ಜಾಹೀರಾತುಗಳು ತಮ್ಮ ಪ್ರಾಡಕ್ಟ್ ಅನ್ನು ಜನಪ್ರಿಯಗೊಳಿಸೋ ಜೊತೆಗೆ ಅಪರೂಪಕ್ಕೆ ಜಾಗೃತಿ ಮೂಡಿಸೋ ಕೆಲಸವನ್ನೂ ಮಾಡುತ್ತವೆ. ಸದ್ಯ ೮ಕ್ಕೆಲ್ಲ ಮಕ್ಕಳು ಪೀರೆಯೆಡ್ಸ್ ಪಡೆದರೆ ಅದನ್ನು ಸಂಭ್ರಮಿಸಿ ಅನ್ನೋ ಜಾಹೀರಾತು ಗಮನ ಸೆಳೆಯುತ್ತಿದೆ.
ಶಾರ್ವಿ ಮೂರನೇ ಕ್ಲಾಸಲ್ಲಿ ಓದುತ್ತಿರುವ ಪುಟಾಣಿ. ತಾನಾಯ್ತು, ಸ್ಕೂಲಾಯ್ತು ಹೋಂ ವರ್ಕ್ ಆಯ್ತು ಅಂತ ತನ್ನ ಪಾಡಿಗೆ ತಾನಿರುವ ಪೋರಿ. ಕ್ಲಾಸಲ್ಲಿ ಆ್ಯವರೇಜ್ ಅಂಕ ಗಳಿಸೋ ಈ ಪುಟಾಣಿಗೆ ಹೆಚ್ಚೇನೂ ಫ್ರೆಂಡ್ಸ್ ಇಲ್ಲ. ಆ ಬಗ್ಗೆ ಅಂಥಾ ಬೇಜಾರೂ ಇಲ್ಲ. ಆದರೆ ಈಕೆಗೆ ನಿಜಕ್ಕೂ ಆತಂಕವಾಗಿದ್ದು ಎರಡು ದಿನಗಳ ಕೆಳಗೆ ತಾನು ಟಾಯ್ಲೆಟ್‌ಗೆ ಹೋದಾಗ ಕಂಡ ದೃಶ್ಯ. ಗುಪ್ತಾಂಗದಿಂದ ರಕ್ತ ಬರುತ್ತಿರುವುದು ಕಂಡು ಏನೂ ತೋಚದೇ ಟಾಯ್ಲೆಟ್‌ನಲ್ಲಿ ಕೂತವಳಿಗೆ ಹೊರಗಿಂದ ಮಕ್ಕಳು ಜೋರು ಜೋರಾಗಿ ನಾಕ್ ಮಾಡ್ತಿರೋದು ಕಂಡು ಭಯ, ಆತಂಕ. ಎರಡು ಕ್ಲಾಸ್‌ಗಳ ನಂತರ ಕೊಡೋ ಹತ್ತು ನಿಮಿಷದ ಬ್ರೇಕ್‌ನಲ್ಲಿ ಟಾಯ್ಲೆಟ್ ಹೋಗಿ ವಾಪಾಸ್ ಕ್ಲಾಸಿಗೆ ಓಡಬೇಕು. ಅಂಥಾದ್ರಲ್ಲಿ ಒಬ್ಬೊಬ್ಬರು ಜಾಸ್ತಿ ಹೊತ್ತು ಟಾಯ್ಲೆಟ್‌ನಲ್ಲಿ ಕೂತು ಬಿಟ್ಟರೆ ಇತರರಿಗೆ ಕಷ್ಟ ಆಗಿಯೇ ಆಗುತ್ತದೆ. ಹೀಗಿರುವಾಗ ನಾಕ್ ಮಾಡೋದು ಸಹಜ. ಆದರೆ ಒಳಗೆ ಹರಿಯುತ್ತಲೇ ಇರುವ ರಕ್ತ ಕಂಡು ಕಂಗಾಲಾದ ಮಗುವಿನ ಸ್ಥಿತಿ ಹೇಗಿರಬೇಕು?
