Published : Aug 04, 2025, 07:07 AM ISTUpdated : Aug 04, 2025, 10:57 PM IST

Karnataka News Live: ಲಾರ್ಡ್ಸ್ ನೋವಿನಿಂದ ಓವಲ್ ಟೆಸ್ಟ್ ಗೆಲ್ಲಿಸಿ ಸಿರಾಜ್ ದಾಖಲೆ, ಏಷ್ಯಾದ ಟಾಪ್ ಬೌಲರ್

ಸಾರಾಂಶ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ/ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಹೊರಡಿಸಿರುವ ಆದೇಶ ಹಾಗೂ ಅದರ ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ಸಲ್ಲಿಸುವ ಕ್ರಿಮಿನಲ್ ಮೇಲ್ಮನವಿ ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಹಾಲಿ, ಮಾಜಿ ಜನಪ್ರತಿನಿಧಿಗಳ ವಿಚಾರಣೆಗೆ ರಾಜ್ಯದಲ್ಲಿ ಜನಪ್ರತಿನಿ ಧಿಗಳ ನ್ಯಾಯಾಲಯ ಸ್ಥಾಪನೆ ಯಾದ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿರುವುದು ಇದೇ ಮೊದಲು. ತೀರ್ಪಿನ ವಿರುದ್ಧ ಹೈಕೋರ್ಟ್‌ 2 ಪ್ರಜ್ವಲ್ ಮೇಲ್ಮನ ಸಲ್ಲಿಸಲಿದ್ದಾರೆ. ಜೀವಾವಧಿಶಿಕ್ಷೆ ಪ್ರಶ್ನಿಸಿಹೈ ಕೋರ್ಟ್ ಮೊರೆ ಹೋದ ರಾಜ್ಯದ ಮೊದಲ ವ್ಯಕ್ತಿ ಪ್ರಜ್ವಲ್ ರೇವಣ್ಣ ಆಗಲಿದ್ದಾರೆ. ಈವರೆಗೆ ರಾಜ್ಯದ ಜನಪ್ರತಿನಿಧಿ ವಿಶೇಷ ನ್ಯಾಯಾಲಯವು ಒಬ್ಬ ಮಾಜಿ/ಹಾಲಿ ಜನಪ್ರತಿನಿಧಿಗೆ ವಿಧಿ ಸಿರುವ ಗರಿಷ್ಠ ಶಿಕ್ಷೆ ಅಂದರೆ ಏಳು ವರ್ಷ ಜೈಲು. ಬೇಲೆಕೇರಿ ಕೇಸಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಆ ಶಿಕ್ಷೆ ಕೊಡಲಾಗಿತ್ತು.

 

10:57 PM (IST) Aug 04

ಲಾರ್ಡ್ಸ್ ನೋವಿನಿಂದ ಓವಲ್ ಟೆಸ್ಟ್ ಗೆಲ್ಲಿಸಿ ಸಿರಾಜ್ ದಾಖಲೆ, ಏಷ್ಯಾದ ಟಾಪ್ ಬೌಲರ್

ಲಾರ್ಡ್ಸ್‌ನಲ್ಲಿ ಆದ ಹಾರ್ಟ್‌ಬ್ರೇಕ್ ಬಳಿಕ ಮೊಹಮ್ಮದ್ ಸಿರಾಜ್ ಓವಲ್ ಟೆಸ್ಟ್ ಗೆಲ್ಲಿಸಿದ್ದು ಮಾತ್ರವಲ್ಲ, ದಾಖಲೆ ಬರೆದಿದ್ದಾರೆ. ಓವಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಚಕ ಗೆಲುವಿನ ಹಿಂದಿ ಮೊಹಮ್ಮದ್ ಸಿರಾದ್ ಮಾರಕ ದಾಳಿ ಪ್ರಮುಖ ಕಾರಣ. ಅದ್ಭುತ ಬೌಲಿಂಗ್ ಮೂಲಕ ಸಿರಾಜ್ ವಿಶೇಷ ದಾಖಲೆ ಬರೆದಿದ್ದಾರೆ.

