ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ವೇಳೆ ಅನೇಕ ಪ್ರಶ್ನೆಗಳನ್ನ ಕೇಳುವಾಗ 5 ನಿಮಿಷ ಸಮಯಕೊಡಿ ಅಂತ ಕೇಳಿ ಒಳಗಡೆ ಹೋದ ಉದ್ಯಮಿ ಸಿ.ಜೆ.ರಾಯ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯಮಿ ಸಿ.ಜೆ.ರಾಯ್ ಒಬ್ಬ ಒಳ್ಳೆಯ ಉದ್ಯಮಿ. ಹೀಗೆ ಆಗಬಾರದಿತ್ತು. ಐಟಿ ತಂಡ ಕೇರಳದಿಂದ ಬಂದಿತ್ತು ಎಂಬ ಮಾಹಿತಿ ಇದೆ. ಈ ಘಟನೆ ಕುರಿತು ನಮಗೆ ದೆಹಲಿಯಿಂದ ಕೂಡ ವರದಿ ಕೇಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ನಾನು ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳವನ್ನ ನಾನು ಖಂಡಿಸುತ್ತೇನೆ. ಇದು ಸರಿಯಲ್ಲ ಎಂದಿದ್ದಾ
12:07 AM (IST) Feb 01
ದಾವಣಗೆರೆಯಲ್ಲಿ ಮಹಿಳಾ ಸಿಪಿಐ ಮತ್ತು ಪೇದೆಗಳ ಮೇಲೆ ನಡೆದ ಹಲ್ಲೆ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.
11:39 PM (IST) Jan 31
ದಾವಣಗೆರೆಯಲ್ಲಿ, ಕಾಂಗ್ರೆಸ್ ಮುಖಂಡನ ಪುತ್ರನಾದ ರೌಡಿಶೀಟರ್ ಹುಸೇನ್, ತನ್ನನ್ನು ಬಂಧಿಸಲು ಬಂದ ಮಹಿಳಾ ಸಿಪಿಐ ಗಾಯತ್ರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಪೊಲೀಸರ ಮೇಲಿನ ಹಲ್ಲೆ ಮತ್ತು ರಾಜಕೀಯ ಪ್ರಭಾವದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ,
11:03 PM (IST) Jan 31
10:34 PM (IST) Jan 31
ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಯುವತಿಯೊಬ್ಬಳ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ. ನ್ಯಾಯ ಪಂಚಾಯ್ತಿ ವಿಫಲವಾದ ನಂತರ ನಡೆದ ಈ ದಾಳಿಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು.
09:39 PM (IST) Jan 31
ಅಮ್ಮ ಆಗ್ತಿದ್ದಾರ ಐಶ್ವರ್ಯ ಡಿಕೆಎಸ್ ಹೆಗ್ಡೆ? ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಪ್ರಶ್ನೆ. ಐಶ್ವರ್ಯ ಡಿಕೆಎಸ್ ಹೆಗ್ಡೆ ಇತ್ತೀಚಿನ ಫೋಟೋ ಹಾಗೂ ವಿಡಿಯೋ ನೋಡಿದ ಜನ ಗುಡ್ ನ್ಯೂಸ್ ಪ್ರಶ್ನೆ ಆರಂಭಿಸಿದ್ದಾರೆ.
09:39 PM (IST) Jan 31
ವಸತಿ ಸಮುಚ್ಚಯವೊಂದರಲ್ಲಿ ಪ್ಯಾಕರ್ಸ್ & ಮೂವರ್ಸ್ ಕಾರ್ಮಿಕರಿಗೆ ಲಿಫ್ಟ್ ಬಳಸಲು ನಿರಾಕರಿಸಿದ ಘಟನೆ ನಡೆದಿದೆ. ಇದರಿಂದಾಗಿ, ಅವರು ಆರನೇ ಮಹಡಿಗೆ ಭಾರವಾದ ವಸ್ತುಗಳನ್ನು ಮೆಟ್ಟಿಲುಗಳ ಮೂಲಕವೇ ಸಾಗಿಸಬೇಕಾಯಿತು.ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
09:38 PM (IST) Jan 31
ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಕಠಿಣ ಸ್ಪರ್ಧೆ ನೀಡುತ್ತಿದೆ. ತನ್ನ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.
