ಪ್ರತಿ ದಿನ ಆನ್‌ಲೈನ್ ವಂಚನೆಗಳಿಂದ ಹಣ ಮಾತ್ರವಲ್ಲ, ಮಾನಸಿಕ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸೈಬರ್ ಅಪರಾಧಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಆನ್‌ಲೈನ್ ವಂಚನೆ, ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ನವದಹಲಿ (ಆ.09) ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾದ ಬೆನ್ನಲ್ಲೇ ಡಿಜಿಟಲ್ ವಂಚನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಇಮೇಲ್ ಮೂಲಕ, ಮೆಸೇಜ್ ಮೂಲಕ, ಅಥವಾ ಕರೆ ಮಾಡಿ, ವೈರಸ್ ಮೂಲಕ ಸೇರಿದಂತೆ ಹಲವು ವಿದಧದಲ್ಲಿ ವಂಚನೆ ಮಾಡುತ್ತಾರೆ. ಪ್ರತಿ ದಿನ ಕೋಟಿ ಕೋಟಿ ರೂಪಾಯಿ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ ವರ್ಷ ಅಮಾಯಕರು 22,842 ಕೋಟಿ ರೂಪಾಯಿ ಡಿಜಿಟಲ್ ವಂಚನೆ ಮೂಲಕ ಕಳೆದುಕೊಂಡಿದ್ದಾರೆ. ಈ ವಂಚನೆಗಳು, ಹಗರಣಗಳು, ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಫಿಶಿಂಗ್ ಆ್ಯಟಾಕ್

ಡಿಜಿಟಲ್ ವಂಚನೆಗಳು ಊಹೆಗೂ ನಿಲುಕದೆ ರೀತಿಯಲ್ಲಿರುತ್ತದೆ. ಪ್ರತಿ ಬಾರಿ ವಂಚಕರು ಹೊಸ ವಿಧಾನದ ಮೂಲಕ ಜನರನ್ನು ಮೋಸ ಮಾಡುತ್ತಾರೆ. ಈ ಪೈಕಿ ಫಿಶಿಂಗ್ ಆಟ್ಯಾಕ್ ಕೂಡ ಒಂದು.ಇದು ಸಮಾನ್ಯ ಡಿಜಿಟಲ್ ವಂಚನೆಯಾಗಿದೆ. ಇಷ್ಟೇ ಅಲ್ಲ ಹಳೇ ವಿಧಾನ. ಕರೆ, ಮೆಸೇಜ್, ಸೋಶಿಯಲ್ ಮೀಡಿಯಾ, ವ್ಯಾಟ್ಸಾಪ್ ಮೂಲಕ ಲಿಂಕ್ ಅಥವಾ ಸಂದೇಶ ಕಳುಹಿಸಿ ಖೆಡ್ಡಾಗೆ ಬೀಳಿಸುತ್ತಾರೆ. ಉದಾಹರಣೆಗೆ ಬ್ಯಾಂಕ್‌ನಿಂದ ಕರೆ ಅಥವಾ ಮೆಸೇಜ್ ಮಾಡಿರುವ ರೀತಿ, ಇತರ ಕಂಪನಿಗಳು, ಫಿನಾನ್ಸ್ ಸೇರಿದಂತೆ ಹಲವು ನಿಂಬಕಸ್ಥ ಕಂಪನಿಗಳ ಹೆಸರಿನಲ್ಲಿ, ಸರ್ಕಾರದ ದಾಖಲೆ ಪತ್ರಗಳ ಹೆಸರಿನಲ್ಲಿ ಕರೆ ಅಥವಾ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ವೈಯುಕ್ತಿಕ ಮಾಹಿತಿಗಳಾದ ಬ್ಯಾಂಕ್ ವಿವರ ಸೇರಿದಂತೆ ಇತರ ವಿವರ ಪಡೆದು ಮೋಸ ಮಾಡುತ್ತಾರೆ.

ತುರ್ತು ಸಂದೇಶ

ಈ ತಕ್ಷಣವೇ ಪ್ರತಿಕ್ರಿಯಿಸದಿದ್ದರೆ ಸೇವೆ ರದ್ದಾಗಲಿದೆ ಎಂದು, ಅಥವಾ ದುಬಾರಿ ದಂಡ ಕಟ್ಟಬೇಕು ಎಂದು ಬೆದರಿಸಿ ಮೋಸ ಮಾಡುತ್ತಾರೆ. ತುರ್ತು ಸಂದೇಶ ಅಥವಾ ಕರೆಗಳು ಬಂದಾಗ ಹೆಚ್ಚು ಯೋಚನೆ ಮಾಡಿದರೆ ದುಬಾರಿ ದಂಡ ಇತರ ಸಮಸ್ಯೆಗಳಿಗೆ ಸಿಲುಕದಂತೆ ಇರಲು ಪ್ರತಿಕ್ರಿಯಿಸುತ್ತಾರೆ. ಬಂದಿರುವ ಕರೆ ಅಥವಾ ಸಂದೇಶ ಎಷ್ಟು ಸತ್ಯ ಅನ್ನೋದು ಯೋಚನೆ ಮಾಡಲು ಸಮಯವೂ ನೀಡುವುದಿಲ್ಲ.