Read Full Story

10:25 PM (IST) Aug 04

ಹೇರ್​ಸ್ಟೈಲ್​ಗಾಗಿ ಬ್ಯೂಟಿ ಪಾರ್ಲರ್​ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...

ಹೇರ್​ಸ್ಟೈಲ್​ಗಾಗಿ ಬ್ಯೂಟಿ ಸಲೂನ್​ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್​...

 

Read Full Story

10:04 PM (IST) Aug 04

ಇಂದು ರಾತ್ರಿ ಬಸ್ ಸಂಚಾರ, ಸಾರಿಗೆ ನೌಕರ ಮುಷ್ಕರದಿಂದ ನಾಳೆ ಬೆಳಗ್ಗೆ 6 ಗಂಟೆಯಿಂದ ಸೇವೆ ಸ್ಥಗಿತ

ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ನಾಳೆಯಿಂದಲೇ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ಇಂದು ಎಂದಿನಂತೆ ಬಸ್ ಸೇವೆ ಇರಲಿದೆ. ಆದರೆ ನಾಳೆ ಬೆಳಗ್ಗೆ 6 ಗಂಟೆಯಿಂದ ಬಸ್ ಸೇವೆ ಸ್ಥಗಿತಗೊಳ್ಳಲಿದೆ.

Read Full Story

09:19 PM (IST) Aug 04

ಬೇಡ ಅಂದ್ರೂ ರಷ್ಯಾದಿಂದ ಇಂಧನ ಖರೀದಿಸ್ತೀರಾ? ಭಾರತಕ್ಕೆ ಟ್ರಂಪ್ ತೆರಿಗೆ ಹೆಚ್ಚಳ ಬೆದರಿಕೆ

ರಷ್ಯಾದಿಂದ ಇಂಧನ ಖರೀದಿಸಬೇಡಿ ಎಂದರೂ ಮತ್ತೆ ಮತ್ತೆ ಖರೀದಿಸುತ್ತೀರಾ? ನಿಮ್ಮ ಶೇಕಡಾ 25ರಷ್ಟು ತೆರಿಗೆಯನ್ನು ಡಬಲ್ ಮಾಡುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಭಾರತಕ್ಕೆ ಎಚ್ಚರಿಸಿದ್ದಾರೆ.

Read Full Story

08:34 PM (IST) Aug 04

ಕೊಪ್ಪಳ ಹಿಂದೂ ಯುವಕ ಕೊಲೆ ಪ್ರಕರಣ, ಆರೋಪಿ ಮಗ ಸಾದಿಕ್‌ಗೆ ಶಿಕ್ಷೆಯಾಗಲಿ ಎಂದ ಪೋಷಕರು

ಕೊಪ್ಪಳ ಹಿಂದೂ ಯುವಕ ಗವಿಸಿದ್ದಪ್ಪನ ಕೊಲೆ ಪ್ರಕರಣದ ಆರೋಪಿ ಸಾದಿಕ್ ಪೋಷಕರು ಘಟನೆ ಕುರಿತು ಮಾತನಾಡಿದ್ದಾರೆ. ಗವಿಸಿದ್ದಪ್ಪ ನನ್ನ ಮಗನಿಗಿಂತ ಹೆಚ್ಚು, ನನ್ನ ಮಗ ಸಾದಿಕ್‌ಗೆ ಶಿಕ್ಷೆಯಾಗಲಿ. ಆತ ನಮ್ಮ ಪಾಲಿಗೆ ಸತ್ತಿದ್ದಾನೆ ಎಂದು ಸಾದಿಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.

Read Full Story

08:01 PM (IST) Aug 04

ಧರ್ಮಸ್ಥಳ 6ನೇ ದಿನ ಕಾರ್ಯಾಚರಣೆ ಅಂತ್ಯ, ಕಾಡಲ್ಲಿ ಸಿಕ್ಕ ಅಸ್ಥಿಪಂಜರ ಪಕ್ಕ ಉಡುಪು ಪತ್ತೆ, ಅಸಲಿಯತ್ತೇನು?

