ಐಸಿಐಸಿ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಹೊಸ ಖಾತೆದಾರರ ಕನಿಷ್ಟ ಬ್ಯಾಲೆನ್ಸ್ ಬರೋಬ್ಬರಿ 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ನವದೆಹಲಿ (ಆ.09) ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡುವುದು ಅನಿವಾರ್ಯ. ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಈ ಕನಿಷ್ಠ ಬ್ಯಾಲೆನ್ಸ್ ಬಲು ದುಬಾರಿ. ಇದೀಗ ಐಸಿಐಸಿ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಮೊತ್ತ ಏರಿಕೆ ಮಾಡಲಾಗಿದೆ. ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವವರು ಇದೀಗ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಪೆನಾಲ್ಟಿ ಅನ್ವಯವಾಗಲಿದೆ.

10,000 ರೂಪಾಯಿಯಿಂದ 50,000 ರೂಪಾಯಿಗೆ ಏರಿಕೆ

ಇಷ್ಟು ದಿನ ಐಸಿಐಸಿ ಬ್ಯಾಂಕ್ ಮಿನಿಮಮ್ ಖಾತೆ ಬ್ಯಾಲೆನ್ಸ್ 10,000 ರೂಪಾಯಿ ಇತ್ತು. ಆದರೆ ಈ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದು ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಪ್ರತಿಯೊಬ್ಬರಿಗೂ ಹೊಸ ನಿಯಮ ಅನ್ವಯವಾಗಲಿದೆ.

ಹಳೇ ಗ್ರಾಹಕರೂ 50 ಸಾವಿರ ರೂ ನಿರ್ವಹಣೆ ಮಾಡಬೇಕಾ?

ಆಗಸ್ಟ್ 1 ರಿಂದ ಐಸಿಐಸಿ ಖಾತೆ ತೆರೆಯುವ ಗ್ರಾಹಕರು ಮಿನಿಮಮ್ ಬ್ಯಾಲೆನ್ಸ್ 50,000 ರೂಪಾಯಿ ಇಡಬೇಕಿದೆ. ಆದರೆ ಈಗಾಗಲೇ ಐಸಿಐಸಿ ಬ್ಯಾಂಕ್ ಖಾತೆ ಹೊಂದಿರುವವರಿಗೂ ಈ ನಿಯಮ ಅನ್ವಯಾಗುವುದಿಲ್ಲ. ಹಳೇ ಗ್ರಾಹಕರು 10,000 ರೂಪಾಯಿ ಕನಿಷ್ಛ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಆಗಸ್ಟ್ 1 ರಿಂದ ಖಾತೆ ತೆರೆಯುವ ಗ್ರಾಹಕರು 50,000 ರೂಪಾಯಿ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಿದೆ.

ಪಟ್ಟಣ, ಗ್ರಾಮೀಣ ಗ್ರಾಹಕರಿಗೆ ವಿನಾಯಿತಿ

ಸೆಮಿ ಅರ್ಬನ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಗಸ್ಟ್ 1 ರಿಂದ ಐಸಿಐಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಗ್ರಾಹಕರಿಗೆ ಕೊಂಚ ವಿನಾಯಿತಿ ನೀಡಲಾಗಿದೆ. ಪಟ್ಟಣದಲ್ಲಿನ ಐಸಿಐಸಿ ಗ್ರಾಹಕರಿಗೆ 25,000 ರೂಪಾಯಿ ಹಾಗೂ ಗ್ರಾಮೀಣ ಗ್ರಾಹಕರು 10,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕು. ಇನ್ನು ಸೆಮಿ ಅರ್ಬನ್ ಹಾಗೂ ಗ್ರಾಮೀಣ ಭಾಗದ ಹಳೇ ಗ್ರಾಹಕರು ಸದ್ಯ ಇರುವಂತೆ 5,000 ರೂಪಾಯಿ ಬ್ಯಾಂಕ್ ನಿರ್ವಹಣೆ ಮಾಡಬೇಕು.

ನಿರ್ವಹಣೆ ಮಾಡದಿದ್ದರೆ ಶೇಕಡಾ 6ರಷ್ಟು ಪೆನಾಲ್ಟಿ

ಹೊಸ ನಿಯಮದ ಪ್ರಕಾರ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ದರೆ ಶೇಕಡಾ 6 ರಷ್ಟು ಅಥವಾ 500 ರೂಪಾಯಿ ಪೆನಾಲ್ಟಿ ಪಾವತಿಸಬೇಕು. ನಿರ್ವಹಣೆ ಮಾಡದೇ ಇದ್ದರೆ ಪ್ರತಿ ತಿಂಗಳು ಶೇಕಡಾ 6ರಷ್ಟು ಅಥವಾ 500 ರೂಪಾಯಿ ಪಾವತಿಸಬೇಕು.

ಇನ್ನು ಉಳಿತಾಯ ಖಾತೆಗೆ ಹಣ ಜಮೆ ಮಾಡಲು ಕೆಲ ನಿರ್ಬಂಧಗಳಿವೆ. ಖಾತೆಗೆ ಜಮೆ ಮಾಡಲು ತಿಂಗಳಲ್ಲಿ ಆರಂಭಿಕ 3 ವಹಿವಾಟು ಮಾತ್ರ ಉಚಿತವಾಗಿರುತ್ತದೆ. ಇನ್ನುಳಿದ ಪ್ರತಿ ಟ್ರಾನ್ಸಾಕ್ಷನ್‌ಗೆ 150 ರೂಪಾಯಿ ಪಾವತಿಸಬೇಕು.