ನನಗೆ ಮಗು ಇಷ್ಟವಿಲ್ಲ, ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ: ನಟಿ ರಾಧಿಕಾ ಓಪನ್ ಮಾತು!

By Suchethana D  |  First Published Nov 24, 2024, 4:17 PM IST

 ನನಗೆ ಮಗು ಇಷ್ಟವಿಲ್ಲ, ಗರ್ಭಧಾರಣೆ ಬಗ್ಗೆ ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ ಎಂದ ನಟಿ ರಾಧಿಕಾ ಆಪ್ಟೆ. ನೆಟ್ಟಿಗರು ಹೇಳಿದ್ದೇನು? 
 


 ಗುಟ್ಟಾಗಿ ಮದುವೆಯಾಗಿ, ಅದನ್ನು ಎಲ್ಲಿಯೂ ಓಪನ್‌ ಆಗಿ ಹೇಳಿಕೊಳ್ಳದ ಕೆಲವು ನಟಿಯರ ಪೈಕಿ ನಟಿ ರಾಧಿಕಾ ಆಪ್ಟೆ ಕೂಡ ಒಬ್ಬರು. 39 ವರ್ಷದ ರಾಧಿಕಾ ಮದುವೆಯಾಗಿರುವ ಸುದ್ದಿ ಗೊತ್ತಾಗಿದ್ದು, ಮದುವೆಯಾಗಿ ಹನ್ನೆರಡು ವರ್ಷಗಳ ಬಳಿಕ ಗರ್ಭಿಣಿಯಾದಾಗ!  12 ವರ್ಷಗಳು ಕಳೆದ ತಾವು ಮಗುವಿನ  ನಿರೀಕ್ಷೆಯಲ್ಲಿರುವುದಾಗಿ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‍‌ ಮಾಡಿಕೊಂಡು ಅಭಿಮಾನಿಗಳಿಗೆ ಬಿಗ್‌ ಸರ್‍‌ಪ್ರೈಸ್‌ ನೀಡಿದದರು.  2012ರಲ್ಲಿ  ಬ್ರಿಟಿಷ್ ಮ್ಯೂಸಿಕ್ ಡೈರೆಕ್ಟರ್ ಬೆನೆಡಿಕ್ಟ್ ಟೈಲರ್ ರವರನ್ನು ಮದುವೆಯಾಗಿರುವ ವಿಷಯ ತಿಳಿದದ್ದೇ ಆಗ. ಏಕೆಂದರೆ ನಟಿ ಎಲ್ಲಿಯೂ ಮದುವೆಯ ಬಗ್ಗೆ  ಬಹಿರಂಗವಾಗಿ ಮಾತನಾಡಿದವರೇ ಅಲ್ಲ.  ಇದ್ದಕ್ಕಿದ್ದಂತೆ  ಬೇಬಿ ಬಂಪ್ ಪೋಟೋಗಳನ್ನು ಶೇರ್‍‌ ಮಾಡಿ ಎಲ್ಲರನ್ನೂ ಶಾಕ್‌ ಮಾಡಿದ್ದರು.  'ಸಿಸ್ಟರ್ ಮಿಡ್ನೈಟ್' ಎನ್ನುವ ಯುಕೆ ಪ್ರೀಮಿಯರ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ತುಂಬು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ವಾಕ್ ಮಾಡಿದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ವಿಷಯ ತಿಳಿಸಿದ್ದರು. 

ಆದರೆ ಇದೀಗ ನಟಿಗೆ ಮಗು ಹೊಟ್ಟೆಯಲ್ಲಿ ಇರುವುದು ತುಂಬಾ ಹಿಂಸೆ ಅನ್ನಿಸುತ್ತಿದೆಯಂತೆ. ನಿಜವಾಗಿ ಹೇಳಬೇಕು ಎಂದರೆ ನಾನು ಮಗುವನ್ನು ಬಯಸಿದವಳೇ ಅಲ್ಲ, ನನಗೆ ಮಗು ಬೇಡವಾಗಿತ್ತು. ಈ ಹಿಂಸೆಯನ್ನು ತಡೆಯುವುದು ನನಗೆ ಇಷ್ಟವಾಗ್ತಿದೆ. ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಲಂಡನ್‌ನ ಪ್ರೀಮಿಯರ್‌ನಲ್ಲಿ ನಾನು ಭಾಗವಹಿಸದೇ ಇದ್ದಿದ್ದರೆ ನಾನು ಗರ್ಭಿಣಿ ಎನ್ನುವ  ವಿಚಾರ ಯಾರಿಗೂ ತಿಳಿಯುತ್ತಿರಲಿಲ್ಲ. ಅದೇನೇ ಇದ್ದರೂ ಮಗುವನ್ನು ಹೊತ್ತುಕೊಳ್ಳುವುದು ತುಂಬಾ ಕಷ್ಟ. ಅಮ್ಮನಾಗುವುದು ಸುಂದರ ಕನಸು, ಮಗು ಗರ್ಭದಲ್ಲಿ ಇದ್ದಾಗ ಅದು ಮಹಿಳೆಗೆ ತುಂಬಾ ಖುಷಿ ಕೊಡುತ್ತದೆ, ಅಮ್ಮನಾಗುವ ಹೊತ್ತು ಮನಸ್ಸು ಉಲ್ಲಾಸಭರಿತವಾಗಿರುತ್ತದೆ ಎಂದು ಬಹುತೇಕ ಮಹಿಳೆಯರು ಹೇಳುವುದು ಎಲ್ಲವೂ ಸುಳ್ಳು. ನನಗಂತೂ ನಿದ್ದೆಯಿಲ್ಲದೇ ಪರದಾಡುವಂತಾಗಿದೆ.  ಮಕ್ಕಳನ್ನು ಪಡೆಯಬೇಕು ಎಂದು ಎಂದಿಗೂ ಪ್ಲ್ಯಾನ್‌ ಮಾಡಿದವಳೇ ಅಲ್ಲ ಎಂದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವಾಗಲೇ ಹೀಗೆಲ್ಲಾ ನೋವು ತೋಡಿಕೊಂಡಿದ್ದಾರೆ ರಾಧಿಕಾ. 