ಧರ್ಮಸ್ಥಳದ ಬಂಗ್ಲಾಗುಡ್ಡದಲ್ಲಿ ನಡೆದ ಉತ್ಖನನದಲ್ಲಿ ಪುರುಷನ ಅಸ್ಥಿಪಂಜರ ಪತ್ತೆಯಾಗಿದೆ. ಉಡುಪು ಮತ್ತು ಹಗ್ಗ ಪತ್ತೆಯಾಗಿರುವುದರಿಂದ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಹಜರು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
Read Full Story

07:38 PM (IST) Aug 04

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ರಿಸಲ್ಟ್ ನಿಖರ ಭವಿಷ್ಯ ನುಡಿದಿದ್ದ ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್

ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಕುರಿತು ಆ್ಯಲಿಸ್ಟರ್ ಕುಕ್, ಮೈಕಲ್ ವಾನ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ನುಡಿದ ಸುಳ್ಳಾಗಿದೆ. ಆದರೆ ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್ ನಿಖರವಾಗಿ ಸರಣಿ ಫಲಿತಾಂಶ ಊಹಿಸಿದ್ದಾರೆ.

Read Full Story

07:00 PM (IST) Aug 04

ರಿದಂ ಆಫ್ ಬಿಎಲ್‌ಆರ್ - ವಿಶಿಷ್ಟ ಧ್ವನಿ ಗುರುತು ಅನಾವರಣಗೊಳಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣವು ತನ್ನದೇ ಆದ ವಿಶಿಷ್ಟ ಸಂಗೀತ ಗುರುತನ್ನು 'ರಿದಂ ಆಫ್ ಬಿಎಲ್‌ಆರ್' ಅನ್ನು ಬಿಡುಗಡೆ ಮಾಡಿದೆ. ರಿಕ್ಕಿ ಕೇಜ್ ಸಂಯೋಜಿಸಿರುವ ಈ ಸಂಗೀತವು ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Read Full Story

06:49 PM (IST) Aug 04

ಮಂಪರು ಪರೀಕ್ಷೆ - ನಿಜಕ್ಕೂ ಸತ್ಯವನ್ನು ಹೊರಗೆಡವಲು ನೆರವಾಗುತ್ತದೆಯೇ?

ಸತ್ಯ ಹೊರತೆಗೆಯಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮಂಪರು ಪರೀಕ್ಷೆ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಈ ವಿಧಾನ ವಾಸ್ತವವಾಗಿ ನಿಜ ಹೊರತರಲು ನೆರವಾಗುತ್ತದೆಯೇ? ಅಥವಾ ಬುದ್ಧಿವಂತ ಅಪರಾಧಿಗಳು ಈ ವ್ಯವಸ್ಥೆಯನ್ನು ಮೋಸಗೊಳಿಸಲು ಸಾಧ್ಯವೇ?

 

Read Full Story

06:30 PM (IST) Aug 04

ನೇಹಾ ಹಿರೇಮಠ ಪ್ರಕರಣ - ಆರೋಪಿ ಫಯಾಜ್‌ ಜಾಮೀನು ಅರ್ಜಿ ತಿರಸ್ಕೃತ, ಖುದ್ದು ಕೋರ್ಟ್‌ಗೆ ಹಾಜರಾಗಲು ಸೂಚನೆ

ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ಗೆ ಹುಬ್ಬಳ್ಳಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಫಯಾಜ್ ಪರ ವಕೀಲರ ವಾದಗಳನ್ನು ತಿರಸ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು ಜೈಲಿನಲ್ಲೇ ಉಳಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 6 ರಂದು ನಡೆಯಲಿದೆ.
Read Full Story

06:30 PM (IST) Aug 04

ನಾಳೆ ಬೆಳಗ್ಗೆ 6 ಗಂಟೆಯಿಂದ ಬಸ್ ಬಂದ್, ಹೈಕೋರ್ಟ್ ಆದೇಶದ ನಡುವೆ ಮುಷ್ಕರ್ ಫಿಕ್ಸ್

ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ. ಈ ಕುರಿತು ಸಾರಿಗೆ ಮುಖಂಡ ಅನಂತ ಸುಬ್ಬರಾವ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

