ಹನಿಟ್ರಾಪ್‌ನ ಮೂಲ ಈ ಮೊಜ್ನೋ ಹುಡುಗಿಯರು! ಇವ್ರು ಮಾಡೋ ಹನಿಟ್ರಾಪ್‌ ಹೇಗಿತ್ತು ಗೊತ್ತಾ? 

ಕಳೆದೊಂದು ತಿಂಗಳಿಂದ ರಾಜ್ಯದಲ್ಲಿ ಹನಿ ಟ್ರಾಪ್‌ ಶಾಕ್‌. ಆದರೆ ಈ ಹನಿ ಟ್ರಾಪ್‌ನ ಮೂಲ ಈ ಮೊಜ್ನೋ ಹುಡುಗೀರು. ಇವ್ರು ಹೆಂಗೆ ಹನಿಟ್ರಾಪ್‌ ಮಾಡುತ್ತಿದ್ದರು ಗೊತ್ತಾ?

thrilling history of mozhno girls whom used to honey trap bni

ಕಳೆದ ವಾರದವರೆಗೆ ರಾಜ್ಯದಲ್ಲಿ ಬಹಳ ಸಂಚಲನ ಮೂಡಿಸಿದ್ದು ಹನಿ ಟ್ರ್ಯಾಪಿಂಗ್ ಮತ್ತು ಸಹಕಾರ ಸಚಿವ ರಾಜಣ್ಣ ಅವರ ಸ್ಟೇಟ್‌ಮೆಂಟ್. ಅತ್ತ ಡೆಲ್ಲಿಯಲ್ಲಿ ಹೈಕಮಾಂಡ್‌ ಗುರ್ರ್ ಅಂದೊಡನೆ ಈ ಹನಿಟ್ತ್ಯಾಪ್ ಪ್ರಹಸನ ಚಾರ್ಮ್‌ ಕಳೆದುಕೊಳ್ಳುತ್ತ ಬಂತು. ನಮ್ಮ ರಾಜ್ಯದಲ್ಲಿ ಹನಿ ಟ್ರಾಪಿಂಗ್ ಕೇಸ್‌ ಏನೂ ಕಡಿಮೆ ಇರಲಿಲ್ಲ. ರಾಜ್ಯದ ರಾಜಕೀಯ ಇತಿಹಾಸ ತೆಗೆದು ನೋಡಿದರೆ ರಾಜ ಮಹಾರಾಜರ ಕಾಲದಿಂದ ನಿನ್ನೆ ಮೊನ್ನೆ ಹನಿಟ್ರ್ಯಾಕ್‌ ಕೇಸ್‌ನೊಳಗೆ ನುಜ್ಜುಗೊಜ್ಜಾದ ಕೆಲ ರಾಜಕಾರಣಿಗಳವರೆಗೆ ಹಲವು ಮಂದಿ ಈ ಮಾದಕ ಜಾಲದೊಳಗೆ ಸಿಲುಕಿ ಹೊರಬರಲಾಗದೆ ಒದ್ದಾಡಿದವರೇ. ಅಂದ ಹಾಗೆ ಈ ಹನಿ ಟ್ರಾಪ್‌ ಅನ್ನೋದು ಪುರಾತನ ಕಾಲದಿಂದಲೇ ಚಾಲ್ತಿಯಲ್ಲಿತ್ತು. ನಮ್ಮ ವಿಷಕನ್ಯೆಯರೆಲ್ಲ ಈ ಹನಿಟ್ರ್ಯಾಪ್‌ನ ಮೂಲ ಮಹಿಳೆಯರು. ಇವರ ಪ್ರಸ್ತಾಪ ನಮ್ಮ ಪುರಾಣದಲ್ಲೇ ಬರುತ್ತೆ. 
ಇರಲಿ, ಅದನ್ನೆಲ್ಲ ನೀವು ಓದಿಯೇ ಇರ್ತೀರ, ಮತ್ತೆ ಮತ್ತೆ ಹೇಳಿದ್ರೆ ಸಿಟ್ ಬಂದ್ ಸ್ಕ್ರೋಲ್ ಮಾಡ್ಕೊಂಡು ಮುಂದಕ್ಕೋಗ್ತೀರ. ಸೋ ನಾವೀಗ ಮೊಜ್ನೋ ಅನ್ನೋ ಮಜಬೂತು ಹುಡುಗೀರ ವಿಷಯಕ್ಕೆ ಬರೋಣ. 

