ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಸೈಕೋ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವಯಸ್ಸು ಮುಚ್ಚಿಟ್ಟು ಮದುವೆಯಾದ ಪತಿ, ಲೈಂಗಿಕ ಕಿರುಕುಳ ನೀಡಿ, ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಮಾಡಲು ಒತ್ತಾಯಿಸುತ್ತಿದ್ದ. ಪತ್ನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರು (ಡಿ.30): ಆಕೆ ಸುಂದರ ಯುವತಿ. ಕೈತುಂಬಾ ಸಂಬಳ ಬರುವ ಕೆಲಸ. ಸಾಫ್ಟ್‌ವೇರ್ ಕಂಪನಿಯಲ್ಲಿ ಎಚ್‌ಆರ್ ಮ್ಯಾನೇಜರ್ ಹುದ್ದೆ. ಅದಾಗಲೇ ಆಕೆಯ ಬಾಳಿನಲ್ಲಿ ಇಬ್ಬರು ಬಂದು ಹೋಗಿದ್ದರು. ಅಧಿಕೃತ ವಿಚ್ಛೇದನ ಕೂಡ ಆಗಿತ್ತು. ಹೀಗಿದ್ದ ಆಕೆಯ ಜೀವನದಲ್ಲಿ ಮೂರನೇ ಹುಡುಗ ಬಂದಿದ್ದ. ಆತನಿಗೆ ತನ್ನದೇ ಕಂಪನಿಯಲ್ಲಿ ಕೆಲಸ ಕೊಡಿಸಿ ಲಕ್ಷ ಲಕ್ಷ ಸಂಬಳ ಬರುವಂತೆ ಮಾಡಿದ್ದಳು. ಆದರೆ, ಮದುವೆಯಾದ ಮೂರೇ ತಿಂಗಳಿ ಸಾಫ್ಟ್‌ವೇರ್ ಬ್ಯೂಟಿಯ ಸಂಸಾರವೇ ಬೀದಿಗೆ ಬಂದಿದೆ. ತಾನೇ ಕೆಲಸ ಕೊಡಿಸಿ, ಇಷ್ಟಪಟ್ಟು ಮದುವೆಯಾಗಿದ್ದ ವ್ಯಕ್ತಿ ಸೈಕೋ ಎನ್ನುವುದು ಗೊತ್ತಾಗಿದೆ. ಆತನ ವಯಸ್ಸು 29 ಅಲ್ಲ, 36 ಅನ್ನೋದು ಗೊತ್ತಾಗಿದೆ. ತಾನಿನ್ನೂ ಟೀನೇಜು ಅಂತಲೇ ಹಾಟ್ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದವ ವಿರುದ್ಧ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಕಲರ್ ಕಲರ್ ಕಾಗೆ ಹಾರಿಸಿ ಯುವತಿಯರ ಜೀವನದಲ್ಲಿ ಆಟ ಆಡುತ್ತಿದ್ದ ಮಂಜುನಾಥನಿಗೆ ಪಾಠ ಕಲಿಸಿಯೇ ಸಿದ್ದ ಎಂದು ಶಪಥ ಮಾಡಿದ್ದಾರೆ.
ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಮೇಘಶ್ರೀ ಎನ್ನುವ ಯುವತಿಯೇ ರೆಕ್‌ಮಂಡ್ ಮಾಡಿ ಮಂಜುನಾಥನಿಗೆ ಎಚ್‌ಆರ್ ಮ್ಯಾನೇಜರ್ ಪೋಸ್ಟ್ ಕೊಡಿಸಿದ್ದರು. ಕೊನೆಗೆ ಆತನನ್ನೇ ಮೆಚ್ಚಿ ಮೇಘಶ್ರೀ ಮದುವೆ ಕೂಡ ಆಗಿದ್ದಳು. ಇದು ಮೇಘಶ್ರೀಗೆ ಮೂರನೇ ಮದುವೆ ಆಗಿತ್ತು ಹಾಗೂ ಈ ವಿಚಾರ ಮಂಜುನಾಥನಿಗೆ ಕೂಡ ಗೊತ್ತಿತ್ತು ಎನ್ನಲಾಗಿದೆ.