ಲಿಂಕ್ ಅಥವಾ ಅ್ಯಟಾಚ್‌ಮೆಂಟ್

ಲಿಂಕ್ ಕಳುಹಿಸಿ ನಿಮ್ಮನ್ನು ಕ್ಲಿಕ್ ಮಾಡುವಂತೆ ಮಾಡುತ್ತಾರೆ. ಈ ಲಿಂಕ್ ನೇರವಾಗಿ ನಕಲಿ ವೆಬ್‌ಸೈಟ್‌ಗೆ ಲ್ಯಾಂಡ್ ಆಗಲಿದೆ. ಮೇಲ್ನೋಟಕ್ಕೆ ಬ್ಯಾಂಕ್ ಅಥವಾ ಟ್ರಸ್ಟೆಟ್ ವೆಬ್‌ಸೈಟ್ ರೀತಿ ಕಂಡರೂ ಅಸಲಿ ಕತೆ ಬೇರೆ ಇರುತ್ತದೆ. ಇಲ್ಲಿ ನಿಮ್ಮ ವಿವರಗಳನ್ನು ದಾಖಲಿಸಿದಾಗ ಎಲ್ಲವೂ ಸೋರಿಕೆಯಾಗಲಿದೆ. ಬಳಿಕ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ.

ಅಶ್ಲೀಲ ಸಂದೇಶ, ವಿಡಿಯೋ ಕಾಲ್ , ಫ್ರೆಂಡ್ ರಿಕ್ವೆಸ್ಟ್

ಅಶ್ಲೀ ಸಂದೇಶ ಕಳುಹಿಸಿ ಬೆದರಿಸಿವುದು, ವಿಡಿಯೋ ಕಾಲ್ ಮಾಡಿದ ಬಳಿಕ ನಿಮ್ಮ ಫೋಟೋ ಬಳಸಿಕೊಂಡು ಫೋಟೋಗಳನ್ನು ಸಷ್ಟಿಸಿ ಬೆದರಿಸುುದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಬಳಿಕ ಮೆಸೇಂಜರ್ ಮೂಲಕ ಉದ್ದೇಶಪೂರ್ವಕವಾಗಿ ಚಾಟಿಂಗ್ ಮಾಡಿ ಹಣ ದೋಚವುದು ಸೇರಿದಂತೆ ಹಲವು ವಿದಧಲ್ಲಿ ಮೋಸ ಮಾಡುತ್ತಾರೆ.

ರಕ್ಷಣೆ ಹೇಗೆ?

ನಿಮ್ಮನ್ನು ನೀವು ಈ ಡಿಜಿಟಲ್ ಸ್ಕಾಮ್‌ಗಳಿಂದ ರಕ್ಷಿಸುವುದು ಅತೀ ಮುಖ್ಯ. ನಿಮಗೆ ಬಂದ ಸಂದೇಶ, ಲಿಂಕ್, ಅಟಾಚ್‌ಮೆಂಟ್ ಸೇರಿದಂತೆ ಯಾವುದೇ ಅನಧಿಕೃತ ಅಥವಾ ನಿಮ್ಮ ನಂಬಿಕಸ್ಥರಿಂದ ಬಂದಿರುವ ಯಾವುದೇ ಲಿಂಕ್ ಅಥವಾ ಸಂದೇಶಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಪ್ರತಿಕ್ರಿಯಿಸಬೇಡಿ. ಬ್ಯಾಂಕ್‌ನಿಂದ, ಸರ್ಕಾರದಿಂದ, ಟೆಲಿಕಾಂನಿಂದ ಸಂದೇಶ, ಕರೆ ಮೂಲಕ ಯಾವುದೇ ವೈಯುಕ್ತಿಕ ಮಾಹಿತಿ ಪಡೆಯುವುದಿಲ್ಲ. ಹೀಗಾಗಿ ಇಮೇಲ್ ಅಥವಾ ಇತರ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ. ಬ್ಯಾಂಕ್, ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ, ಆ್ಯಪ್ ಮೂಲಕ ಬದಲಾವಣೆ ಅಥವಾ ಅಪ್‌ಡೇಟ್ ಮಾಡಬೇಕಿದ್ದರೆ ಸಾಧ್ಯವಿದೆ.