08:25 PM (IST) Jan 31
ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರಕ್ಕೂ ಮೊದಲು ಪುತ್ರ ರೋಹಿತ್ ಮಹತ್ವದ ಸಂದೇಶ ನೀಡಿದ್ದಾರೆ. ತಂದೆ ಅಗಲಿಕೆ ನೋವಿನಲ್ಲಿ ರೋಹಿತ್ ರಾಯ್ ರವಾನಿಸಿದ ಸಂದೇಶವೇನು? ಅಂತ್ಯಸಂಸ್ಕಾರ ಯಾವಾಗ?
07:43 PM (IST) Jan 31
ಒಮ್ಮೆ ತಡವಾಗಿ ಸೆಟ್‌ಗೆ ಬಂದಿದ್ದಕ್ಕೆ ನಿರ್ದೇಶಕರೊಬ್ಬರು ಎಲ್ಲರ ಮುಂದೆ ಕಿರುಚಾಡಿ ಅವಮಾನ ಮಾಡಿದ್ದರಂತೆ. "ತಪ್ಪು ಮಾಡಿದರೂ ಎಲ್ಲರ ಮುಂದೆ ಅವಮಾನ ಮಾಡುವುದು ಸರಿಯಲ್ಲ. ಅವರು ಸದಾ ನನ್ನನ್ನು ಬೇರೆ ನಟಿಯರ ಜೊತೆ ಹೋಲಿಕೆ ಮಾಡುತ್ತಿದ್ದರು.
07:36 PM (IST) Jan 31
ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್ ಆಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಪತ್ತೆ ಹಚ್ಚಿದ ಕಾರಣಕ್ಕೆ ದಕ್ಷ ಅಧಿಕಾರಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ರಾ?
07:13 PM (IST) Jan 31
ಬಳ್ಳಾರಿ ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ತುಂಬಿದ ಜಾಗಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ "ಇಲ್ಲಿ ಕಸ ಹಾಕಬಾರದು" ಎಂದು ಬರೆಯುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ.
06:42 PM (IST) Jan 31
06:16 PM (IST) Jan 31
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ತನುಶ್ರೀ ಎಂಬ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ.
06:10 PM (IST) Jan 31
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಗ್ ಬಾಸ್ ಪ್ರಾಯೋಜಕರಾಗಿದ್ದ ಸಿ.ಜಿ.ರಾಯ್ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಸಾವಿಗೆ ನಟ ಭುವನ್ ಪೊನ್ನಣ್ಣ ಕರ್ಮದ ಬಗ್ಗೆ ಮಾತನಾಡುತ್ತಾ ಕಂಬನಿ ಮಿಡಿದಿದ್ದಾರೆ.
05:24 PM (IST) Jan 31
05:24 PM (IST) Jan 31
Pradeep Eshwar Questions BJP over CJ Roy's Death & IT Harassment ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಹಣಕ್ಕಾಗಿ ಕಿರುಕುಳ ನೀಡಿದೆ ಎಂದು ಆರೋಪಿಸಿ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದಾರೆ.
05:23 PM (IST) Jan 31
ವಿಶ್ವ ಆರೋಗ್ಯ ಸಂಸ್ಥೆಯ ವೆಬಿನಾರ್‌ನಲ್ಲಿ ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ಪರಿಗಣಿಸಿ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿದೆ. ಆದರೆ,ಭಾರತೀಯ ತಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು,ಅಡಕೆಯ ಆಯುರ್ವೇದ ಬಳಕೆ, ಆರ್ಥಿಕ ಅವಲಂಬನೆ ಮತ್ತು ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
05:20 PM (IST) Jan 31
ಸಿಜೆ ರಾಯ್ ದುರಂತ ಸಾವು ಪ್ರಕರಣ, ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ರಚಿಸಿದ ಗೃಹ ಸಚಿವ , ಒಂದಡೆ ಅನುಮಾನಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಎಸ್ಐಟಿ ರಚಿಸಲಾಗಿದೆ.