Read Full Story

05:50 PM (IST) Aug 04

ಹಾಲಿನ ಗುಣಮಟ್ಟದ ಅನುಮಾನ ಬೆಂಗಳೂರಿನಲ್ಲಿ 27 ಕಡೆ ದಾಳಿ, ಆಹಾರ ಸುರಕ್ಷತೆ ಬಗ್ಗೆ ಆರೋಗ್ಯ ಸಚಿವರ ಮಹತ್ವದ ಮಾಹಿತಿ

ಬೆಂಗಳೂರಿನಲ್ಲಿ ಹಾಲಿನ ಗುಣಮಟ್ಟದ ಕುರಿತು ಆತಂಕ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ದಾಳಿ ನಡೆಸಿ ಹಾಲಿನ ಮಾದರಿಗಳನ್ನು ಸಂಗ್ರಹಿಸಿದೆ. ರಾಜ್ಯಾದ್ಯಂತ 870 ಹಾಲಿನ ಕೇಂದ್ರಗಳಿಂದ ಮಾದರಿಗಳನ್ನು ಪಡೆದು, ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

Read Full Story

05:48 PM (IST) Aug 04

ಸಾರಿಗೆ ನೌಕರರ ಮುಷ್ಕರ ಬಿಸಿ, ಐಟಿ ನೌಕರರಿಗೆ ವರ್ಕ್ ಫ್ರಮ್ ಹೋಮ್ ಕೊಡಲು ಮನವಿ

ಸಾರಿಗೆ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದಾರೆ. ನಾಳೆ ಆರಂಭವಾಗಬೇಕಿದ್ದ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದರೆ ಆಗಸ್ಟ್ 6ರಿಂದ ಮುಷ್ಕರ ಆರಂಭಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಪರ್ಯಾವಾಗಿ ಸರ್ಕಾರ ಕೆಲ ಪ್ಲಾನ್ ಮಾಡಿದೆ.

 

Read Full Story

04:52 PM (IST) Aug 04

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆ

ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಆಯೋಜಿಸಿರುವ ಬೃಹತ್ ಪ್ರತಿಭಟನೆ ಮುಂದೂಡಿಕೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದೀಗ ಈ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆಯಾಗಿದೆ.

Read Full Story

04:34 PM (IST) Aug 04

ಧರ್ಮಸ್ಥಳದಲ್ಲಿ 15 ವರ್ಷ ವರ್ಷದ ಬಾಲಕಿಯ ಶವ ಹೂತಿಟ್ಟ ಆರೋಪ - ಎಸ್ಐಟಿಗೆ ಬಂತು ಮತ್ತೊಂದು ದೂರು!

ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ಸಮಾಜ ಸೇವಕ ಜಯನ್ ಟಿ ಆರೋಪಿಸಿದ್ದಾರೆ. ಈ ಆರೋಪದ ಮೇರೆಗೆ ಎಸ್ಐಟಿ ಸೂಚನೆ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

04:03 PM (IST) Aug 04

ಕಾಫಿ ಪ್ರಿಯರಿಗೆ ಶಾಕ್​! ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಲೆಗೆ FDI ಅನುಮತಿ

ನೀವು ಕುಡಿಯುವ ಕಾಫಿಯಲ್ಲಿ ಶೇಕಡಾ ಜಿರಲೆ ಅಂಶ ಇರುವುದು ನಿಮಗೆ ಗೊತ್ತಾ? ಶೇಕಡಾ 10ರಷ್ಟು ಅನುಮತಿಯೂ ಇದಕ್ಕಿದೆ. ಏನಿದು ವಿಷ್ಯ? ಇಲ್ಲಿದೆ ಡಿಟೇಲ್ಸ್​...

 

Read Full Story

04:02 PM (IST) Aug 04

ನೀತಾ ಅಂಬಾನಿ ಬಳಿ ಇದೆಯಾ 100 ಕೋಟಿ ರೂ ಚಮೆಲಿಯನ್ ಕಾರು? ಏನಿದರ ಸತ್ಯ?