ಆದರೆ, ಮದುವೆ ಆದ ಮೂರೇ ತಿಂಗಳಿಗೆ ಬ್ಯೂಟಿಯ ಬದುಕು ಬೀದಿಪಾಲಾಗಿದೆ. ಫರ್ಸ್ಟ್ ನೈಟ್ ದಿನದಿಂದಲೇ ಆತ ಕಿರುಕುಳ ನೀಡಲು ಆರಂಭಿಸಿದ್ದ. ಮೊದಲ ರಾತ್ರಿಯಲ್ಲೇ ವಿಚಿತ್ರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಮಾಡುವಂತೆ ಕಾಟ ಕೊಡುತ್ತಿದ್ದ. ಆದರೆ, ಮಂಜುನಾಥನ ವಿಚಿತ್ರ ಮಂಚದಾಟಕ್ಕೆ ಪತ್ನಿ ಒಪ್ಪುತ್ತಿರಲಿಲ್ಲ. ಇದೇ ವಿಚಾರಕ್ಕೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಕಿರುಕುಳ ಕೊಡುತ್ತದ್ದ.
ಅಂಡರ್‌ವೇರ್‌ನಲ್ಲೇ ಮನೆಯಲ್ಲಿ ಓಡಾಡುತ್ತಿದ್ದ ಸೈಕೋ ಪತಿ
ಮೂರು ತಿಂಗಳು ತನ್ನ ಅಪ್ಪ-ಅಮ್ಮನ ಮನೆಯಲ್ಲೇ ಇರಿಸಿಕೊಂಡು ಲಕ್ಷ ಲಕ್ಷ ಹಣವನ್ನೂ ಪತ್ನಿ ಕೊಟ್ಟಿದ್ದಾಳೆ. ಮನೆಯಲ್ಲಿ ಇದ್ದ ವೇಳೆ ಅಂಡರ್‌ವೇರ್‌ನಲ್ಲೇ ಓಡಾಡುತ್ತಿದ್ದ. ಮನೆಯಲ್ಲಿ ಮಾವ ,ಅತ್ತೆ ಇದ್ರೂ ಬೆತ್ತಲೆಯಾಗಿ ಓಡಾಟ ಮಾಡಿ ಮುಜುಗರ ತರುತ್ತಿದ್ದ. ಅಂಡರ್‌ವೇರ್‌ನಲ್ಲಿ ಮನೆಯ ಪ್ಯಾಸೇಜ್ ಬಳಿ ನಿಂತು ಬೀದಿಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಬಿಟ್ಟು ಶೋ ಕೊಡ್ತಿದ್ದ. ಇದಲ್ಲದೆ, ಪತ್ನಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಎಡಿಟ್ ಫೋಟೋ ಬಳಸಿ ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ. ಸದ್ಯ ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ಥೆ ದೂರು ನೀಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಸಂತ್ರಸ್ಥ ಮಹಿಳೆ' ತುಂಬಾ ಅಸಹ್ಯಕರವಾಗಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಹೆಂಡ್ತಿ ಅಂತಲೂ ನೋಡದೇ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ಅಶ್ಲೀಲ ವಿಡಿಯೋಗಳನ್ನು ನೋಡಿಕೊಂಡು ನೀನು ಅದೇ ರೀತಿ ಮಾಡಬೇಕು. ಹಾಗೇ ಇರಬೇಕು. ಈ ರೀತಿ ಮಾಡಿಲ್ಲ ಅಂದ್ರೆ ನಾನು ಯಾವ ಲೆವಲ್ಲಿಗೆ ಬೇಕಾದ್ರೂ ಹೋಗ್ತೇನೆ ಎಂದು ಹೇಳುತ್ತಿದ್ದ. ನಾನು ಎಫ್‌ಐಆರ್‌ನಲ್ಲಿ ಇದನ್ನೇ ಹೇಳಿದ್ದೇನೆ. ಆತ ಹಾಗೂ ಆತನ ಮನೆಯವರ ಮೇಲೆ ಕೇಸ್ ಹಾಕಿದ್ದಕ್ಕೆ ಮನೆ ಮುಂದು ಬಂದು ಜಗಳ ಮಾಡುತ್ತಿದ್ದ. ಕೇಸ್ ವಾಪಾಸ್ ತೆಗೆದುಕೊಂಡರೆ 5 ಲಕ್ಷ ಹಣ ಕೊಡೋದಾಗಿ ಹೇಳಿದ್ದ ಎಂದು ಹೇಳಿದ್ದಾರೆ.
