ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ; ಫೋಟೋಗಳು ಇಲ್ಲಿವೆ!

ಕನ್ನಡದ ಕೆಲ ರಿಯಾಲಿಟಿ ಶೋಗಳು, ಧಾರಾವಾಹಿಗಳಲ್ಲಿ ನಟಿಸಿರುವ ಶುಭ ಲಕ್ಷ್ಮೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯ ಫೋಟೋಗಳು ಇಲ್ಲಿವೆ. 

ನಟಿ ಶುಭ ಲಕ್ಷ್ಮೀ ಅವರು ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು ಸೀಸನ್‌ 4'ರ ಎರಡನೇ ರನ್ನರ್ ಅಪ್ ಆಗಿದ್ದಾರೆ. ಇವರ ನಟನೆಯನ್ನು ಅನೇಕರು ಮೆಚ್ಚಿದ್ದಾರೆ.

ಶಿರಸಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಈ ಮದುವೆ ನಡೆದಿದೆ. ಶುಭ ಲಕ್ಷ್ಮೀ ಸೇರಿದಂತೆ ಎರಡೂ ಕುಟುಂಬಸ್ಥರು, ಸ್ನೇಹಿತರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. 


ಶುಭ ಲಕ್ಷ್ಮೀ ಮದುವೆಯಾಗಿರೋ ಹುಡುಗ ಯಾರು? ವೃತ್ತಿ ಏನು? ಲವ್‌ ಮ್ಯಾರೇಜ್?‌ ಅರೇಂಜ್‌ ಮ್ಯಾರೇಜ್?‌ ಎಂಬ ಬಗ್ಗೆ ಮಾಹಿತಿ ರಿವೀಲ್‌ ಆಗಿಲ್ಲ. 

ಶುಭ ಲಕ್ಷ್ಮೀ ಅವರು ಅದ್ದೂರಿಯಾಗಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಕೇಸರಿ ಬಣ್ಣದ ಸೀರೆ, ಭರ್ಜರಿ ಆಭರಣಗಳಲ್ಲಿ ಶುಭ ಲಕ್ಷ್ಮೀ ಅವರು ಮಿಂಚಿದ್ದಾರೆ. ವಿವಿಧ ಪಾತ್ರಗಳಲ್ಲಿ ನಟಿಸುತ್ತಿದ್ದ ಶುಭ ಈ ಬಾರಿ ರಿಯಲ್‌ ಮದುವೆ ಖುಷಿಯಲ್ಲಿದ್ದಾರೆ. 

ಶುಭ ಲಕ್ಷ್ಮೀ ಅವರು ಈಗಾಗಲೇ 'ಸತ್ಯ' ಧಾರಾವಾಹಿಯಲ್ಲಿ ಕೂಡ ನಟಿಸಿದ್ದು, ಇನ್ನು ರಂಗಭೂಮಿಯಲ್ಲಿ ಕೂಡ ಆಕ್ಟಿವ್‌ ಆಗಿದ್ದಾರೆ. 

ಶುಭ ಲಕ್ಷ್ಮೀ ಅವರ ಮದುವೆಯಲ್ಲಿ 'ಕಮಲಿ' ಧಾರಾವಾಹಿ ಖ್ಯಾತಿಯ ಸುಹಾಸ್‌, ನಟಿ ಗ್ಯಾಬ್ರಿಯೆಲಾ ಕೂಡ ಆಗಮಿಸಿದ್ದರು. ಒಟ್ಟಿನಲ್ಲಿ ಗ್ರ್ಯಾಂಡ್‌ ಆಗಿ ಮದುವೆ ನಡೆದಿದೆ. 

Latest Videos

click me!