ಮುಕೇಶ್ ಅಂಬಾನಿ, ಅನಂತ್ ಅಂಬಾನಿ, ಅಕಾಶ್ ಅಂಬಾನಿ ಅಲ್ಲ, ನೀತಾ ಅಂಬಾನಿ ಬಳಿ ಇದೆ ವಿಶ್ವದ ಅತೀ ದುಬಾರಿ ಕಾರು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಿಜಕ್ಕೂ ನೀತಾ ಅಂಬಾನಿ ಬಳಿ 100 ಕೋಟಿ ರೂ ಆಡಿ ಚಮಿಲಿಯನ್ ಕಾರು ಇದೆಯಾ?

 

Read Full Story

03:34 PM (IST) Aug 04

ನಾಳೆವರೆಗೆ ಸಾರಿಗೆ ನೌಕರರ ಮುಷ್ಕರ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ, ನಾಳೆ ಬಸ್ ಲಭ್ಯ

ಸಾರಿಗೆ ನೌಕರರು ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನ ವಿಫಲದ ಬೆನಲ್ಲೇ ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ನೌಕರರಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳೆಯ ವರೆಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.

 

Read Full Story

03:20 PM (IST) Aug 04

ಧರ್ಮಸ್ಥಳ ಪ್ರಕರಣ - ಮೂಟೆ ಉಪ್ಪು ಕಾಡೊಳಗೆ ಕೊಂಡೊಯ್ದ ಕಾರ್ಮಿಕರು, ಮತ್ತೊಂದು ಕಳೇಬರಹ ಪತ್ತೆ

ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದ್ದು, ಉಪ್ಪು ಮತ್ತು ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿದ್ದಾರೆ. ಇದರಿಂದ ಕಳೇಬರಹದ ಅವಶೇಷಗಳು ಸಿಕ್ಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

Read Full Story

03:11 PM (IST) Aug 04

ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಬಂದ್, ಸಿಎಂ ಸಿದ್ದರಾಮಯ್ಯ-ನೌಕರರ ಸಂಧಾನ ವಿಫಲ

ಸಿಎಂ ಸಿದ್ದರಾಮಯ್ಯ ಮನವಿಗೆ ಮನವಿಗೂ ಸಾರಿಗೆ ನೌಕರರು ಕ್ಯಾರೇ ಎಂದಿಲ್ಲ. ಕರೆದಿದ್ದ ಮಹತ್ವದ ಸಂಧಾನ ಸಭೆ ವಿಫಲಗೊಂಡಿದೆ. ಇದರ ಪರಿಣಾಮ ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿಲ್ಲ.

Read Full Story

03:00 PM (IST) Aug 04

'ಒಂದಕ್ಕೊಂದನ್ನ ಜೋಡಿಸಬಾರದು..' ಧರ್ಮಸ್ಥಳ ವಿವಾದದ ಬಗ್ಗೆ ಮಂತ್ರಾಲಯ ಶ್ರೀಗಳು ಮಹತ್ವದ ಹೇಳಿಕೆ

ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದ ಕುರಿತು ಮಂತ್ರಾಲಯ ಶ್ರೀಗಳು ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ತನಿಖೆಯ ಮೂಲಕ ಸತ್ಯ ಹೊರಬೀಳಲಿದೆ ಎಂದಿದ್ದಾರೆ. ಧಾರ್ಮಿಕ ಕ್ಷೇತ್ರದ ಪಾವಿತ್ರತೆಯನ್ನು ವ್ಯವಸ್ಥೆಯ ಲೋಪದೋಷಗಳೊಂದಿಗೆ ಜೋಡಿಸಬಾರದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
Read Full Story

02:33 PM (IST) Aug 04

ಎರಡು ವರ್ಷ ಎಲ್ಲಿ ಹೋಗಿದ್ಯಪ್ಪಾ ರಾಹುಲ್ ಗಾಂಧಿ? ಈಗ ಬಂದು ಅದ್ಯಾವ ಬಾಂಬ್ ಹಾಕ್ತಿರೋ ಹಾಕಿ - ಆರ್ ಅಶೋಕ್ ಸವಾಲು

ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಕಾಂಗ್ರೆಸ್ ನಡೆಯನ್ನು ವಿರೋಧಿಸಿ, ಆರ್. ಅಶೋಕ್ ಅವರು ಟಿಪ್ಪುವನ್ನು ನಾಡದ್ರೋಹಿ ಎಂದು ಕರೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Read Full Story

