- Home
- Karnataka Districts
- Dakshina Kannada
- ಧರ್ಮಸ್ಥಳಕ್ಕೆ ಹೊಸ ಮಾದರಿಯ BE6 ಕಾರ್ ಉಡುಗೊರೆಯಾಗಿ ನೀಡಿದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ
ಧರ್ಮಸ್ಥಳಕ್ಕೆ ಹೊಸ ಮಾದರಿಯ BE6 ಕಾರ್ ಉಡುಗೊರೆಯಾಗಿ ನೀಡಿದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಧರ್ಮಸ್ಥಳ ಕ್ಷೇತ್ರಕ್ಕೆ ಹೊಸ ಮಾದರಿಯ BE6 ಕಾರನ್ನು ಉಡುಗೊರೆಯಾಗಿ ನೀಡಿದೆ. ವೀರೇಂದ್ರ ಹೆಗ್ಗಡೆ ಅವರಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸಲಾಯಿತು. ಈ ಕಾರನ್ನು ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಕ್ಷೇತ್ರಕ್ಕೆ ತನ್ನ ಹೊಸ ಮಾದರಿಯ BE6 ಕಾರ್‌ನ್ನು (Mahindra BE 6E) ಮಹೀಂದ್ರ ಆಂಡ್ ಮಹೀಂದ್ರ ಕಂಪನಿ (Mahindra and Mahindra Ltd ) ಉಡುಗೊರೆಯಾಗಿ ನೀಡಿದೆ.
ಖಾನೋಲ್ಕರ್ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸಂಸದರೂ ಆಗಿರುವ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನ್ಯೂ BE6 ಕೀ ನೀಡುವ ಮೂಲಕ ಕಾರ್‌ನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದ್ದಾರೆ.
ಕಾರ್ ಹಸ್ತಾಂತರಿಸಿದ ಬಳಿಕ ವಿನಯ್ ಖಾನೋಲ್ಕರ್ (Vinay Khanolka) ಮಾತನಾಡಿದರು. ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ತಯಾರದ ಹೊಸ ಮಾದರಿಯ ಕಾರ್ ಧರ್ಮಸ್ಥಳಕ್ಕೆ ನೀಡುವುದು ಸಂಪ್ರದಾಯ. ಇದರಿಂದ ಕಂಪನಿ ಪ್ರಗತಿ ಸಾಧಿಸಿದೆ. ಈಗಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗಲಾಗ್ತಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಖಾವಂದರು, ಧರ್ಮಸ್ಥಳ ಕ್ಷೇತ್ರಕ್ಕೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಅರ್ಪಿಸುತ್ತಿರುವ ಮೂರನೇ ಕಾರ್ ಇದಾಗಿದೆ. ಕಂಪನಿ ನೀಡಿರುವ ಕಾರ್‌ನ್ನು ಗ್ರಾಮಾಭಿವೃದ್ದಿ ಯೋಜನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಹೇಳಿದರು.
ನಂತರ ವಿನಯ್ ಖೋಲ್ಕರ್ ಅವರ ಕೀ ಹಸ್ತಾಂತರಿಸಿದ ಬಳಿಕ ವೀರೆಂದ್ರ ಹೆಗ್ಗಡೆ ಅವರೇ ಕಾರ್ ಚಾಲನೆ ಮಾಡುವ ಮೂಲಕ ಶುಭ ಹಾರೈಸಿದರು. Mahindra BE 6E ಕಾರ್ ಬೆಲೆ 18 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.