ಆಸ್ಟ್ರೇಲಿಯಾದ ಹೋಟೆಲುಗಳಲ್ಲಿ ವಿದ್ಯುತ್ ಸಲಕರಣೆಗಳನ್ನು ಅಲ್ಲಿ ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು. ಒಂದೊಮ್ಮೆ ಫೈರ್ ಅಲಾರಾಂ ಮೊಳಗಿದರೆ ಅದಕ್ಕೆ ನಿಮ್ಮಂದಿಲೇ ಹಣ ವಸೂಲಿ ಮಾಡಲಾಗುತ್ತದೆ, ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ.
ಐಷಾರಾಮಿ ಹೋಟೆಲುಗಳು ತಮ್ಮ ಗ್ರಾಹಕರಿಗೆ ಸೋಪ್, ಶಾಂಪೂ, ತೈಲ, ಹ್ಯಾಂಗರ್, ಒರೆಸಿಕೊಳ್ಳುವ ಬಟ್ಟೆ ಮುಂತಾದ ವಸ್ತುಗಳನ್ನು ನೀಡುತ್ತವೆ. ಅವುಗಳನ್ನು ಗ್ರಾಹಕರು ಮನೆಗೆ ತರುವುದೂ ಇದೆ. ಐಷಾರಾಮಿ ಹೋಟೆಲುಗಳಲ್ಲಿ ಉಳಿಯುವುದು ಉತ್ತಮ ಅನುಭವ ನೀಡುತ್ತದೆ. ಆದರೆ, ಕೆಲವೊಮ್ಮೆ ಅದು ಬಲು ದುಬಾರಿಯಾಗಿ ಪರಿಣಮಿಸಬಹುದು ಎನ್ನುವುದಕ್ಕೆ ಆಸ್ಟ್ರೇಲಿಯಾದ ಕೆಲ ಹೋಟೆಲುಗಳು ಸಾಕ್ಷಿಯಾಗಿವೆ. ಮೊದಲೇ ಅಲ್ಲಿ ಒಂದು ರಾತ್ರಿಗೆ ಹತ್ತಾರು ಸಾವಿರ ರೂಪಾಯಿಗಳಿರುತ್ತವೆ. ಮೇಲಿಂದ ಸಣ್ಣದೊಂದು ಅವಘಡವಾದರೂ ಲಕ್ಷಾಂತರ ರೂಪಾಯಿ ತುಂಬುವ ಅದೃಷ್ಟ ಗ್ರಾಹಕರದ್ದಾಗುತ್ತದೆ! ಗ್ರಾಹಕರಿಂದ ದಂಡ ವಸೂಲಿ ಮಾಡುವ ಪರಿಪಾಠವನ್ನು ಆಸ್ಟ್ರೇಲಿಯಾದಲ್ಲಿ ನೋಡಬಹುದು. ಇತ್ತೀಚೆಗೆ ಮಹಿಳೆಯೊಬ್ಬರಿಗೆ ಆಸ್ಟ್ರೇಲಿಯಾದ ಪರ್ತ್ ನ ಹೋಟೆಲ್ ಒಂದರಲ್ಲಿ ಆದ ಅನುಭವ ಈಗ ಸಾಕಷ್ಟು ಸುದ್ದಿಯಲ್ಲಿದೆ.