01:39 PM (IST) Aug 04

ಜ್ಯೂ ಡಾಕ್ಟರ್ ಯತೀಂದ್ರ ನಾಲ್ವಡಿಗಿಂತ ನಮ್ಮಪ್ಪನೇ ದೊಡ್ಡವ್ರು ಎಂದ್ರು, ಈಗ ಮಹದೇವಪ್ಪ ಸರದಿ - ಪ್ರತಾಪ್ ಸಿಂಹ ಕಿಡಿ

ಕೆಆರ್‌ಎಸ್ ಅಣೆಕಟ್ಟೆಯ ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರದ ಕುರಿತು ಸಚಿವ ಎಚ್‌.ಸಿ. ಮಹದೇವಪ್ಪ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇತಿಹಾಸ ತಿರುಚುವ ಯತ್ನ ಎಂದು ಆರೋಪಿಸಿದ್ದಾರೆ.
Read Full Story

01:19 PM (IST) Aug 04

ಕೊಪ್ಪಳ - ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ನಡುರಸ್ತೆಯಲ್ಲಿ ಹಿಂದೂ ಯುವಕನ ಹತ್ಯೆ!

ಕೊಪ್ಪಳದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಸಾಧಿಕ್ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಗೆ ಮುನ್ನ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಮಚ್ಚು ಹಿಡಿದು ರೀಲ್ಸ್ ಅಪ್‌ಲೋಡ್ ಮಾಡಿದ್ದ.
Read Full Story

12:51 PM (IST) Aug 04

ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ!

ಯಾದಗಿರಿಯ ಮುಸ್ಲಿಂ ಯುವಕ ಮಹಮದ್ ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮೀಜಿಯಾಗಿ ಚೌಡಹಳ್ಳಿ ಗ್ರಾಮದ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಅವರ ಮೂಲ ಧರ್ಮ ಬಯಲಾದ ನಂತರ ಗ್ರಾಮಸ್ಥರ ಆಕ್ಷೇಪ ವ್ಯಕ್ತವಾಯಿತು. ಈ ವಿವಾದದ ಪರಿಣಾಮವಾಗಿ ನಿಜಲಿಂಗಸ್ವಾಮೀಜಿ ಮಠ ತ್ಯಜಿಸಿ ಊರಿಗೆ ಹಿಂತಿರುಗಿದರು.
Read Full Story

12:50 PM (IST) Aug 04

ಸೋಷಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲ ಮೆಸೇಜ್ ಪ್ರಕರಣ; ಮತ್ತಿಬ್ಬರು ಆರೋಪಿಗಳನ್ನ ಬಂಧಿಸಿದ ಸೈಬರ್ ಪೊಲೀಸರು

ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

Read Full Story

12:18 PM (IST) Aug 04

Shibu Soren - ಮೂರು ಬಾರಿ ಸಿಎಂ, 35 ವರ್ಷ ಸಂಸದರಾಗಿದ್ದ ಸೊರೇನ್ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದು ಕೇವಲ ಹತ್ತೇ ದಿನ!

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸ್ಥಾಪಕ ಶಿಬು ಸೊರೆನ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

Read Full Story

11:55 AM (IST) Aug 04

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ ಗುಡ್ನೆಸ್’ ಕಟ್ಟಿದ ಟೆಕಿ!

ಬೆಳಗಾವಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಕೆಲಸ ಬಿಟ್ಟು ಆಲೆಮನೆಯಲ್ಲಿ ಬೆಲ್ಲ ತಯಾರಿಸಿ ಯಶಸ್ಸು ಕಂಡಿದ್ದಾರೆ. ಕೇವಲ ಎರಡೇ ವರ್ಷಗಳಲ್ಲಿ ₹2 ಕೋಟಿ ವಹಿವಾಟು ನಡೆಸಿರುವ ಇವರ ಬ್ರ್ಯಾಂಡ್ ಪಾವನಾ ಗುಡ್ನೆಸ್, ಸಗಟು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.