05:17 PM (IST) Jan 31
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ, ಕೇವಲ 10 ಸಾವಿರ ರೂಪಾಯಿ ಖರ್ಚು ಮಾಡಿ ಮನೆಗೆ ಪ್ರವೇಶಿಸಿದ್ದರು. ಇತರ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಶಾಪಿಂಗ್ ಮಾಡಿದ್ದರೂ, ಗಿಲ್ಲಿ ತನ್ನ ಸರಳತೆಯಿಂದಲೇ ಆಟವಾಡಿ 60 ಲಕ್ಷ ನಗದು ಹಾಗೂ ಕಾರನ್ನು ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.
05:14 PM (IST) Jan 31
05:09 PM (IST) Jan 31
Karna Serial Tejas: ಕರ್ಣ ಧಾರಾವಾಹಿಯಲ್ಲಿ ತೇಜಸ್ ಪಾತ್ರದಲ್ಲಿ ಚೇತನ್ ರಾಜ್ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಿತ್ಯಾ ಜೊತೆ ಪ್ರೀತಿಯಲ್ಲಿದ್ದ ತೇಜಸ್, ಅವಳನ್ನು ಗರ್ಭಿಣಿ ಮಾಡುತ್ತಾನೆ. ಆ ಬಳಿಕ ಯಾರದ್ದೋ ಮಾತು ಕೇಳಿ ಅವಳ ಕ್ಯಾರೆಕ್ಟರ್ ಬಗ್ಗೆ ಅನುಮಾನ ಪಡುತ್ತಾನೆ.
04:55 PM (IST) Jan 31
ಅಮೆಜಾನ್ ಬೆನ್ನಲ್ಲೇ ಶಾಕ್ ಕೊಟ್ಟ ಓಲಾ ಎಲೆಕ್ಟ್ರಿಕ್, ಈಗಾಗಲೇ ಅಮೆಜಾನ್ ಉದ್ಯೋಗ ಕಡಿತ ಆರಂಭಿಸಿದೆ. ಇದರ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಶೇಕಡಾ 5ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ.
04:54 PM (IST) Jan 31
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಜೈಲುಗಳಲ್ಲಿನ ಅಕ್ರಮಗಳನ್ನು ತಡೆಯಲು ಅತ್ಯಾಧುನಿಕ ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಕೇಂದ್ರದ ಮೂಲಕ 8 ಕೇಂದ್ರ ಹಾಗೂ 4 ಜಿಲ್ಲಾ ಕಾರಾಗೃಹಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರಿನಿಂದಲೇ ನೇರವಾಗಿ ಮೇಲ್ವಿಚಾರಣೆ ನಡೆಸಬಹುದು.
04:47 PM (IST) Jan 31
Bhagyalakshmi Kannada Serial Actress Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಆಗಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಸುಷ್ಮಾ ಕೆ ರಾವ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಆಗಿವೆ. ಈ ಖುಷಿಯನ್ನು ಕಲರ್ಸ್ ಕನ್ನಡ ವಾಹಿನಿಯು ಅನುಬಂಧ ವೇದಿಕೆಯಲ್ಲಿ ಸಂಭ್ರಮಿಸಿದೆ.
04:20 PM (IST) Jan 31
ಬಿಗ್‌ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಶೋ ನಂತರ ಮತ್ತೆ ತಮ್ಮ ವ್ಲಾಗಿಂಗ್ ಆರಂಭಿಸಿದ್ದಾರೆ. ತಮ್ಮ ಮೊದಲ ವ್ಲಾಗ್ ಅನ್ನು ಅಭಿಮಾನಿಗಳಿಗೆ ಅರ್ಪಿಸಿದ್ದು, ಬಿಗ್‌ಬಾಸ್ ಕುರಿತ ಯಾವುದೇ ಪ್ರಶ್ನೆಗಳನ್ನು ಕೇಳುವಂತೆ ಆಹ್ವಾನಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೇ ಪ್ರಶ್ನೆ ಹರಿದುಬಂದಿದೆ.
