್ಣುಮಗಳ ಜೀವನದಲ್ಲಿ ಆಟ ಆಡುವ ಕಿರಾತಕ, ಅಪ್ಪ-ಅಮ್ಮನಿಗೂ ಸಲ್ಲುವ ಮಗನಲ್ಲ. ಈತನ ದೃಷ್ಟಿಯಲ್ಲಿ ಹೆಂಡತಿ ಎಂದರೆ ಗೂಬೆ, ಎಮ್ಮೆ, ಕತ್ತೆ, ಕೆಲಸಕ್ಕೆ ಬಾರದವಳು ಅಷ್ಟೇ... ಹೆತ್ತವರಿಗೂ ಗೌರವ ಕೊಡದ, ಒಳ್ಳೆಯ ಗಂಡನೂ ಆಗದ ಕೊನೆಗೆ ಒಳ್ಳೆಯ ಅಪ್ಪನೂ ಆಗದವ.  ಮುದ್ದಾದ ಪತ್ನಿ ಇದ್ದರೂ ಬೇರೊಬ್ಬ ಹೆಣ್ಣಿನ ಸಹವಾಸ ಮಾಡಿ ಆಕೆಯನ್ನೇ ಮದುವೆಯಾಗಲು ಹೊರಟ ರಾಕ್ಷಸ. ಪತಿಯ ಪ್ರೀತಿಯನ್ನು ಪಡೆಯುವುದಕ್ಕಾಗಿ ಇತ್ತ ಪತ್ನಿ ತನ್ನನ್ನು ತಾನೇ ಬದಲಿಸಿಕೊಂಡರೂ, ಎಳ್ಳಷ್ಟು ಪ್ರೀತಿಯನ್ನೂ ಆಕೆಗೆ ಧಾರೆಯೆರೆಯದ ಆಸಾಮಿ ಈತ...

ಹೌದು. ಭಾಗ್ಯಲಕ್ಷ್ಮಿಯ ತಾಂಡವ್‌ ಕ್ಯಾರೆಕ್ಟರ್‍‌ ಎಂದಾಕ್ಷಣ ಸೀರಿಯಲ್‌ ಪ್ರೇಮಿಗಳಿಗೆ ನಖಶಖಾಂತ ಉರಿ ಹೊತ್ತಿಕೊಳ್ಳುವುದು ಸಹಜವೇ. ಅದರಲ್ಲಿಯೂ ಮಹಿಳೆಯರಂತೂ ಅಬ್ಬಾ ಇಂಥ ಮಗ ಮಾತ್ರ ನಮಗೆ ಬೇಡ ಎನ್ನುವವರೇ, ಹೆಣ್ಣು ಮಕ್ಕಳ ಮಾತು ಬಿಡಿ... ಇಂಥ ಒಂದೆರಡು ಕ್ಯಾರೆಕ್ಟರ್‍‌ ನೋಡಿದರೆ ಮದುವೆಯೇ ಬೇಡಪ್ಪಾ ಎನ್ನಲೂಬಹುದು. ಅಂಥ ವ್ಯಕ್ತಿತ್ವ ಈ ತಾಂಡವ್‌ದ್ದು. ಆದರೆ ಇದು ಕೇವಲ ಸೀರಿಯಲ್‌. ಹಾಗೆಂದು ನಿಜ ಜೀವನದಲ್ಲಿ ಇಂಥ ಗಂಡಂದಿರು ಇರಲ್ವಾ? ಖಂಡಿತವಾಗಿಯೂ ಇರುತ್ತಾರೆ. ತಾಂಡವ್‌ ಕ್ಯಾರೆಕ್ಟರ್‍‌ ನೋಡಿದಾಕ್ಷಣ  ಅದೆಷ್ಟು ಮಂದಿಗೆ ತಮ್ಮವರೇ ಎಷ್ಟೋ ಮಂದಿ ನೆನಪಾಗಿರಲಿಕ್ಕೂ ಸಾಕು. ಅವನೂ ಇದೇ ರೀತಿ, ಇವನೂ ಇದೇ ರೀತಿ, ಅವಳ ಗಂಡನದ್ದೂ ಸೇಮ್‌ ಕ್ಯಾರೆಕ್ಟರ್‍‌... ಹೀಗೆ ಏನೇನೋ ಅಂದುಕೊಂಡರಲಿಕ್ಕೂ ಸಾಕು. 

