LIVE NOW
Published : Dec 30, 2025, 06:46 AM ISTUpdated : Dec 30, 2025, 11:39 PM IST

Karnataka News Live: ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ

ಸಾರಾಂಶ

ಕೊಪ್ಪಳ: ಡಿಸಿಎಂ ಡಿಕೆಶಿ ಅವರು ಸಿಎಂ ಆಗುವುದು ಖಚಿತ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂದು ಶಾಸಕ ಗಾಲಿ ಜನಾರ್ದನ ರಡ್ಡಿ ಹೇಳಿದ್ದಾರೆ. ತಾಲೂಕಿನ ಮುನಿರಾಬಾದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಂಡೂರ ಉಪಚುನಾವಣೆಯಿಂದ ಈವರೆಗೂ ಇದೇ ಮಾತನ್ನೇ ಹೇಳುತ್ತಿದ್ದೇನೆ. ಸಿದ್ದು-ಡಿಕೆ ನಡುವೆ 50:50 ಅಧಿಕಾರ ಹಂಚಿಕೆಯಾಗಿದೆ. ಸಂಕ್ರಮಣ ನಂತರ ಒಳ್ಳೆ ದಿನ, ಒಳ್ಳೆ ಮುಹೂರ್ತ ನೋಡಿಕೊಂಡು ತೀರ್ಮಾನ ಮಾಡಬಹುದು. ನಮಗೂ ಕೆಲವು ಅವರ ಆಂತರಿಕ ವಿಚಾರ ಗೊತ್ತಾಗುತ್ತವೆ ಎಂದರು.

Sleeper Bus accident Bengaluru

11:39 PM (IST) Dec 30

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ, ಚಿತ್ರದುರ್ಗ ಬಸ್ ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ಸ್ಲೀಪರ್ ಬಸ್ ಅಪಘಾತಕ್ಕೀಡಾಗಿದ್ದು, ಬಸ್ ಪ್ರಯಾಣವೇ ಆತಂಕ ಹುಟ್ಟಿಸುವಂತಿದೆ.

 

Read Full Story

11:05 PM (IST) Dec 30

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೆಲೆಬ್ರೇಷನ್‌ಗೆ ಎಷ್ಟು ಗಂಟೆ ವರೆಗೆ ಅವಕಾಶ ನೀಡಲಾಗಿದೆ?

 

Read Full Story

10:59 PM (IST) Dec 30

ರೈಲಲ್ಲ ಇದು ಹಳಿ ಮೇಲಿನ ವಿಮಾನ! 180 ಕಿ.ಮೀ ವೇಗದಲ್ಲೂ ಚೆಲ್ಲದ ಹನಿ ನೀರು, ವಂದೇ ಭಾರತ್ ಸ್ಲೀಪರ್‌ನ 'ವಾಟರ್ ಟೆಸ್ಟ್' ಕಂಡು ದಂಗಾದ ಜಗತ್ತು!

ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಯಶಸ್ವಿ 'ವಾಟರ್ ಟೆಸ್ಟ್' ಪೂರ್ಣಗೊಳಿಸಿದೆ. ರೈಲಿನ ಅಸಾಧಾರಣ ಸ್ಥಿರತೆಯು ಜಗತ್ತನ್ನು ಬೆರಗುಗೊಳಿಸಿದ್ದು, BEML ನಿರ್ಮಿತ ಈ ಐಷಾರಾಮಿ ಸ್ಲೀಪರ್ ರೈಲು ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.
Read Full Story

10:26 PM (IST) Dec 30

ಶಿವಮೊಗ್ಗದಲ್ಲಿ ಬೇಕರ್ಸ್ ಮಾಫಿಯಾ ಅಟ್ಟಹಾಸಕ್ಕೆ ಬ್ರೇಕ್; ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಅಧಿಕಾರಿಗಳು ದಾಳಿ!

ಸುವರ್ಣ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್‌ನಿಂದ ಶಿವಮೊಗ್ಗದ ಬೇಕರ್ಸ್ ಮಾಫಿಯಾ ಬಯಲಾಗಿದೆ. ಹಾಳಾದ ಬ್ರೆಡ್ ಬಳಸಿ, ಅನೈರ್ಮಲ್ಯ ವಾತಾವರಣದಲ್ಲಿ ತಿನಿಸುಗಳನ್ನು ತಯಾರಿಸುತ್ತಿದ್ದ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕಳಪೆ ಆಹಾರವನ್ನು ನಾಶಪಡಿಸಿದ್ದಾರೆ.
Read Full Story

09:09 PM (IST) Dec 30

Breaking News - ಬೆಳಗಾವಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ; ಬಿಎಲ್ ಸಂತೋಷ್, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣಾ ತಂತ್ರ!

ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆದಿದೆ. ಪಕ್ಷ ಸಂಘಟನೆ, ಮುಂದಿನ ತಂತ್ರಗಾರಿಕೆ ಮತ್ತು ಭಿನ್ನಾಭಿಪ್ರಾಯಗಳ ಶಮನದ ಕುರಿತು ಚರ್ಚಿಸಲು ಜಿಲ್ಲೆಯ  ಪ್ರಮುಖ ನಾಯಕರು ಭಾಗಿ.

Read Full Story

09:02 PM (IST) Dec 30

ಬೀಚ್‌ನಲ್ಲಿ ಹೊಸ ವರ್ಷ ಆಚರಿಸುವವರಿಗೆ ವಾರ್ನಿಂಗ್, ಡಿ.31ರ ಸಂಜೆ 6ರ ಬಳಿಕ ಸಮುದ್ರಕ್ಕಿಳಿಯುವಂತಿಲ್ಲ

ಬೀಚ್‌ನಲ್ಲಿ ಹೊಸ ವರ್ಷ ಆಚರಿಸುವವರಿಗೆ ವಾರ್ನಿಂಗ್, ಡಿ.31ರ ಸಂಜೆ 6ರ ಬಳಿಕ ಸಮುದ್ರಕ್ಕಿಳಿಯುವಂತಿಲ್ಲ, ಜಿಲ್ಲಾಧಿಕಾರಿ ಈ ಖಡಕ್ ಆದೇಶ ನೀಡಿದ್ದಾರೆ. ಬೀಚ್‌ನಲ್ಲಿ ಯಾವುದೇ ಸಮಾರಂಭ, ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ ಎಂದಿದೆ.

 

Read Full Story

08:31 PM (IST) Dec 30

ಮುಖ್ಯಮಂತ್ರಿಗಳೇ, ನಮ್ದು ಬದುಕಲ್ವಾ? ಕೇರಳಿಗರಿಗೆ ತೋರಿಸೋ ಪ್ರೀತಿ ಮಲೆನಾಡು ಸಂತ್ರಸ್ತರ ಮೇಲೆ ಏಕಿಲ್ಲ?

2019ರ ಭೀಕರ ಮಳೆಗೆ ಮನೆ-ಮಠ ಕಳೆದುಕೊಂಡ ಚಿಕ್ಕಮಗಳೂರಿನ ಮೂಡಿಗೆರೆ ಸಂತ್ರಸ್ತರು ಆರು ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕೇರಳಿಗರಿಗೆ ವಸತಿ ಕಲ್ಪಿಸಲು ಸರ್ಕಾರ ತೋರುತ್ತಿರುವ ಆಸಕ್ತಿಯು, ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

07:50 PM (IST) Dec 30

Viral Video - ದೇಶದ ಭಯಂಕರ ವಿಷಕಾರಿ ಹಾವಿನ ವಿಡಿಯೋ ಹಂಚಿಕೊಂಡ IFS ಅಧಿಕಾರಿ; ಇದು ಕಚ್ಚಿದ್ರೆ ಟಿಕೆಟ್ ಫಿಕ್ಸ್!

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಯಾಂಡೆಡ್ ಕ್ರೈಟ್‌ನ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಾವಿನ ಕಪ್ಪು ಮತ್ತು ಹಳದಿ ಪಟ್ಟೆಗಳ ಸೌಂದರ್ಯ, ಅದರ ನಿಶಾಚರಿ ಮತ್ತು ನಾಚಿಕೆ ಸ್ವಭಾವದ ಬಗ್ಗೆ ಲೇಖನವು ವಿವರಿಸಿದ್ದಾರೆ.

Read Full Story

07:22 PM (IST) Dec 30

ಪುರಾಣ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇಗುಲ ವಶಕ್ಕೆ ಸರ್ಕಾರ ಕಸರತ್ತು; ಗ್ರಾಮಸ್ಥರ ಒಗ್ಗಟ್ಟಿಗೆ ಅಧಿಕಾರಿಗಳು ಸುಸ್ತು!

ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ 'ತೋಪಿನ ತಿಮ್ಮಪ್ಪ' ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಬಂದ ಅಧಿಕಾರಿಗಳನ್ನು ಭಕ್ತರು ತಡೆದಿದ್ದಾರೆ.