ಮೊಜ್ನೋ ಹುಡುಗೀರ ವಿಚಾರಕ್ಕೆ ಬಂದರೆ ಇವರು ವೈರಿ ದೇಶದ ಮೇಲೆ ಬೇಹುಗಾರಿಕೆ ಮಾಡಲು ಬಿಡುತ್ತಿದ್ದ ಹುಡುಗಿಯರು. ಉಕ್ರೇನ್‌, ರಷ್ಯಾ, ಅರ್ಮೇನಿಯ ಮೊದಲಾದ ರಾಷ್ಟ್ರಗಳನ್ನೊಳಗೊಂಡ ಯುಎಸ್‌ಎಸ್‌ಆರ್‌ ಈ ಪ್ರಯೋಗ ಮಾಡಿದ ಮೊದಲಿಗ. ಆಗ ಶೀತಲ ಸಮರ ವರ್ಷಾನುಗಟ್ಟಲೆ ನಡೆಯುತ್ತಿತ್ತು. ಈ ವೇಳೆ ತನ್ನ ಶತ್ರು ದೇಶಗಳ ಮೇಲೆ ರಷ್ಯಾ, ಅರ್ಮೇನಿಯಾ ಮೊದಲಾದ ದೇಶಗಳು ಸುಂದರವಾದ ಹುಡುಗಿಯರನ್ನು ಬೇಹುಗಾರರನ್ನಾಗಿ ಕಳಿಸುತ್ತಿತ್ತು. ಅವರು ಹೋಗುವ ಮೊದಲು ಅವರನ್ನು ಚೆನ್ನಾಗಿ ಟ್ರೈನ್‌ ಮಾಡಲಾಗುತ್ತಿತ್ತು. ಶತ್ರು ದೇಶದ ರಾಜ ಪ್ರಮುಖರನ್ನು ಸಂಧಿಸುವ ಬಗೆ, ಅವರ ಜೊತೆಗೆ ಪರಿಚಯ ಮಾಡಿಕೊಂಡು ಅದನ್ನು ಸ್ನೇಹಕ್ಕೆ ತಿರುಗಿಸಿ ಆ ಬಳಿಕ ಪ್ರೇಮ, ಲೈಂಗಿಕ ಸಂಬಂಧ ಬಲಪಡಿಸುವುದು ಹೇಗೆ ಅನ್ನೋದನ್ನು ಇವರ ಮನಸ್ಸಲ್ಲಿ ಅಚ್ಚೊತ್ತಿ ನಿಲ್ಲಿಸಲಾಗುತ್ತಿತ್ತು. ಈ ಬೇಹುಗಾರಿ ಹುಡುಗಿಯರು ಶತ್ರುರಾಜ್ಯಗಳೊಳಗೆ ನುಸುಳಿ ಅಲ್ಲಿದ್ದ ದೊಡ್ಡವರೊಂದಿಗೆ ಸ್ನೇಹ ಸಂಬಂಧ ಬೆಳೆಸಿಕೊಂಡು ಬಹಳ ಸ್ಮಾರ್ಟ್‌ ದಾರಿಯಲ್ಲಿ ಅವರ ರಹಸ್ಯಗಳನ್ನೆಲ್ಲ ತನ್ನ ದೇಶಕ್ಕೆ ರವಾನೆ ಮಾಡುತ್ತಿದ್ದರು. 

