'ವಿದ್ಯಾ ವಿನಾಯಕ', 'ಕಸ್ತೂರಿ ನಿವಾಸ', 'ನೀನಾದೆ ನಾ' ಧಾರಾವಾಹಿಗಳಲ್ಲಿ ದಿಲೀಪ್ ಶೆಟ್ಟಿ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ಡ್ಯಾನ್ಸಿಂಗ್ ಶೋನಲ್ಲಿಯೂ ಭಾಗವಹಿಸಿದ್ದರು.
ನಟಿ ಅಮೃತಾ ರಾಮಮೂರ್ತಿ ಜೊತೆಗೆ ದಿಲೀಪ್ ಶೆಟ್ಟಿ ಅವರು 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಟಿಸಿದ್ದರು. ಉದಯ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಆಗಿತ್ತು.
ಅಂದಹಾಗೆ ಈ ಸಂಭ್ರಮದಲ್ಲಿ ನಟಿ ಖುಷಿ ಶಿವು ಭಾಗವಹಿಸಿದ್ದರು. ಖುಷಿ ಶಿವು ಹಾಗೂ ದಿಲೀಪ್ ಶೆಟ್ಟಿ ಅವರು 'ನೀನಾದೆ ನಾ' ಧಾರಾವಾಹಿಯಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.
ದಿಲೀಪ್ ಶೆಟ್ಟಿ ಹೊಸ ಮನೆಯ ಪ್ರವೇಶಕ್ಕೆ ಭವ್ಯಾ ಗೌಡ, ಸಾಗರ್ ಬಿಳಿಗೌಡ, ಖುಷಿ ಶಿವು, ಅಮೃತಾ ರಾಮಮೂರ್ತಿ, ನಿಧಿ ಬಿ ಗೌಡ ಮುಂತಾದವರು ಭಾಗವಹಿಸಿದ್ದರು.
ಅಂದಹಾಗೆ 'ನೀನಾದೆ ನಾ' ಧಾರಾವಾಹಿಯ ತಂಡದವರು ಕೂಡ ಈ ಶುಭ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅಂದಹಾಗೆ ಸಾಗರ್ ಬಿಳಿಗೌಡ ಅವರ ಈ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.