Read Full Story

07:17 PM (IST) Dec 30

ಗಲಭೆಕೋರರೇ ಎಚ್ಚರಿಕೆ - ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಹದ್ದಿನ ಕಣ್ಣು, AI ಕ್ರೌಡ್ ಡೆನ್ಸಿಟಿ ಕ್ಯಾಮೆರಾ ಫಿಕ್ಸ್!

2026ರ ಹೊಸ ವರ್ಷಾಚರಣೆಗಾಗಿ ಬೆಂಗಳೂರಿನಲ್ಲಿ, ವಿಶೇಷವಾಗಿ ಎಂಜಿ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ, ಪೊಲೀಸರು ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. 3,400 ಸಿಸಿಟಿವಿಗಳು, ವಾಚ್ ಟವರ್‌ಗಳು ಮತ್ತು ಗಲಭೆ ಪತ್ತೆಹಚ್ಚುವ AI ಆಧಾರಿತ ಕ್ಯಾಮೆರಾಗಳ ಮೂಲಕ ನಗರದ ಮೇಲೆ ಹದ್ದಿನ ಕಣ್ಣಿಡಲಾಗಿದೆ.
Read Full Story

06:38 PM (IST) Dec 30

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಾಟ್ಸಾಪ್ ಹ್ಯಾಕ್; ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ!

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ವಂಚಕರು ಅವರ ಸಂಪರ್ಕದಲ್ಲಿರುವವರಿಂದ ಹಣ ಲಪಟಾಯಿಸಲು ಯತ್ನಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ, ವಾಟ್ಸಾಪ್ ಹ್ಯಾಕ್ ಆಗುವ ಬಗೆ ಮತ್ತು 'ಟೂ ಸ್ಟೆಪ್ ವೆರಿಫಿಕೇಶನ್' ಮೂಲಕ ಖಾತೆ ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ

Read Full Story

06:33 PM (IST) Dec 30

ಮನೆಗಾಗಿ 37.48 ಲಕ್ಷ ಅರ್ಜಿ ಹಾಕಿದರೂ ಸೂರು ಕೊಟ್ಟಿಲ್ಲ; ಕೋಗಿಲು ಅಕ್ರಮ ನಿವಾಸಿಗಳಿಗೆ ಮನೆ ಮಂಜೂರು-ಆರ್. ಅಶೋಕ್

ರಾಜ್ಯದಲ್ಲಿ 17.31 ಲಕ್ಷ ಜನರು ನಿವೇಶನ ರಹಿತರು ಹಾಗೂ 3 ಲಕ್ಷ ಜನರು ವಸತಿ ರಹಿತರಾಗಿದ್ದಾರೆ. ಒಟ್ಟು 37.48 ಲಕ್ಷ ಜನರು ಮನೆ ಇಲ್ಲದೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ.  ಆದರೆ ಹೊರಗಿಂದ ಬಂದು ಅಕ್ರಮವಾಗಿ ವಾಸವಿದ್ದವರಿಗೆ ಸರ್ಕಾರ ಮನೆ ನಿರ್ಮಿಸಿ ಕೊಡುತ್ತಿದೆ ಎಂದು ಆರ್. ಅಶೋಕ ಆರೋಪಿಸಿದರು.

Read Full Story

05:33 PM (IST) Dec 30

ಬೆಂಗಳೂರಿನ ಬಯೋಕಾನ್ ಕಂಪನಿ 6ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು - ಗೆಳತಿ ಜೊತೆಗಿದ್ದಾಗಲೇ ದುರಂತ!

ಬೆಂಗಳೂರಿನ ಪ್ರತಿಷ್ಠಿತ ಬಯೋಕಾನ್ ಕಂಪನಿಯ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅನಂತಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

05:30 PM (IST) Dec 30

ವೈಕುಂಠ ಏಕಾದಶಿ ದಿನದಂದೇ ಶಿರಸಿಯಲ್ಲಿ ದುರಂತ; ವಿದ್ಯಾರ್ಥಿಗಳ ಪ್ರವಾಸಿ ಬಸ್ ಪಲ್ಟಿ!

ದಾವಣಗೆರೆಯ ಜೈನ್ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಬಸ್ ಉತ್ತರ ಕನ್ನಡದ ಶಿರಸಿ ಬಳಿಯ ಮತ್ತಿಘಟ್ಟ ತಿರುವಿನಲ್ಲಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 10-12 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read Full Story

05:06 PM (IST) Dec 30

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್ ರಿಲೀಫ್ - ಇಡಿ ಪ್ರಕರಣದಲ್ಲಿ 4 ತಿಂಗಳ ಬಳಿಕ ಜಾಮೀನು ಮಂಜೂರು

ಬೆಟ್ಟಿಂಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಷರತ್ತುಬದ್ಧ ಜಾಮೀನು. ₹2000 ಕೋಟಿ ಹಗರಣದ ವಿವರ ತಿಳಿಯಿರಿ.