04:17 PM (IST) Jan 31
ಬೆಂಗಳೂರು ಮೆಟ್ರೋ ನಿಗಮವು ಕೆಆರ್ ಪುರದಿಂದ ಹೊಸಕೋಟೆವರೆಗೆ 16 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ನಿರ್ಮಾಣದ ಸಾಧ್ಯತಾ ಅಧ್ಯಯನ ನಡೆಸುತ್ತಿದೆ. ಪರ್ಪಲ್ ಲೈನ್‌ನ ಈ ವಿಸ್ತರಣೆಯು ಹೊಸಕೋಟೆ ನಿವಾಸಿಗಳ ನಗರ ಪ್ರಯಾಣವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
04:16 PM (IST) Jan 31
Bhaskar Hegde Recalls HDK-BSY Dharmasthala Vow Incident ಧರ್ಮಸ್ಥಳ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ನಿವೃತ್ತಿ ಸಮಾರಂಭದಲ್ಲಿ ಹಂಚಿಕೊಂಡ ಎಚ್‌ಡಿಕೆ-ಬಿಎಸ್‌ವೈ ಆಣೆ ಪ್ರಮಾಣದ ಆ ರೋಚಕ ನೆನಪುಗಳು.
04:08 PM (IST) Jan 31
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ಅದ್ಭುತವೊಂದು ನಡೆದಿದೆ. ಹೌದು, ಇಷ್ಟು ವರ್ಷಗಳ ಕಾಲ ತಾನು ಮಾಡಿದ್ದು ತಪ್ಪು, ಶ್ರೇಷ್ಠ ಸರಿಯಿಲ್ಲ ಎಂದು ತಾಂಡವ್‌ಗೆ ಅರ್ಥ ಆಗಿದೆ, ಆದರೆ ಕಾಲ ಮಿಂಚಿ ಹೋಗಿದೆ.
04:08 PM (IST) Jan 31
ನಟ ದರ್ಶನ್ ಈ ಹಿಂದೆ ನಿರ್ದೇಶಕ ಪ್ರೇಮ್ ಅವರನ್ನು 'ಪುಡಾಂಗ್' ಎಂದು ಕರೆದಿದ್ದರು. ಈಗ ನಟ ಸುದೀಪ್ ಕೂಡ ಸಿಸಿಎಲ್ ಪಂದ್ಯದ ವೈರಲ್ ವಿಡಿಯೋಗೆ ಪ್ರೇಮ್ ಅವರೇ ಗುರು ಎಂದು ತಮಾಷೆ ಮಾಡಿದ್ದಾರೆ.
03:23 PM (IST) Jan 31
ಬಹಳ ದಿನಗಳ ನಂತರ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಳಿಯಲು ಆರಂಭಿಸಿದೆ. ಆದರೆ, ಈ ಬೆಲೆಗಳು ಮತ್ತಷ್ಟು ಇಳಿಯಲಿವೆಯೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ?
03:09 PM (IST) Jan 31
ಬೆಂಗಳೂರು ಉದ್ಯಮಿ ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್? ಸ್ಫೋಟಕ ತಿರುವು? ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸಿಜೆ ರಾಯ್ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಕಣ್ಣಿಟ್ಟಿದ್ದರು. ದಾಳಿ ವೇಳೆ ಪತ್ತೆಯಾಗಿರುವ ದಾಖಲೆಗಳು ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ.
03:03 PM (IST) Jan 31
ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಹಿಂದೆ ಆದಾಯ ತೆರಿಗೆ ಇಲಾಖೆಯ ತನಿಖೆ ಇರುವುದು ಬೆಳಕಿಗೆ ಬಂದಿದೆ. ಕೇರಳದಲ್ಲಿ 156ಕ್ಕೂ ಹೆಚ್ಚು ನಿವೇಶನಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ, ನಗದು ರೂಪದಲ್ಲಿ ಹಣ ಪಡೆದಿದ್ದಾರೆಂಬ ಆರೋಪವಿದೆ.
