ಬೆಂಗಳೂರು (ಆ.9): ಮತಗಳ್ಳತನ ಆರೋಪ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿ ನಡೆಸಿದೆ. ಈ ವೇಳೆ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗದ ಕಚೇರಿಗೆ ಹೋಗಿ ಪ್ರಮಾಣ ಮಾಡಲು ವಿಪಕ್ಷ ನಾಯಕ ನಕಾರ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿಯೇ ನಾನು ಪ್ರಮಾಣ ಮಾಡಿದ್ದೇನೆ. ಈಗ ಯಾಕೆ ಪ್ರಮಾಣ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ಸಂವಿಧಾನದ ಮೇಲೆ ದಾಳಿ ಮಾಡಿದರೆ, ನಿಮ್ಮ ಮೇಲೆಯೇ ದಾಳಿ ಮಾಡಿದಂತೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್

11:56 PM (IST) Aug 09
ಧರ್ಮಸ್ಥಳದ ಘನತೆಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳ ಹಿಂದಿರುವವರನ್ನು ಬಹಿರಂಗಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
10:49 PM (IST) Aug 09
ಪೆಹಲ್ಗಾಂ ಉಗ್ರ ದಾಳಿಯಿಂದ ಭಾರತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಪಾಕಿಸ್ತಾನ ಪ್ರತಿಯಾಗಿ ಭಾರತದ ವಿಮಾನಗಳಿಗೆ ವಾಯುಪ್ರದೇಶ ನಿರಾಕರಿಸಿತ್ತು. ಇದರಿಂದ ಪಾಕಿಸ್ತಾನ ಕೇವಲ 2 ತಿಂಗಳಲ್ಲಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
10:20 PM (IST) Aug 09
10:03 PM (IST) Aug 09
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ತೆರಿಗೆ ವಿಧಿಸಿದ ಬೆನ್ನಲ್ಲೇ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸ್ಫೋಟಗೊಂಡಿದೆ. ಈ ಕುರಿತು ಯುಎಸ್ ಸಿಡಿಸಿ ಮಾಹಿತಿ ನೀಡಿದೆ.
09:22 PM (IST) Aug 09
ನಿಸ್ಸಾನ್ ಬ್ರ್ಯಾಂಡ್‌ನ ಅತೀ ಕಡಿಮೆ ಬೆಲೆಯ, ಗರಿಷ್ಠು ಸುರಕ್ಷತೆಯ ಬೇಡಿಕೆಯ ಕಾರು ಮ್ಯಾಗ್ನೈಟ್ ಇದೀಗ ಸ್ಪಷಲ್ ಎಡಿಶನ್ ರೂಪದಲ್ಲಿ ಬಿಡುಗಡೆಯಾಗಿದೆ. ಕುರೊ ಸ್ಪೆಷಲ್ ಎಡಿಶನ್ ಮ್ಯಾಗ್ನೈಟ್ ಕಾರು ಕೇವಲ 11,000 ರೂಗೆ ಬುಕಿಂಗ್ ಮಾಡಿಕೊಳ್ಳಬಹುದು.
09:05 PM (IST) Aug 09
08:54 PM (IST) Aug 09
ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ ಅಕಾಶ್ ದೀಪ್ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ಕಾರು ಯಾವುದು? ಇದರ ಬೆಲೆ ಎಷ್ಟು?
07:48 PM (IST) Aug 09
07:46 PM (IST) Aug 09
ಕಾರು ಖರೀದಿಸಬೇಕು, ಕಾರಿನಲ್ಲಿ ಓಡಾಡಬೇಕು ಅನ್ನೋದು ಬಹುತೇಕರ ಆಸೆ. ಕಾಸಿಲ್ವಮ್ಮ, ಕಾರು ಹೇಗೆ ಖರೀದಿ ಎಂದು ಚಿಂತೆ ಮಾಡಬೇಕಿಲ್ಲ. ಈ 10 ಮಾರ್ಗದ ಮೂಲಕ ಹಣ ಉಳಿತಾಯ ಮಾಡಿ ಎಲ್ಲರೂ ಕಾರು ಖರೀದಿಸಲು ಸಾಧ್ಯವಿದೆ.
06:54 PM (IST) Aug 09
ಧರ್ಮಸ್ಥಳದ ರತ್ನಗಿರಿ ಬೆಟ್ಟದ ಕಾರ್ಯಾಚರಣೆ ಅಂತ್ಯಗೊಂಡಿದೆ. 16 ಹಾಗೂ 16ಎ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇಂದಿನ ಕಾರ್ಯಚಾರಣೆ ಹೈಲೈಟ್ಸ್ ಏನು?
