ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಯುವತಿಯ ಕಾಲುಗಳ ಬಳಿ 8 ಅಡಿ ಉದ್ದನೆಯ ವಿಷಕಾರಿ ನಾಗರ ಹಾವು ಬಂದಿದೆ. ಮುಂದೇನಾಯ್ತು ಎಂಬುದನ್ನು ನೀವೇ ನೋಡಿ..
ಎಲ್ಲೆಂದರಲ್ಲಿ ಸ್ಟ್ಯಾಂಡ್ ಹಾಕಿಕೊಂಡು ರೀಲ್ಸ್ ಮಾಡುವ ಇನ್‌ಸ್ಟಾಗ್ರಾಮ್ ಇನ್ಲ್ಯೂಯೆನ್ಸರ್‌ಗಳೇ ಇಲ್ಲಿ ನೋಡಿ.. ಇಲ್ಲೊಬ್ಬ ಹುಡುಗಿ ರೀಲ್ಸ್ ಮಾಡುವಾಗ ಆಕೆಯ ಕಾಲಿನ ಬಳಿಗೆ 8 ಅಡಿ ಉದ್ದದ ನಾಗರ ಹಾವೊಂದು ಬಂದಿದೆ. ಮುಂದೇನಾಯ್ತು ನೀವೇ ನೋಡಿ..
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಎಲ್ಲೆಂದರಲ್ಲಿ ಮೈಮರೆತು ಫೋಟೋ ತೆಗೆದುಕೊಳ್ಳುವುದು ಹಾಗೂ ರೀಲ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಕಾಡಿನ ಪ್ರದೇಶದಲ್ಲಿ ಫೋಟೋ, ವಿಡಿಯೋ ಮಾಡುವಾಗ ಅಥವಾ ರೀಲ್ಸ್ ಮಾಡುವಾಗ ಅನಿರೀಕ್ಷಿತವಾಗಿ ಕೆಲವೊಂದು ಪ್ರಾಣಿಗಳು, ವಿಷ ಜಂತುಗಳು ನಾವಿರುವ ಸ್ಥಳಕ್ಕೆ ಬಂದುಬಿಡುತ್ತವೆ. ಅವು ಅನಿರೀಕ್ಷಿತವಾಗಿ ಬಂದಾಗ ಹಾನಿ ಮಾಡುವ ಸಾಧ್ಯತೆ ತುಂಬಾ ಕಡಿಮೆ ಇದ್ದರೂ, ನಾವು ಗಾಬರಿಗೊಳ್ಳುವುದರಿಂದ ನಮ್ಮ ಮೇಲೆ ದಾಳಿ ಮಾಡಿಬಿಡುತ್ತವೆ. ಆದ್ದರಿಂದ ನಾವು ಮೈಮರೆಯಬಾರದು ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಜೊತೆಗೆ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ: ಅನಸ್ತೇಶಿಯಾ ಓವರ್‌ಡೋಸ್: ದಂತ ಚಿಕಿತ್ಸೆಗೆ ಬಂದಿದ್ದ 9 ವರ್ಷದ ಬಾಲಕಿ ಸಾವು
ಸಿಂಗಾಪುರದ ಬುಕಿಟ್ ತಿಮಾ ನೇಚರ್ ರಿಸರ್ವ್‌ನಲ್ಲಿ ಪ್ರವಾಸಿಗರ ಪ್ರವಾಸದ ವೇಳೆ ಯುವತಿಯೊಬ್ಬಳಿಗೆ ಇಂತಹದ್ದೇ ಒಂದು ಅನಿರೀಕ್ಷಿತ ಘಟನೆ ಸಂಭವಿಸಿದೆ. ನೇಚರ್ ರಿಸರ್ವ್‌ನ ದಾರಿಯಲ್ಲಿ ಯುವತಿಯೊಬ್ಬಳು ಫೋಟೋ ತೆಗೆಸಿಕೊಳ್ಳಲು ಒಂದು ಸ್ಥಳದಲ್ಲಿ ನಿಂತಿದ್ದಳು, ಆಗ ಆಕೆಯ ಕಾಲುಗಳ ನಡುವೆ ವಿಷಕಾರಿ ಹಾವು ಹರಿದಾಡಿತು. ಆದರೆ, ಆಕೆಗೆ ಈ ವಿಷಯ ತಿಳಿದಿರಲಿಲ್ಲ. ಈ ಘಟನೆ ಯೇಶಿ ಡೇಮಾ ಎಂಬ ಯುವತಿಯೊಂದಿಗೆ ಸಂಭವಿಸಿದೆ. ಪಾರ್ಕ್‌ನಲ್ಲಿ ತಿರುಗಾಡುವಾಗ ಯೇಶಿ ಡೇಮಾ ಯುವತಿ ಸುಂದರ ವಾತಾವರಣದ ಹಿನ್ನೆಲೆಯಲ್ಲಿ ತನ್ನ ಫೋಟೋ ತೆಗೆದುಕೊಳ್ಳಲು ಒಂದು ಸ್ಥಳದಲ್ಲಿ ನಿಂತಳು. ಆಗ ಆಕೆಯೊಂದಿಗೆ ಇದ್ದ ವ್ಯಕ್ತಿಯೊಬ್ಬ ಆಕೆಯ ವಿಡಿಯೋ ಮಾಡಲು ಪ್ರಾರಂಭಿಸಿದನು. ಆದರೆ ಇವರಿಬ್ಬರಿಗೂ ತಿಳಿಯದಂತೆ ಹಾವು ಆ ವಿಡಿಯೋ ಫ್ರೇಮ್‌ಗೆ ಬಂದಿದೆ.
ಕಾಂಕ್ರೀಟ್ ರಸ್ತೆಯ ಬಳಿಯ ಪೊದೆಗಳಿಂದ ಎಂಟು ಅಡಿ ಉದ್ದದ ಅಪಾಯಕಾರಿ ನಾಗರಹಾವು ಹೊರಬಂದಿದೆ. ಅದು ಯೇಶಿ ಡೇಮಾ ಅವರ ಕಾಲುಗಳ ನಡುವೆ ಹರಿದಾಡಿತು. ಹತ್ತಿರದಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿ ಕ್ಯಾಮೆರಾಮನ್‌ಗೆ ಹಾವಿನ ಬಗ್ಗೆ ತಿಳಿಸಿದನು. ತಕ್ಷಣವೇ ಆತ ವಿಡಿಯೋ ಮಾಡುವುದನ್ನು ನಿಲ್ಲಿಸಿದನು. ಆದ್ದರಿಂದ ವಿಡಿಯೋದಲ್ಲಿ ಮುಂದೆ ಏನಾಯಿತು ಎಂದು ತಿಳಿದಿಲ್ಲ. ಸಮಾಧಾನಕರ ವಿಷಯವೆಂದರೆ ಯುವತಿಗೆ ಹಾವು ಕಚ್ಚಲಿಲ್ಲ. ಹಾವಿನ ಮೇಲೆ ಕಾಲಿಡದೆ ಬಚಾವಾದೆ, ಅದರಿಂದ ನನ್ನ ಪ್ರಾಣ ಉಳಿಯಿತು ಎಂದು ಯುವತಿ ನಂತರ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಈ ಹುಡುಗಿಗೆ ಮೂರು ಸೆಕೆಂಡಲ್ಲಿ ಮೂರು ದೇಶ ಟಚ್ ಮಾಡಲು ಆಗಿದ್ಹೇಗೆ?