Tap to resize

Latest Videos

undefined

ನನ್ನ ರಿಯಲ್‌ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್‌ ತಗೊಂಡ್‌ ಬರುತ್ತಿದ್ದಳು ಅಷ್ಟೇ ಎಂದ ಭಾಗ್ಯಲಕ್ಷ್ಮಿ ತಾಂಡವ್‌!

ಮಕ್ಕಳು ತಾಂಡವ್‌ ರೀತಿ ವರ್ತಿಸಲು ನೂರೆಂಟು ಕಾರಣಗಳು ಇರಬಹುದು. ಆದರೆ ಭಾಗ್ಯಲಕ್ಷ್ಮಿಯ ತಾಂಡವ್‌ ಹೀಗೆ ಆಗಲು ಕಾರಣವೇನು? ನಿಜಕ್ಕೂ ಅದಕ್ಕೆ ಅವನೇ ಕಾರಣನಾ? ಇದನ್ನು ತುಂಬಾ ಸೊಗಸಾಗಿ ಬಣ್ಣಿಸಿದ್ದಾರೆ ತಾಂಡವ್‌ ಕ್ಯಾರೆಕ್ಟರ್‍‌ನ ಸುದರ್ಶನ್‌ ರಂಗಪ್ರಸಾದ್‌ ಅವರು. ಪಂಚಮಿ ಟಾಕ್ಸ್ ಯೂಟ್ಯೂಬ್‌ ಚಾನೆಲ್‌ಗೆ ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ಹೇಳಿದ್ದಾರೆ. ಇದು ಕೇವಲ ಸೀರಿಯಲ್‌ ಕಥೆ ಎಂದುಕೊಂಡರೆ ಅದು ತಪ್ಪು. ನಿಮ್ಮಲ್ಲಿಯೂ, ನಿಮ್ಮ ಮನೆಯಲ್ಲಿಯೂ, ನಿಮ್ಮ ಮನೆಯ ಅಕ್ಕಪಕ್ಕದಲ್ಲಿಯೂ ಇಂಥ ಒಬ್ಬ ತಾಂಡವ್‌ ಇದ್ದರೆ ಅದಕ್ಕೆ ಇದೇ ಪ್ರಮುಖ ಕಾರಣವೂ ಇರಬಹುದು ಎನ್ನುವುದನ್ನು ನಟ ಸೊಗಸಾಗಿ ಹೇಳಿದ್ದಾರೆ.

ಅಷ್ಟಕ್ಕೂ ಸುದರ್ಶನ್‌ ರಂಗಪ್ರಸಾದ್‌ ಅವರು ತಮ್ಮ ನೆಗೆಟಿವ್‌ ರೋಲ್‌ ಬಗ್ಗೆ ಹೇಳಿದ್ದು ಏನೆಂದರೆ, 'ನಾನು ಇದನ್ನು ತಾಂಡವ್‌ ಆಗಿ ಅಲ್ಲ, ಬದಲಿಗೆ ಸುದರ್ಶನ್‌ ರಂಗಪ್ರಸಾದ್‌ ಆಗಿ ಹೇಳುತ್ತಿದ್ದೇನೆ. ಅದೇನೆಂದರೆ, ತಾಂಡವ್‌ನನ್ನು ಆತನ ಅಪ್ಪ-ಅಮ್ಮ ತುಂಬಾ ಸ್ಟ್ರಿಕ್ಟ್‌ ಆಗಿ ಬೆಳೆಸಿದರು. ಆತನಿಗೆ ಯಾವುದೇ ಸ್ವಾತಂತ್ರವನ್ನೂ ನೀಡಿರಲಿಲ್ಲ. ತಾವು ಹೇಳಿದಂತೆಯೇ ಆಗಬೇಕು, ಹೀಗೆಯೇ ಆಗಬೇಕು ಎನ್ನುವುದು ಪಾಲಕರ ಅದರಲ್ಲಿಯೂ ಮುಖ್ಯವಾಗಿ ಅಮ್ಮನ ಮಾತು. ಹಣ ಇಲ್ಲದಿದ್ದರೂ ಜೀವಿಸಬಹುದೇನೋ, ಆದರೆ ಬೆಳೆಯುವ ವಯಸ್ಸಿನಲ್ಲಿ ಮಕ್ಕಳ ಸ್ವಾತಂತ್ರವನ್ನು ಕಿತ್ತುಕೊಂಡು ಸ್ಟ್ರಿಕ್ಟ್‌ ಆಗಿ ಬೆಳೆಸುವುದು ಇದೆಯಲ್ಲ, ಅದು ನೋವು ಅನುಭವಿಸುವ ಆ ಮಕ್ಕಳಿಗೆ ಅಷ್ಟೇ ಗೊತ್ತು. ತಾಂಡವ್‌ಗೂ ಅದೇ ರೀತಿಯಾಗಿದೆ. ಆತ ಬೆಳೆಯುತ್ತಾ ತನ್ನನ್ನು ತಾನು ಬದಲಿಸಿಕೊಳ್ಳುವ ಛಾನ್ಸ್‌ ಇತ್ತು. ಆದರೆ, ಆತನಿಗೆ ಪಾಲಕರ ಈ ವರ್ತನೆ ಕಿರಿಕಿರಿ ತಂದಿತ್ತು. ಬೆಳೆಯುತ್ತಾ ಅವರು ಏನು ಹೇಳಿದರೂ ಅದನ್ನು ತಿರಸ್ಕರಿಸುವ ಮನೋಭಾವ ಬೆಳೆಸಿಕೊಂಡ' ಎಂದು ಸುದರ್ಶನ್ ಹೇಳಿದ್ದಾರೆ. 