ಸಂಗೀತ ಕಾರ್ಯಕ್ರಮಕ್ಕಾಗಿ ಪರ್ತ್ ಗೆ ಭೇಟಿ (Visit) ನೀಡಿದ್ದ ಕೆಲ್ಲಿ ಎನ್ನುವ ಮಹಿಳೆಯೊಬ್ಬರು ಹೋಟೆಲ್ (Hotel) ಒಂದರಲ್ಲಿ ತಂಗಿದ್ದರು. ಆಕೆ ಅಂದು ಹೋಟೆಲ್ ನಲ್ಲಿ ಸುಖವಾಗಿ ತಲೆ ಸ್ನಾನ ಮಾಡಿ ಬಂದು ಕೂದಲನ್ನು ಒಣಗಿಸಿಕೊಳ್ಳಲು ತಮ್ಮ ಹೇರ್ ಡ್ರೈಯರ್ (Hair Dryer) ಅನ್ನು ಸ್ವಿಚ್ ಬೋರ್ಡ್ ಗೆ ಹಾಕಿದ್ದೇ ತಡ, ಫೈರ್ ಅಲಾರಾಂ (Fire Alarm) ಬಾರಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಫೈರ್ ಸಿಬ್ಬಂದಿ ಬಂದು ಹೋಟೆಲ್ ಹಾಗೂ ಆಕೆ ತಂಗಿದ್ದ ರೂಮಿನಲ್ಲಿ ಪರಿಶೀಲನೆ ನಡೆಸಿದರು. ಬೆಂಕಿ ಎಲ್ಲೂ ಹೊತ್ತಿಕೊಂಡಿರಲಿಲ್ಲ, ಯಾವುದೇ ಸಮಸ್ಯೆಯೂ ಆಗಿರಲಿಲ್ಲ. ಆದರೂ ಅಲಾರಾಂ ಕೂಗಿಕೊಂಡಿತ್ತು. ಹೀಗಾಗಿ, ಫೈರ್ ತಂಡವೂ ತಕ್ಷಣವೇ ಅಲ್ಲಿಂದ ತೆರಳಿತು.
2, 4 ಅಡಿ ಜಾಗದಲ್ಲೂ ಕಟ್ಟಡ ಕಟ್ಟೋಕೆ ಸಾಧ್ಯ: ಈ ಇಂಜಿನಿಯರ್ ಕೈಚಳಕಕ್ಕೆ ಬೆರಗಾದ್ರು ನೆಟ್ಟಿಗರು!
undefined
ಕೆಲ್ಲಿ ಮಾರನೇ ದಿನ ಹೋಟೆಲ್ ನಿಂದ ಚೆಕ್ ಔಟ್ (Checkout) ಮಾಡಿದರು. ಆ ಸಮಯದಲ್ಲಿ ಅವರ ಖಾತೆಯಿಂದ ಹೋಟೆಲ್ ಸುಮಾರು 1 ಲಕ್ಷದ 10 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕಡಿತ ಮಾಡಿತ್ತು. ಇದರ ಬಗ್ಗೆ ಹೋಟೆಲ್ ಸಿಬ್ಬಂದಿಯಲ್ಲಿ ಕೇಳಿದಾಗ ಅವರು ನೀಡಿದ ಉತ್ತರ ಕೆಲ್ಲಿಯನ್ನು ದಂಗುಬಡಿಸಿತು. ಹೇರ್ ಡ್ರೈಯರ್ ನಿಂದಾಗಿ ಫೈರ್ ಅಲಾರಾಂ ಮೊಳಗಿದ್ದುದು ಹಾಗೂ ಫೈರ್ ಸಿಬ್ಬಂದಿ ಅಲ್ಲಿಗೆ ಬಂದಿದ್ದರಿಂದ ದಂಡ (Fine) ವಿಧಿಸಲಾಗಿತ್ತು!