Tap to resize

Latest Videos

ನನ್ನ ಜಾತಕದಲ್ಲಿ ಕಟನಿ ಯೋಗ, ಮದ್ವೆಯಾದ್ರೆ ತೊಂದ್ರೆ ಎನ್ನುತ್ತಲೇ ನೋವು ಬಿಚ್ಚಿಟ್ಟ ಊರ್ವಶಿ ರೌಟೇಲಾ !

ಎಲ್ಲರೂ ಹೇಳುವುದನ್ನು ಕೇಳಿ ನಾನು ಪ್ರೆಗ್ನೆನ್ಸಿ ಎನ್ನುವುದು ತುಂಬಾ ಖುಷಿಯ ವಿಚಾರ ಎಂದುಕೊಂಡಿದ್ದೆ. ಆದರೆ ಇಷ್ಟು ಕಷ್ಟ ಎಂದು ನಾನು ಊಹಿಸಿಯೂ ಇರಲಿಲ್ಲ. ಸಾಲದು ಎನ್ನುವುದನ್ನು ನನ್ನ ದೇಹದಲ್ಲಿ ಏನೇನೋ  ಬದಲಾವಣೆಗಳು ಆಗುತ್ತಿವೆ. ಇದೆಲ್ಲಾ ನನಗೆ ಗೊತ್ತೇ ಇರಲಿಲ್ಲ.  ಹೆಣ್ಣು ಗರ್ಭಿಣಿ ಆಗುವುದು  ಪವಿತ್ರ ಎಂದು ಹೇಳಿದರೂ, ನಿಜಾಂಶ, ಕಷ್ಟವನ್ನು ಮಾತನಾಡದೇ ಇರುವುದರಿಂದ ನಾನು ಅದನ್ನೆಲ್ಲಾ ನಂಬಿಬಿಟ್ಟೆ ಎಂದು ಈ ಭಾವಿ ಅಮ್ಮ ಹೇಳಿಕೊಂಡಿದ್ದಾರೆ!  ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಅಮ್ಮನಾಗುವ ಜರ್ನಿ ಸುಲಭವಲ್ಲ ಎನ್ನುವ ಮಾತನ್ನು ಬಹುತೇಕ ಮಂದಿ ಒಪ್ಪಿಕೊಂಡಿದ್ದರೂ, ಅದಕ್ಕಿಂತ ಸುಖ ಬೇರೊಂದು ಇಲ್ಲ. ಒಂದು ಜನ್ಮಕ್ಕೆ ಜನ್ಮ ಕೊಡುವ ಸಂತೋಷದ ಮುಂದೆ ಎಲ್ಲವೂ ನಗಣ್ಯ ಎಂದು ಹೇಳುತ್ತಿದ್ದಾರೆ. ಹೊಟ್ಟೆಯಲ್ಲಿ ಮಗು ಇರುವಾಗಲೇ ಅದರ ಬಗ್ಗೆ ಇಷ್ಟೊಂದು ನಕಾರಾತ್ಮಕ ಭಾವ ತುಂಬಿಕೊಂಡಿರುವುದಕ್ಕೆ ಹಲವರು ನಟಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಿಮಗೆ ಬೇಕೋ, ಬೇಡವೋ ಗರ್ಭ ಧರಿಸಿಯಾಗಿದೆ. ಮಗುವಿನ ಬಗ್ಗೆ ಇಷ್ಟು ಅಸಡ್ಡೆ ತೋರಬೇಡಿ ಎನ್ನುತ್ತಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ರಾಧಿಕಾ ಆಪ್ಟೆ,  ರಕ್ತ ಚರಿತ್ರ 2, ಪ್ಯಾಡ್‌ಮ್ಯಾನ್‌, ಕಬಾಲಿ, ಲಸ್ಟ್‌ ಸ್ಟೋರೀಸ್‌, ಅಂಧಾದುನ್‌ ಸೇರಿದಂತೆ ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.  ಸಿನಿಮಾದಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೋ ಏನೋ 12 ವರ್ಷಗಳಿಂದ ಮದುವೆಯ ಬಗ್ಗೆ ಗುಟ್ಟಾಗಿ ಇಟ್ಟುಕೊಂಡಿದ್ದರು.  ಮದುವೆಯನ್ನು ಸೀಕ್ರೇಟ್‌ ಆಗಿ ಇಟ್ಟುಕೊಂಡರೂ, ಗರ್ಭವನ್ನು ಹಾಗೆ ಮಾಡಲು ಆಗುವುದಿಲ್ಲವಲ್ಲ, ಇದರಿಂದ ನಟಿ ಅಮ್ಮನಾಗುವುದು ಜಗಜ್ಜಾಹೀರವಾಗಿದೆ. 

ಎಂಟು ವರ್ಷ ಕಿರಿಯ ಹಿಂದೂ ಯುವಕನ ಮದ್ವೆಯಾದ ನಟಿ ಕಿಶ್ವೆರ್‍‌: ಹೇಗಿದೆ ಲೈಫ್‌? ಅವರ ಬಾಯಲ್ಲೇ ಕೇಳಿ...
 

click me!