Read Full Story

11:53 AM (IST) Aug 04

ಕೆಆರ್‌ಎಸ್‌ನ ರಹಸ್ಯ - ಕನ್ನಂಬಾಡಿಯ ಹೆಬ್ಬಾಗಿಲಿನಲ್ಲಿ ಹಾಕಿರುವ ಆ 3 ಕಲ್ಲುಗಳಲ್ಲಿ ಟಿಪ್ಪು ಭಾವಚಿತ್ರವೇಕೆ?

KRS ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರದ ಬಗ್ಗೆ ಸಚಿವ ಎಚ್‌.ಸಿ. ಮಹದೇವಪ್ಪನವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶಿಲಾಫಲಕದಲ್ಲಿರುವ ಮಾಹಿತಿ ಮತ್ತು ಟಿಪ್ಪುವಿನ ಕನಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಟಿಪ್ಪುವಿನ ಆಶಯಕ್ಕೆ ಗೌರವ ನೀಡಿದ್ದಾರೆ ಎಂಬ ಮಾಹಿತಿ ಇದೆ.

Read Full Story

11:45 AM (IST) Aug 04

ಧರ್ಮಸ್ಥಳಕ್ಕೆ ಹೊಸ ಮಾದರಿಯ BE6 ಕಾರ್ ಉಡುಗೊರೆಯಾಗಿ ನೀಡಿದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಧರ್ಮಸ್ಥಳ ಕ್ಷೇತ್ರಕ್ಕೆ ಹೊಸ ಮಾದರಿಯ BE6 ಕಾರನ್ನು ಉಡುಗೊರೆಯಾಗಿ ನೀಡಿದೆ. ವೀರೇಂದ್ರ ಹೆಗ್ಗಡೆ ಅವರಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸಲಾಯಿತು. ಈ ಕಾರನ್ನು ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು.
Read Full Story

10:35 AM (IST) Aug 04

Gold Silver - ಸಂಬಳ ಆಗ್ತಿದ್ದಂತೆ ಚಿನ್ನ ಖರೀದಿಸೋ ಪ್ಲಾನ್ ಇದ್ಯಾ? ಇಂದು 1 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?

Gold And Silver Price Today: ಶ್ರಾವಣ ಮಾಸದಲ್ಲಿ ಚಿನ್ನ ಖರೀದಿ ಭರಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಾಹಿತಿ ಇಲ್ಲಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಪ್ರಮುಖ ನಗರಗಳಲ್ಲಿ ಹೋಲಿಸಲಾಗಿದೆ.

Read Full Story

09:59 AM (IST) Aug 04

Reporter Diary - ಉತ್ತರ ಕನ್ನಡದ ಕುತೂಹಲಕಾರಿ ಡೈರಿ ರಹಸ್ಯ, ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿದ್ದು ಅಚ್ಚರಿಯ ಮಾಹಿತಿ!

ಮಾರ್ಷಲ್‌ಗಳ ನಡುವೆ ನಡೆದ ಹಾಸ್ಯಪ್ರಸಂಗ, ಕಂಪನಿಯ ಡೈರಿಯಲ್ಲಿ ಸಾಹಿತಿಗಳು, ಪತ್ರಕರ್ತರ ಹೆಸರುಗಳು ವೈರಲ್, ರೋಣ ಶಾಸಕರಿಗೆ ಮಂತ್ರಿ ಪಟ್ಟಕ್ಕೆ ಕಂಟಕವೇನು ಎಂಬ ಪ್ರಶ್ನೆ - ಇವೆಲ್ಲವೂ ಈ ವಾರದ ಕುತೂಹಲಕಾರಿ ಘಟನೆಗಳು.
Read Full Story

09:05 AM (IST) Aug 04

ನೇಹಾ ಹಿರೇಮಠ ಕೊಲೆ ಪ್ರಕರಣ - ದರ್ಶನ್‌ರಂತೆ ನನಗೂ ಬೇಲ್ ಕೊಡಿ ಎಂದ ಹಂತಕ, ಇಂದು ತೀರ್ಪು ಪ್ರಕಟ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಈ ಪ್ರಕರಣವು ಲವ್ ಜಿಹಾದ್ ಆರೋಪಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
Read Full Story

08:51 AM (IST) Aug 04

ಯುಪಿಐ ಬಳಸಿ ರೈತನ ₹1.60 ಕೋಟಿ ವಂಚನೆ

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರುಪಾಯಿಯನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜರುಗಿದೆ.