ಇಂಥದ್ದೊಂದು ಸ್ಥಿತಿಯನ್ನು ಬಹಳ ಮನಮುಟ್ಟುವ ಹಾಗೆ ಪೀರಿಯೆಡ್ಸ್ ಪ್ಯಾಡ್ ಕಂಪನಿಯೊಂದು (Napkin Company) ತೋರಿಸಿಕೊಟ್ಟಿದೆ. ವಿಸ್ಪರ್ ಮೊದಲಿಂದಲೂ ಅಂದರೆ ದಶಕಗಳಿಂದಲೂ ಇಂಥಾ ಪೀರಿಯೆಡ್ಸ್ ಗೈಡ್‌ಲೆನ್ಸ್ ನೀಡುತ್ತಲೇ ಬಂದಿದೆ. ತನ್ ಪ್ರಾಡಕ್ಟ್ ಅನ್ನು ಜನಪ್ರಿಯಗೊಳಿಸೋ ಜೊತೆಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಇದೀಗ ಬಾಲ್ಯದಲ್ಲೇ ಮೈ ನೆರೆಯುವ ಪುಟಾಣಿಗಳ ಕಷ್ಟವನ್ನು ಮನ ಮುಟ್ಟುವ ಹಾಗೆ ಜಾಹೀರಾತಿನ ಮೂಲಕ ತೋರಿಸಿದೆ. ಇದರಲ್ಲಿ 8 ವರ್ಷದ ಪುಟಾಣಿಯೊಬ್ಬಳು ತನಗಾಗಿರುವ ಪೀರೆಯೆಡ್ಸ್ ಬಗ್ಗೆ ಏನೂ ಅರಿಯದೇ ಕಂಗಾಲಾಗುವ ಸಂದರ್ಭವಿದೆ. ಜೊತೆಗಿರುವ ಮಕ್ಕಳಿಗಾಗಲೀ ಈ ಹುಡುಗಿಗಾಗಲೀ ಇಂಥಾ ಬೆಳವಣಿಗೆ ಬಗ್ಗೆ ಗೊತ್ತೇ ಇಲ್ಲ. ಅವರು ಅವರದೇ ರೀತಿ ಅರ್ಥೈಸಿಕೊಳ್ಳುತ್ತಾರೆ. ಮಕ್ಕಳಿಗಗೆ ಈ ವಯಸ್ಸಲ್ಲಿ ಪೀರಿಯೆಡ್ಸ್ ಆಗಬಹುದು ಅನ್ನೋ ಕಲ್ಪನೆಯೂ ಇಲ್ಲದ ಪೋಷಕರೂ ಈ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಿರುವ ಸಾಧ್ಯತೆ ಕಡಿಮೆ.
