ಬೆಳಗಾವಿ: 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಸಿಬಿ ಪಾರ್ಟಿ ಮೂಲಕ ಚುನಾವಣೆಗೆ ಸ್ಪರ್ಧಿಸಿ 143 ಸ್ಥಾನಗಳ ಬಹುಮತದೊಂದಿಗೆ ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿಯ ಭೋಜರಾಜ ಕ್ರೀಡಾಂಗಣದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ರಾಣಾ ಪ್ರತಾಪ್ ಸಿಂಹರಂತಹ ಆಡಳಿತ ಅನಿವಾರ್ಯವಾಗಿದೆ. ಇರುವ ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ನಾನು ಇರುವ ಸತ್ಯ ಹೇಳುತ್ತೇನೆ. ಹೀಗಾಗಿ ನಾನು ವಿವಾದಾತ್ಮಕ ಹೇಳಿಕೆ ನೀಡುತ್ತೇನೆಂದು ಬಿಜೆಪಿಯವರು ಉಚ್ಛಾಟನೆ ಮಾಡಿದ್ದಾರೆ.

10:01 AM (IST) Dec 15
ರಾಜ್ಯದಲ್ಲಿ ಬೆಂಗಳೂರಿನಿಂದಾಚೆಗೆ ಮಾದಕ ದ್ರವ್ಯದ ಮಾರಕ ಜಾಲ ದೊಡ್ಡಮಟ್ಟದಲ್ಲಿ ವಿಸ್ತರಿಸಿರುವುದು ಮಂಗಳೂರಿನಲ್ಲಿ. ಶಿಕ್ಷಣಕ್ಕೆ ಹೆಸರಾಗಿರುವ ಮಂಗಳೂರು, ಇನ್ನೊಂದು ಮಗ್ಗುಲಲ್ಲಿ ಡ್ರಗ್ಸ್ ಮಾರುಕಟ್ಟೆಯಾಗಿಯೂ ಕುಖ್ಯಾತಿ ಗಳಿಸಿದೆ!.
09:54 AM (IST) Dec 15
ಸಾಂಪ್ರದಾಯಿಕ ಶವ ಪರೀಕ್ಷೆ ಮತ್ತು ವಿವರವಾದ ಹಿಸ್ಟೋ ಪಾಥೋಲಾಜಿಕಲ್ ಪರೀಕ್ಷೆಗಳನ್ನು ಬಳಸಿಕೊಂಡು 18 ರಿಂದ 45 ವರ್ಷ ವಯಸ್ಸಿನ ಜನರ ಹಠಾತ್ ಸಾವಿನ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
09:49 AM (IST) Dec 15
ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಒತ್ತು ನೀಡುವುದು ಹಾಗೂ ರೈತರನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಆರಂಭಿಸಲಾದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ (ಐಟಿಎಫ್) ಆರೇ ವರ್ಷಕ್ಕೆ ಸ್ಥಗಿತಗೊಂಡಿದೆ.
09:40 AM (IST) Dec 15
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ.
09:11 AM (IST) Dec 15
Delhi AQI: Delhi Pollution Update: ವಾಯುಗುಣಮಟ್ಟ ಸೂಚ್ಯಂಕವು 459ಕ್ಕೆ ಕುಸಿದಿದೆ. ದಿಲ್ಲಿಯ ವಿವಿಧ ಪ್ರದೇಶಗಳ ಪೈಕಿ ಬವಾನಾ ಎಂಬಲ್ಲಿ 497ಕ್ಕೆ ಕುಸಿತ ಕಂಡಿದೆ.ಬವಾನಾದಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕವು 497ಕ್ಕೆ ಕುಸಿದು ಅತ್ಯಂತ ಗಂಭೀರ ಹಂತಕ್ಕೆ ತಲುಪಿತ್ತು
09:01 AM (IST) Dec 15
ಕಾಂಗ್ರೆಸ್‌ನ ಕಟ್ಟಾಳು ಎನಿಸಿಕೊಂಡಿರುವ ದಕ್ಷಿಣದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ಕಲ್ಲಪ್ಪ ದಂಪತಿಯ ಪುತ್ರರಾಗಿ 1931ರ ಜೂ.16ರಂದು ದಾವಣಗೆರೆಯಲ್ಲಿ ಜನಿಸಿದರು.
08:24 AM (IST) Dec 15