ಮಾಲ್‌ವೇರ್

ಮಾಲ್‌ವೇರ್ ಮೂಲಕ ಹಲವು ಮೋಸಗಳನ್ನು ಮಾಡುತ್ತಾರೆ. ನಕಲಿ ಆ್ಯಪ್, ಅಥವಾ ವೈರಸ್ ಮೂಲಕ ನಿಮ್ಮ ಫೋನ್‌ಗೆ ಅಥವಾ ನಕಲಿ ಆ್ಯಪ್ ಮೂಲಕ ವೈಯುಕ್ತಿಕ ಮಾಹಿತಿ ಕದ್ದು ಮೋಸ ಮಾಡುತ್ತಾರೆ. ಅನಧಿಕೃತ ವೆಬ್‌ಸೈಟ್, ಆ್ಯಪ್‌ಗಳಿಂದ ಡೌನ್ಲೋಡ್ ಮಾಡುವುದು, ಅ್ಯಟಾಚ್ ಮಾಡುವುದು ಸೇರಿದಂತೆ ಇತರ ಕೆಲಸಗಳಿಂದ ನಿಮ್ಮ ಫೋನ್ ಅಥವಾ ಸಿಸ್ಟಮ್‌ನಲ್ಲಿ ಈ ವೈರಸ್ ಸೇರಿಕೊಂಡು ಸಮಸ್ಯೆ ಸೃಷ್ಟಿಸಲಿದೆ. ಹೀಗಾಗಿ ಈ ರೀತಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು

ಡಿಜಿಟಲ್ ಅರೆಸ್ಟ್

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಅತ್ಯಂತ ಗಂಭೀರ ಪರಿಣಾಮ ಬೀರಿದೆ.ಕೆವಲ ಹಣ ಕಳೆದುಕೊಂಡಿದ್ದು ಮಾತ್ರವಲ್ಲ, ಮಾನಸಿಕವಾಗಿಯೂ ಕಿರುಕುಳ ಅನುಭವಿಸಿ ಅಸ್ವಸ್ಥರಾದ ಘಟನೆಯೂ ಇದೆ. ನರ್ಕೋಟಿಕ್ಸ್, ಸಿಬಿಐ, ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳು ಸೋಗಿನಲ್ಲಿ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬಂದಿದೆ. ಅಥವಾ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ವಿದೇಶಕ್ಕೆ ಕಳುಹಿಸಲಾಗಿದೆ. ಆದರೆ ಇದರಲ್ಲಿ ಮಾದಕ ವಸ್ತು ಸೇರಿದಂತೆ ಅಕ್ರಮ ವಸ್ತುಗಳು ಪತ್ತೆಯಾಗಿದೆ. ಹೀಗಾಗಿ ನೀವು ತಕ್ಷಣವೇ ಅಧಿಕಾರಿಗಳ ಜೊತೆ ಮಾತನಾಡಿ ಎಂದು ಕರೆ ಮಾಡುತ್ತಾರೆ. ಬಳಿಕ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ನಿಮ್ಮನ್ನು ವಿಚಾರಣೆ ನಡೆಸುತ್ತಾರೆ. ಇದುವೇ ಡಿಜಿಟಲ್ ಅರೆಸ್ಟ್. ಈ ವಿಚಾರಣೆ ವೇಳೆ ಕೇಸ್ ಅಂತ್ಯಗೊಳಿಸಲು, ಅಥವಾ ಕೈಬಿಡಲು ಇಂತಿಷ್ಟು ಹಣ ನೀಡುವಂತೆ ಬೇಡಿಕೆ ಇಡುತ್ತಾರೆ. ಇದಕ್ಕೆ ತಕ್ಕಂತೆ ಹಣ ಕಳುಹಿಸುತ್ತಾ ಹೋದರೂ ಖಾತೆ ಖಾಲಿಯಾದರೂ ಬೆದರಿಕೆ ನಿಲ್ಲುವುದಿಲ್ಲ.ಹೀಗಾಗಿ ಪೊಲೀಸ್ ಅಥವಾ ಅಧಿಕಾರಿಗಳ ಸೋಗಿನಲ್ಲಿ ಯಾರೇ ಕರೆ ಮಾಡಿದರೂ ಅಥವಾ ಈ ರೀತಿಯ ಕರೆಗಳು ಬಂದರೆ ಗಂಭೀರವಾಗಿ ಪರಿಗಣಿಸಬೇಕಿಲ್ಲ. ವಂಚಕರ ಮೋಸದ ಬಲೆಯಲ್ಲಿ ಬೀಳದಂತೆ ಎಚ್ಚರವಹಿಸಿ.