undefined
ಮಗಳಿಗಾಗಿ ದಿನಕ್ಕೆ 4 ಪುಸ್ತಕ ಓದೋ ಆಲಿಯಾ: ಬುಕ್ ತಬ್ಬಿಕೊಂಡೆ ನಿದ್ರೆಗೆ ಜಾರುವ ರಾಹಾ
ಆದರೆ ಇತ್ತೀಚಿನ ಸರ್ವೆ ಪ್ರಕಾರ ಈಚೀಚೆಗೆ ಪೀರೆಯೆಡ್ಸ್ ಮೊದಲಿಗಿಂತ ಬೇಗ ಅಂದರೆ ಎಳೆಯ ಹರೆಯದಲ್ಲೇ ಆಗುತ್ತಿದೆ. ಅದಕ್ಕೆ ಈಗಿನ ಮಕ್ಕಳು ಬೆಳೆಯೋ ಲೈಫ್‌ಸ್ಟೈಲ್ (lifestyle), ತಿನ್ನೋ ಆಹಾರ ಕಾರಣ. ಹೀಗಾಗಿ ಇನ್ನೂ ಸರಿ ಡ್ರೆಸ್ ಹಾಕಿಕೊಳ್ಳಲೂ ಸಾಧ್ಯವಾಗದ ಸಣ್ಣ ಹುಡುಗಿಗೇ ಪೀರಿಯೆಡ್ಸ್ ಆಗಬಹುದು. ಇದು ಸಹಜ. ಇದರಲ್ಲಿ ಗಾಬರಿ ಬೀಳುವಂಥಾದ್ದಾಗಲೀ, ಮಗುವಿನ ಕಷ್ಟ ನೆನೆದು ಸಂಕಟ ಪಡುವುದಾಗಲೀ ಬೇಡ. ಬದಲಾಗಿ ಇದು ಆರೋಗ್ಯದ ಲಕ್ಷಣ ಎಂದು ಸಂಭ್ರಮಿಸೋಣ ಎಂದು ಈ ಜಾಹೀರಾತು ಹೇಳುತ್ತೆ. ಈ ಬಗ್ಗೆ ಶಾಲೆಯಲ್ಲಿರುವ ಟೀಚರ್ಸ್ ಹೇಗೆ ತಿಳಿವಳಿಕೆ ಮೂಡಿಸಬಹುದು, ಗಂಡು, ಹೆಣ್ಣು ಎಂದು ನೋಡದೇ ಎಲ್ಲ ಮಕ್ಕಳಿಗೂ ಈ ಬಗ್ಗೆ ಅರಿವನ್ನು ಹೇಗೆ ಮೂಡಿಸಬಹದು ಎಂದು ಈ ಜಾಹೀರಾತು ಹೇಳುತ್ತದೆ.
ಸೋ ನಿಮ್ಮ ಮನೆಯಲ್ಲೂ ಚಿಕ್ಕ ಮಕ್ಕಳಿದ್ದರೆ ಅವರಿಗೆ ಈ ಬಗ್ಗೆ ಅರಿವು ಮೂಡಿಸೋದು ಅವಶ್ಯಕ. ಈಗ ಎಲ್ಲ ಕಡೆ ಬಾಲ್ಯದಲ್ಲೇ ಮಕ್ಕಳು ಮೈನೆರೆಯೋದು ಸಾಮಾನ್ಯವಾಗಿ ಬಿಟ್ಟಿದೆ. ಇಂಥಾ ಟೈಮಲ್ಲಿ ಮಕ್ಕಳಿಗೆ ಈ ಬಗ್ಗೆ ತಿಳಿವಳಿಕೆ ಇದ್ದರೆ ಅವರು ಗಾಬರಿ ಆಗಲ್ಲ. ಪೀರಿಯೆಡ್ಸ್ ಗೆ (periods) ಹೆದರಿ ಶಾಲೆಗೆ ಹೋಗೋದ್ರಿಂದ ವಂಚಿತರಾಗಲ್ಲ. ಬದಲಿಗೆ ಇದೊಂದು ಆರೋಗ್ಯದ ಲಕ್ಷಣ ಎಂದು ಸಂಭ್ರಮಿಸೋದನ್ನು ಕಲಿತರೆ ಎಲ್ಲ ಮಕ್ಕಳು ಖುಷಿಯಿಂದ 'ಹ್ಯಾಪಿ ಬ್ಲೀಡಿಂಗ್' (happy bleeding) ಅನ್ನು ಅನುಭವಿಸಬಹುದು. ಸದ್ಯ ಹೀಗೆಲ್ಲ ತಿಳಿವಳಿಕೆ ಮೂಡಿಸೋ ಜಾಹೀರಾತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅರೆರೆ.. ಇದೇನು ಹೊಸ ಟ್ವಿಸ್ಟ್? ಗೌತಮ್- ಭೂಮಿಕಾ ಮನೆಯಲ್ಲಿ ಸೀತಾ-ಸಿಹಿ!