'ಕೊನೆಗೆ ಅವನಿಗೆ ಭಾಗ್ಯಳ ಜೊತೆ ಮದುವೆಯಾಗುವ ಆಸೆಯೂ ಇರಲಿಲ್ಲ. ಅದನ್ನೂ ಪಾಲಕರ ಒತ್ತಾಯಕ್ಕೆ ಆದ. ಆ ಸಮಯದಲ್ಲಿ ಈಮದುವೆ ನನಗೆ ಬೇಡವೆ ಬೇಡ ಎನ್ನುವ ಸ್ವಾತಂತ್ರವೂ ಅವನಿಗೆ ಇರಲಿಲ್ಲ. ಅವನ ಕನಸು ಅಲ್ಲಿಗೆ ನುಚ್ಚು ನೂರಾಗಿತ್ತು. ಇದನ್ನು ಪಾಲಕರ ಮೇಲೆ ತೋರಿಸಲು ಆಗಲ್ವಲ್ಲಾ? ಕೊನೆಗೆ ಆತನ ಸಿಟ್ಟು ಹೋಗಿದ್ದು, ಮುಗ್ಧೆಯಾಗಿರುವ ಪತ್ನಿ ಭಾಗ್ಯಳ ಮೇಲೆ. ಪಾಪ ಅವಳು. ಅವಳದ್ದು ಏನೂ ತಪ್ಪಿಲ್ಲ. ಗಂಡ, ಮಕ್ಕಳು, ಕುಟುಂಬ ಎಂದೇ ಜೀವನ ಮೀಸಲು ಇರಿಸಿದವಳು. ಆದರೆ ಇಲ್ಲಿ ತಾಂಡವ್‌ನ ಬಾಲ್ಯ, ಆತ ಬೆಳೆದು ಬಂದ ಬಗೆಯಿಂದ ಆತನಿಗೆ ಅಪ್ಪ-ಅಮ್ಮ ಮಾಡಿದ್ದು ಎಲ್ಲವೂ ಕಿರಿಕಿರಿಯಾಗತೊಡಗಿದೆ. ಎಲ್ಲವನ್ನೂ ತಿರಸ್ಕರಿಸುವ ಮನೋಭಾವ ಅವನನ್ನು ಈಮಟ್ಟಿಗೆ ತಂದು ನಿಲ್ಲಿಸಿದೆ' ಎನ್ನುವ ಮೂಲಕ, ಮಕ್ಕಳನ್ನು ಅಪ್ಪ-ಅಮ್ಮ ಸಾಕುವಾಗ ಎಷ್ಟು ಜಾಗರೂಕರಾಗಿ ಇರಬೇಕು ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. 

ರೀಲ್‌ ಪತ್ನಿ ಎದುರು ರಿಯಲ್‌ ಪತ್ನಿ ಜೊತೆ ಶ್ರೀರಸ್ತು ಶುಭಮಸ್ತು ಮಾಧವ್‌ ಸಕತ್‌ ಸ್ಟೆಪ್‌

click me!