ಕನ್ಯತ್ವ ಪರೀಕ್ಷೆಗಳನ್ನು ನಡೆಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಹೇಳಿದೆ. ಇದು ಹೆಣ್ಣಿನ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತಿದೆ ಎಂದಿದೆ. ಕೋರ್ಟ್ ಕನ್ಯತ್ವ ಪರೀಕ್ಷೆ ಕುರಿತು ಈ ಆದೇಶ ಹೊರಡಿಸಿದ್ದೇಕೆ?
ಚತ್ತಸಘಡ(ಮಾ.29) ಕನ್ಯತ್ವ ಪರೀಕ್ಷೆ ಅಸಂವಿಧಾನಿಕ. ಇದು ಹೆಣ್ಣಿನ ಘನತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಚತ್ತೀಸಘಡ ಹೈಕೋರ್ಟ್ ಹೇಳಿದೆ. ಕನ್ಯತ್ವ ಪರೀಕ್ಷೆ ಭಾರತದ ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ. ಈ ವಿಧಿಯು ಜೀವನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯನ್ನು ಖಾತರಿಪಡಿಸುತ್ತದೆ. ಆದರೆ ಕನ್ಯತ್ವ ಪರೀಕ್ಷೆ ಈ ನಿಯಮದ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
1984 ರ ಕುಟುಂಬ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 19(4) ರ ಅಡಿಯಲ್ಲಿ ಸಲ್ಲಿಸಲಾದ ಕ್ರಿಮಿನಲ್ ರಿವಿಷನ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ತೀರ್ಪು ನೀಡಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌ಎಸ್), 2023 ರ ಸೆಕ್ಷನ್ 144 ರ ಅಡಿಯಲ್ಲಿ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಅಕ್ಟೋಬರ್ 15, 2024 ರ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಏನಿದು ಪ್ರಕರಣ?
ರಾಯಗಢದ ಮಹಿಳೆಯೊಬ್ಬರು ಬಿಎನ್‌ಎಸ್‌ಎಸ್, 2023 ರ ಸೆಕ್ಷನ್ 144 ರ ಅಡಿಯಲ್ಲಿ ತಿಂಗಳಿಗೆ 20,000 ರೂಪಾಯಿ ಜೀವನಾಂಶವನ್ನು ಕೋರಿದ್ದರು. ಈ ಪ್ರಕರಣವು ಪ್ರಸ್ತುತ ಸಾಕ್ಷ್ಯ ಹಂತದಲ್ಲಿದ್ದು, ವೈವಾಹಿಕ ಭಿನ್ನಾಭಿಪ್ರಾಯವು ಗಂಭೀರ ಆರೋಪಗಳಿಗೆ ತಿರುಗಿದೆ. ದಂಪತಿಗಳು ಏಪ್ರಿಲ್ 30, 2023 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಆರಂಭದಲ್ಲಿ ಕೋರ್ಬಾ ಜಿಲ್ಲೆಯ ಗಂಡನ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಪತಿ ನಿಷ್ಕ್ರಿಯನೆಂದು ಪತ್ನಿ ಆರೋಪಿಸಿದ ನಂತರ ಅವರ ಸಂಬಂಧ ಹದಗೆಟ್ಟಿತು ಮತ್ತು ಆಕೆ ಅವನೊಂದಿಗೆ ಸಹಬಾಳ್ವೆ ನಡೆಸಲು ನಿರಾಕರಿಸಿದಳು.
ಜೀವನಾಂಶದ ಹಕ್ಕನ್ನು ವಿರೋಧಿಸಿ, ಪತಿ ತನ್ನ ಹೆಂಡತಿಗೆ ಕನ್ಯತ್ವ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದನು. ಆಕೆ ತನ್ನ ಭಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಮತ್ತು ಅವರ ಮದುವೆ ಅಪೂರ್ಣವಾಗಿದೆ ಎಂದು ಆರೋಪಿದ್ದಾರೆ.
ಯಾವುದೇ ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಬಲವಂತ ಮಾಡುವಂತಿಲ್ಲ
ಕುಟುಂಬ ನ್ಯಾಯಾಲಯವು ಗಂಡನ ಕನ್ಯತ್ವ ಪರೀಕ್ಷೆಯ ಅರ್ಜಿಯನ್ನು ಸಂಪೂರ್ಣವಾಗಿ ವಜಾ ಮಾಡಿತ್ತು. ಇದರಿಂದ ಆತ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದನು. ಆದರೆ, ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರ ಏಕ ಸದಸ್ಯ ಪೀಠವು ಕುಟುಂಬ ನ್ಯಾಯಾಲಯದ ನಿಲುವನ್ನು ಎತ್ತಿಹಿಡಿದಿದೆ. ಇಂತಹ ಬೇಡಿಕೆಗಳು ಅಸಾಂವಿಧಾನಿಕ ಮತ್ತು ಆಳವಾಗಿ ಆಕ್ರಮಣಕಾರಿ ಎಂದು ಘೋಷಿಸಿತು.
ಕಾನೂನು ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ನ್ಯಾಯಾಲಯವು ಸ್ಟೇಟ್ ಆಫ್ ಜಾರ್ಖಂಡ್ ವರ್ಸಸ್ ಶೈಲೇಂದ್ರ ಕುಮಾರ್ ರೈ (2022) 14 SCC 299 ಅನ್ನು ಉಲ್ಲೇಖಿಸಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ “ಎರಡು ಬೆರಳು ಪರೀಕ್ಷೆ” ಅಥವಾ ಯಾವುದೇ ಪರ್ ವ್ಯಜೈನಮ್ ಪರೀಕ್ಷೆ ನಡೆಸುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ದುರ್ವರ್ತನೆ ಎಂದು ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್‌ನ ಸೆಫಿ ವರ್ಸಸ್ ಸಿಬಿಐ ಮತ್ತು ಇತರರ ತೀರ್ಪನ್ನು ಸಹ ಪೀಠವು ಉಲ್ಲೇಖಿಸಿದೆ. ಮಹಿಳಾ ಬಂಧಿತ ಅಥವಾ ಆರೋಪಿಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು 21 ನೇ ವಿಧಿಯ ನೇರ ಉಲ್ಲಂಘನೆ ಎಂದು ಅದು ಪುನರುಚ್ಚರಿಸಿದೆ.
ಸನ್ನಿ ಲಿಯೋನ್‌ಗಿಂತ ಮುಂಚೆಯೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಬಾಲಿವುಡ್ ನಟಿ!