Read Full Story

08:43 AM (IST) Aug 04

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು; ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ? ಇಲ್ಲಿದೆ ಮಾಹಿತಿ

ಕಳೆದ ಕೆಲವು ದಿನಗಳಿಂದ ವಿರಾಮ ತೆಗೆದುಕೊಂಡಿದ್ದ ಮಳೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Read Full Story

08:36 AM (IST) Aug 04

ಇಬ್ಬರು ಪುತ್ರರು ಇರೋ ತಾಯಿಗೆ ತವರು ಮನೆಯವರು ಕರೆಸಿ ಸೀರೆ, ಬಳೆ ಉಡಿ ತುಂಬಬೇಕು - ಉತ್ತರ ಕರ್ನಾಟಕದಲ್ಲಿ ಸಕತ್ ವದಂತಿ, ಭರ್ಜರಿ ಸೀರೆ ವ್ಯಾಪಾರ!

ಉತ್ತರ ಕರ್ನಾಟಕದಲ್ಲಿ ಇಬ್ಬರು ಗಂಡು ಮಕ್ಕಳ ತಾಯಂದಿರಿಗೆ ಹಸಿರು ಸೀರೆ ಉಡಿಸುವ ಪದ್ಧತಿ ಹಬ್ಬುತ್ತಿದೆ. ಯಾರಾರ‍ಯದೋ ಮಾತಿನಂತೆ ಜನರು ಸೀರೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಈ ಪದ್ಧತಿಯ ಹಿಂದಿನ ನಿಜವಾದ ಕಾರಣವೇನು?
Read Full Story

08:34 AM (IST) Aug 04

ಸುಗಮ ಸಂಗೀತ ಸಮ್ಮೇಳನಕ್ಕೆ ಅದ್ಧೂರಿ ತೆರೆ

ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಭಾನುವಾರ ತೆರೆ ಬಿತ್ತು.

Read Full Story

08:21 AM (IST) Aug 04

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಆ.5ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕರ್ತವ್ಯಕ್ಕೆ 4,459 ಪೊಲೀಸರನ್ನು ನಿಯೋಜಿಸಲಾಗಿದೆ.

Read Full Story

08:14 AM (IST) Aug 04

ಹುಬ್ಬಳ್ಳಿ ನೇಹಾ ಹಿರೇಮಠ ಕೇಸ್; ಇಂದು ಆರೋಪಿ ಫಯಾಜ್‌ ಭವಿಷ್ಯ ನಿರ್ಧಾರ

Neha Hiremath Case: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊ*ಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯ ವಿಚಾರಣೆ  ನಡೆದಿದ್ದು, ಇಂದು ತೀರ್ಪು ಪ್ರಕಟವಾಗಲಿದೆ. ಹಿಂದೂ ಸಂಘಟನೆಗಳು ಫಯಾಜ್‌ಗೆ ಜಾಮೀನು ನೀಡಬಾರದು ಎಂದು ಪ್ರತಿಭಟನೆ ನಡೆಸಲಿವೆ.

Read Full Story

08:07 AM (IST) Aug 04

Dharmasthala mass burials case - ಕಳೇಬರ ಪತ್ತೆ ಕಾರ್ಯಾಚರಣೆಗೆ ರಾಡಾರ್‌?

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸುವಂತೆ ವಕೀಲರೊಬ್ಬರು ಒತ್ತಾಯಿಸಿದ್ದಾರೆ. ಈ ಮೂಲಕ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಬಹುದು ಎಂಬುದು ಅವರ ವಾದ. ಉತ್ಖನನದಲ್ಲಿ ಇದುವರೆಗೆ ಒಂದು ಕಡೆ ಮಾತ್ರ ಅಸ್ಥಿಪಂಜರದ ತುಣುಕುಗಳು ಪತ್ತೆಯಾಗಿವೆ.
Read Full Story

More Trending News