ಕೊನೆಗೂ ಆ ದಿನ ಬಂದೇ ಬಿಡ್ತು! ದೀಪಾ ಒದ್ದಿದ್ದು ಸೇರನ್ನಲ್ಲ, ಸೌಂದರ್ಯಳ ಅಹಂ ಎಂಬ ಕೋಟೆಯನ್ನು

Published : Nov 25, 2024, 01:47 PM ISTUpdated : Nov 25, 2024, 02:36 PM IST
ಕೊನೆಗೂ ಆ ದಿನ ಬಂದೇ ಬಿಡ್ತು! ದೀಪಾ ಒದ್ದಿದ್ದು ಸೇರನ್ನಲ್ಲ, ಸೌಂದರ್ಯಳ ಅಹಂ ಎಂಬ ಕೋಟೆಯನ್ನು

ಸಾರಾಂಶ

ಸೌಂದರ್ಯನೇ ಸರ್ವಸ್ವ ಎಂದುಕೊಂಡಿರೋ ಸೌಂದರ್ಯಳ ವಿರುದ್ಧ ದೀಪಾ ತಿರುಗಿ ಬಿದ್ದಿದ್ದಾಳೆ. ಮುಂದೇನಾಗುತ್ತೆ?  

ಹೆಣ್ಣು ಸಹನಾಮೂರ್ತಿ ಎನ್ನುವ ಪಟ್ಟ ಕಟ್ಟಿಕೊಂಡು ಅದೆಷ್ಟೋ ಬಾರಿ ಸಹನೆಯಿಂದ ವರ್ತಿಸುವುದು ಇದೆ. ಆದರೆ ತಾಳ್ಮೆ ಮಿತಿಮೀರಿದರೆ ಅದು ಕೂಡ ಲಾವಾರಸವಾಗಿ ಹೊರಹೊಮ್ಮುವುದು ಇದೆ. ಸಹನಾಮೂರ್ತಿ ಎಂಬ ಹಣೆಪಟ್ಟಿಯನ್ನು ಕಳಚಿ ಮಿತಿಮೀರಿದ ದೌರ್ಜನ್ಯದ ವಿರುದ್ಧ ಹೆಣ್ಣು ಸಿಡಿದೆದ್ದು ರೌದ್ರರೂಪ ತಾಳಿದರೆ ಅಂದು ಕೆಡುಕು ಬಯಸುವವರಿಗೆ ಕೇಡುಗಾಲ ಎನ್ನುವುದೂ ಅಷ್ಟೇ ಸತ್ಯ. ಇದು ನಿಜ ಜೀವನದಲ್ಲಿಯೂ ಅನ್ವಯ ಆಗುವ ಮಾತು. ನಿಜ ಜೀವನವನ್ನೇ ತಾನೆ ಸೀರಿಯಲ್‌ಗಳಲ್ಲಿಯೂ ತೋರಿಸುವುದು! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್‌ನಲ್ಲಿಯೂ ಈಗ ಅತಿ ದೊಡ್ಡ ಟ್ವಿಸ್ಟ್‌ ಬಂದಿದೆ.

  ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.  ಮನೆಯ ಮರ್ಯಾದೆ ಉಳಿಸಲು  ಚಿರುನ ಮದುವೆಯಾಗಿ ಬಂದು ತನ್ನ  ರೂಪದಿಂದಲೇ ಎಲ್ಲರಿಂದಲೂ ದೂರ ತಳ್ಳಿಸಿಕೊಳ್ತಿರೋ ನಾಯಕಿ ದೀಪಾ. ಈಕೆಯನ್ನು ದೂರವಿಡಲು ಒಬ್ಬೊಬ್ಬರದ್ದು ಒಂದೊಂದು ನೆಪವಷ್ಟೇ. 

