ಧರ್ಮಸ್ಥಳ ರತ್ನಗಿರಿ ಬೆಟ್ಟದ 16ರ ಶೋಧ ಕಾರ್ಯ ಅಂತ್ಯಗೊಂಡಿದೆ. ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆದರೆ ಸುಜಾತ್ ಭಟ್ ಪರ ವಕೀಲ ಹೊಸ ಆಕ್ಷೇಪ ತೆಗೆದಿದ್ದಾರೆ. ಸಾಕ್ಷಿ ಸಿಗಬಾರದು ಎಂದು ಒಳಸಂಚು ನಡೆದಿದೆ ಎಂದು ವಕೀಲ ಆರೋಪಿಸಿದ್ದಾರೆ. ವಕೀಲರ ಆರೋಪವೇನು?
ಧರ್ಮಸ್ಥಳ (ಆ.09) ಧರ್ಮಸ್ಥಳದ ಬುರಡೆ ರಹಸ್ಯ ಭೇದಿಸಲು ಇಷ್ಟು ದಿನ ನೇತ್ರಾವತಿ ಸ್ನಾನಘಟ್ಟ ಬಂಡ್ಲೆಗುಡ್ಡೆ, ಕಲ್ಲೇರಿ ಬೋಳಿಯಾರ್ ಕಾಡಿನಲ್ಲಿ ಶೋಧ ಕಾರ್ಯ ಮಾಡುತ್ತಿದ್ದ ಎಸ್ಐಟಿ ಅಧಿಕಾರಿಗಳು ಇದೀಗ ಧರ್ಮಸ್ಥಳದ ಆವರಣ ರತ್ನಗಿರಿ ಬೆಟ್ಟದಲ್ಲಿ ಉತ್ಖನನ ಕಾರ್ಯ ನಡೆಸುತ್ತಿದೆ. ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆಟ್ಟದ ಸಮೀಪದಲ್ಲಿ ಮುಸುಕುದಾರಿ ದೂರುದಾರ ಗುರುತಿಸಿದ 16ನೇ ಪಾಯಿಂಟ್ ಉತ್ಖನನ ಕಾರ್ಯ ಮಾಡಲಾಗಿತ್ತು. ಈ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು,ಯಾವುದೇ ಕಳೇಬರ ಪತ್ತೆಯಾಗಿಲ್ಲ. ಭಾರಿ ನಿರೀಕ್ಷೆಯಲ್ಲಿ ಮುಸುಕುದಾರಿ ದೂರುದಾರ ಭೀಮ ಹಾಗೂ ಆತನ ಪರ ವಕೀಲರು ಇದೀಗ ಹೊಸ ಆಕ್ಷೇಪ ತೆಗೆದಿದ್ದಾರೆ. ಸುಜಾತ್ ಭಟ್ ಪರ ವಕೀಲ ಮುಂಜುನಾಥ್ ರತ್ನಗಿರಿ ಭೆಟ್ಟದಲ್ಲಿ ಸಾಕ್ಷಿ ನಾಶ ಮಾಡುವ ಪ್ರಯತ್ನ ನಡೆದಿದೆ. ಕಳೇಬರ ಸಿಗದಂತೆ ಮಾಡಲು ಮಣ್ಣು ಸುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಣ್ಣು, ತ್ಯಾಜ್ಯ ಸುರಿದು ಸಾಕ್ಷಿ ನಾಶ ಆರೋಪ
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ದೂರುದಾರ ಗುರುತಿಸಿದ ಪಾಯಿಂಟ್ 16ರಲ್ಲಿ ಎಸ್ಐಟಿ ಉತ್ಖನನ ಕಾರ್ಯ ನಡೆಸುತ್ತಿದ್ದಂತೆ ವಕೀಲ ಮಂಜುನಾಥ್ ಭಾರಿ ಅಕ್ಷೇಪ ವ್ಯಕ್ತಪಡಿಸಿದ್ದರು. ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ಹೊಸ ಮಣ್ಣು ಸುರಿದ್ದಾರೆ. ಕಳೇಬರ ಹೂತು ಹಾಕಿದ ಜಾಗದಲ್ಲಿ ಮಣ್ಣು ಸುರಿಯಲಾಗಿದೆ. ಒಳಸಂಚು ನಡೆಸಿ ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಬೇಕಂತಲೇ ಹೊಸ ಮಣ್ಣು ಸುರಿದಿದ್ದಾರೆ ಎಂದು ವಕೀರಲು ಆರೋಪಿಸಿದ್ದಾರೆ. ಸತ್ಯವನ್ನು ಮರೆಮಾಚಲೆಂದು ಕೆಲವು ಹಿತಾಸಕ್ತಿಗಳು ಬೇಕಂತಲೇ ಸಾಕ್ಷಿ ನಾಶದಲ್ಲಿ ತೊಡಗಿರುವಂತೆ ಕಾಣುತ್ತಿದೆ ಎಂದು ವಕೀಲ ಮಂಜುನಾಥ್ ಆರೋಪಿಸಿದ್ದಾರೆ.
