ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ರಾಬರಿ ಪ್ರಕರಣಗಳು ಮುಂದುವರೆದಿದ್ದು, ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು 52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನ ತಡವಾಗಿ ಬೆಳಕಿಗೆ ಬಂದಿದೆ. ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕಲ್ಲೇಶ ಪೂಜಾರಿಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಬಗ್ಗೆ ಮಾಹಿತಿ ನೀಡಿದರು. ಮೇ 23ರ ಸಂಜೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 11.30ರ ಅವಧಿಯಲ್ಲಿ ಕೃತ್ಯ ಎಸಗಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
11:53 PM (IST) Jun 03
ಸೋಲು, ಟ್ರೋಲು ಸೇರಿದಂತೆ ಎಲ್ಲವನ್ನು ನೋಡಿದ ಕೊಹ್ಲಿ 18ನೇ ವರ್ಷದಲ್ಲಿ ಟ್ರೋಫಿ ಸಿಹಿ ಕಂಡಿದ್ದಾರೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.
11:47 PM (IST) Jun 03
11:24 PM (IST) Jun 03
ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಸಲ್ ಕಪ್ ನಮ್ದಾಗಿದೆ. ಇತ್ತ ಅಭಿಮಾನಿಗಳ ಸಂಭ್ರಮಾಚರಣೆ ಡಬಲ್ ಆಗಿದೆ.
10:40 PM (IST) Jun 03
ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ದಾಖಲೆಗೆ ಧವನ್ ದಾಖಲೆ ಪುಡಿಯಾಗಿದೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಯೇ ಬಾಸ್
09:58 PM (IST) Jun 03
190 ರನ್ ಆರ್‌ಸಿಬಿ ಢಿಪೆಂಡ್ ಮಾಡಿಕೊಳ್ಳುತ್ತಾ? ಈ ಮೊತ್ತವನ್ನು ಪಂಜಾಬ್ ಚೇಸ್ ಮಾಡುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇಧರ ನಡುವೆ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಅಂಕಿ ಅಂಶ ಸಮಾಧಾನ ತಂದಿದೆ. ಜೋಶ್ ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ.
09:31 PM (IST) Jun 03
09:26 PM (IST) Jun 03
ಫೈನಲ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಇರಲಿಲ್ಲ. ವಿಕೆಟ್ ಕಳೆದಕೊಂಡು ಆತಂಕ ಎದುರಿಸಿತ್ತು. ಕೊನೆಗೆ 190 ರನ್ ಸಿಡಿಸಿದೆ. ಈ ಮೊತ್ತ ಪಂಜಾಬ್ ಕಿಂಗ್ಸ್ ಕಟ್ಟಿ ಹಾಕಿ ಟ್ರೋಫಿ ಗೆಲ್ಲಲು ಸಾಕೇ? ಅಹಮ್ಮದಾಬಾದ್ ಟಿ20 ಅಂಕಿ ಅಂಶ ಏನು?
09:12 PM (IST) Jun 03
08:59 PM (IST) Jun 03
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು 2025ರ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
08:42 PM (IST) Jun 03
ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ರ‍್ಯಾಂಕ್ 1 ಪಡೆದರೆ, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಪಡೆದಿದ್ದಾರೆ. ಇನ್ನೂ 137 ವಿದ್ಯಾರ್ಥಿಗಳು ಟಾಪ್ 10,000 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ
08:07 PM (IST) Jun 03
ರಾತ್ರಿ ವೇಳೆ ಮಗ-ಸೊಸೆ ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ತೆಯ ನಡೆಯನ್ನು ಕಂಡು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.
07:57 PM (IST) Jun 03
07:38 PM (IST) Jun 03
ಸಿಎಸ್‌ಕೆ ಪರ ನಿಷ್ಠೆ, ಆರ್‌ಸಿಬಿ ವಿರುದ್ಧ ಕೆಂಡಕಾರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಶುಭ ಹಾರೈಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ರಾಯುಡು ವಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಈ ಆಟ ಇಲ್ಲಿ ಬೇಡ ಎಂದಿದ್ದಾರೆ.
07:04 PM (IST) Jun 03
06:53 PM (IST) Jun 03
06:36 PM (IST) Jun 03
06:35 PM (IST) Jun 03
ಕೆಲವೇ ಹೊತ್ತಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆದರೆ ಇದೇ ನಾಯಕರು ಇಬ್ಬರು 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಈ ರೋಚಕ ಹೋರಾಟದಲ್ಲಿ ಗೆದ್ದಿದ್ದು ಯಾರು?
06:23 PM (IST) Jun 03
06:04 PM (IST) Jun 03
05:49 PM (IST) Jun 03
ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಇದುವರೆಗೆ ಐಪಿಎಲ್ ವಿನ್ನರ್ ಕುರಿತು ಹೇಳಿದ ಭವಿಷ್ಯ ನಿಜವಾಗಿದೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗಲಿದೆ ಎಂದಿದ್ದ ಭವಿಷ್ಯ ಕೂಡ ನಿಜವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲಲಿದ್ದಾರೆ ಅನ್ನೋ ಭವಿಷ್ಯ ನುಡಿದಿದ್ದಾರೆ.