ತುರ್ತು ಅಲಾರಾಂ ಬಾರಿಸಿದ ಪರಿಣಾಮ
ಕೆಲ್ಲಿ ಅವರು ನೀಡಿದ ಮಾಹಿತಿ ಪ್ರಕಾರ, ಆ ಹೋಟೆಲ್ ನಲ್ಲಿ ಒಂದು ರಾತ್ರಿ ತಂಗಲು 240 ಡಾಲರ್ ದರವಿದೆ. ರೂಪಾಯಿಯಲ್ಲಿ 16 ಸಾವಿರ. ಆದರೆ, ತುರ್ತು (Emergency) ಹಾಗೂ ಫೈರ್ ಅಲಾರಾಂ ಮೊಳಗಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಡಿಪಾರ್ಟ್ ಮೆಂಟ್ ಆಫ್ ಫೈರ್ ಆಂಡ್ ಎಮರ್ಜೆನ್ಸಿ ಸರ್ವೀಸಸ್ ಅವರ ಮೇಲೆ 1337 ಡಾಲರ್ ದಂಡ ವಿಧಿಸಿತ್ತು. ಅಷ್ಟೇ ಅಲ್ಲ, ಹೋಟೆಲ್ ಕೂಡ ತನ್ನ ಕಡೆಯಿಂದ 63 ಡಾಲರ್ ಹಣವನ್ನು ಹೆಚ್ಚುವರಿಯಾಗಿ ಪಡೆದಿತ್ತು! ರಿಸೆಪ್ಷನಿಸ್ಟ್ ಮೂಲಕ ತಿಳಿದು ಬಂದ ಸಂಗತಿಯೆಂದರೆ, ಹೋಟೆಲ್ ನಿಯಮಗಳಲ್ಲಿ (Rules) ಈ ಅಂಶವೂ ಸೇರಿತ್ತು! ಅದನ್ನವರು ಗಮನಿಸಿರಲಿಲ್ಲ. ಇದಕ್ಕೆ ಕೆಲ್ಲಿ “ಒಂದೊಮ್ಮೆ ಟೋಸ್ಟ್ ಮಾಡುವ ಸಮಯದಲ್ಲಿ ಫೈರ್ ಅಲಾರಾಂ ಆದರೆ, ಅದನ್ನೂ ಸಹ ಗ್ರಾಹಕರಿಗೆ (Customers) ವರ್ಗಾಯಿಸುತ್ತಾರೆಯೇ?’ ಎಂದು ಪ್ರಶ್ನಿಸಿ, ವಾದ ಮಾಡಿದ ಬಳಿಕ ಹೆಚ್ಚುವರಿಯಾಗಿ ವಿಧಿಸಿದ್ದ ಶುಲ್ಕವನ್ನು ಹೋಟೆಲ್ ರಿಫಂಡ್ (Refund) ಮಾಡಿದೆ.
ಶಾಲಾ ವಾರ್ಷಿಕೋತ್ಸವದಲ್ಲಿ ಮಗಳು ಆರಾಧ್ಯ ನಟನೆಗೆ ಅಮ್ಮ ಐಶ್ವರ್ಯಾ ರೈ ರಿಯಾಕ್ಷನ್ ಹೇಗಿತ್ತು: ವೀಡಿಯೋ ವೈರಲ್
ನಿಯಮವೇ ಇದೆ
ಆಸ್ಟ್ರೇಲಿಯಾದಲ್ಲಿ 2015ರಿಂದ ಪೊಳ್ಳು ಅಲಾರಾಂ ಬಾರಿಸಿದರೆ ದಂಡ ವಿಧಿಸಲಾಗುತ್ತಿದೆ. ಅದಕ್ಕೂ ಮುನ್ನ ಪೊಳ್ಳು ಅಲಾರಾಂಗಳಿಂದ ಫೈರ್ ಇಲಾಖೆಗೆ 80 ಲಕ್ಷಗಳಷ್ಟು ಹೊರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಇಲಾಖೆ (Department) ಈ ಕ್ರಮ ಕೈಗೊಂಡಿದೆ. ಮೊದಲ ಮೂರು ಪೊಳ್ಳು ಅಲಾರಾಂಗಳಿಗೆ ಯಾವುದೇ ದಂಡ ವಿಧಿಸುವುದಿಲ್ಲ. 4ನೇ ಅಲಾರಾಂಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಹೋಟೆಲ್, ಮನೆ, ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ. ಹೋಟೆಲುಗಳು ಆ ದಂಡವನ್ನು ಗ್ರಾಹಕರಿಂದಲೇ ಭರಿಸುತ್ತವೆ. ಆ 4ನೇ ಅಲಾರಾಂಗೆ ನೀವು ಕಾರಣವಾಗಿದ್ದರೆ ನಿಮ್ಮ ಗ್ರಹಚಾರ ಕೆಟ್ಟಿದೆ ಎಂದರ್ಥ. ಏಕೆಂದರೆ, ಆ ದಂಡವನ್ನು ನೀವೇ ಭರಿಸಬೇಕು.