Read Full Story

05:01 PM (IST) Dec 30

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಯಿಸಿದ ಶಿಕ್ಷಕ; ಹಳಿಯಾಳದಲ್ಲಿ ಗುರುವಿನ 'ಕಾರು ಬಾರು' ವಿಡಿಯೋ ವೈರಲ್!

Students washing car viral video ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ತಮ್ಮ ಕಾರನ್ನು ತೊಳಿಸಿರುವ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕನ ವರ್ತನೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ 

Read Full Story

04:55 PM (IST) Dec 30

Bigg Bossಗೆ ನನ್ನಮ್ಮ ಎಂಟ್ರಿ ಕೊಟ್ಟಾಗ್ಲೇ ಗೆಲ್ಲುವ ಸ್ಪರ್ಧಿ ಬಗ್ಗೆ ರಿವೀಲ್​ ಮಾಡಿಬಿಟ್ಟಿದ್ರು ಎಂದ ಸೂರಜ್​ ಸಿಂಗ್​!

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಸೂರಜ್​ ಸಿಂಗ್​, ತಮ್ಮ ಆಸೆಯಂತೆ ರಾಶಿಕಾ ಅಥವಾ ಅಶ್ವಿನಿ ಗೆಲ್ಲುವುದಿಲ್ಲ ಎಂದಿದ್ದಾರೆ. ಬದಲಾಗಿ, ಕುಟುಂಬದವರು ಮನೆಗೆ ಬಂದಾಗಲೇ ಈ ಸೀಸನ್​ನ ವಿಜೇತ  ಯಾರು ಎಂಬುದು ತಮಗೆ ಖಚಿತವಾಗಿತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Read Full Story

04:46 PM (IST) Dec 30

ಕೋಗಿಲು ಅಕ್ರಮ ನಿವಾಸಿಗಳು 20 ವರ್ಷದಿಂದಲ್ಲ, 6 ತಿಂಗಳ ಹಿಂದೆ ಬಂದವರು - 2023ರ ನಕ್ಷೆ ತೋರಿಸಿದ-ಆರ್. ಅಶೋಕ್

ಬೆಂಗಳೂರಿನ ಕೋಗಿಲು ಗ್ರಾಮದಲ್ಲಿನ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಕಳೆದ 6 ತಿಂಗಳಿನಿಂದಷ್ಟೇ ಇಲ್ಲಿ ಮನೆಗಳನ್ನು ಕಟ್ಟಲಾಗಿದ್ದು, ಕಾಂಗ್ರೆಸ್ ಪ್ರಯೋಜಿತ ಅಕ್ರಮ ಎಂದು ಗೂಗಲ್ ಮ್ಯಾಪ್ ಸಾಕ್ಷ್ಯಗಳನ್ನು ಪ್ರದರ್ಶಿಸಿ ದೂರಿದ್ದಾರೆ.

Read Full Story

04:34 PM (IST) Dec 30

ಸಿಎಂ ಸಿದ್ದರಾಮಯ್ಯ ಅವರೇ, ಕೇರಳ ವಲಸಿಗರ ಮೇಲೆ ತೋರಿಸೋ ಪ್ರೀತಿ; ಬೆಳಗಾವಿ ಸಂತ್ರಸ್ತರ ಮೇಲೆ ಏಕಿಲ್ಲ?

ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ಬೆಂಗಳೂರಿನ ವಲಸಿಗರಿಗೆ ಫ್ಲ್ಯಾಟ್ ನೀಡುವ ಸರ್ಕಾರ, 381 ಮನೆಗಳನ್ನು ಕಳೆದುಕೊಂಡ ಬೆಳಗಾವಿಯ ಸಂತ್ರಸ್ತರಿಗೆ ಕೇವಲ ₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಎಂದು ಸಂತ್ರಸ್ತರು ಆಕ್ರೋಶ 

Read Full Story

03:43 PM (IST) Dec 30

Hubballi - ಹೊಟ್ಟೆ ಮೇಲೆ ಬೆಳೆಯದ ಚರ್ಮ, ಕರುಳು-ಕಿಡ್ನಿ ಹೊರಬಂದು ನವಜಾತ ಶಿಶು ಸಾವು!