06:40 PM (IST) Aug 09
06:25 PM (IST) Aug 09
ಧರ್ಮಸ್ಥಳ ರತ್ನಗಿರಿ ಬೆಟ್ಟದ 16ರ ಶೋಧ ಕಾರ್ಯ ಅಂತ್ಯಗೊಂಡಿದೆ. ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆದರೆ ಸುಜಾತ್ ಭಟ್ ಪರ ವಕೀಲ ಹೊಸ ಆಕ್ಷೇಪ ತೆಗೆದಿದ್ದಾರೆ. ಸಾಕ್ಷಿ ಸಿಗಬಾರದು ಎಂದು ಒಳಸಂಚು ನಡೆದಿದೆ ಎಂದು ವಕೀಲ ಆರೋಪಿಸಿದ್ದಾರೆ. ವಕೀಲರ ಆರೋಪವೇನು?
05:50 PM (IST) Aug 09
ಆಗಸ್ಟ್ 10 ರಂದು ನಂದಿ ಬೆಟ್ಟದಲ್ಲಿ ‘ನಂದಿ ಹಿಲ್ಸ್ ಮಾನ್ಸೂನ್ ರನ್’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ರವರೆಗೆ ಖಾಸಗಿ ವಾಹನಗಳ ಸಂಚಾರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
05:40 PM (IST) Aug 09
ಪ್ರತಿ ದಿನ ಆನ್‌ಲೈನ್ ವಂಚನೆಗಳಿಂದ ಹಣ ಮಾತ್ರವಲ್ಲ, ಮಾನಸಿಕ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸೈಬರ್ ಅಪರಾಧಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಆನ್‌ಲೈನ್ ವಂಚನೆ, ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
05:40 PM (IST) Aug 09
05:31 PM (IST) Aug 09
Dr Vishnuvardhan Memorial: ಡಾ ವಿಷ್ಣುವರ್ಧನ್ ಸಮಾಧಿ ವಿಚಾರವಾಗಿ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಈ ಘಟನೆಯನ್ನು ಖಂಡಿಸಿದ್ದಲ್ಲದೆ, ನಾನು ಕೋರ್ಟ್‌ಗೆ ಬರಲು ರೆಡಿಯಿದ್ದೇನೆ ಎಂದಿದ್ದಾರೆ.
05:29 PM (IST) Aug 09
ಸಸ್ಯಾಹಾರಿಗಳಾಗಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾವಿನ ಖಾದ್ಯ ಸವಿದಿದ್ದಾರೆ. ಅಸಲಿಗೆ ಏನಿದು?
05:26 PM (IST) Aug 09
05:05 PM (IST) Aug 09
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳದ್ದೇ ಅಂತಿಮ ತೀರ್ಮಾನ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
04:42 PM (IST) Aug 09
ನಟ ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಾ ಇದ್ದಾನಾ? ಈ ಕುರಿತು ನಟ ಹೇಳಿದ್ದೇನು?
04:28 PM (IST) Aug 09
ಐಸಿಐಸಿ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಹೊಸ ಖಾತೆದಾರರ ಕನಿಷ್ಟ ಬ್ಯಾಲೆನ್ಸ್ ಬರೋಬ್ಬರಿ 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ.
04:22 PM (IST) Aug 09
03:57 PM (IST) Aug 09
03:42 PM (IST) Aug 09
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹಳದಿ ಮೆಟ್ರೋ ಉದ್ಘಾಟನೆಯನ್ನು ನಾಳೆ ಮಾಡಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್‌ಗೆ ಆಹ್ವಾನ ನೀಡಿಲ್ಲ, ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆಹ್ವಾನ ನೀಡಲಾಗಿದ್ದು ಇದೀಗ ಬಿಜೆಪಿಯಲ್ಲೇ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
03:26 PM (IST) Aug 09
03:04 PM (IST) Aug 09
ಸಾಲು ಸಾಲು ಹಬ್ಬಗಳ ಋತು ಆರಂಭಗೊಳ್ಳುತ್ತಿದೆ. ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಬಹುತೇಕರಿಕಾಗಿ ಭಾರತೀಯ ರೈಲ್ವೇ ಇದೀಗ ಗುಡ್ ನ್ಯೂಸ್ ನೀಡಿದೆ. ಹಬ್ಬದ ಸೀಸನ್‌ಗೆ ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆಗೆ ಟಿಕೆಟ್ ಬುಕಿಂಗ್‌ನಲ್ಲಿ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿದೆ.