Latest Videos

ಇವಿಷ್ಟು ಮಾಹಿತಿ ಈ ಹುಡುಗೀರ ಬಗ್ಗೆ ಸಿಗುತ್ತದೆ. ಅಷ್ಟಕ್ಕೂ ಈ ಮೊಚ್ನೋ ಅನ್ನೋದರ ಅರ್ಥ ಏನು ಅಂದರೆ ಅದಕ್ಕೂ ಉತ್ತರ ಸಿಗುತ್ತೆ. ಈ ಮೊಜ್ನೋ ಅನ್ನೋದು ರಷ್ಯನ್‌ ಪದ. ಇದರ ಅರ್ಥ 'ಇದಕ್ಕೆ ಅನುಮತಿಸಲಾಗಿದೆ' ಎಂತ. ಸಾಮಾನ್ಯರಿಗೆ ಇರುವ ಯಾವ ನಿಯಮಗಳೂ ಈ ಸೊಗಸುಗಾತಿಯರಿಗೆ ಅಪ್ಲೈ ಆಗ್ತಿರಲಿಲ್ಲವಂತೆ. ಸಾಮಾನ್ಯರಿಗೆ ರಿಸ್ಟ್ರಿಕ್ಷನ್ಸ್‌ ಇರುವ ಜಾಗಗಳಲ್ಲಿ ಇವರು ಓಡಾಡಬಹುದಿತ್ತು. ಸಾಮಾನ್ಯರಿಗೆ ನಿರ್ಬಂಧಿಸುವ ಕಾನೂನುಗಳು ಇವರಿಗೆ ಅಪ್ಲೈ ಆಗುತ್ತಿರಲಿಲ್ಲ. ಸಾಮಾನ್ಯ ಜನರಿಗೆ ವಿವಾಹ ಬಾಹಿರ ಲೈಂಗಿಕತೆ ಮಾಡುವಂತಿಲ್ಲ ಎಂಬ ರಿಸ್ಟ್ರಿಕ್ಷನ್ಸ್ ಇದ್ದರೆ ಇವರಿಗೆ ಅದೆಲ್ಲ ಲಗಾವ್ ಆಗುತ್ತಿರಲಿಲ್ಲ. ಅಷ್ಟಕ್ಕೂ ಇವರನ್ನು ಬಳಸಲಾಗುತ್ತಿದ್ದದ್ದೇ ಅದಕ್ಕೆ ಅಲ್ವಾ?

ಕನ್ಯತ್ವ ಪರೀಕ್ಷೆ ಅಸಂವಿಧಾನಿಕ, ಹೆಣ್ಣಿನ ಘನತೆ ಕುರಿತು ಹೈಕೋರ್ಟ್ ಮಹತ್ವದ ಆದೇಶ

ಕೊನೆಯಲ್ಲೊಂದು ಮಾನವೀಯ ಪ್ರಶ್ನೆ ಹೀಗೆಲ್ಲ ಬಳಸಿಕೊಂಡ ಹುಡಿಗೀರನ್ನು ಕೊನೆಗೆ ಏನ್ ಮಾಡ್ತಾರೆ ಅನ್ನೋದು. ಅವರು ಶತ್ರು ದೇಶದಿಂದ ಪಾರಾಗಿ ಬಂದರೆ ಅವರ ಸ್ವದೇಶ ಅವರನ್ನು ಉಳಿಸಿಕೊಳ್ಳುತ್ತಿತ್ತಾ? ಅಥವಾ ಕೆಲಸ ಆದಮೇಲೆ ಅವರ ಲೈಫಿಗೂ ಇತಿಶ್ರೀ ಹಾಡುತ್ತಿತ್ತಾ? ಈ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. 
ಆದರೆ ಈಗ ಫೇಮಸ್ ಆಗಿರೋ ಹನಿ ಟ್ರಾಪಿಂಗ್ ಕಥೆ ಎಷ್ಟು ಫೇಮಸ್ಸೋ, ಈ ಮೊಜ್ನೋ ಹುಡುಗೀರ ಕಥೆ ಅದಕ್ಕಿಂತ ರೋಚಕ. ಆದರೆ ಅವರ ಕಥೆ ನಮ್ಮ ಕೈಗೆ ಸಿಗೋದು ಕಷ್ಟ ಇದೆ.

ಪತಿ ಸೆಕ್ಸ್‌ಗೆ ನಿರಾಕರಿಸುವುದು ಮಾನಸಿಕ ಕೌರ್ಯ ಎಂದ ಕೇರಳ ಹೈಕೋರ್ಟ್‌!
 

vuukle one pixel image
click me!