ಕೊಪ್ಪಳ ಜಿಲ್ಲೆಯಲ್ಲಿ ಹೊಟ್ಟೆಯ ಚರ್ಮ ಸರಿಯಾಗಿ ಬೆಳೆಯದ ಕಾರಣ ಕರುಳು-ಕಿಡ್ನಿ ಹೊರಬಂದ ಸ್ಥಿತಿಯಲ್ಲಿ ಜನಿಸಿದ ನವಜಾತ ಶಿಶುವನ್ನು, ಜೀರೋ ಟ್ರಾಫಿಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಸೋಮವಾರ ಮೃತಪಟ್ಟಿದೆ.
Read Full Story

03:17 PM (IST) Dec 30

Bigg Boss ಡಾಗ್​ ಸತೀಶ್​ರನ್ನು ಸುಸ್ತು ಮಾಡಿದ ಗಿಲ್ಲಿ ನಟ ಫ್ಯಾನ್ಸ್​ - ಹೀಗೆಲ್ಲಾ ಹೇಳೋದು ಬೇಕಿತ್ತಾ?

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಸಹ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಾತನಾಡಿದ್ದಕ್ಕೆ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.   ಗಿಲ್ಲಿ ನಟನ ಅಭಿಮಾನಿಗಳು ಅವರ ಕಾರಿನ ಮೇಲೆ 'ಗಿಲ್ಲಿ ನಟ ವಿನ್ನರ್' ಎಂದು ಬರೆದು, ಘೋಷಣೆ ಕೂಗಿ ಸೇಡು ತೀರಿಸಿಕೊಂಡಿದ್ದಾರೆ.

Read Full Story

03:09 PM (IST) Dec 30

ಕಾವ್ಯಾ ಉಳಿಸೋಕೆ ಚೈತ್ರಾಗಿಂತ ಕಳಪೆ ಉಸ್ತುವಾರಿ ಮಾಡಿದ ಗಿಲ್ಲಿ ನಟ! ಕಾವ್ಯಾಗೆ ಬಕೆಟ್ ಹಿಡಿಬೇಡವೆಂದ ವೀಕ್ಷಕರು!

ಬಿಗ್ ಬಾಸ್ ಫಿನಾಲೆ ಟಾಸ್ಕ್‌ಗಳು ಆರಂಭವಾಗಿದ್ದು, ಕಾವ್ಯಾಳನ್ನು ಉಳಿಸಲು ಗಿಲ್ಲಿ ನಟ ಪ್ರಯತ್ನಿಸುತ್ತಿದ್ದಾನೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪಂದನಾ ಹೆಚ್ಚು ನೀರು ಸಂಗ್ರಹಿಸಿದ್ದರೂ, ಗಿಲ್ಲಿ ಅನ್ಯಾಯವಾಗಿ ಕಾವ್ಯಾಳನ್ನು ವಿಜಯಿ ಎಂದು ಘೋಷಿಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
Read Full Story

02:55 PM (IST) Dec 30

ರಜನಿಕಾಂತ್‌ ಬಳಿಕ ಗಿಲ್ಲಿ ನಟನ ಬಗ್ಗೆ Kiccha Sudeep ಹೇಳಿದ್ದು ನಿಜಾನಾ? ಸತ್ಯಾ ಸತ್ಯತೆ ಏನು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗೆಲ್ಲೋರು ಯಾರು ಎಂದು ದೊಡ್ಡ ಚರ್ಚೆ ಶುರುವಾಗಿದೆ. ಈಗ ಕಿಚ್ಚ ಸುದೀಪ್‌ ಅವರೇ ಗಿಲ್ಲಿ ವಿನ್ನರ್‌ ಎಂದು ಹೇಳಿದ್ದಾರೆ ಎಂಬ ಪೋಸ್ಟ್‌ ಕೂಡ ವೈರಲ್‌ ಆಗ್ತಿದೆ. ಹಾಗಿದ್ದರೆ ಸತ್ಯ ಏನು?

 

Read Full Story

02:34 PM (IST) Dec 30

ಕೋಗಿಲು ಕ್ರಾಸ್‌ನಲ್ಲಿ ಮನೆ ಕಳೆದುಕೊಂಡವರ ಪೈಕಿ 20 ಮಂದಿ ಮಾತ್ರ ಹೊರಗಿನವರು - ಜಮೀರ್‌ ಅಹ್ಮದ್‌

ಕೋಗಿಲು ಕ್ರಾಸ್‌ನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ. ಬಿಜೆಪಿ ವಿರೋಧದ ನಡುವೆಯೂ, ಈ ನಿರ್ಧಾರವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ.