02:53 PM (IST) Aug 09
ಡಾ. ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ನಟ ಧ್ರುವ ಸರ್ಜಾ ಅವರು ಅಭಿಮಾನಿಗಳ ಪರ ನಿಂತಿದ್ದು, 'ಸಾಧಕನಿಗೆ ಈ ಅಪಮಾನ ಸರಿಯಲ್ಲ' ಎಂದು ಹೇಳಿದ್ದಾರೆ.
01:42 PM (IST) Aug 09
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಿಗೂಢ ಮುಸುಕುದಾರಿಯೊಬ್ಬರ ಮಾರ್ಗದರ್ಶನದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಪಾಟ್ ನಂ. 16 , ಮಾಧ್ಯಮಗಳಿಂದ ಗೌಪ್ಯತೆ ಕಾಪಾಡಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.
01:05 PM (IST) Aug 09
12:50 PM (IST) Aug 09
12:43 PM (IST) Aug 09
ಅಮೃತಧಾರೆ ಸೀರಿಯಲ್ನಲ್ಲಿ ಭಾಗ್ಯಮ್ಮನ ಪಾತ್ರ ಮಾಡುತ್ತಿರೋ ನಟಿ ಚಿತ್ಕಳಾ ಬಿರಾದಾರ್ ಅವರು ಒಂದು ಒಟಗನ್ನು ಕೇಳಿದ್ದಾರೆ. ಅದಕ್ಕೆ ನೀವು ಉತ್ತರಿಸಬಲ್ಲಿರಾ?
12:37 PM (IST) Aug 09
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೊಸ ಸಾಕ್ಷಿದಾರರು ಎಸ್ಐಟಿಗೆ ದೂರು ನೀಡಿದ್ದಾರೆ. ಮುಸುಕುಧಾರಿ ವ್ಯಕ್ತಿಯೊಬ್ಬ ರಹಸ್ಯವಾಗಿ ಶವಗಳನ್ನು ಹೂತಿಟ್ಟಿರುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.
12:30 PM (IST) Aug 09
12:14 PM (IST) Aug 09
ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸುತ್ತಿರೋ ಸು ಫ್ರಂ ಸೋಗೆ ನಿಜವಾಗಿ ಖರ್ಚು ಆಗಿದ್ದೆಷ್ಟು? ಚಿತ್ರದ ಪಾರ್ಟ್-2 ಬರುತ್ತಿದ್ಯಾ? ನಟ ರಾಜ್ ಬಿ.ಶೆಟ್ಟಿ ಹೇಳಿದ್ದೇನು?
12:09 PM (IST) Aug 09
ಸೋಲದೇವನಹಳ್ಳಿಯ ಚಿಕ್ಕಬಾಣಾವರದ ಬಾರ್ ಬಳಿ ನಡೆದ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 27 ವರ್ಷದ ರೌಡಿಶೀಟರ್ ಪ್ರತಾಪ್‌ನನ್ನು ಹತ್ಯೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
11:52 AM (IST) Aug 09
ಕಾರವಾರ ತಾಲೂಕಿನಲ್ಲಿರುವ ಕಾವೇರಿ ಆಗ್ರೋ ಕಂಪನಿ ಕಟ್ಟಿ ಬೆಳೆಸುತ್ತಿರುವ ಸುದೇಶ್ ಕೊಯ್ರ ನಾಯಕ್ ಈ ಕತೆಯ ನಾಯಕ. ಸುದೇಶ್ ಕೊಯ್ರ ನಾಯಕ್, ಅನೇಕ ಔಷಧ ಕಂಪನಿಗಳಲ್ಲಿ 13 ವರ್ಷ ಕೆಲಸ ಮಾಡಿದ್ರು.
11:44 AM (IST) Aug 09
11:36 AM (IST) Aug 09
11:03 AM (IST) Aug 09
ಎಸ್ಐಟಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆ ಅಥವಾ ಮೇಲ್ಮಟ್ಟದ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್) 2023ರ ಕಲಂ 2 (1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿ ಎಂದು ಘೋಷಿಸಲಾಗಿದೆ.
10:47 AM (IST) Aug 09
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ ಸಹಪಾಠಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಸಹಪಾಠಿಗಳ ಹೆಸರು ಉಲ್ಲೇಖಿಸಿದ್ದಾರೆ.