ಸಸ್ಯಾಹಾರಿಗಳಾಗಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾವಿನ ಖಾದ್ಯ ಸವಿದಿದ್ದಾರೆ. ಅಸಲಿಗೆ ಏನಿದು? 

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಸ್ಯಾಹಾರಿಗಳು. ಆದರೆ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸಮಯದಲ್ಲಿ ಹಾವಿನಿಂದ ಮಾಡಿರುವ ಖಾದ್ಯಗಳನ್ನು ಸೇವಿಸಿದ್ದಾರೆ. ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗ್ತಿದೆ. ಈ ಕುರಿತು ಶೆಫ್ ಹರ್ಷ್ ದೀಕ್ಷಿತ್ ಬಹಿರಂಗಪಡಿಸಿದ್ದಾರೆ. 'ಫೋ' ಎಂಬ ವಿಯೆಟ್ನಾಮೀಸ್ ಖಾದ್ಯವನ್ನು ಸಿದ್ಧಪಡಿಸಿ ಈ ಜೋಡಿಗೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಇದನ್ನು ಕೇಳಿ ಹಲವರು ಹುಬ್ಬೇರಿಸಿದ್ದಾರೆ. ಆದರೆ, ಇದು ಹಾವಿನ ಖಾದ್ಯವಾದರೂ ಇಲ್ಲೊಂದು ಟ್ವಿಸ್ಟ್​ ಇರುವ ಬಗ್ಗೆ ಹರ್ಷ್ ದೀಕ್ಷಿತ್ ಮಾತನಾಡಿದ್ದಾರೆ.

ಅಷ್ಟಕ್ಕೂ ವಿರಾಟ್​ ಕೊಹ್ಲಿ ಅವರು ಇದಾಗಲೇ ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ್ದರು. ತಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯು ಅಸಾಧಾರಣ ಫಿಟ್ನೆಸ್ ಪಡೆಯಲು ಹೇಗೆ ಸಾಧ್ಯವಾಯಿತು ಮತ್ತು ಮೈದಾನದಲ್ಲಿ ಟೀಮ್ ಇಂಡಿಯಾಗೆ ಆ ಅನುಕರಣೀಯ ಪ್ರದರ್ಶನಗಳನ್ನು ನೀಡಿದರು ಎಂಬುದನ್ನು ಈ ಹಿಂದೆ ಬಹಿರಂಗಪಡಿಸಿದ್ದರು. ತಾವು ಮಾಂಸಾಹಾರವನ್ನು ಬಿಟ್ಟ ಬಳಿಕ ಇವೆಲ್ಲವೂ ಸಾಧ್ಯವಾಯಿತು ಎಂದಿದ್ದರು. ಅಷ್ಟಕ್ಕೂ ಅನುಷ್ಕಾ ಶರ್ಮಾ ಅವರು ಮೊದಲಿನಿಂದಲೂ ಸಸ್ಯಾಹಾರಿಯೇ. ಆದರೆ ಹೀಗಿದ್ದ ಮೇಲೆ ಅವರು ಮಾಂಸಾಹಾರವಷ್ಟೇ ಅಲ್ಲವೇ ಹಾವಿನ ಖಾದ್ಯ ತಿಂದಿದ್ದು ಹೇಗೆ ಎನ್ನುವುದು ಅಷ್ಟೇ ಕುತೂಹಲವಾಗಿದೆ.