Read Full Story

02:22 PM (IST) Dec 30

Bigg Boss - ಸೂರಜ್ ಹೋದ್ಮೇಲೆ ಶುರುವಾಯ್ತು ರಾಶಿಕಾ ಎಂಟರ್‌ಟೈನ್‌ಮೆಂಟ್; ರಕ್ಷಿತಾ ಫುಲ್ ಸುಸ್ತು!

ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿದ್ದಂತೆ, ಸೂರಜ್ ಸಿಂಗ್ ಎಲಿಮಿನೇಟ್ ಆದ ಬಳಿಕ ನಟಿ ರಾಶಿಕಾ ತಮ್ಮ ಆಟದ ವೈಖರಿಯನ್ನು ಬದಲಿಸಿದ್ದಾರೆ. ಎಂಟರ್‌ಟೇನ್‌ಮೆಂಟ್ ಮಾಡುತ್ತಿಲ್ಲ ಎಂದು ನಾಮಿನೇಟ್ ಮಾಡಿದ ರಕ್ಷಿತಾ ಶೆಟ್ಟಿಗೆ ಕಚಗುಳಿ ಇಡುವ ಮೂಲಕ ತಿರುಗೇಟು ನೀಡಿದ್ದು, ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
Read Full Story

01:22 PM (IST) Dec 30

ರಾಜ್ಯದ ಜನರಿಗೆ ಹೊಸ ವರ್ಷಕ್ಕೆ ಪವರ್‌ ಶಾಕ್‌, 'Top Up' ಹೆಸರಲ್ಲಿ ಟೋಪಿ ರೆಡಿಮಾಡಿಕೊಂಡ KERC

ಮುಂಬರುವ ಹಣಕಾಸು ವರ್ಷದಲ್ಲಿ ಕರ್ನಾಟಕದ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಾಗಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಇದನ್ನು 'ದರ ಏರಿಕೆ' ಎನ್ನುವ ಬದಲು 'ಟಾಪ್-ಅಪ್' ಎಂದು ಕರೆಯುತ್ತಿದ್ದು, ಪ್ರತಿ ಯೂನಿಟ್‌ಗೆ 8-10 ಪೈಸೆ ಹೆಚ್ಚಳವಾಗುವ ನಿರೀಕ್ಷೆಯಿದೆ.

Read Full Story

12:54 PM (IST) Dec 30

"ಪೀರಿಯಡ್ಸ್ ಟೈಮಲ್ಲೂ ಸೆ*ಕ್ಸ್‌ಗೆ ಪೀಡಿಸುತ್ತಿದ್ದ"; ಟೆಕ್ಕಿ ಕಣ್ಣೀರು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಬ್ಲ್ಯಾಕ್‌ಮೇಲ್!

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಸೈಕೋ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವಯಸ್ಸು ಮುಚ್ಚಿಟ್ಟು ಮದುವೆಯಾದ ಪತಿ, ಲೈಂಗಿಕ ಕಿರುಕುಳ ನೀಡಿ, ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಮಾಡಲು ಒತ್ತಾಯಿಸುತ್ತಿದ್ದ. ಪತ್ನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದ ಎನ್ನಲಾಗಿದೆ.

Read Full Story

12:35 PM (IST) Dec 30

ಮದುವೆ ಗುಸುಗುಸು ನಡುವೆಯೇ Karna Serial ನಿಧಿ ಸೂಪರ್​ ವಿಡಿಯೋ ಶೂಟ್​ - ಭವ್ಯಾ ಗೌಡ ಚೆಲುವಿಗೆ ಫ್ಯಾನ್ಸ್ ಫಿದಾ

'ಕರ್ಣ' ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಪ್ರೇಮಕಥೆಯ ಸುಳಿವು ನೀಡಿದ್ದು, ಹೊಸ ಹೂವಿನ ಬ್ಯುಸಿನೆಸ್ ಆರಂಭಿಸಿದ್ದಾರೆ. ಬಿಗ್‌ಬಾಸ್ ಮೂಲಕ ಜನಪ್ರಿಯರಾದ ಅವರು, 'ಲ್ಯಾಂಡ್‌ಲಾರ್ಡ್' ಚಿತ್ರದ ಮೂಲಕ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ.
Read Full Story