ರೀಲ್‌ ಪತ್ನಿ ಎದುರು ರಿಯಲ್‌ ಪತ್ನಿ ಜೊತೆ ಶ್ರೀರಸ್ತು ಶುಭಮಸ್ತು ಮಾಧವ್‌ ಸಕತ್‌ ಸ್ಟೆಪ್‌

ಚಿರು ಅತ್ತಿಗೆ ಸೌಂದರ್ಯ ಇಲ್ಲಿ ವಿಲನ್​. ಆಕೆಗೆ ತನ್ನ ಸೌಂದರ್ಯ ಎಲ್ಲಿ ಹಾಳಾಗುತ್ತದೆಯೋ ಎನ್ನುವ ಚಿಂತೆ, ಅದಕ್ಕಾಗಿ ಮಕ್ಕಳು ಮಾಡಿಕೊಂಡಿಲ್ಲ. ಆದರೆ ಎಲ್ಲರೂ ಚಿರುವಿಗೆ ತಾಯಿಯ ಮಮತೆ ತೋರಬೇಕು ಎನ್ನುವ ಕಾರಣಕ್ಕೆ  ಮಕ್ಕಳು ಮಾಡಿಕೊಂಡಿಲ್ಲ ಎಂದೇ ಅಂದುಕೊಂಡಿದ್ದಾರೆ. ಅದೇ ಇನ್ನೊಂದೆಡೆ ಕ್ಷಣ ಕ್ಷಣಕ್ಕೂ ದೀಪಾ ಈ ಮನೆಯಲ್ಲಿ ಎಲ್ಲರ ಬಾಯಲ್ಲಿ ಚುಚ್ಚು ಮಾತುಗಳಿಂದ ನೋವು ಅನುಭವಿಸುತ್ತಿದ್ದಾಳೆ. ಆದರೂ ಅವಳು ಸಹನೆಯ ಪ್ರತಿರೂಪ.  ಬಹುಶಃ ಮುಂದೊಂದು ದಿನ ದೀಪಾಳ ಸೌಂದರ್ಯ ಬದಲಾಗುತ್ತೆ, ಆಗ ಎಲ್ಲರೂ ಆಕೆಯನ್ನು ಒಪ್ಪಿಕೊಳ್ಳುತ್ತಾರೆ, ಇದು ಶತಃಸಿದ್ಧ ಎಂದೇ ಅಂದುಕೊಂಡಿದ್ದರು. ಆದರೆ ಈಗ ಎಲ್ಲರ ನಿರೀಕ್ಷೆಗೂ ಮೀರಿದ ಟ್ವಿಸ್ಟ್​ ಸೀರಿಯಲ್​ಗೆ ಸಿಕ್ಕಿದೆ. ದೀಪಾಳನ್ನು ತವರಿನಲ್ಲಿಯೇ ಚಿರು ಬಿಟ್ಟುಬರುತ್ತಾನೆ ಎಂದು ಸೌಂದರ್ಯ ಅಂದುಕೊಂಡಿದ್ದಳು. ಅದರೆ ದೀಪಾ ಮತ್ತೆ ಮನೆಗೆ ವಾಪಸಾಗಿದ್ದನ್ನು ಕಂಡ ಆಕೆ ಅವಳ ಸಾಮಗ್ರಿ ಸಹಿತ ಮನೆಯಿಂದ ಹೊರಕ್ಕೆ ಹಾಕಿದ್ದಾಳೆ. ಅಲ್ಲಿಗೆ ಬಂದ ಅಪ್ಪ-ಅಮ್ಮನಿಗೆ ಅವಮಾನ ಮಾಡಿದ್ದಾಳೆ. ಸ್ವಾಭಿಮಾನಿ ಹೆಣ್ಣು ದೀಪಾ ಅಪ್ಪ-ಅಮ್ಮನಿಗೆ ಅವಮಾನ ಮಾಡಿದರೆ ಸಹಿಸಿಕೊಂಡಾಳೆಯೇ? 

ಸೇರನ್ನು ಇಟ್ಟು ಅದನ್ನು ಒದ್ದು ಸೌಂದರ್ಯಳ ಫೋಟೋ ಚೂರಾಗುವ ಹಾಗೆ ಮಾಡಿದ್ದಾಳೆ. ಇದನ್ನು ಕಂಡು ಎಲ್ಲರೂ ಶಾಕ್​ ಆಗಿದ್ದಾರೆ. ನೀನು ಯಾರ ಜೊತೆ ಮಾತನಾಡುತ್ತಿದ್ದಿ ಎನ್ನುವುದು ಗೊತ್ತಾ ಎಂದು ಅಹಂಕಾರದಿಂದ ಸೌಂದರ್ಯ ಕೇಳಿದ್ದಾಳೆ. ಅದಕ್ಕೆ ದೀಪಾ ಸೌಂದರ್ಯವೇ ಸರ್ವಸ್ವ ಎನ್ನುವ ದುರಂಕಾರಿಯ ಮುಂದೆ ಮಾತನಾಡುತ್ತಿದ್ದೇನೆ. ಸೌಂದರ್ಯನಾ, ವ್ಯಕ್ತಿತ್ವನಾ? ಗುಣನಾ, ಗರ್ವನಾ? ನೀನಾ... ನಾನಾ... ನೋಡಿಯೇ ಬಿಡೋಣ ಎಂದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀರಿಯಲ್​ ಪ್ರೇಮಿಗಳಿಂದ  ಕಮೆಂಟ್ಸ್​ ಸುರಿಮಳೆಯಾಗ್ತಿದೆ. ಸೀರಿಯಲ್​​ ಅಂದ್ರೆ ಇದು ಅಂತಿದ್ದಾರೆ. ಅಬ್ಬಾ ಇಂಥ ರೋಚಕ ಟ್ವಿಸ್ಟ್​ ಊಹಿಸಿಯೇ ಇರಲಿಲ್ಲ ಎಂದು ಮತ್ತೆ ಹಲವರು ಹೇಳುತ್ತಿದ್ದಾರೆ. 

ತಾಂಡವ್‌ ಕ್ರೂರತನಕ್ಕೆ ಕಾರಣ ತಿಳಿಸುತ್ತಲೇ ಪ್ರತಿ ಪೋಷಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ನಟ ಸುದರ್ಶನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?