'ಫೋ' ಮಾಡಿ ಕೊಟ್ಟೆ ಎಂದ ಶೆಫ್

ಶೆಫ್ ಹರ್ಷ್ ದೀಕ್ಷಿತ್ ಅವರು ತಾವು ಈ ಜೋಡಿಗೆ ಫೋ ಖಾದ್ಯ ಮಾಡಿಕೊಟ್ಟಿರುವುದಾಗಿ ಹೇಳಿದ್ದಾರೆ. ತಾವು ಸಾಂಪ್ರದಾಯಿಕ ವಿಯೆಟ್ನಾಮೀಸ್ ಪಾಕಪದ್ಧತಿ 'ಫೋ' ಅನ್ನು ಮಾಡಿಕೊಟ್ಟಿರುವುದಾಗಿ ಅವರು ಹೇಳಿದ್ದಾರೆ. ಅಸಲಿಗೆ ಫೋನಲ್ಲಿ ಕೋಳಿ ಮತ್ತು ಗೋಮಾಂಸ ಸೇರಿಸಲಾಗುತ್ತದೆ. ಹಾವು - ಹಾವಿನ ವೈನ್, ಹಾವಿನ ಮಾಂಸ ಕೂಡ ಇದರಲ್ಲಿ ಏರಿಸಲಾಗುತ್ತದೆ. ಅವೆಲ್ಲವೂ ಸೇರಿದ ಅಡುಗೆಯೇ ಫೋ. ಆದರೆ, ಸಸ್ಯಾಹಾರಿಗಳಾದ ಈ ಜೋಡಿಗೆ ಸ್ವಲ್ಪ ಟ್ವಿಸ್ಟ್​ ಮಾಡಿ ಫೋ ಅಡುಗೆ ಮಾಡಿರುವ ಬಗ್ಗೆ ಹರ್ಷ್​ ಮಾತನಾಡಿದ್ದಾರೆ.

'ಅವರು ವೆಜಿಟೇರಿಯನ್​ ಎಂದು ತಿಳಿಯಿತು. ಸಸ್ಯಾಹಾರಿ ಹಾವನ್ನು ಹೇಗೆ ಹಾಕುವುದು ಎಂದು ತಿಳಿಯಲಿಲ್ಲ. ಇದೇ ಕಾರಣಕ್ಕೆ ಹಾವನ್ನು ಹೋಲುವ ಸೋರೆಕಾಯಿಯನ್ನು ಬಳಸಿದೆ. ಹಾವಿನ ಬದಲು ಸೋರೆಕಾಯಿ ಮಾಡಿ ಫೋ ಖಾದ್ಯ ತಯಾರಿಸಿದೆ' ಎಂದಿದ್ದಾರೆ. ಅಂದಹಾಗೆ ಇದು, 2019 ರಲ್ಲಿ ವಿರಾಟ್-ಅನುಷ್ಕಾ ಅವರ ವಿವಾಹ ವಾರ್ಷಿಕೋತ್ಸವದಂದು ನಡೆದ ಘಟನೆಯಾಗಿದ್ದು, ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಈಗ ವೈರಲ್​ ಆಗ್ತಿದೆ.

ವಿಯೆಟ್ನಾಮೀಸ್ ಆಹಾರದಲ್ಲಿ ಏನಿದೆ?

“ವಿಯೆಟ್ನಾಮೀಸ್ ಪಾಕಪದ್ಧತಿಯಲ್ಲಿ ಬಹಳಷ್ಟು ಹಾವುಗಳಿವೆ. ಹಾವಿನ ವೈನ್, ಹಾವಿನ ಮಾಂಸ ಕೂಡ. ಹಾಗಾದರೆ, ಸಸ್ಯಾಹಾರಿಗಳಿಗೆ ‘ಹಾವು’ ಅನ್ನು ಹೇಗೆ ಬಡಿಸುವುದು ಎಂದು ಚಿಂತೆಯಾಯಿತು. ಹಾವಿನ ಬದಲು ಸೋರೆಕಾಯಿ ಬಳಸಿದೆ. ನಂತರ ಕಡಲೆಕಾಯಿ, ತೆಂಗಿನಕಾಯಿ, ತೋಫು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ತುಂಬಿಸಿ ಬೇಯಿಸಿದೆ. ಅಣಬೆಗಳು ಮತ್ತು ಮೆಣಸಿನಕಾಯಿಗಳನ್ನೂ ಸೇರಿಸಿದೆ. ಜೊತೆಗೆ ನಿಂಬೆ ಹುಲ್ಲು-ಶುಂಠಿ-ಕೊತ್ತಂಬರಿಗಳನ್ನು ಹಾಕಿದೆ ಎಂದಿದ್ದಾರೆ.

View post on Instagram