12:33 PM (IST) Dec 30

ಕಿರುತೆರೆ ನಟಿ ನಂದಿನಿ ಸಾವು - ಮಗಳಿಗೆ ನಾನೇ ಮಹಾನಟಿ ಅಂತಿದ್ದೆ, ಸರ್ಕಾರಿ ಕೆಲಸದ ಬಗ್ಗೆ ಒತ್ತಡ ಹಾಕಿರಲಿಲ್ಲ- ತಾಯಿ

ಕಿರುತೆರೆ ನಟಿ ನಂದಿನಿ ಅವರ ಆತ್ಮ*ಹತ್ಯೆ ಕುರಿತು ಅವರ ತಾಯಿ ಬಸವರಾಜೇಶ್ವರಿ ಕಣ್ಣೀರು ಹಾಕಿದ್ದಾರೆ. ಮಗಳಿಗೆ ಮುಂಗೋಪ ಜಾಸ್ತಿ ಇತ್ತು, ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದಿರುವ ಅವರು, ಸರ್ಕಾರಿ ಕೆಲಸದ ವಿಚಾರವಾಗಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ.

Read Full Story

12:11 PM (IST) Dec 30

2026ರಲ್ಲಿ ನಿಮ್ಮ ಹಣದ ಭವಿಷ್ಯ ಬದಲಿಸುವ 10 ರಹಸ್ಯ ಸೂತ್ರಗಳು

ಈ ಲೇಖನವು ಸಂಬಳ ನಿರ್ವಹಣೆಯ 10 ಪ್ರಮುಖ ನಿಯಮಗಳನ್ನು ವಿವರಿಸುತ್ತದೆ. 50-30-20 ನಿಯಮ, ತುರ್ತು ನಿಧಿ, ಆದಾಯ ವಿಮೆ, ತೆರಿಗೆ ಉಳಿತಾಯ ಮತ್ತು ಹೂಡಿಕೆಯಂತಹ ವಿಷಯಗಳ ಮೂಲಕ ಆರ್ಥಿಕ ಶಿಸ್ತನ್ನು ಸಾಧಿಸುವ ಮಾರ್ಗಗಳನ್ನು ಇದು ತಿಳಿಸುತ್ತದೆ.
Read Full Story

11:56 AM (IST) Dec 30

28 ವರ್ಷದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ; ರಾಹುಲ್‌ ಗಾಂಧಿ-ಪ್ರಿಯಾಂಕಾ‌ ಗಾಂಧಿ ಫುಲ್‌ ಖುಷ್!

Priyanka Gandhi Family Marraige: ರಾಹುಲ್‌ ಗಾಂಧಿ ಕುಟುಂಬದಲ್ಲಿ ಸಂಭ್ರಮ ಶುರುವಾಗಿದೆ. 28 ವರ್ಷಗಳ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಹಾಗಾದರೆ ಯಾರ ಮದುವೆ? ಏನು ಕಥೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

11:53 AM (IST) Dec 30

Bigg Boss ರಾಶಿಕಾ ಶೆಟ್ಟಿ ಜೊತೆ ಸಂಬಂಧದ ಬಗ್ಗೆ ಓಪನ್ನಾಗಿ ಸೂರಜ್​ ಸಿಂಗ್ ಮಾತು​ - ಮದ್ವೆ ಕುರಿತು ಹೇಳಿದ್ದೇನು?

ಬಿಗ್‌ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಭಾವಿಸಲಾಗಿತ್ತು.  ಎಲಿಮಿನೇಟ್ ಆಗಿ ಹೊರಬಂದ ನಂತರ ಸೂರಜ್, ತಮ್ಮಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನೆ. 

Read Full Story

11:19 AM (IST) Dec 30

ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್‌ಎ ಟೆಸ್ಟ್‌ನಲ್ಲಿ ಅಪ್ಪ ಅನ್ನೋದು ಕನ್ಫರ್ಮ್‌ ಆದರೂ ಮದುವೆ ಆಗಲ್ವಂತೆ!

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ ಗರ್ಭಿಣಿಯನ್ನಾಗಿಸಿ ವಂಚಿಸಿದ ಪ್ರಕರಣ ಇದಾಗಿದೆ. ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಎಂದು ಸಾಬೀತಾದರೂ ಮದುವೆಗೆ ನಿರಾಕರಿಸುತ್ತಿದ್ದಾನೆ.

Read Full Story

11:08 AM (IST) Dec 30

BBK 12 - ‌ ಯಾರಿಗೂ ಕಾಣದ 'ಕಿಲಾಡಿ' ಗಿಲ್ಲಿ ನಟನ ಡಬಲ್‌ ಗೇಮ್ ಬಿಚ್ಚಿಟ್ಟ ಮಾಳು ನಿಪನಾಳ! ಏನದು?