ಕಳೇಬರ ಸಿಗದಿದ್ದರೆ ಅದು ಭೀಮನ ಲೋಪವಲ್ಲ
10 ಅಡಿಯಷ್ಟು ಹೊಸ ಮಣ್ಣು ಸುರಿದಿದ್ದಾರೆ. ಇದರ ಜೊತೆಗೆ ತ್ಯಾಜ್ಯವನ್ನು ಸುರಿದಿದ್ದಾರೆ. ಇದು ಸಾಕ್ಷಿ ನಾಶದ ಸ್ಪಷ್ಟ ಚಿತ್ರಣವಾಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಹತ್ತು ಅಡಿ ಮಣ್ಣು ಹಾಕಿದ್ದಾರೆ. ಹೀಗಾಗಿ 7 ಅಡಿ ಮಣ್ಣು ಅಗೆದರೂ ಕಳೇಬರ ಸಿಗುವುದಿಲ್ಲ. ಹೀಗಾಗಿ ಈ ಸ್ಥಳಧಲ್ಲಿ ಕಳೇಬರ ಸಿಗದಿದ್ದರೆ ಅದು ಭೀಮನ ಲೋಪವಲ್ಲ. ತನಿಖೆಗೆ ಅಡ್ಡಿಪಡಿಸಲು ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಇನ್ನಷ್ಟು ಆಳ ತೆಗೆದರೆ ಕಳೇಬರ ಖಂಡಿತವಾಗಿ ಪತ್ತೆಯಾಲಿದೆ ಎಂದು ವಕೀಲ ಮಂಜುನಾಥ್ ಆರೋಪಿಸಿದ್ದರು.
10 ಅಡಿ ಆಳ ಅಗೆದರೂ ಸಿಗದ ಕಳೇಬರ
ಮುಸಕುದಾರಿ ಗುರುಸಿತಿದ 16ನೇ ಪಾಯಿಂಟ್‌ನಲ್ಲಿ ಕೆಲ ವರ್ಷಗಳಿಂದ ಮಣ್ಣು ಸುರಿಯಾಗಲಿದೆ. ಹೀಗಾಗಿ ಆಳವಾಗಿ ಉತ್ಖನನ ಮಾಡುವಂತೆ ಮುಸುಕುದಾರಿಯೂ ಸೂಚಿಸಿದ್ದಾನೆ. ವಕೀಲರ ಆರೋಪ, ಮುಸುಕುದಾರಿ ದೂರುದಾರನ ಒತ್ತಾಯದಿಂದ 10 ಅಡಿಗೂ ಹೆಚ್ಚು ಆಳದಷ್ಟು ಮಣ್ಣು ತೆಗೆದು ಉತ್ಖನನ ನಡೆಸಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಪಾಯಿಂಟ್ 16ರ ಶೋಧ ಕಾರ್ಯ ಅಂತ್ಯ
ಮುಸುಕುದಾರಿ ದೂರುದಾರ ಭೀಮ ತೋರಿಸಿದ 16ರ ಶೋಧ ಕಾರ್ಯ ಅಂತ್ಯಗೊಳಿಸಲಾಗಿದೆ. 10 ಅಡಿಗಿಂತಲೂ ಹೆಚ್ಚು ಆಳದ ವರೆಗೆ ಉತ್ಖನನ ಮಾಡಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗದ ಕಾರಣ ಮತ್ತೆ ಗುಂಡಿಯನ್ನು ಮುಚ್ಚಲಾಗಿದೆ. ಈ ಕುರಿತು ಫೋಟೋ ದಾಖಲೆಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಹಿಟಾಚಿ ಮೂಲಕ ಗುಂಡಿ ಮುಚ್ಚಲಾಗಿದೆ.
ರತ್ನಗಿರಿ ಬೆಟ್ಟದಲ್ಲಿ ಮತ್ತೊಂದು ಪಾಯಿಂಟ್ ಉತ್ಖನನ
ರತ್ನಗಿರಿ ಬೆಟ್ಟದಲ್ಲಿ 16ನೇ ಪಾಯಿಂಟ್ ಪಕ್ಕದಲ್ಲೇ ಮತ್ತೊಂದು ಸ್ಥಳವನ್ನು ಮುಸುಕುದಾರಿ ದೂರುದಾರ ಗುರುತಿಸಿದ್ದಾನೆ. 16ನೇ ಪಾಯಿಂಟ್‌ನಿಂದ 15 ಅಡಿ ದೂರದಲ್ಲಿರುವ ಮತ್ತೊಂದು ಸ್ಥಳವನ್ನು ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಕಾರ್ಮಿಕರ ಮೂಲಕ ಉತ್ಖನನ ಕಾರ್ಯ ನಡೆಸಲಾಗುತ್ತಿದೆ.