ಆದ್ರೆ ಆತನ ಆಮಿಷಕ್ಕೆ ನಾನು ಒಪ್ಪಿಲ್ಲ. ನಾನೂ ಕೂಡ ಚೆನ್ನಾಗಿ ದುಡಿಯುತ್ತಿದ್ದೇನೆ. ಆತ ಮನಿಟ್ರ್ಯಾಪ್ ಮಾಡುತ್ತಿರುವುದಾಗಿ ಆರೋಪ ಮಾಡಿದ್ದಾನೆ. ಮನಿಟ್ರ್ಯಾಪ್ ಮಾಡಿರೋದು ಯಾರು? ಹಣ ಇಲ್ಲದೇ ಇರೋದು ಅದನ್ನ ಮಾಡ್ತಾರೆ. ಆದ್ರೆ ಅವನಿಗೆ ಕೆಲಸ ಕೊಡಿಸಿರೋದೇ ನಾನು. ಮ್ಯಾನೇಜರ್ ಪೋಸ್ಟಿಂಗ್ ಮಾಡಿಸಿರೋದು ಕೂಡ ನಾನೇ. ಹೀಗಿರುವಾಗ ನಾನು ಹೇಗೆ ಮನಿಟ್ರ್ಯಾಪ್ ಮಾಡೋಕೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕೇಸ್‌ಅನ್ನು ಇಲ್ಲಿಗೆ ಬಿಡೋದಿಲ್ಲ. ಆತ ಹೇಸಿಗೆ ಕೆಲಸ ಮಾಡಿಬಿಟ್ಟಿದ್ದಾನೆ. ಅವನ ಜೊತೆ ಇರೋ ಫೋಟೋಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಮೂರು ತಿಂಗಳು ಅವನನ್ನು ಮನೆಯಲ್ಲಿಟ್ಟುಕೊಂಡು ಸಾಕಿದ್ದೇವೆ. ಈಗ ನನ್ನ ಅಪ್ಪ-ಅಮ್ಮನ ಫೋಟೋಗಳನ್ನೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ. ಇವನನ್ನು ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಪೀರಿಯಡ್ಸ್ ಟೈಮ್‌ನಲ್ಲೂ ಸೆಕ್ಸ್ ಮಾಡಬೇಕು ಅಂತಿದ್ದ ಎಂದು ಆರೋಪಿಸಿದ್ದಾರೆ.
ಯುವತಿಗೆ ಇದು ಮೂರನೇ ಮದುವೆ
ಇದು ನನ್ನ ಮೂರನೇ ಮದುವೆ. ನಾನು ಈ ಹಿಂದೆ ಎರಡು ಮದುವೆಯಾಗಿರುವ ವಿಚಾರ ಕೂಡ ಆತನಿಗೆ ಗೊತ್ತಿತ್ತು. ಮದುವೆ ಆದ ಬಳಿಕ ಇದೇ ವಿಚಾರ ಹೇಳಿ ಕಿರುಕುಳ ನೀಡುತ್ತಿದ್ದ. ನನ್ನ 2ನೇ ಮದುವೆ ಡೈವೋರ್ಸ್ ಆಗಲು ಇವನೇ ಕಾರಣ ಎಂದು ಹೇಳಿದ್ದಾರೆ. 25 ಲಕ್ಷದ ಚಿನ್ನ ಕೊಟ್ಟಿರೋದಾಗಿ ಹೇಳಿದ್ದಾನೆ. ಅದರ ಸಾಕ್ಷಿ ಆತ ನನಗೆ ತೋರಿಸಬೇಕು ಎಂದು ಹೇಳಿದ್ದಾರೆ.