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ ಶೋನಲ್ಲಿ ಗಿಲ್ಲಿ ನಟ, ಒನ್‌ ಮ್ಯಾನ್‌ ಶೋ ಆಗಿ ಗುರುತಿಸಿಕೊಂಡಿದ್ದಾರೆ. ಇವರೇ ವಿನ್ನರ್‌ ಆಗ್ತಾರೆ ಎಂದು ಬಹುತೇಕರು ಹೇಳುತ್ತಿದ್ದಾರೆ. ದೊಡ್ಮನೆಯಿಂದ ಹೊರಬಂದಿರುವ ಮಾಳು ನಿಪನಾಳ ಅವರು ನಾನೇ ವಿನ್ನರ್‌ ಆಗುತ್ತಿದ್ದೆ ಎಂದಿದ್ದಾರೆ.

Read Full Story

10:51 AM (IST) Dec 30

ಸ್ಮಾರ್ಟ್ ಆಗ್ತಿದೆ 'ಶಕ್ತಿ' ಯೋಜನೆ; ಸರ್ಕಾರದ ಹೊಸ ಪ್ಲಾನ್ ಏನು? ಉಚಿತ ಪ್ರಯಾಣಕ್ಕೆ ಮಹಿಳೆಯರು ಏನು ಮಾಡಬೇಕು?

Free Bus Journey: ಶಕ್ತಿ ಯೋಜನೆಯ ದುರ್ಬಳಕೆಯನ್ನು ತಡೆಗಟ್ಟಲು ಮತ್ತು ಅರ್ಹ ಮಹಿಳೆಯರಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡಲು ಕರ್ನಾಟಕ ಸಾರಿಗೆ ಇಲಾಖೆಯು ಸ್ಮಾರ್ಟ್‌ಕಾರ್ಡ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. 

Read Full Story

10:29 AM (IST) Dec 30

BBK 12 - ಸೀಸನ್ 12ರ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

Bigg Boss Kannada 12 Grand Finale: ಕನ್ನಡ ಬಿಗ್‌ಬಾಸ್ 14ನೇ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದು, ಈ ವಾರ ನಾಲ್ವರು ನಾಮಿನೇಟ್ ಆಗಿದ್ದಾರೆ.

Read Full Story

09:12 AM (IST) Dec 30

ಬಿಜೆಪಿ ಜೊತೆಗಿನ ಮೈತ್ರಿಗೆ ಬಿಗ್ ಟ್ವಿಸ್ಟ್ ಕೊಟ್ಟು ಹಾಸನದಲ್ಲಿ ರಣಕಹಳೆ ಮೊಳಗಿಸಿದ ಹೆಚ್‌ಡಿಡಿ

ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ಪ್ರತಿಯಾಗಿ ಜನವರಿ 24 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Read Full Story

08:52 AM (IST) Dec 30

ಧರ್ಮಸ್ಥಳ ಬುರುಡೆ ಕೇಸ್‌ - ಜ.3ಕ್ಕೆ ತೀರ್ಪು ಮುಂದೂಡಿಕೆ

ಧರ್ಮಸ್ಥಳ ಬುರುಡೆ ಪ್ರಕರಣದ ತೀರ್ಪನ್ನು ಬೆಳ್ತಂಗಡಿ ನ್ಯಾಯಾಲಯವು ಜ.3ಕ್ಕೆ ಮುಂದೂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ತೀರ್ಪನ್ನು ಜನವರಿ 3ಕ್ಕೆ ಮುಂದೂಡಿದರು.

Read Full Story

08:42 AM (IST) Dec 30

ನೇಣಿಗೆ ಕೊರಳೊಡ್ಡಿದ ಪತ್ನಿ, ವಿಷ ಸೇವಿಸಿದ ಗಂಡ; ಪ್ರೀತಿಸಿ ಮದ್ವೆಯಾದ ಜೋಡಿ ಬಾಳಲ್ಲಿ ದುರಂತ

ಪತ್ನಿ ನೇಣುಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದು ಪತಿ ಕೂಡ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ. ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಯ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು ಎಂದು ಹೇಳಲಾಗಿದ್ದು, ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

08:12 AM (IST) Dec 30

ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್

ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜನವರಿಯಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ಇದು ಶರಣರು ಮತ್ತು ಶಕ್ತಿವಂತರು ಹೇಳಿದ ಮಾತು ಎಂದಿರುವ ಅವರು, ಈ ಹಿಂದೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಹೇಳಿದ್ದಾರೆ.
Read Full Story

More Trending News