04:48 PM (IST) Jun 03
ಕರಾಚಿಯ ಮಾಲಿರ್ ಜಿಲ್ಲಾ ಕಾರಾಗೃಹದಲ್ಲಿ ಭೂಕಂಪದ ನಂತರ ಕೈದಿಗಳನ್ನು ಎಣಿಸಲು ಹೊರಗೆ ಕರೆತಂದಾಗ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. 78 ಕೈದಿಗಳನ್ನು ಮರು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಕೈದಿ ಮೃತಪಟ್ಟಿದ್ದಾನೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
04:44 PM (IST) Jun 03
ಆರ್‌ಸಿಬಿ ಗೆದ್ದೆ ಗೆಲ್ಲುತ್ತೆ ಅನ್ನೋ ವಿಶ್ವಾಸದಲ್ಲಿದೆ. ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ಇದರ ನಡುವೆ ರ‍್ಯಾಪ್ ಸಿಂಗರ್ ಡ್ರೇಕ್ ಐಪಿಎಲ್ ಫೈನಲ್ ಪಂದ್ಯಕ್ಕೆ ಬರೋಬ್ಬರಿ 6.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ.
04:24 PM (IST) Jun 03
03:58 PM (IST) Jun 03
ಪತಿ ತೀರಿಕೊಂಡ ಮಹಿಳೆಗೆ ಪತಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಪಾಲಕ್ಕಾಡ್ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
03:48 PM (IST) Jun 03
ನನ್ನರಸಿ ರಾಧೆ, ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟ ಅಭಿನವ್ ವಿಶ್ವನಾಥನ್ ಕರಿಮಣಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
03:46 PM (IST) Jun 03
ಆರ್‌ಸಿಬಿ ಫೈನಲ್ ಪಂದ್ಯ ಹಾಗೂ ಪ್ರಶಸ್ತಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಫುಲ್ ಆರ್‌ಸಿಬಿಯದ್ದೇ ಹವಾ. ಇಂದಿನ ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಕೆಲ ಪಬ್, ರೆಸ್ಟೋರೆಂಟ್ ಭರ್ಜರಿ ಆಫರ್ ನೀಡುತ್ತಿದೆ. ಉಚಿತ ಬಿಯರ್, 1+1 ಕಾಕ್‌ಟೈಲ್ ಡೀಲ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ.
03:33 PM (IST) Jun 03
8ನೇ ವೇತನ ಆಯೋಗ ರಚನೆ ಬಗ್ಗೆ ಮೋದಿ ಸರ್ಕಾರ ಘೋಷಿಸಿದಾಗಿನಿಂದ, ನೌಕರರು ಮತ್ತು ಪಿಂಚಣಿದಾರರಲ್ಲಿ ವೇತನ ಹೆಚ್ಚಳ ಎಷ್ಟಿರುತ್ತದೆ ಎಂಬ ಕುತೂಹಲ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
03:12 PM (IST) Jun 03
ಬಾಲಿವುಡ್ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೊರಾ ಸಖತ್ ಬೋಲ್ಡ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಈ ಕುರಿತು ಕುಡಿ ಕಾರಿದ್ದಾರೆ.
03:12 PM (IST) Jun 03
02:51 PM (IST) Jun 03
02:43 PM (IST) Jun 03
ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡದ ಪಾಲಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸ್ಪೋಟಕ ಬ್ಯಾಟರ್ ತಂಡ ಕೂಡಿಕೊಂಡಿರುವುದು ಬೆಂಗಳೂರು ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.
02:31 PM (IST) Jun 03
ಐಪಿಎಲ್ ಫೈನಲ್ ವೀಕ್ಷಿಸಲು ಅಹಮದಾಬಾದ್‌ಗೆ ತೆರಳಬೇಕಿದ್ದ RCB ಅಭಿಮಾನಿಗಳು ಸ್ಪೈಸ್ ಜೆಟ್ ವಿಮಾನ ವಿಳಂಬದಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಅಭಿಮಾನಿಗಳು ಪಂದ್ಯ ವೀಕ್ಷಣೆ ತಪ್ಪಸಿಕೊಳ್ಳಬಹುದು.
02:08 PM (IST) Jun 03
ಲಕ್ಕುಂಡಿ ಗ್ರಾಮದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
01:24 PM (IST) Jun 03
01:03 PM (IST) Jun 03
ಅಹಮದಾಬಾದ್: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿಂದು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೀಗಿರುವಾಗಲೇ ಟಿಮ್ ಡೇವಿಡ್ ಅವರ ಕುರಿತಂತೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
12:46 PM (IST) Jun 03
12:46 PM (IST) Jun 03
12:31 PM (IST) Jun 03
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
12:29 PM (IST) Jun 03
12:28 PM (IST) Jun 03