02:47 PM (IST) Jan 31
ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಸಾವು ಆತ್ಮ*ತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊ*ಲೆ ಎಂದು ಅವರ ಆಪ್ತ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ. ರಾಯ್ ಅವರು ಕಾಂಗ್ರೆಸ್‌ಗೆ ಫಂಡಿಂಗ್ ಮಾಡುತ್ತಿದ್ದ ಕಾರಣ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಈ ಘಟನೆ ಆಗಿದೆ ಎಂದಿದ್ದಾರೆ.
02:38 PM (IST) Jan 31
ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಸಾಯಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಶೇ. 70ರಷ್ಟು ಸುಟ್ಟಗಾಯಗಳಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
02:17 PM (IST) Jan 31
ಅಣ್ಣಯ್ಯ ಸೀರಿಯಲ್‌ನಲ್ಲಿ ಮಾಕಾಳವ್ವನ ಪವಾಡದಿಂದಾಗಿ ಶಿವು, ತಾನು ದ್ವೇಷಿಸುವ ತಾಯಿ ಶಾರದಮ್ಮಳನ್ನು ಮನೆಗೆ ಕರೆತಂದಿದ್ದಾನೆ. ರತ್ನಾ ನಿಶ್ಚಿತಾರ್ಥದ ಸಂಭ್ರಮದ ನಡುವೆ, ತಂಗಿ ರಮ್ಯಾ ಕಾಣದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದು, ತಾಯಿ-ಮಕ್ಕಳ ನಡುವಿನ ಸಂಘರ್ಷ ಕಥೆಗೆ ಹೊಸ ತಿರುವು ನೀಡಿದೆ.
02:14 PM (IST) Jan 31
ಬೆಂಗಳೂರು ಸಾರಿಗೆ ವ್ಯವಸ್ಥೆ ಕುರಿತು ಉದ್ಯಮಿ ಮೋಹನ್‌ದಾಸ್ ಪೈ ಅವರ ಟೀಕೆಗೆ ಪ್ರತಿಯಾಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖಾಮುಖಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಸೇವೆಯಾಗಿ ಪರಿಗಣಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
01:39 PM (IST) Jan 31
ಭಾನುವಾರವಾದರೂ ಈ ಸಲ ಬಜೆಟ್ ಫೆ.1ರಂದು ಮಂಡನೆ ಆಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ, ಟ್ರಂಪ್ ಉಪಟಳದ ನಡುವೆ ಬಜೆಟ್‌ಗೆ ದೇಶ ಸಾಕ್ಷಿಯಾಗುತ್ತಿದೆ. ಜನರ ಚಿತ್ತ ಆಯವ್ಯಯ ಮಂಡನೆಯತ್ತ ನೆಟ್ಟಿದೆ
01:38 PM (IST) Jan 31
ಮೈಸೂರು ತಾಲೂಕಿನ ಯಾಂದಹಳ್ಳಿ ಗ್ರಾಮದ ಬಳಿ ಪೊಲೀಸರು ಮತ್ತೊಂದು ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆಹಚ್ಚಿದ್ದಾರೆ. ಉತ್ತರ ಭಾರತದ ಮೂಲದ ದಂಪತಿಗಳು ಬಾಡಿಗೆ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾರೆ.
01:31 PM (IST) Jan 31
ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆಲ್ಲ ಹೆಚ್ಚಿನ ಜನರು ಕಾಡಿನ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದು, ಇದರಿಂದಾಗಿ ಕಾಡು ಪ್ರಾಣಿಗಳು ನಿತ್ಯವೂ ಒಂದಲ್ಲ ಒಂದು ಕಡೆ ಊರಿನತ್ತ ಮುಖ ಮಾಡುತ್ತಿವೆ.
01:04 PM (IST) Jan 31