ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಸರ್ಕಾರ ನಮ್ಮದೇ ಎಂದು ಹೇಳಿದ್ದಾರೆ. ಮತಗಳ್ಳತನದ ಆರೋಪ, ಕರ್ನಾಟಕದ ಆರ್ಥಿಕ ಪ್ರಗತಿ ಮತ್ತು ಕೇಂದ್ರದಿಂದ ತೆರಿಗೆ ಹಣದ ಕೊರತೆ ಬಗ್ಗೆಯೂ ಚರ್ಚಿಸಿದ್ದಾರೆ. ಅಂಬೇಡ್ಕರ್ ಸಂವಿಧಾನದ ಬಗ್ಗೆಯೂ ಮಾತನಾಡಿದ್ದಾರೆ.

ಬೆಂಗಳೂರು (ಆ.9): ದೇಶದಲ್ಲಿ ನುಡಿದಂತೆ ನಡೆದ ಸರ್ಕಾರವೇನಾದರೂ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ನಾನು ಹೇಳುವುದರಲ್ಲಿ ಸುಳ್ಳಿದ್ರೆ ಒಂದೇ ವೇದಿಕೆಗೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರು.

ವರುಣಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾನು ಅನೇಕ ಬಾರಿ ಈ ಬಗ್ಗೆ ಹೇಳಿದ್ದೇನೆ. ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಇದ್ರೆ ಅದು ನಮ್ಮ ಸರ್ಕಾರವೆಂದು. ನೀವು ನನ್ನನ್ನ ಮುಖ್ಯಮಂತ್ರಿ ಮಾಡಿದ ಕಾರಣ ಈ ಎಲ್ಲಾ ಕೆಲಸಗಳನ್ನ ಮಾಡಲು ಸಾಧ್ಯವಾಯ್ತು. ಮುಂದಿನ ಎರೆಡು ಮುಕ್ಕಾಲು ವರ್ಷ ನಾವು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಉಳಿದ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.

ಮಹದೇವಪುರ ಮತಗಳ್ಳತನ ನಿಜ: ಸಿಎಂ

ಬೆಂಗಳೂರಿನಲ್ಲಿ ಮತಗಳ್ಳತನ ಬಗ್ಗೆ ಪ್ರತಿಭಟನೆ ನಡೆಸಿದ್ದೇವೆ. ಬಿಜೆಪಿ ಮತಗಳ್ಳತನ ಮಾಡಿ ಇವಿಎಂ ದುರಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಒಂದು ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸಂಶೋಧನೆ ಮಾಡಿದ್ದೇವೆ. ಈ ಬಗ್ಗೆ ರಾಹುಲ್ ಗಾಂಧಿ ಮಾಧ್ಯಮಗಳ ಜೊತೆ ಮಾತನಾಡಿ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. 2008ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸದಾನಂದ ಗೌಡ ಸಿಎಂ ಆದ್ರು. ಆಗ 113 ಸ್ಥಾನ ಬಂದಿರಲಿಲ್ಲ. ಜನರ ಆಶೀರ್ವಾದ ಪಡೆದು ಯಾವಾಗಲೂ ಅಧಿಕಾರಕ್ಕೆ ಬರಬೇಕು. ಆದರೆ ಚುನಾವಣೆಯಲ್ಲಿ ಸಂವಿಧಾನಕ್ಕೆ ವಿರೋಧ ನೀತಿ ಅನುಸರಿಸಿ ಬಿಜೆಪಿ ಎರೆಡು ಭಾರಿ ಅಧಿಕಾರಕ್ಕೆ ಬಂದಿದೆ. ಕಳೆದೆರಡುಸಲ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು, ಮುಂದುವರಿದು, ಬಿಜೆಪಿ ಅಧಿಕಾರದ ದಾಹವಿದೆ. ಅದು ಯಾವತ್ತಿಗೂ ಸಂವಿಧಾನದ ಪರವಾಗಿ ಇರಲ್ಲ. ಅಂಬೇಡ್ಕರ್ ಅವರ ಹೆಸರನ್ನ ಹೇಳುತ್ತಾರೆ, ಆದರೆ ಸಂವಿಧಾನ ವಿರುದ್ಧ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.

ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ:

ಶಕ್ತಿ ಯೋಜನೆಯಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಗ್ಯಾರೆಂಟಿ ಯೋಜನೆ ಜಾರಿ ಮಾಡಿದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಎಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಗ್ಯಾರೆಂಟಿ ಯೋಜನೆ ಎಂದರು.

ಕರ್ನಾಟಕ ಆರ್ಥಿಕವಾಗಿ ಮೇಲೆ ಬರುವ ಕೆಲಸ ಆಗುತ್ತಿದೆ. ಜಿಎಸ್ಟಿ ಕಲೆಕ್ಷನ್‌ ನಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡುತ್ತಿಲ್ಲ. ನಮ್ಮ ಪಾಲಿನ ತೆರಿಗೆ ಹಣವನ್ನ ಕೊಡುತ್ತಿಲ್ಲ. 4.7% ನಮ್ಮ ಪಾಲು ಕೊಟ್ಟಿತ್ತು. ಅದೀಗ

15 ನೇ ಹಣಕಾಸಿನ ಯೋಜನೆಯಿಂದ 4.7 ರಿಂದ 3.5 ಕ್ಕೆ ಇಳಿದಿದೆ. 2019ರ ಸಂಸತ್ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ತು. ಈ ಬಗ್ಗೆ ಸಂಸದರು ಧ್ವನಿ ಎತ್ತಬೇಕು. 11ಸಾವಿರ ಕೋಟಿ ನಮ್ಮ ಪಾಲಿನ ಹಣ ಕೊಡಬೇಕಿತ್ತು ಆದರೆ ಇನ್ನೂ ಕೊಟ್ಟಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲೋಕಸಭಾ ಸದಸ್ಯರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಆದರೂ ಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ನಾನು ಸಿಎಂ ಆಗಲು ಅಂಬೇಡ್ಕರ್ ಸಂವಿಧಾನ ಕಾರಣ: ಸಿಎಂ

ಸಂವಿಧಾನ ಉಳಿಸಬೇಕು, ಪ್ರಜಾಪ್ರಭುತ್ವವನ್ನ ಬೆಳೆಸಬೇಕು ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ನಾನು ಸಿಎಂ ಆಗಲು ಅಂಬೇಡ್ಕರ್ ಅವ ಸಂವಿಧಾನವೇ ಕಾರಣ ಎಂದ ಸಿಎಂ ಸಿದ್ದರಾಮಯ್ಯ ಅವರು, ನಾವು ಉಳಿಯಬೇಕಾದ್ರೆ ಎಲ್ಲರಿಗೂ ಸಮಾನ ಅವಕಾಸ ಸಿಗಬೇಕಾದ್ರೆ ಸಂವಿಧಾನ ಉಳಿಸಬೇಕು ಎಂಉ ಪುನರುಚ್ಚರಿಸಿದರು. ಇದೇ ವೇಳೆ ಹಿಂದಿನ ಚುನಾವಣೆಗಳಲ್ಲಿ ನನ್ನನ್ನು ಹೇಗೆ ಬೆಳೆಸಿದಿರಿ ಅದೇ ರೀತಿ ಮುಂದೆಯೂ ಶಕ್ತಿ ತುಂಬಬೇಕು. ವರುಣಾ ಕ್ಷೇತ್ರದ ಅಭಿವೃದ್ಧಿಗೆ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.